Arecanut Training :: ರೈತರಿಗೆ ಅಡಿಕೆ ಬೆಳೆಯ ಬಗ್ಗೆ ವೈಜ್ಞಾನಿಕ ತರಬೇತಿ!!! ರೈತರು ರಿಜಿಸ್ಟರ್ ಮಾಡಿ, ತರಬೇತಿಯಲ್ಲಿ ಭಾಗವಹಿಸಿ!!!

"Agriculture is our CULTURE"

Join this group for Agriculture and Government Schemes

Arecanut Training :: ರೈತರಿಗೆ ಅಡಿಕೆ ಬೆಳೆಯ ಬಗ್ಗೆ ವೈಜ್ಞಾನಿಕ ತರಬೇತಿ!!! ರೈತರು ರಿಜಿಸ್ಟರ್ ಮಾಡಿ, ತರಬೇತಿಯಲ್ಲಿ ಭಾಗವಹಿಸಿ!!!

ರೈತರಿಗೆ ಅಡಿಕೆ ಬೆಳೆಯ ಬಗ್ಗೆ ತರಬೇತಿ:: ಅಡಿಕೆ ಬೆಳೆ ಬೆಳೆಯುವ ಬಗ್ಗೆ ವೈಜ್ಞಾನಿಕ ಮತ್ತು ಸುಧಾರಿತ ತಾಂತ್ರಿಕತೆಯ ಬಗ್ಗೆ ಉಚಿತ ತರಬೇತಿ!!! ಇಲ್ಲಿದೆ ಎಲ್ಲಾ ಮಾಹಿತಿ!!

karnataka is major producer of arecanut in India.arecanut is kind of traditional crop in coastal and inner land of karnataka,

Hence here farmers well aware of techniques those are easing the arecanut farming.anyway due to speedy technology growth and new inventions happening in agriculture

Is helpfull for farmers to save their work and energy here is the one of that program giving guidance regarding scientific invention for arecanut crop.

ಭಾರತ ದೇಶದಲ್ಲಿ ಅಡಿಕೆ ಬೆಳೆಯ ಪ್ರಮಾಣ ಕರ್ನಾಟಕದಲ್ಲಿ ಅತಿ ಹೆಚ್ಚಾಗಿದ್ದು, ಅಡಿಕೆ ಬೆಳೆಯು ಕರ್ನಾಟಕದ ಒಂದು ಸಾಂಪ್ರದಾಯಿಕ ಬೆಳೆಯಾಗಿ ಮಾರ್ಪಾಡಾಗಿದೆ ಅಲ್ಲದೆ ಅಡಿಕೆ ಬೆಳೆಯನ್ನು ಬೆಳೆಯುವ ವಿಧಾನ

ಹಾಗೂ ಅಡಿಕೆ ಬೆಳೆಗೆ ಒದಗಿಸುವ ಪೋಷಕಾಂಶ ಗೊಬ್ಬರ ಹಾಗೂ ನೀರಾವರಿಯ ಎಲ್ಲಾ ವಿಷಯಗಳು ಸಾಮಾನ್ಯವಾಗಿ ರೈತರಿಗೆ ತಿಳಿದೇ ಇರುತ್ತವೆ. ಇಷ್ಟು ಮಾತ್ರವಲ್ಲದೆ ರೈತರು

ತಮ್ಮ ಇಳುವರಿಯನ್ನು ಹೆಚ್ಚಿಸಿಕೊಳ್ಳಲು ವೈಜ್ಞಾನಿಕ ಅನ್ವೇಷಣೆಗಳ ಕುರಿತು ಮಾಹಿತಿ ಹೊಂದುವುದು ಕೂಡ ತುಂಬಾ ಉಪಯೋಗಕಾರಿಯಾಗಿರುತ್ತದೆ.

ಇಂತಹ ಉಪಯುಕ್ತ ವೈಜ್ಞಾನಿಕ ಸುಧಾರಿತ ತಾಂತ್ರಿಕತೆಯ ಬಗ್ಗೆ ಅಗತ್ಯ ಮಾಹಿತಿಯನ್ನು ರೈತರಿಗೆ ತಿಳಿಸಲು, ತೋಟಪಟ್ಟಿ ಮತ್ತು ಸಾಂಬಾರು ಬೆಳೆಗಳ ವಿಭಾಗ, ತೋಟಗಾರಿಕೆ ಮಹಾವಿದ್ಯಾಲಯ,ಜಿಕೆವಿಕೆ,ಬೆಂಗಳೂರು.

ವತಿಯಿಂದ ರೈತರಿಗೆ ಮಹತ್ವದ ತರಬೇತಿ ಕಾರ್ಯಕ್ರಮ ಒಂದನ್ನು ಆಯೋಜಿಸಲಾಗಿದೆ. ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅಡಿಕೆ ಬೆಳೆಗಾರರ ಸಂಖ್ಯೆ ಹಾಗೂ ಕೀಟ ಹಾಗೂ ರೋಗಗಳ ಬಾದೆಯಿಂದ ಕುಸಿಯುತ್ತಿರುವ ಅಡಿಕೆ ಬೆಳೆಯ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಲಾಗುತ್ತದೆ.

ತರಬೇತಿಯ ವಿಷಯವೇನು?

What is the training topic?

” ಅಡಿಕೆ ಕೃಷಿಯಲ್ಲಿ ಸುಧಾರಿತ ಉತ್ಪಾದನಾ ತಾಂತ್ರಿಕತೆಗಳು” ಎನ್ನುವ ವಿಷಯದ ಕುರಿತು ತರಬೇತಿ ನೀಡಲಾಗುವುದು, ಈ ತರಬೇತಿಯಲ್ಲಿ ರೈತರು ಈ ಕೆಳಗಿನ ಅಂಶಗಳನ್ನು ಕಲಿಯಬಹುದು ಅವುಗಳೆಂದರೆ,

* ಅಡಿಕೆ “ತಳಿಗಳ ಆಯ್ಕೆ“,

* ಉತ್ತಮ ಗುಣಮಟ್ಟದ “ನಾಟಿ ತಯಾರಿ” ಹೇಗೆ ಮಾಡುವುದು,

* ಅಡಿಕೆ ಸಸಿಗಳನ್ನು “ಸರಿಯಾದ ಅಂತರ“ದಲ್ಲಿ ನೆಡುವ ವಿಧಾನ,

* “ಸಾವಯವ ಮತ್ತು ರಸಗೊಬ್ಬರ” ನಿರ್ವಹಣೆ,

* “ನೀರು ಮತ್ತು ಪೋಷಕಾಂಶ”ಗಳ ಸಮಗ್ರ ನಿರ್ವಹಣೆ,

* “ಮಲ್ಚಿಂಗ್” ಮಾಡುವ ವಿಧಾನ,

* ಸಮಗ್ರ “ಕೀಟ ಮತ್ತು ರೋಗ”ಗಳ ನಿರ್ವಹಣೆ,

* ಕೊನೆಯದಾಗಿ “ಕೊಯ್ಲು ಮತ್ತು ಸಂಗ್ರಹಣೆ” ಮಾಡುವ ವಿಧಾನಗಳು.

ಈ ಎಲ್ಲಾ ಅಂಶಗಳನ್ನು ರೈತರಿಗೆ ನುರಿತ ತಜ್ಞರಿಂದ ವಿವರವಾಗಿ ತಿಳಿಸಿಕೊಡಲಾಗುತ್ತದೆ. ಅಲ್ಲದೆ ತರಬೇತಿಗೆ ಬಂದಿರುವಂತಹ ಹಲವು ರೈತರಿಂದ ತಮ್ಮ “ಸ್ವಂತ ಅನುಭವಗಳು ಮತ್ತು ಸ್ವಂತ ಅನ್ವೇಷಣೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಅವಕಾಶ” ನೀಡಲಾಗುತ್ತದೆ.

ಹಾಗಾದರೆ ಈ ತರಬೇತಿಯನ್ನು ಯಾರು ನೀಡುತ್ತಾರೆ?

Who will give this training to farmers?

ಈ ತರಬೇತಿಯನ್ನು ತೋಟಗಾರಿಕೆ ಮಹಾವಿದ್ಯಾಲಯ, ಜಿಕೆವಿಕೆ ಬೆಂಗಳೂರು, ಈ ಸಂಸ್ಥೆಯು ಈಗಾಗಲೇ “ಸಾವಿರಾರು ರೈತರಿಗೆ ಉಚಿತ ಮಾರ್ಗದರ್ಶನ ನೀಡಿದ್ದು, ನೀಡುತ್ತಿದ್ದು ತನ್ನ ತರಬೇತಿಯನ್ನು ರೈತರಿಗೆ ಸರಳವಾಗಿ ಅರ್ಥೈಸಲು “ವಿನೂತನವಾಗಿ ಮತ್ತು ಸೃಜನಾತ್ಮಕ”ವಾಗಿ ರಚಿಸಲಾಗಿದೆ.

ಈ ತರಬೇತಿಯ ಉದ್ದೇಶವೇನು?

What is the benefit from this training?

* ಅಡಿಕೆ ಉತ್ಪಾದನೆ ಹೆಚ್ಚಿಸಲು “ವೈಜ್ಞಾನಿಕ ವಿಧಾನ“ಗಳ ಪರಿಚಯ.

* “ಮಣ್ಣಿನ ಆರೋಗ್ಯ” ಕಾಪಾಡಲು ತೆಗೆದುಕೊಳ್ಳಬೇಕಾದ ಕ್ರಮಗಳು.

* “ನೀರಿನ ಸಮರ್ಪಕ ಬಳಕೆ ಹಾಗೂ ಹನಿ ನೀರಾವರಿ”ಯ ಕುರಿತು ಪರಿಚಯ.

* “ಕೀಟ ಮತ್ತು ರೋಗಗಳ ನಿರ್ವಹಣೆ“ಯಲ್ಲಿ ಸಮಗ್ರ ವಿಧಾನಗಳ ಅನುಸರಣೆ.

* ರೈತರ ಆದಾಯ ಹೆಚ್ಚಿಸಲು “ವೈಜ್ಞಾನಿಕ ಹಾಗೂ ತಾಂತ್ರಿಕ ಕ್ರಮ“ಗಳು.

ಈ ತರಬೇತಿ ಎಷ್ಟು ದಿನ ನಡೆಯುತ್ತದೆ ಹಾಗೂ ಈ ತರಬೇತಿ ನಡೆಯುವ ದಿನಾಂಕ ಯಾವುದು?

When this training will start and how many days this training will conduct?

ಈ ತರಬೇತಿ “ದಿನಾಂಕ 3/3/2026“ರಂದು “ಬೆಳಗ್ಗೆ10:00 ಗಂಟೆ“ಗೆ ಶುರುವಾಗುತ್ತದೆ.

* ಈ ತರಗತಿ ಕೇವಲ “ಒಂದು ದಿನ“ಕ್ಕೆ ಮಾತ್ರ ಸೀಮಿತವಾಗಿದೆ.

* ತರಬೇತಿ ನಡೆಯುವ “ಸ್ಥಳ“ವೆಂದರೆ “ತೋಟಗಾರಿಕೆ ಮಹಾವಿದ್ಯಾಲಯ ಜಿಕೆವಿಕೆ ಬೆಂಗಳೂರು”.

ಹಾಗಾದರೆ ಈ ತರಬೇತಿಗೆ ನೋಂದಾಯಿಸಿಕೊಳ್ಳುವುದು ಹೇಗೆ?

Then how to register for this training programme?

* ಆಸಕ್ತ ರೈತರು ಈ ಕೆಳಗೆ ನೀಡಿರುವ ಮೊಬೈಲ್ ನಂಬರ್ ಅಥವಾ ಗೂಗಲ್ ಫಾರ್ಮ್ ಶೀಟನ್ನು ತುಂಬಿ ಈ ತರಬೇತಿಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು.

ಕರೆ ಮಾಡಿ ನೊಂದಾಯಿಸಿಕೊಳ್ಳಲು ಇಚ್ಚಿಸುವ ರೈತರು “ಬೆಳಗ್ಗೆ 9 ಗಂಟೆಯಿಂದ ಸಂಜೆ 5:00 ಒಳಗೆ” ಈ ಕೆಳಗೆ ನೀಡಿರುವ ಮೊಬೈಲ್ ನಂಬರ್ ಗಳಿಗೆ ಕರೆ ಮಾಡಿ ನೊಂದಾಯಿಸಿಕೊಳ್ಳಬೇಕು.

ಮೊಬೈಲ್ ನಂಬರ್ ಕರೆ ಮಾಡಿ::

8310933626 – ವೇದಶ್ರೀ

8073457133 – ಡಾ. ಮಾರುತಿ ಪ್ರಸಾದ್”

 ಈ ಕೆಳಗಿನ ಲಿಂಕ್ ಮೇಲೆ ಪ್ರೆಸ್ ಮಾಡಿ ರಿಜಿಸ್ಟರ್ ಆಗಿ

https://forms.gle/LFBAC98mr4gYMybQA

 ರಿಜಿಸ್ಟರ್ ಮಾಡಲು ಡೈರೆಕ್ಟ್ ಲಿಂಕ್!!!

Register Here for training!!!

ಇನ್ನು ಗೂಗಲ್ ಶೀಟ್ ತುಂಬಿ ನಮ್ದಾಯಿಸಿಕೊಳ್ಳಲಿಚ್ಚಿಸುವ ರೈತರು ಕೆಳಗೆ ನೀಡಿರುವ “ಗೂಗಲ್ ಫಾರ್ಮ್” ಅನ್ನು ತುಂಬಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.

https://forms.gle/LFBAC98mr4gYMybQA

ಈ ಎರಡು ವಿಧಾನಗಳ ಮೂಲಕ ರೈತರು ಈ ತರಬೇತಿಗೆ ತಮ್ಮ ಹೆಸರನ್ನು ಸುಲಭವಾಗಿ ನೊಂದಾಯಿಸಿಕೊಳ್ಳಬಹುದು.

ಅಲ್ಲದೆ,ಈ ತರಬೇತಿ ಕೇವಲ ಆಯ್ದ ನೂರು ಜನ ರೈತರಿಗೆ ಮಾತ್ರ ಸೀಮಿತ ಆದ್ಯತೆ ನೀಡಲಾಗಿದ್ದು, ಮೊದಲು ನೊಂದಾಯಿಸಿಕೊಂಡ “100 ರೈತರಿಗೆ ಮೊದಲ ಆದ್ಯತೆ” ಇರುತ್ತದೆ. ಹಾಗಾಗಿ ಆಸಕ್ತ ರೈತರು ಯಾವುದೇ ತಡ ಮಾಡದೆ ಈಗಲೇ ನಂದಾಯಿಸಿಕೊಳ್ಳಬಹುದು.

ಈ ತರಬೇತಿ ಕಾರ್ಯಕ್ರಮವು “ರೈತರ ಕೃಷಿ ಜ್ಞಾನವನ್ನು ವಿಸ್ತರಿಸಿ”, “ಅಡಿಕೆ ಕೃಷಿಯಲ್ಲಿ ಸುಧಾರಿತ ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳಲು ಉಪಯೋಗ”ವಾಗುತ್ತದೆ. ಕೃಷಿ ಕ್ಷೇತ್ರದಲ್ಲಿ “ಸ್ಪರ್ಧಾತ್ಮಕ” ಪರಿಸ್ಥಿತಿಯಲ್ಲಿ ಉಳಿಯಲು ವೈಜ್ಞಾನಿಕ ಹೊಸ ತಂತ್ರಗಳನ್ನು ಕಲಿತು ಅಳವಡಿಸಿಕೊಳ್ಳುವುದು ಅವಶ್ಯವಾಗಿದೆ.

ಈ ನಿಟ್ಟಿನಲ್ಲಿ ರೈತರಿಗೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ತರಬೇತಿಗಳನ್ನು ನೀಡುತ್ತಿರುವ “ತೋಟಗಾರಿಕೆ ಮಹಾವಿದ್ಯಾಲಯ ಜಿಕೆವಿಕೆ ಬೆಂಗಳೂರು ಸಂಸ್ಥೆಯು ಸದಾ ರೈತರ ಅಭಿವೃದ್ಧಿಗೆ ಬದ್ಧವಾಗಿದೆ”.

ಹೀಗಾಗಿ ಎಲ್ಲಾ ರೈತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತರಬೇತಿಯಲ್ಲಿ ಪಾಲ್ಗೊಂಡು ಅಲ್ಲಿಂದ ಉತ್ತಮ “ತಾಂತ್ರಿಕತೆ“ಗಳನ್ನು ಕಲಿತು ತಮ್ಮ ಆದಾಯವನ್ನು ಸುಲಭವಾಗಿ ಹೆಚ್ಚಿಸಿಕೊಳ್ಳುತ್ತಾ ಗಮನಹರಿಸಬಹುದು.

anyway,scientific inventions in arecanut cropping is helping farmers to increase their yeilding also income.JKVK institute is always bring the farmer welfare programmes.

In this programme farmers can learn new techniques of arecanut grow,which help farmers to survive in the agricultural field in middle of competative. 

hence farmers can easily learn techniques and tricks to increase their profit by attending this training.

Thank you.

ಧನ್ಯವಾದಗಳು

<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ : ಇಂದಿನ ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್< ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ​​ಬೆಟ್ಟಿ ಕೆಂಪುಗೋಟು ಚಿಪ್ಪು,

ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ. 

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"

By Vilas

I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

.