Gruhalakshmi Update :: ಗೃಹಲಕ್ಷ್ಮಿ 25 ಮತ್ತು 26ನೇ ಕಂತಿನ ತಿಂಗಳಿನ ಹಣ !!! 26ನೇ ಕಂತಿನ ಹಣ ಯಾವಾಗ ಬರಲಿದೆ? ಚೆಕ್ ಮಾಡುವುದು ಹೇಗೆ?
ಗೃಹಲಕ್ಷ್ಮಿ 26ನೇ ಕಂತು: ನಿಮ್ಮ ಜಿಲ್ಲೆಗೆ ಹಣ ಯಾವಾಗ ಬರಲಿದೆ? ಚೆಕ್ ಮಾಡುವುದು ಹೇಗೆ?
Gruhalakshmi Scheme: When will the 26th Installment be Released?
• 26ನೇ ಕಂತು ಸದ್ಯಕ್ಕೆ ಯಾವುದೇ ಅರ್ಹ ಫಲಾನುಭವಿಗಳ ಖಾತೆಗಳಿಗೆ 26ನೇ ಕಂತಿನ ಧನವು ಇದುವರೆಗೆ ಬಂದಿಲ್ಲ.
* ಆಡಳಿತವು ಹಣವನ್ನು ವರ್ಗಾವಣೆ ಮಾಡಲು ಬೇಕಾದ ಸಿದ್ಧತೆಗಳನ್ನು ನಡೆಸುತ್ತಿದೆ ಮತ್ತು ನಿರೀಕ್ಷೆಯಂತೆ ಮುಂದಿನ ಒಂದು ವಾರದ ಅವಧಿಯಲ್ಲಿ ಹಣವನ್ನು ಬಿಡುಗಡೆ ಮಾಡುವ ಸಂಭವವಿದೆ.
• 25ನೇ ಕಂತಿನ ವಿಳಂಬ ,ಜನವರಿ 23-24 ರಂದು 25ನೇ ಕಂತಿನ (ಸೆಪ್ಟೆಂಬರ್ ತಿಂಗಳಿನ) ಹಣವನ್ನು ಬಿಡುಗಡೆ ಮಾಡಲು ಪ್ರಾರಂಭಿಸಲಾಯಿತು. ಆದರೂ, ಸರಿಸುಮಾರು 15-20% ಫಲಾನುಭವಿಗಳಿಗೆ ಈ ಧನವು ತಲುಪಲು ಬಾಕಿಯಿದೆ.
• ಬಾಕಿ ಉಳಿದಿರುವ ಕಂತುಗಳು:
* ಸರ್ಕಾರದ ವತಿಯಿಂದ ಅಂದಾಜು 6 ತಿಂಗಳಿಗೂ ಹೆಚ್ಚು ಅವಧಿಯ ಹಣವು ವಿತರಣೆಯಾಗಬೇಕಿದೆ.
• 2024ರ ಅಕ್ಟೋಬರ್, ನವೆಂಬರ್, ಡಿಸೆಂಬರ್ ತಿಂಗಳುಗಳು.
* 2025ರ ಜನವರಿ ,ಫೆಬ್ರವರಿ ಹಾಗು ಮಾರ್ಚ್ ತಿಂಗಳ ಕಂತುಗಳು (ಈ ಕಂತುಗಳ ಸ್ಥಿತಿಗತಿಯು ಇನ್ನೂ ಅಪ್ಡೇಟ್ ಇಲ್ಲ)
• ಹಣವು ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಮುಖಾಂತರ ಹಂತ ಹಂತವಾಗಿ ವರ್ಗಾವಣೆಯಾಗುತ್ತದೆ. ಈ ಪ್ರಕ್ರಿಯೆಯು ಸಂಪೂರ್ಣವಾಗಲು ಸಾಮಾನ್ಯವಾಗಿ 20 ರಿಂದ 25 ದಿನಗಳಷ್ಟು ಸಮಯ ತೆಗೆದುಕೊಳ್ಳುತ್ತದೆ.
* ಯಾವ ಜಿಲ್ಲೆಗೆ ಮೊದಲು ಹಣವನ್ನು ನೀಡಲಾಗುತ್ತದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಏಕೆಂದರೆ, ಇದು ಆಯಾ ಜಿಲ್ಲಾಡಳಿತದ ಕಾರ್ಯವಿಧಾನದ ಮೇಲೆ ಅವಲಂಬಿತವಾಗಿರುತ್ತದೆ.
ಫಲಾನುಭವಿಗಳಿಗೆ ಗಮನಕ್ಕೆ,
• ನಿಮಗೆ ಇದುವರೆಗೆ ಎಷ್ಟು ಕಂತುಗಳ ಹಣ ಸಂದಾಯವಾಗಿದೆ ಎಂಬುದನ್ನು ತಿಳಿದುಕೊಳ್ಳಲು ‘DBT Karnataka‘ ಆ್ಯಪ್ ಮೂಲಕ ನಿಮ್ಮ ಪಾವತಿ ಇತಿಹಾಸವನ್ನು (Payment History) ಖಚಿತಪಡಿಸಿಕೊಳ್ಳಬಹುದು.
ನಾವು ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಅಧಿಕೃತ ಮಾಹಿತಿಯನ್ನು ನಮ್ಮ ವಾಹಿನಿಯಲ್ಲಿ ದಿನನಿತ್ಯ ಪ್ರಕಟಿಸುತ್ತೇವೆ. ಗೃಹಲಕ್ಷ್ಮಿಯ ನಿಖರ ಮತ್ತು ಅಧಿಕೃತ ಅಪ್ಡೇಟ್ಗಳನ್ನು ಪಡೆಯಲು ನಮ್ಮ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಿ ಹಾಗೂ ನಮ್ಮ ಪೇಜ್ ಅನ್ನು ಫಾಲೋ ಮಾಡಿ.
ಹಣ ಬಂದಿದೆಯೇ ಎಂದು ತಿಳಿಯುವುದು ಹೇಗೆ?
1. ಡಿಬಿಟಿ ಕರ್ನಾಟಕ ಆ್ಯಪ್: ಪ್ಲೇ ಸ್ಟೋರ್ನಿಂದ ಈ ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಂಡು, ಆಧಾರ್ ಸಂಖ್ಯೆ ಹಾಗೂ ಓಟಿಪಿ ಮೂಲಕ ಲಾಗಿನ್ ಆಗಿ ನಿಮ್ಮ ಪಾವತಿ ಸ್ಥಿತಿಯನ್ನು ನೋಡಬಹುದು. https://play.google.com/store/apps/details?id=com.dbtkarnataka&pcampaignid=web_share
DBT app
2. ಯಾರೆಲ್ಲ ಮಹಿಳೆಯರಿಗೆ 3-4 ತಿಂಗಳ ಹಣ ಜಮಾಗಿಲ್ಲ ಅವರು ಗ್ರಾಮ ಒನ್, ಬೆಂಗಳೂರು ಒನ್, ಬಾಪೂಜಿ ಒನ್ ಅಲ್ಲಿ ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ನಲ್ಲಿ ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ ಪರಿಶೀಲನೆ ಮಾಡಬಹುದು.

DBT Status
ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ ಪರಿಶೀಲನೆ
3. ಬ್ಯಾಂಕ್ ಆಧಾರ್ ಸೀಡಿಂಗ್ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಮತ್ತು ಎನ್ಪಿಸಿಐ (ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ) ಲಿಂಕ್ ಆಗಿರುವುದು ಕಡ್ಡಾಯವಾಗಿರುತ್ತದೆ.
ಗೃಹಲಕ್ಷ್ಮಿ ಯೋಜನೆಯು ಕರ್ನಾಟಕದ ಮಹಿಳೆಯರಿಗೆ ಆರ್ಥಿಕ ಬಲ ನೀಡಿದೆ. ತಿಂಗಳಿಗೆ ₹2,000 ನೇರವಾಗಿ ಬ್ಯಾಂಕಿಗೆ ಜಮೆ ಆಗುವುದರಿಂದ ಆರ್ಥಿಕ ಸ್ವಾತಂತ್ರ್ಯ ಹೆಚ್ಚಾಗಿದೆ. ಇದು ಗೃಹೋಪಯೋಗಿ ವೆಚ್ಚಗಳು, ಶಿಕ್ಷಣ, ಆರೋಗ್ಯ ಮತ್ತು ಉಳಿತಾಯಕ್ಕೆ ಸಹಾಯಕವಾಗಿದೆ.
ಇದರಿಂದ ಪುರುಷರ ಅವಲಂಬನೆ ತಪ್ಪಿ, ಆರ್ಥಿಕ ನಿರ್ಧಾರಗಳಲ್ಲಿ ಮಹಿಳೆಯರ ಪಾತ್ರ ಹೆಚ್ಚಾಗಿದೆ. ಅನೇಕ ಮಹಿಳೆಯರು ಸಣ್ಣ ಉದ್ಯಮಗಳನ್ನು ಪ್ರಾರಂಭಿಸಿ ಜೀವನ ಸಾಗಿಸುತ್ತಿದ್ದಾರೆ. ಈ ಯೋಜನೆಯು ಮಹಿಳೆಯರ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣಕ್ಕೆ ಬೆಂಬಲ ನೀಡಿದೆ.
The Gruhalakshmi Scheme in Karnataka has greatly improved women’s financial situation. By providing ₹2,000 each month, it strengthens their financial independence, helping with family costs, schooling, medical care, and savings.
This lessens their dependence on men, giving them a bigger part in making financial choices for the family. A lot of women are using this money to launch businesses and provide for themselves, which empowers them in society and the economy.
ಧನ್ಯವಾದಗಳು
Thank You
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸರ ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

Leave a Reply