Anabe Roga :: ಅಡಿಕೆಗೆ ಹಣಬೆ ರೋಗ, ಮುಂಜಾಗ್ರತೆ ವಹಿಸಿ!! ಇಲ್ಲಿದೆ ಸರಳ ಪರಿಹಾರ!!!

"Agriculture is our CULTURE"

Join this group for Agriculture and Government Schemes

Anabe Roga :: ಅಡಿಕೆಗೆ ಹಣಬೆ ರೋಗ, ಮುಂಜಾಗ್ರತೆ ವಹಿಸಿ!! ಇಲ್ಲಿದೆ ಸರಳ ಪರಿಹಾರ!!!

ಅಡಿಕೆಗೆ ಹಣಬೆ ರೋಗ:: ರೈತರು ಚಿಂತಿಸುವ ಅಗತ್ಯವಿಲ್ಲ ಇಲ್ಲಿದೆ ಸರಳ ಪರಿಹಾರ!!!

Arecanut is the one of the major commercial crop of india. it giving support to economic growth also farmers welfare but still due to pests and fungal diseases farmers are falling to debt trap with huge lose.

here is the compleate analysis about fungal disease and solution for it.

ಅಡಿಕೆ ಬೆಳೆಯು ನಮ್ಮ ದೇಶದ ಒಂದು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು “ಆರ್ಥಿಕ ಮತ್ತು ಸಾಮಾಜಿಕ ಸುಭದ್ರತೆ” ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಅಡಿಕೆ ಬೆಳೆ ಇಂದಿನ ಅಥವಾ ನೆನ್ನೆಯ ಬೆಳೆಯಲ್ಲ, ಇದನ್ನು ತುಂಬಾ ಹಿಂದಿನ ಕಾಲದಿಂದಲೂ ಬೆಳೆಯಲಾಗುತ್ತಿದೆ.

ಈ ಬೆಳೆಗೆ ತನ್ನದೇ ಆದ ಸಾಂಪ್ರದಾಯಿಕ ಇತಿಹಾಸವಿದ್ದು, ತುಂಬಾ ವಿಶಿಷ್ಟತೆಯಿಂದ ಕೂಡಿದೆ ಆದರೂ ಕೆಲವೊಂದು ಋತುಮಾನಕ್ಕೆ ಅನುಗುಣವಾಗಿ ಕೀಟಬಾಧೆ ಹಾಗೂ ಇನ್ನಿತರ ರೋಗಗಳಿಂದ ಅಡಿಕೆ ಬೆಳೆಯಲ್ಲಿ ತೀವ್ರ ಕುಸಿತ ಉಂಟಾಗುತ್ತಿದೆ.

ಅದರಲ್ಲೂ ಪ್ರಮುಖವಾಗಿ ಕರ್ನಾಟಕದ ಭಾಗದಲ್ಲಿ ಕಂಡು ಬರುವ ಹಣಬೆ ರೋಗವು ರೈತರನ್ನು ಇನ್ನಿಲ್ಲದ ಚಿಂತೆಗೆ ದೂಡುತ್ತದೆ. ಹಾಗಾಗಿ ರೈತರು ಹಣಬೆ ರೋಗವನ್ನು ಹತೋಟಿಯಲ್ಲಿಡುವ ಕ್ರಮಗಳನ್ನು ಹೇಗೆ ಅನುಸರಿಸಬೇಕು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಹಣಬೆ ರೋಗ ಎಂದರೇನು?

what is fungal disease?

• ಹಣಬೆ ರೋಗ ಎಂದರೆ ಇದೊಂದು “ಶಿಲೀಂದ್ರ ರೋಗ”ವಾಗಿದೆ.

* “ಗ್ಯಾನೋಡರ್ಮ ಲೂಸಿಡಂ” ಎನ್ನುವ ಶಿಲೀಂದ್ರದಿಂದ ಈ ರೋಗ ಬರುತ್ತದೆ.

• ಈ ರೋಗವು “ಅರೆ ಮಲೆನಾಡು ಹಾಗೂ ಮೈದಾನ ಪ್ರದೇಶ”ಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ.

* ಸಾಮಾನ್ಯವಾಗಿ “ಐದು ವರ್ಷಕ್ಕಿಂತ ಮೇಲ್ಪಟ್ಟ ಅಡಿಕೆ ಮರ” ಗಳಲ್ಲಿ ನಾವು ಹಣಬೆ ರೋಗವನ್ನು ನೋಡಬಹುದು.

ಹಣಬೆ ರೋಗದ ಲಕ್ಷಣಗಳು ಯಾವುವು?

What are the symptoms of fungal disease?

ಹಣಬೆ ರೋಗದ ಪ್ರಾಥಮಿಕ ಹಂತ:- ಹಣಬೆ ರೋಗಕ್ಕೆ ತುತ್ತಾದ “ಅಡಿಕೆ ಮರದ ಎಲೆಗಳು ಸುರುಳಿಯಾಕರದಲ್ಲಿ ಮಧ್ಯದಲ್ಲಿ ಇರುವ ಎಲೆಯೊಂದನ್ನು ಬಿಟ್ಟು, ಉಳಿದ ಎಲ್ಲಾ ಎಲೆಗಳು ಹಳದಿಯಾಗಿ ಒಣಗುತ್ತಾ ಬರುತ್ತವೆ”.

* ಎರಡನೇ ಹಂತ:- ರೋಗ ಹೆಚ್ಚಾದಾಗ ಒಣಗಿದ “ಗರಿಗಳು ಮರಕ್ಕೆ ಸಮನಾಗಿ ಜೋತು ಬೀಳುತ್ತವೆ”.

ಮೂರನೇ ಹಂತ:- ಮರಗಳ ಬುಡದಿಂದ “ಮೂರು ಅಡಿ ಎತ್ತರದಲ್ಲಿ ಬಿರುಕುಗಳ ಮೂಲಕ ಕಂದುದ್ರವ” ಹೊರಬರುತ್ತದೆ.

* ನಾಲ್ಕನೆಯ ಹಂತ:- ಇದು ಕೊನೆಯ ಹಂತವಾಗಿದ್ದು, ಮರದ ಬುಡದಲ್ಲಿ ಶಿಲೀಂದ್ರವು “ಹಣಬೆ ರೂಪ”ದಲ್ಲಿ ಕಾಣಿಸಿಕೊಳ್ಳತೊಡಗುತ್ತದೆ.

ಒಂದು ವೇಳೆ ಹಣಬೆ ರೂಪ ಕಾಣಿಸಿಕೊಂಡರೆ, ರೋಗ ಅಂತಿಮ ಘಟ್ಟದಲ್ಲಿದ್ದು, “ಮರದ ಬೇರು ಕೊಳೆತು,ನಾಶವಾಗುವ ಹಂತ”ದಲ್ಲಿದೆ ಎನ್ನುವುದರ ಸೂಚನೆಯಾಗಿರುತ್ತದೆ.

ಈ ಹಣಬೆ ರೋಗ ಹೇಗೆ ಹರಡುತ್ತದೆ?

How this fungal disease spread?

• ಈ ರೋಗವು “ನೀರು ಮತ್ತು ಮಣ್ಣಿ”ನಿಂದ ಹರಡುತ್ತದೆ.

* “ಮರಗಳಿಂದ ಮರಗಳಿಗೆ ಬೇವಿನ ಸಂಪರ್ಕ”ದ ಮೂಲಕವೂ ಹರಡುತ್ತದೆ.

ಈ ಹಣಬೆ ರೋಗವನ್ನು ನಿರ್ವಹಿಸುವುದು ಹೇಗೆ?

How to manage fungal disease?

• ಮೊದಲಿಗೆ ಯಾವುದಾದರೂ ಮರ ನಾಲ್ಕನೇ ಹಂತ ಅಥವಾ ಅಂತಿಮ ಘಟ್ಟವನ್ನು ತಲುಪಿ “ಸತ್ತಿದ್ದರೆ ಅಂತಹ ಗಿಡಗಳನ್ನು ಬುಡ ಸಮೇತ ಕಿತ್ತು ಜಮೀನಿನ ಹೊರಭಾಗದಲ್ಲಿ ಸುಟ್ಟು ಹಾಕಬೇಕು”.

* ರೋಗ ಪ್ರಾಥಮಿಕ ಹಂತದಲ್ಲಿದ್ದರೆ ಗಿಡದ ಸುತ್ತಲೂ “ಎರಡರಿಂದ ಮೂರು ಅಡಿಯಷ್ಟು ಅಗಲವಾದ ಕುಣಿಯನ್ನು ಮಾಡಬೇಕು.ಇದರಿಂದ “ಬೇರಿನ ಮುಖಾಂತರ ಬೇರೊಂದು ಮರಕ್ಕೆ ರೋಗ ಹರಡುವಿಕೆ“ಯನ್ನು ತಪ್ಪಿಸಬಹುದು.

• “ಹನಿ ನೀರಾವರಿ“ಯನ್ನು ಅನುಸರಿಸಬೇಕು.

* ನೀರು ಬಸಿಯಲು “ಬಸಿಗಾಲುವೆ” ಗಳನ್ನು ನಿರ್ಮಿಸಬೇಕು.

• ಪ್ರತಿ ವರ್ಷ ಒಂದು ಮರಕ್ಕೆ “ಎರಡು ಕೆಜಿ ಬೇವಿನ ಹಿಂಡಿ” ಮತ್ತು ಶಿಫಾರಸ್ಸು ಮಾಡಿರುವ “ಸಾವಯವ ಅಥವಾ ರಸಗೊಬ್ಬರ“ಗಳನ್ನು ನೀಡಬೇಕು.

 “ಜೈವಿಕ ಶಿಲೀಂದ್ರ” ನಾಶಕವಾಗಿರುವ, “ಟ್ರೇಕೊಡರ್ಮಾ” ಮತ್ತು “ಸುಡೋಮೋನಸ್” ನನ್ನು 100 ಗ್ರಾಂ ಅಂತೆ ಮರದ ಬುಡಕ್ಕೆ ಹಾಕಬೇಕು.

* ರೋಗಪೀಡಿತ ಮರಗಳಿಗೆ ಮೂರು ಮಿಲಿ ಲೀಟರ್ “ಹೆಕ್ಸ ಕೋನಜೋಲ್ ಅಂತರ ವ್ಯಾಪ್ತಿ ಶಿಲೀಂದ್ರನಾಶಕವನ್ನು ಪ್ರತಿ 100ml ನೀರಿನಲ್ಲಿ ಬೆರೆಸಿ ಬೇರುಗಳಿಗೆ ನೀಡಬೇಕು”.

• ಈ ಕ್ರಮವನ್ನು ವರ್ಷಕ್ಕೆ ನಾಲ್ಕು ಬಾರಿ ಅಂದರೆ “ಮಾರ್ಚ್,ಜುಲೈ,ಅಕ್ಟೋಬರ್ ಮತ್ತು ಜನವರಿ” ತಿಂಗಳಲ್ಲಿ ಅನುಸರಿಸಬೇಕು.

* ಈ ರೀತಿಯಾಗಿ ಮರದ ಬೇರುಗಳಿಗೆ ಗೊಬ್ಬರವನ್ನು ನೀಡುವುದರ ಮೂಲಕ ಹಣಬೆ ರೋಗವನ್ನು ಸುಲಭವಾಗಿ ತಡೆಗಟ್ಟಬಹುದು.

Arecanut Plants Affected by Disease

ಈ ಮೇಲೆ ನೋಡಿದಂತೆ ಹಣಬೆ ರೋಗವು ತುಂಬಾ “ಸುಧೀರ್ಘ ಕಾಲ“ದವರೆಗೂ ಬಾಧಿಸುವಂಥ ರೋಗವಾಗಿದ್ದು,ರೈತರು ಪ್ರಾಥಮಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಈ ರೋಗದ ಹರಡುವಿಕೆಯನ್ನು ತಪ್ಪಿಸಬಹುದು.

ರೈತರು ನಿಯಮಿತವಾಗಿ “ಹೆಕ್ಸಕೋನಜೋಲ್” ನನ್ನು ನೀಡುತ್ತಾ ಬಂದರೆ,ತೋಟದಲ್ಲಿರುವ ಯಾವುದೇ ಅಡಿಕೆ ಸಸಿಗಳು ಶಿಲೀಂಧ್ರದ ರೋಗಕ್ಕೆ ತುತ್ತಾಗುವುದಿಲ್ಲ ಬದಲಾಗಿ “ಇಳುವರಿಯನ್ನು ಹೆಚ್ಚಿಸಿ ರೈತರಿಗೆ ಹೆಚ್ಚಿನ ಲಾಭ“ವನ್ನು ತಂದುಕೊಡುತ್ತವೆ.

Disease affected plant

Therefore,”nutrition management and water management” is the crucial for better growth of arecanut plants here “hexa xonal liquid reduces the fungal disease in arecanut plants“.

this will reduce the loss also gives “good profit” for farmer.

Thank you.

ಧನ್ಯವಾದಗಳು

<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ : ಇಂದಿನ ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್< ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ​​ಬೆಟ್ಟಿ ಕೆಂಪುಗೋಟು ಚಿಪ್ಪು,

ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ. 

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"

By Vilas

I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

.