Gruhalakshmi Update :: 26ನೇ ಕಂತಿನ ಹಣ ಇನ್ನೂ ಯಾವ ಯಾವ ಜಿಲ್ಲೆಗಳಿಗೆ ಜಮವಾಗಿದೆ? ಪರಿಶೀಲಿಸುವುದು ಹೇಗೆ?
ಗೃಹಲಕ್ಷ್ಮಿ ಯೋಜನೆಯ 26ನೇ ಕಂತು ಬಿಡುಗಡೆಯಾಗಿದೆ – ನಿಮ್ಮ ಜಿಲ್ಲೆಗೆ ಹಣ ತಲುಪಿದೆಯೇ? ಪರಿಶೀಲಿಸುವುದು ಹೇಗೆ?
Gruhalakshmi Scheme – 26th Installment Released!! Districts received money! How to check ?
ಕರ್ನಾಟಕ ಸರ್ಕಾರವು ಘೋಷಿಸಿರುವ ಐದು ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ‘ಗೃಹಲಕ್ಷ್ಮಿ‘ ಯೋಜನೆಯ ಇಪ್ಪತ್ತಾರನೇ ಕಂತಿನ ಹಣವನ್ನು ಫಲಾನುಭವಿಗಳ ಖಾತೆಗಳಿಗೆ ವರ್ಗಾವಣೆ ಮಾಡುವ ಪ್ರಕ್ರಿಯೆಯು ಫೆಬ್ರವರಿ 17, 2026 ರಂದು ಅಧಿಕೃತವಾಗಿ ಪ್ರಾರಂಭವಾಗಿದೆ.
ಈ ಮಹತ್ವಪೂರ್ಣ ಯೋಜನೆಯು ರಾಜ್ಯದ ಮಹಿಳೆಯರನ್ನು ಸಬಲೀಕರಣಗೊಳಿಸುವ ಮತ್ತು ಅವರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಮುಖ್ಯ ಗುರಿಯನ್ನು ಹೊಂದಿದೆ.
• 26ನೇ ಮಾಸಿಕ ಕಂತಿನ ಹಣ ಬಿಡುಗಡೆಯಾಗಿದೆ. ಫೆಬ್ರವರಿ 17, 2026 ರಿಂದ ಹಣ ವರ್ಗಾವಣೆ ಪ್ರಕ್ರಿಯೆಯು ಆರಂಭವಾಗಿದೆ.
ಹಣ ಜಮೆಯಾದ ಜಿಲ್ಲೆಗಳು :
• ಮೊದಲ ಹಂತದಲ್ಲಿ ಮೈಸೂರು, ಕೋಲಾರ, ರಾಮನಗರ, ಉತ್ತರ ಕನ್ನಡ, ಚಿಕ್ಕಬಳ್ಳಾಪುರ, ದಾವಣಗೆರೆ, ಬಾಗಲಕೋಟೆ ಮತ್ತು ಕೊಪ್ಪಳ ಜಿಲ್ಲೆಗಳ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣವನ್ನು ಜಮಾ ಮಾಡಲಾಗಿದೆ.
* ನಮಗೆ ಲಭ್ಯವಾದ ಅಧಿಕೃತ ಮಾಹಿತಿಯ ಪ್ರಕಾರ, ಮೈಸೂರು, ಕೋಲಾರ ಇನ್ನಷ್ಟು ಜಿಲ್ಲೆಯ ಫಲಾನುಭವಿಗಳಿಗೆ ಹಣ ತಲುಪಿದ್ದು, ಈ ಜಿಲ್ಲೆಯ ಫಲಾನುಭವಿಗಳು ಹಣ ಬಂದಿರುವ ಬಗ್ಗೆ ಸ್ಕ್ರೀನ್ಶಾಟ್ಗಳನ್ನು ಕಳುಹಿಸಿದ್ದಾರೆ.

Money Credited Status Kolar
ಕೋಲಾರ

Credited Money Status Mysuru
ಮೈಸೂರು

Credited Status Ramanagara
ರಾಮನಗರ
• ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ (DBT) ಪ್ರಕ್ರಿಯೆಯು ಹಂತ ಹಂತವಾಗಿ ನಡೆಯುವುದರಿಂದ, ಉಳಿದ ಜಿಲ್ಲೆಗಳ ಫಲಾನುಭವಿಗಳ ಖಾತೆಗಳಿಗೆ ಹಣ ತಲುಪಲು ಸುಮಾರು 15 ರಿಂದ 20 ದಿನಗಳವರೆಗೆ ಸಮಯ ಬೇಕಾಗಬಹುದು.
ಪಾವತಿ ಸ್ಥಿತಿಯನ್ನು ತಿಳಿಯುವುದು ಹೇಗೆ?:
ನಿಮ್ಮ ಪಾವತಿ ಪ್ರಕ್ರಿಯೆಯ ಸ್ಥಿತಿಯನ್ನು ತಿಳಿದುಕೊಳ್ಳಲು ಈ ಕೆಳಗಿನ ವಿಧಾನಗಳನ್ನು ಫಾಲೋ ಮಾಡಿ :
• DBT Karnataka App: ಗೂಗಲ್ ಪ್ಲೇ ಸ್ಟೋರ್ನಿಂದ DBT ಕರ್ನಾಟಕ ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ. ನಂತರ, ನಿಮ್ಮ ಆಧಾರ್ ಸಂಖ್ಯೆಯನ್ನು ಬಳಸಿ ಲಾಗಿನ್ ಆಗುವ ಮೂಲಕ ನಿಮ್ಮ ಪಾವತಿಯ ಸಂಪೂರ್ಣ ವಿವರಗಳನ್ನು ಪಡೆಯಬಹುದು. https://play.google.com/store/apps/details?id=com.dbtkarnataka&pcampaignid=web_share]

Install DBT App For Status Check
DBT app
• ಸೇವಾ ಸಿಂಧು/ಗ್ರಾಮ ಒನ್ ಕೇಂದ್ರ: ನಿಮ್ಮ ಹತ್ತಿರದ ಗ್ರಾಮ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಿ. ಅಲ್ಲಿ ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು ನೀಡಿ, ನಿಮ್ಮ ಪಾವತಿ ಸ್ಥಿತಿಯ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದು.

Click On Application Tracker
ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ ಪರಿಶೀಲನೆ ಮಾಡಿ
• ಗಮನಿಸಿ, ಫಲಾನುಭವಿಗಳು ತಮ್ಮ ಖಾತೆಗೆ NPCI (National Payments Corporation of India) ಮ್ಯಾಪಿಂಗ್ ಮತ್ತು ಆಧಾರ್ ಸೀಡಿಂಗ್ ಅನ್ನು ಕಡ್ಡಾಯವಾಗಿ ಮಾಡಿರಬೇಕು. ಇದು ಪಾವತಿ ಪ್ರಕ್ರಿಯೆ ಸುಗಮವಾಗಿ ನಡೆಯಲು ಅತ್ಯಗತ್ಯ.
ಇದು ಯುನಿವರ್ಸಲ್ ಬೇಸಿಕ್ ಇನ್ಕಮ್ (UBI) ಮಾದರಿಯ ಒಂದು ಯೋಜನೆಯಾಗಿದ್ದು, ಮನೆಯ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2,000 ರೂಪಾಯಿಗಳ ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ.
ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲು ಮತ್ತು ಪಾರದರ್ಶಕತೆಯನ್ನು ಉಳಿಸಿಕೊಳ್ಳಲು ಈ ಯೋಜನೆಯು ನೇರ ನಗದು ವರ್ಗಾವಣೆ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತದೆ.
ಈ ಯೋಜನೆಯ ಮುಖ್ಯ ಆರ್ಥಿಕ ಗುರಿ ಗ್ರಾಮೀಣ ಮಾರುಕಟ್ಟೆಯಲ್ಲಿ ಹಣದ ಚಲನೆಯನ್ನು ಹೆಚ್ಚಿಸುವುದು ಮತ್ತು ಮಹಿಳೆಯರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸುವುದಾಗಿದೆ.
ಫಲಾನುಭವಿಗಳ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮತ್ತು NPCI (National Payments Corporation of India) ಮ್ಯಾಪಿಂಗ್ ಆಗಿರುವುದು ಈ ಯೋಜನೆಯ ಲಾಭ ಪಡೆಯಲು ಅತಿ ಮುಖ್ಯವಾದ ಅಂಶವಾಗಿದೆ.
This plan follows the idea of Universal Basic Income (UBI), giving ₹2,000 each month to the main female member of a family. To avoid using middlemen and keep the process clear, the money is sent directly to the beneficiary through Direct Benefit Transfer (DBT).
The main economic goal is to get money moving in village markets and help women buy more. To get the money, beneficiaries must link their Aadhaar details and NPCI (National Payments Corporation of India) to their bank accounts.
ಧನ್ಯವಾದಗಳು
Thank You
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸರ ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

Leave a Reply