PUC and SSLC :: ಪಿ.ಯು.ಸಿ ಮತ್ತು ಎಸ್.ಎಲ್. ಎಲ್. ಸಿ ವಿದ್ಯಾರ್ಥಿಗಳಿಗೆ ಉಚಿತ ಕೋಶನ್ ಪೇಪರ್!!! ಲಿಂಕ್ ಮೂಲಕ ಡೈರೆಕ್ಟ್ ಜಾಯಿನ್ ಆಗಿ!!
ಕರ್ನಾಟಕ ರಾಜ್ಯದಲ್ಲಿ SSLC ಹಾಗೂ PUC ಪರೀಕ್ಷೆಗಳಲ್ಲಿ ಸುಧಾರಣೆಗಳನ್ನು ತರಲು ಶಿಕ್ಷಣ ಇಲಾಖೆ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಇಂತಹ ಹಲವು ಕಾರ್ಯಕ್ರಮಗಳಲ್ಲಿ SSLC ಹಾಗೂ PUC ಪರೀಕ್ಷಾ ದೃಷ್ಟಿಯಿಂದ ತಂದಿರುವ ಯೋಜನೆಗಳು ತುಂಬಾ ಪ್ರಮುಖವಾಗಿವೆ,
ಅದರಲ್ಲೂ ಕೇಂದ್ರ ಸರ್ಕಾರದ “ಪರೀಕ್ಷಾ ಪೇ ಚರ್ಚಾ”ವಿದ್ಯಾರ್ಥಿಗಳಿಗೆ “ಪರೀಕ್ಷಾ ಭಯವನ್ನು” ತೊಲಗಿಸಲು ತುಂಬಾ ಅನುಕೂಲಕಾರಿ ಯೋಜನೆಯಾಗಿದೆ. ಇಂತಹ ಹಲವು ಯೋಜನೆಗಳ ಅನುಷ್ಠಾನದಿಂದಾಗಿಯೂ ವಿದ್ಯಾರ್ಥಿಗಳಲ್ಲಿ “ಅಮೂಲಾಗ್ರ ಬೆಳವಣಿಗೆಯನ್ನು ಸಾಧಿಸಲು ಸಾಧ್ಯವಾಗುತ್ತಿಲ್ಲ”,
ಪರೀಕ್ಷೆ ಶುರುವಾದಾಗಿನಿಂದ ಪರೀಕ್ಷೆಯ ಫಲಿತಾಂಶ ಬರುವವರೆಗೂ ಈ ಪ್ರಕ್ರಿಯೆ ತುಂಬಾ ದೀರ್ಘವಾಗಿದ್ದು,ಹಂತ ಹಂತದಲ್ಲಿಯೂ “ಹಲವು ಮುನ್ನೆಚ್ಚರಿಕೆ”ಗಳನ್ನು ತೆಗೆದುಕೊಂಡು ಶಿಕ್ಷಣ ಇಲಾಖೆ ಈ ಜವಾಬ್ದಾರಿಯನ್ನು ಮುಗಿಸುತ್ತದೆ.
ಪಿಯುಸಿ ಉಚಿತ ಪೇಪರ್!!!
ವಿದ್ಯಾರ್ಥಿಗಳಿಗೆ ಕಳೆದ ವರ್ಷದ ಕೋಶನ್ ಪೇಪರ್, ಮಾಡೆಲ್ ಪೇಪರ್,ಡಿಸ್ಟ್ರಿಕ್ ಪ್ರಿಪರೇಟರಿ ಮತ್ತು ಇನ್ನಿತರೆ ಉಚಿತ ಪೇಪರ್ ಗಾಗಿ ಕೆಳಗಿನ ಲಿಂಕ್ ಮೂಲಕ ಜಾಯಿನ್ ಆಗಿ.
1) ಜಾಯಿನ್ ಟೆಲಿಗ್ರಾಂ ( Telegram group ):- https://t.me/PUCScienceArtsCommerce
2) ಜಾಯಿನ್ ವಾಟ್ಸಪ್ಪ್ ( WhatsApp group ) :- https://chat.whatsapp.com/KXTO3dgDKcY3iiwEztfUwH?mode=gi_t
ಎಸ್ ಎಲ್ ಎಲ್ ಸಿ ವಿದ್ಯಾರ್ಥಿಗಳು ಉಚಿತ ಪೇಪರ್!!
ಈ ಕೆಳಗಿನ ಲಿಂಕ್ ಮೇಲೆ ಪ್ರೆಸ್ ಮಾಡಿ ಉಚಿತ ಪೇಪರ್ಗಳನ್ನು ಪಡೆಯಿರಿ
https://kseeb.karnataka.gov.in/KOSMIG/
ಈ ರೀತಿಯಾಗಿ ಯಶಸ್ವಿಯಾಗಿ ಜವಾಬ್ದಾರಿಯನ್ನು ಮುನ್ನಡೆಸುತ್ತಿದ್ದ ಶಿಕ್ಷಣ ಇಲಾಖೆಯೂ ಈ ಬಾರಿ “ನೂತನ ಯೋಜನೆ”ಯೊಂದನ್ನು ಜಾರಿಗೊಳಿಸಿದೆ. ಈ ಯೋಜನೆಯ ಅನುಸಾರ “ಪರೀಕ್ಷೆಗಳು ಶುರುವಾಗುವ ಮುನ್ನವೇ ಫಲಿತಾಂಶದ ದಿನಾಂಕವನ್ನು ಘೋಷಿಸಲಾಗಿದೆ”.
ಅಂದರೆ SSLC ಹಾಗೂ PUC ಪರೀಕ್ಷೆಗಳಲ್ಲಿ “ಪಾರದರ್ಶಕತೆಯನ್ನು ಹೆಚ್ಚಿಸುವ ಸಲುವಾಗಿ” ಈ ಕ್ರಮವನ್ನು ಕೈಗೊಳ್ಳಲಾಗಿದೆ.
* SSLC ಹಾಗೂ PUC ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಟಿಯಿಂದ ತುಂಬಾ ಅವಶ್ಯಕವಾಗಿದ್ದು,ಇದರಲ್ಲಿ ಉತ್ತಮ ಫಲಿತಾಂಶ ಗಳಿಸುವುದು ವಿದ್ಯಾರ್ಥಿಗಳಿಗೆ ತುಂಬಾ ಅಗತ್ಯವಾಗಿದೆ.
• ಅಲ್ಲದೆ,ಸರಿಯಾದ ಸಮಯಕ್ಕೆ ಸರಿಯಾದ ವೇಳಾಪಟ್ಟಿಗನುಗುಣವಾಗಿ ಶೈಕ್ಷಣಿಕ ವರ್ಷದಲ್ಲಿ ಪರೀಕ್ಷೆಗಳು ನಡೆದಾಗ ವಿದ್ಯಾರ್ಥಿಗಳು “ಮುಂದಿನ ಹಂತಕ್ಕೆ ತಲುಪಲು ಅನುಕೂಲಕರ”ವಾಗಿರುತ್ತದೆ.
* ಅಲ್ಲದೆ ಪರೀಕ್ಷೆಗಳು ನಡೆಯುವ ಮುಂಚೆಯೇ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಫಲಿತಾಂಶದ ದಿನಾಂಕ ತಿಳಿದಾಗ ವಿದ್ಯಾರ್ಥಿಗಳಿಗೆ “ಅನಗತ್ಯ ಒತ್ತಡವಿರುವುದಿಲ್ಲ ಅಲ್ಲದೆ, ಆ ಒತ್ತಡವನ್ನು ನಿರ್ವಹಿಸುವ ಮಾನಸಿಕ ಸ್ಥೈರ್ಯವು ಹೆಚ್ಚಾಗುತ್ತದೆ”.
PUC ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ತಂದಿರುವ ಮತ್ತೊಂದು ಮಹತ್ವಪೂರ್ಣ ಬದಲಾವಣೆ ಯಾವುದು?
What is the initiative took by education department for PU students?
ಇತ್ತೀಚಿಗೆ ಶಿಕ್ಷಣ ಇಲಾಖೆಯು ಪಿಯು ವಿದ್ಯಾರ್ಥಿಗಳಿಗೆ ಅನುಕೂಲಕರವಾಗಲೆಂದು “ಪರೀಕ್ಷೆಗೂ ಮುನ್ನವೇ ಅವರ ಆಂತರಿಕ ಅಂಕ”ಗಳನ್ನು(internal marks) ವಿದ್ಯಾರ್ಥಿಗಳ “SATS ಲಾಗಿನ್” ನಲ್ಲಿ ಪ್ರಕಟಿಸಲಾಗುತ್ತದೆ.
ಇದರಿಂದ ಆಗುವ ಲಾಭವೇನು?
What is the benifit form this initiative?
• ಶಿಕ್ಷಣ ಇಲಾಖೆಯ ಆಂತರಿಕ ಅಂಕಗಳನ್ನು ಪ್ರಕಟಿಸುವುದರಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆಗೂ ಮುನ್ನವೇ ತಮ್ಮ “ಆಂತರಿಕ ಅಂಕಗಳು ತಿಳಿಯುವುದರಿಂದ ವಾರ್ಷಿಕ ಪರೀಕ್ಷೆಯಲ್ಲಿ ಇನ್ನೂ ಹೆಚ್ಚು ಅಂಕಗಳನ್ನು ಗಳಿಸಲು ಪ್ರೇರೇಪಣೆ ನೀಡಿದಂತಾಗುತ್ತದೆ”.
* ಅಲ್ಲದೆ ಯಾವ ವಿಷಯದಲ್ಲಿ “ಶೇಕಡವಾರು ಅಂಕಗಳನ್ನು ಹೆಚ್ಚಿಸಿಕೊಳ್ಳಬಹುದೆಂಬ” ಮಾಹಿತಿ ದೊರೆಯುತ್ತದೆ. ಇದರಿಂದ ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಹೆಚ್ಚು ಮಾಡಿಕೊಳ್ಳುತ್ತ ಗಮನಹರಿಸಬಹುದು.
SSLC ಹಾಗೂ PUC ಪರೀಕ್ಷೆಗಳು ಯಾವಾಗನಿಂದ ಆರಂಭ ಮತ್ತು ಫಲಿತಾಂಶ ಘೋಷಣಾ ಸಂಭಾವ್ಯ ದಿನಾಂಕ ಯಾವುದು ?
From When SSLC AND PU exams will starts And what is the result tenative date ?
SSLC ಪರೀಕ್ಷೆಗಳು ದಿನಾಂಕ:- “ಮಾರ್ಚ್ 18,2026” ರಿಂದ ಶುರುವಾಗುತ್ತವೆ.
ಫಲಿತಾಂಶ ಘೋಷಣಾ ಸಂಭಾವ್ಯ ದಿನಾಂಕವೆಂದರೆ,”ಏಪ್ರಿಲ್ 24, 2026″ ಕ್ಕೆ ಪ್ರಕಟ ಮಾಡಲಾಗುತ್ತದೆ.
PUC ಪರೀಕ್ಷೆಗಳ ದಿನಾಂಕ:- “ಫೆಬ್ರುವರಿ 28” ರಿಂದ ಶುರುವಾಗುತ್ತವೆ.
ಫಲಿತಾಂಶ ಘೋಷಣಾ ಸಂಭಾವ್ಯ ದಿನಾಂಕವೆಂದರೆ,”ಏಪ್ರಿಲ್ 07, 2026″ ರಂದು ಪ್ರಕಟ ಮಾಡಲಾಗುತ್ತದೆ.
ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ಯಾವಾಗ?
When the supplementary exam will conduct?
ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಅಥವಾ ಫಲಿತಾಂಶ ಸುಧಾರಣೆ ಬಯಸುವವರಿಗೆ “ಏಪ್ರಿಲ್ ಮತ್ತು ಮೇ ತಿಂಗಳಲ್ಲಿ” 2ನೇ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ತಯಾರಿ ನಡೆಸಿದೆ. ಈ ಕ್ರಮದಿಂದಾಗಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ
“ಶೈಕ್ಷಣಿಕ ವರ್ಷದಲ್ಲಿಯೇ ಅಂದರೆ ಜೂನ್ ನಲ್ಲಿಯೇ ಇತರ ವಿದ್ಯಾರ್ಥಿಗಳಂತೆ ತಾವು ಸಹ ದಾಖಲಾತಿ ಪಡೆಯಲು” ಸಹಾಯಕವಾಗುತ್ತದೆ.
ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಸರ್ಕಾರ ಕೈಗೊಂಡಿರುವ ಕ್ರಮಗಳ ಯಾವ್ಯಾವು?
Which initiative taken by government in the favour of exam atendees?
1) “ಉಚಿತ ಬಸ್”(Free bus):-
ಈ ಕ್ರಮದ ಅಡಿಯಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ತಮ್ಮ ಪ್ರವೇಶ ಪತ್ರವನ್ನು ತೋರಿಸಿ,ಉಚಿತ ಪ್ರಯಾಣವನ್ನು ಮಾಡಬಹುದು. ಇದರಿಂದಾಗಿ ವಿದ್ಯಾರ್ಥಿಗಳು “ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಗಳನ್ನು ತಲುಪಲು” ಅನುಕೂಲಕರವಾಗುತ್ತದೆ.
2) “ವೆಬ್ ಕಾಸ್ಟಿಂಗ್” (Web casting):-
ಈ ಬಾರಿ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ “ಸಿ.ಸಿ.ಟಿವಿ” ಅಳವಡಿಸಿರುವುದರಿಂದ “ವೆಬ್ ಕಾಸ್ಟಿಂಗ್ ಕಡ್ಡಾಯ”ವಾಗಿರುತ್ತದೆ.ಇದರಿಂದ ಪರೀಕ್ಷೆಯಲ್ಲಿ ನಕಲು ಮಾಡುವುದನ್ನು ತಡೆಗಟ್ಟುವುದಲ್ಲದೆ, ವಿದ್ಯಾರ್ಥಿಗಳು ತಮ್ಮ “ಸಾಮರ್ಥ್ಯಕ್ಕನುಗುಣ”ವಾಗಿ ಅಂಕಗಳಿಸಲು ಅನುವು ಮಾಡಿಕೊಡಲಾಗಿದೆ.
3) “ಸ್ಮಾರ್ಟ್ ವಾಚ್ ಮೊಬೈಲ್ ನಿಷೇಧ” (smart watch and mobiles not allow):-
“ಸಮಯ ನಿರ್ವಹಣೆಗಾಗಿ ಕೆಲವೇ ವಿದ್ಯಾರ್ಥಿಗಳು ತಮ್ಮ ಕೈಗಡಿಯಾರ”ವನ್ನು ಪರೀಕ್ಷಾ ಕೇಂದ್ರದಲ್ಲಿ ಈ ಮೊದಲು ಬಳಸುತ್ತಿದ್ದರು, ಆದರೆ ಈಗ ಪರೀಕ್ಷೆ ಬರೆಯಲು ಹೋಗುವ ವಿದ್ಯಾರ್ಥಿಗಳು ಯಾವುದೇ “ಲೋಹದ ವಸ್ತುಗಳನ್ನು ಪರೀಕ್ಷಾ ಕೇಂದ್ರದ ಒಳಗೆ ತೆಗೆದುಕೊಂಡು ಹೋಗುವಂತಿಲ್ಲ,
ಅಲ್ಲದೆ ಯಾವುದೇ ಸ್ಮಾರ್ಟ್ ಫೋನ್ ಮೊಬೈಲ್ ಮತ್ತು ಎಲೆಕ್ಟ್ರಾನಿಕ್ ಉಪಕರಣ”ಗಳನ್ನು ಪರೀಕ್ಷಾ ಕೇಂದ್ರದ ಒಳಗಡೆ ತೆಗೆದುಕೊಂಡು ಹೋಗುವಂತಿಲ್ಲ, ಇದರಿಂದ ಪರೀಕ್ಷೆಯಲ್ಲಿ ನಕಲು ಮಾಡುವುದನ್ನು ತಡೆಗಟ್ಟುವುದು ಪ್ರಮುಖ ಉದ್ದೇಶವಾಗಿದೆ.
4) ಸುಳ್ಳು ಸುದ್ದಿ ಹಬ್ಬಿಸಿದರೆ “ಜೈಲು” (Imprisionment punishment for fakenews spred):-
ಪ್ರತಿ ಬಾರಿಯೂ SSLC ಹಾಗೂ PUC ಪರೀಕ್ಷೆ ನಡೆಯುವಾಗಲೂ ಪರೀಕ್ಷೆ ಪತ್ರಿಕೆ ಲೀಕ್ ಆಗಿದೆ ಎಂಬ ಸುಳ್ಳು ಸುದ್ದಿ ಕಾಡ್ಗಿಚ್ಚಿನಂತೆ ಹರಡುತ್ತದೆ.ಇದರಿಂದ “ವಿದ್ಯಾರ್ಥಿಗಳು ಆತಂಕ ಮತ್ತು ಒತ್ತಡಕ್ಕೆ ಒಳಗಾಗುತ್ತಾರೆ”,
ಇದನ್ನು ತಡೆಗಟ್ಟಲು ಪರೀಕ್ಷೆ ಸಮಯದಲ್ಲಿ ಪ್ರಶ್ನೆ ಪತ್ರಿಕೆ ಅಥವಾ ಇನ್ನಿತರೆ ಮಾಹಿತಿಗಳ ಕುರಿತು “ಸುಳ್ಳು ಮಾಹಿತಿ ಹಬ್ಬಿಸಿದಲ್ಲಿ ಅಂಥವರಿಗೆ ಕಠಿಣ ಕಾರಾಗೃಹ ಶಿಕ್ಷೆ”ಯನ್ನು ವಿಧಿಸಲಾಗುವುದು ಎಂದು ತಿಳಿಸಲಾಗಿದೆ.
5) “ಸ್ಟುಡೆಂಟ್ ಕಾರ್ನರ್” ಎಂಬ ಹೊಸ ಕ್ರಮ(Student corner a new initiative):-
ಶಿಕ್ಷಣ ಇಲಾಖೆಯ “ಸ್ಟುಡೆಂಟ್ ಕಾರ್ನರ್” ಎಂಬ ಹೊಸ ಕ್ರಮವನ್ನು ಕೈಗೊಳ್ಳಲಾಗಿದ್ದು, ಈ ಸ್ಟೂಡೆಂಟ್ ಕಾರ್ನರ್ ಎಂಬ ವೆಬ್ಸೈಟ್ನಲ್ಲಿ ಪರೀಕ್ಷೆಗೆ ತಯಾರು ನಡೆಸುವ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಲಿ ಎಂದು “ಹಳೆಯ ವರ್ಷದ ಮಾದರಿ ಪ್ರಶ್ನೆ ಪತ್ರಿಕೆಗಳ ಜೊತೆಗೆ ಉತ್ತರ ಪತ್ರಿಕೆ”ಗಳನ್ನು ಪ್ರಕಟಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು “ಪುನರ್ ಮನನ” ಮಾಡಲು ಅನುಕೂಲಕರವಾಗಿದೆ.
ಈ ಎಲ್ಲಾ ಕ್ರಮಗಳು ವಿದ್ಯಾರ್ಥಿಗಳು ಸುಗಮವಾಗಿ ಪರೀಕ್ಷೆಯನ್ನು ಬರೆಯಲು ಕೈಗೊಳ್ಳಲಾಗಿದ್ದು, ರಾಜ್ಯದಲ್ಲಿ “ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು” ಉತ್ತಮ ಹೆಜ್ಜೆಯಾಗಿದೆ. ಅಲ್ಲದೆ, ವೆಬ್ ಕಾಸ್ಟಿಂಗ್ ಕಡ್ಡಾಯವಾಗಿರುವುದರಿಂದ, “ಸಮೂಹ ನಕಲ”ನ್ನು ಮಾಡಿ ತಮ್ಮ ಜಿಲ್ಲೆಯಲ್ಲಿ ಉತ್ತಮ ಶೈಕ್ಷಣಿಕ ಗುಣಮಟ್ಟವಿದೆ ಎಂದು “ನಕಲಿ ವರದಿ”ಯನ್ನು ತೋರಿಸುತ್ತಿದ್ದ ಜಿಲ್ಲೆಗಳಿಗೂ ಬಿಸಿ ಮುಟ್ಟಿಸಿದಂತಾಗಿದೆ.
ಇಷ್ಟೇ ಅಲ್ಲದೆ, ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ “ಸಾರಿಗೆ ಸಮಸ್ಯೆಯಾಗಬಾರದೆಂಬ” ಕಾರಣಕ್ಕೆ ಉಚಿತ ಪ್ರಯಾಣದ ಅವಕಾಶ ಮಾಡಿಕೊಟ್ಟಿರುವುದು ಸ್ವಾಗತಾರ್ಹ ಕ್ರಮವಾಗಿದೆ.
ಒಟ್ಟಾರೆಯಾಗಿ ಶಿಕ್ಷಣ ಇಲಾಖೆಯ ವಿದ್ಯಾರ್ಥಿಗಳು ಹಾಗೂ ಪರೀಕ್ಷೆಯ ದೃಷ್ಟಿಯಿಂದ ತೆಗೆದುಕೊಂಡಿರುವ ಕ್ರಮಗಳು “ಉತ್ತಮ ಬೆಳವಣಿಗೆಯನ್ನು ಸೂಚಿಸುವ ಮಾಪಕ”ಗಳಾಗಿ ಕಾಣಿಸುತ್ತಿವೆ, ಅಲ್ಲದೆ ಪರೀಕ್ಷೆಗೂ ಮುನ್ನವೇ ಫಲಿತಾಂಶ ಘೋಷಣಾ ಸಂಭಾವ್ಯ ದಿನಾಂಕ ಹಾಗೂ ಮರು ಪರೀಕ್ಷೆಯ ದಿನಾಂಕವನ್ನು ಘೋಷಿಸಿರುವುದು
ಶಿಕ್ಷಣ ಇಲಾಖೆಯಲ್ಲಿನ “ಪಾರದರ್ಶಕತೆಯನ್ನು ಎತ್ತಿ ಹಿಡಿಯುವ ಹಾಗೂ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಕಾಯುವ” ಪ್ರಮುಖ ಕ್ರಮವೆಂದು ಹೇಳಬಹುದು.
Education depapartment always “focusing on student welfare and their individual development“. therefore releasing of result announcement date and supplimentary exam date before the board exam is the best example that showing education department is always with students welfare and progress.
also releasing of internal marks of students in their SATs login helps to motivate towards studies to increase their marks in external exam.
ಧನ್ಯವಾದಗಳು,
Thank you
<<< Arecanut Market : Daily Arecanut Market ( Click Here ) >>>
< For job updates and employment related information and carrier paths please follow below Facebook Group and WhatsApp Group >
1) ” Facebook Group ” – Click Here
2) ” WhatsApp Group ” – Click Here
Forever helpful and useful updates
– VK
Knowledge Lead’s & Live’s Life
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

Leave a Reply