Scientific Farming :: ಮುಖ್ಯ ಗೊಬ್ಬರಗಳನ್ನು ಬಳಸುವುದರಿಂದ ಏನು ಪ್ರಯೋಜನ? ಅವುಗಳು ಯಾವ ಕೆಲಸಗಳನ್ನು ಮಾಡುತ್ತವೆ?
ಮುಖ್ಯ ಗೊಬ್ಬರಗಳು ಮತ್ತು ಅವು ಏನು ಮಾಡುತ್ತವೆ:
Important fertilisers and their contribution in the agricultural process:
ಯೂರಿಯಾ / Urea
• ಇದು ಸಾರಜನಕವಿರುವ ರಾಸಾಯನಿಕ ಗೊಬ್ಬರ. ಯೂರಿಯಾ ಸಾರಜನಕವನ್ನು ಗಿಡಗಳಿಗೆ ನೀಡುತ್ತದೆ.
* ಯೂರಿಯಾ ಎಲೆಗಳು ದೊಡ್ಡದಾಗಿ, ಹಸಿರಾಗಿ ಬೆಳೆಯಲು ಸಹಾಯ ಮಾಡುತ್ತದೆ. ಎಲೆಗಳು ಚೆನ್ನಾಗಿ ಬೆಳೆದರೆ ದ್ಯುತಿಸಂಶ್ಲೇಷಣೆ ಚೆನ್ನಾಗಿ ಆಗುತ್ತದೆ.
• ಇದು ದ್ಯುತಿಸಂಶ್ಲೇಷಣೆ ವೇಗಗೊಳಿಸಿ ಗಿಡದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ದ್ಯುತಿಸಂಶ್ಲೇಷಣೆ ಹೆಚ್ಚಾದಂತೆ ಗಿಡವು ಹೆಚ್ಚು ಆಹಾರ ಉತ್ಪಾದಿಸಿ ಬೆಳೆಯುತ್ತದೆ.
* ಯೂರಿಯಾ ಕಡಿಮೆ ಬೆಲೆಯಲ್ಲಿ (₹ 250/ per 50 kg bag) ಸಿಗುತ್ತದೆ ಮತ್ತು ಇದು ಇಳುವರಿಯನ್ನು ಶೇಕಡಾ 30-40% ಹೆಚ್ಚಾಳಮಾಡುತ್ತದೆ . ಇದನ್ನು ಒಂದು ಬೆಳೆಗೆ 2-3 ಬಾರಿ ಬಳಸಬಹುದು. ಇದು ರೈತರಿಗೆ ಆರ್ಥಿಕ ಹೊರೆಯಾಗುವುದಿಲ್ಲ.
ಡಿಎಪಿ (DAP – Di-Ammonium Phosphate):
• ಇದು ಸಸ್ಯದ ಬೇರುಗಳು ಬಲಗೊಳ್ಳಲು ಹಾಗೂ ಹೂವು ಮತ್ತು ಹಣ್ಣುಗಳು ಸಮರ್ಪಕವಾಗಿ ಉತ್ಪತ್ತಿಯಾಗಲು ನೆರವಾಗುತ್ತದೆ. DAP ಬೇರುಗಳನ್ನು ಬಲಪಡಿಸುವುದರ ಮೂಲಕ ಸಸ್ಯವು ನೆಲದಲ್ಲಿ ಭದ್ರವಾಗಿ ನಿಲ್ಲುವಂತೆ ಮಾಡುತ್ತದೆ.
* DAP ಅನ್ನು ಬಿತ್ತನೆ ಮಾಡುವಾಗ ಅಥವಾ ನಾಟಿ ಮಾಡುವ ಸಂದರ್ಭದಲ್ಲಿ ಬಳಸುವುದು ಸೂಕ್ತ. ಇದರಿಂದ ಸಸ್ಯವು ಆರಂಭಿಕ ಹಂತದಲ್ಲಿಯೇ ಪೋಷಕಾಂಶಗಳನ್ನು ಪಡೆಯಲು ಅನುಕೂಲವಾಗುತ್ತದೆ. DAP ಬೆಲೆ ₹ 1350/ per 50 kg ಬ್ಯಾಗ್
ಇದು ಫಲವನ್ನು ಶೇಕಡಾ 50% ಹೆಚ್ಚಾಳಮಾಡುತ್ತದೆ
• ಸೂಚನೆ: DAP ಜೊತೆಯಲ್ಲಿ ಯೂರಿಯಾವನ್ನು ಮಿಶ್ರಣ ಮಾಡಿ ಬಳಸಬೇಡಿ. ಏಕೆಂದರೆ, ಈ ಎರಡನ್ನೂ ಒಟ್ಟಿಗೆ ಬಳಸುವುದರಿಂದ ರಾಸಾಯನಿಕ ಕ್ರಿಯೆ ಉಂಟಾಗಿ ಸಸ್ಯಕ್ಕೆ ಹಾನಿಯಾಗುವ ಸಾಧ್ಯತೆ ಇದೆ.
* ಎನ್ಪಿಕೆ (NPK – Nitrogen, Phosphorus, Potassium)
• ಇದು ಸಸ್ಯದ ಎಲ್ಲಾ ಬೆಳವಣಿಗೆಗೆ (ಎಲೆಗಳು, ಬೇರುಗಳು ಮತ್ತು ಆರೋಗ್ಯ) ಬೇಕಾದ ಸಾರಜನಕ, ರಂಜಕ ಮತ್ತು ಪೊಟ್ಯಾಷಿಯಂನಂತಹ ಪೋಷಕಾಂಶಗಳನ್ನು ನೀಡುವ ಒಂದು ರಸಗೊಬ್ಬರ.
* ಇದು ತರಕಾರಿ ಮತ್ತು ಹಣ್ಣಿನ ಬೆಳೆಗಳಿಗೆ ತುಂಬಾ ಉಪಯುಕ್ತ. ಏಕೆಂದರೆ ಇದು ತರಕಾರಿ ಮತ್ತು ಹಣ್ಣುಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದರ ಮೌಲ್ಯ ₹ 2000/ per 50 kg ಬ್ಯಾಗ್ ಇದು ಹಣ್ಣುಗಳು ಫಲವನ್ನು ಶೇಕಡಾ 60% ಏರಿಷುತ್ತದೆ.
•ಪೊಟ್ಯಾಶ್ (Potash / MOP)
* ಹಣ್ಣುಗಳ ಅಳತೆ, ಬಣ್ಣ ಮತ್ತು ರುಚಿಯನ್ನು ಚೆನ್ನಾಗಿ ಮಾಡಲು ಇದು ಮುಖ್ಯವಾಗಿದೆ. ಪೊಟ್ಯಾಶ್ ಹಣ್ಣುಗಳಲ್ಲಿ ಸಕ್ಕರೆ ಪ್ರಮಾಣವನ್ನು ಜಾಸ್ತಿ ಮಾಡಿ ಅವು ಸಿಹಿಯಾಗುವಂತೆ ಮಾಡುತ್ತದೆ.
ಬಾಳೆಹಣ್ಣು, ಕಿತ್ತಳೆ ಮತ್ತು ಹೂವಿನಂತಹ ಬೆಳೆಗಳಿಗೆ ಇದನ್ನು ಹೆಚ್ಚಾಗಿ ಬಳಸುತ್ತಾರೆ. ಯಾಕೆಂದರೆ, ಈ ಬೆಳೆಗಳ ಒಳ್ಳೆಯ ಗುಣಮಟ್ಟವನ್ನು ಹೆಚ್ಚು ಮಾಡಲು ಪೊಟ್ಯಾಷ್ ಸಹಾಯ ಮಾಡುತ್ತದೆ ಹಾಗೂ ಇದರ ಬೆಲೆ ₹ 1800/ per 50 ಕೆಜಿ.
ಸಾವಯವ ಗೊಬ್ಬರಗಳ ಮಹತ್ವ :: ರಾಸಾಯನಿಕ ಗೊಬ್ಬರಗಳ ಉಪಯೋಗವನ್ನು ತಗ್ಗಿಸಿ ಮಣ್ಣಿನ ಸತ್ವ ಹೆಚ್ಚಿಸಲು ಈ ಕ್ರಮಗಳನ್ನು ಅನುಸರೀಸಬೇಕು,
Uses of organic fertiliser for efficient and effective sustainable yield and how to use
* ಎರೆಹುಳು ಗೊಬ್ಬರ: ಇದು ನೆಲದ ಆರೋಗ್ಯವನ್ನು ರಕ್ಷಿಸಿ, ಮಣ್ಣಿನಲ್ಲಿರುವ ಪೋಷಕಾಂಶಗಳನ್ನು ವೃದ್ಧಿಸುತ್ತದೆ.
• ಕೊಟ್ಟಿಗೆ ಗೊಬ್ಬರ: ಮಣ್ಣಿನ ಗುಣಮಟ್ಟವನ್ನು ಉತ್ತಮಪಡಿಸಿ, ಫಲವತ್ತತೆಯನ್ನು ದೀರ್ಘಕಾಲ ಕಾಪಾಡುತ್ತದೆ. ಅಲ್ಲದೆ, ಇದು ಮಣ್ಣಿನಲ್ಲಿ ಸಾವಯವ ಅಂಶವನ್ನು ಹೆಚ್ಚಿಸುತ್ತದೆ.
* ಬೇವಿನ ಹಿಂಡಿ: ಇದು ಮಣ್ಣಿನಲ್ಲಿ ರೋಗವನ್ನುಂಟುಮಾಡುವ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ವಿರುದ್ಧ ಹೋರಾಡಿ, ಸಸ್ಯಗಳಿಗೆ ರೋಗನಿರೋಧಕ ಶಕ್ತಿಯನ್ನು ನೀಡುತ್ತದೆ. ಬೇವಿನ ಹಿಂಡಿ ಒಂದು ನೈಸರ್ಗಿಕ ಕೀಟನಾಶಕವಾಗಿ ಕಾರ್ಯನಿರ್ವಹಿಸುತ್ತದೆ.
ನೆಲವು ಒಂದು ಮಿತಿಯಿರುವ ಆಸ್ತಿಯಾಗಿದೆ. ಆದ್ದರಿಂದ, ರಾಸಾಯನಿಕ ಗೊಬ್ಬರಗಳ ಉಪಯೋಗವು ನಿರಂತರವಾಗಿರತಕ್ಕದ್ದು. ಇದು ಪರಿಸರದ ಸ್ಥಿರತೆಯನ್ನು ಕಾಪಾಡುವುದರೊಂದಿಗೆ ಮಾನವನ ಆವಶ್ಯಕತೆಗಳನ್ನು ತೃಪ್ತಿಪಡಿಸುವಂತಿರಬೇಕು.
ಸೂಕ್ತ ಕಾಲದಲ್ಲಿ, ಸರಿಹೊಂದುವ ಗುಣಮಟ್ಟದ ಮತ್ತು ಬೇಕಾದಷ್ಟು ಪೋಷಕಾಂಶಗಳನ್ನು ಉಪಯೋಗಿಸುವುದು ನಿರಂತರ ಕೃಷಿಗೆ ಬಹಳ ಮುಖ್ಯ.
Soil is a limited resource, the use of fertilizers should be so sustainable that it will fulfill both the needs of human along with environment sustainability.
Hence the use of correct quality and quantity of fertilisers at right time and right place ensure true meaning of sustainable agriculture ensuring maximum crop yield.
Thank you.
ಧನ್ಯವಾದಗಳು
<<< ಅಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್< ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ಬೆಟ್ಟಿ ಕೆಂಪುಗೋಟು ಚಿಪ್ಪು,
ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ.
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸರ ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

Leave a Reply