"Agriculture is our CULTURE"

Labour card :: ಲೇಬರ್ ಕಾರ್ಡ್ ಮೂಲಕ ₹2,000 ರಿಂದ ₹1 ಲಕ್ಷವರೆಗೆ ನೆರವು !!!ಲೇಬರ್ ಕಾರ್ಡ್‌ನಿಂದ ಏನೇನು ಉಪಯೋಗಗಳಿವೆ?

ನಿಮ್ಮ ಹತ್ತಿರ ಲೇಬರ್ ಕಾರ್ಡ್ ಇದೆಯೇ? ಹಾಗಾದರೆ ಸರ್ಕಾರದಿಂದ ಸಿಗಲಿದೆ ಲಕ್ಷಾಂತರ ರೂಪಾಯಿ ನೆರವು ::

Labour Card – Unlock Lakhs of Government Benefits Today :: 

ಕರ್ನಾಟಕ ಲೇಬರ್ ಕಾರ್ಡ್ (ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಾರ್ಡ್ ) ಹೊಂದಿರುವಂತಹ ಕಾರ್ಮಿಕರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಪೂರ್ತಿ ಮಾಹಿತಿ: 

1. ಪಿಂಚಣಿ (Pension) ಕರ್ನಾಟಕ ಲೇಬರ್ ಕಾರ್ಡ್ ಹೊಂದಿರುವಂತಹ ನೊಂದಾಯಿತ ಕಾರ್ಮಿಕರಿಗೆ ಮಾಸಿಕವಾಗಿ ಪಿಂಚಣಿ ಸೌಲಭ್ಯವು ಲಭ್ಯವಿರುತ್ತದೆ. ಲೇಬರ್ ಕಾರ್ಡ್ ಹೊಂದಿರುವ ಕಾರ್ಮಿಕರು ಮೂರು ವರ್ಷಗಳ ಸದಸ್ಯತ್ವವನ್ನು ಹೊಂದಿದ್ದು,

60 ವರ್ಷ ವಯಸ್ಸನ್ನು ಪೂರೈಸಿದ ನಂತರದಲ್ಲಿ ಪ್ರತಿ ತಿಂಗಳು ₹1,000 ಪಿಂಚಣಿಯನ್ನು ಪಡೆಯಬಹುದು. 

ಇದು ವೃದ್ಧಾಪ್ಯದಲ್ಲಿ ಅವರಿಗೆ ಆರ್ಥಿಕ ಭದ್ರತೆಯನ್ನು ನೀಡುತ್ತದೆ.

2. ಅಪಘಾತ ಪರಿಹಾರ (Accident Relief) ಕಾರ್ಮಿಕರು ಕೆಲಸದ ಸಮಯದಲ್ಲಿ ಅಥವಾ ಬೇರೆ ಯಾವುದೇ ರೀತಿಯ ಅಪಘಾತಗಳಿಗೆ ತುತ್ತಾದ ಸಂದರ್ಭಗಳಲ್ಲಿ ಅಪಘಾತ ಸಂಭವಿಸಿ ಶಾಶ್ವತ ಅಂಗವೈಕಲ್ಯ ಉಂಟಾದರೆ, ₹2 ಲಕ್ಷದವರೆಗಿನ ಸಹಾಯಧನವನ್ನು ನೀಡಲಾಗುವುದು.ಇದರಿಂದ ಅವರಿಗೆ ಉಂಟಾದ ಹಾನಿಯನ್ನು ಸರಿದೂಗಿಸಲು ಸಾಧ್ಯವಾಗುತ್ತದೆ.

3. ವೈದ್ಯಕೀಯ ಸಹಾಯಧನ (Medical Assistance )

ಕಾರ್ಮಿಕರ ಆರೋಗ್ಯ ಭಾಗ್ಯ ಯೋಜನೆಯ ಅಡಿಯಲ್ಲಿ, ನೋಂದಾಯಿತ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಅಗತ್ಯ ಚಿಕಿತ್ಸೆಗಳನ್ನು ಪಡೆಯಲು ಸಹಾಯಧನವನ್ನು ಒದಗಿಸಲಾಗುತ್ತದೆ.

ಹೃದಯ ಸಂಬಂಧಿ ಕಾಯಿಲೆ, ಕಿಡ್ನಿ ಅಥವಾ ಕ್ಯಾನ್ಸರ್‌ನಂತಹ ಗಂಭೀರ ಶಸ್ತ್ರಚಿಕಿತ್ಸೆಗೆ ₹2 ಲಕ್ಷದವರೆಗೆ ನೆರವು ಸಿಗುತ್ತದೆ .ಇದು ಅವರ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿದೆ.

4. ತಾಯಿ ಮಗು ಸಹಾಯ ಹಸ್ತ (Maternity Benefit ) ಹೆರಿಗೆಗೆ ಆರ್ಥಿಕ ನೆರವು ಮತ್ತು ಶಿಶುಪಾಲನಾ ಸಹಾಯಧನ ಮಹಿಳಾ ಕಾರ್ಮಿಕರಿಗೆ ಲಭ್ಯ. ಇದರಿಂದ ತಾಯಂದಿರು ಮಕ್ಕಳನ್ನು ನೋಡಿಕೊಳ್ಳಬಹುದು. ಕಾರ್ಮಿಕರ ಇಬ್ಬರು ಮಕ್ಕಳಿಗೆ ಮದುವೆಗೆ ತಲಾ ₹50,000 ಸಹಾಯಧನ ಸಿಗುತ್ತದೆ.

ಹೆಣ್ಣು ಮಗುವಿಗೆ ₹30,000 ಮತ್ತು ಗಂಡು ಮಗುವಿಗೆ ₹20,000 ನೀಡಲಾಗುವುದು. ಮಗುವಿನ ಪೌಷ್ಟಿಕ ಆಹಾರಕ್ಕಾಗಿ 3 ವರ್ಷಗಳವರೆಗೆ ವಾರ್ಷಿಕ ₹6,000 ಸಹಾಯಧನ ಸಿಗುತ್ತದೆ.

5. ಹೆರಿಗೆ ಸೌಲಭ್ಯಗಳು ಮತ್ತು ತಾಯಿ ಲಕ್ಷ್ಮಿ ಬಾಂಡ್ (Maternity Facilities and Taayi Lakshmi Bond): ಗರ್ಭಿಣಿ ಕಾರ್ಮಿಕ ಮಹಿಳೆಯರಿಗೆ ವಿಶೇಷ ತಾಯಿ ಲಕ್ಷ್ಮಿ ಬಾಂಡ್ ಸೌಲಭ್ಯದೊಂದಿಗೆ ನಗದು ರೂಪದಲ್ಲಿಯೂ ಸಹಾಯವನ್ನು ಒದಗಿಸಲಾಗುತ್ತದೆ.

6. ಮದುವೆ ಸಹಾಯಧನ (Marriage Assistance Program): ‘ಗೃಹಲಕ್ಷ್ಮಿ ಬಾಂಡ್’ ಯೋಜನೆಯ ಮೂಲಕ ನೋಂದಾಯಿತ ಕಾರ್ಮಿಕರ ಹೆಣ್ಣುಮಕ್ಕಳ ಮದುವೆಗೆ ಸರ್ಕಾರದಿಂದ ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ, ಇದು ಹೆತ್ತವರಿಗೆ ಆರ್ಥಿಕ ಹೊರೆಯಾಗದಂತೆ ನೋಡಿಕೊಳ್ಳುತ್ತದೆ.

7. ಶೈಕ್ಷಣಿಕ ಸಹಾಯಧನ (Educational Assistance ) ಕಾರ್ಮಿಕರ ಮಕ್ಕಳಿಗೆ ಪ್ರಾಥಮಿಕ ಶಾಲೆಯಿಂದ ಉನ್ನತ ವ್ಯಾಸಂಗದವರೆಗೆ ಸ್ಕಾಲರ್‌ಶಿಪ್ ಸೌಲಭ್ಯವಿದೆ. ‘ಕಲಿಕೆ ಭಾಗ್ಯ‘ ಯೋಜನೆಯಡಿ ಸಹಾಯಧನ ಸಿಗುತ್ತದೆ. 1ನೇ ತರಗತಿಯಿಂದ ಸ್ನಾತಕೋತ್ತರ ಪದವಿಯವರೆಗೆ ₹2,000 ದಿಂದ ₹30,000 ವರೆಗೆ ಸ್ಕಾಲರ್‌ಶಿಪ್ ಸಿಗಲಿದೆ.

SSLC ಅಥವಾ PUC ಯಲ್ಲಿ ಶೇ. 75 ಕ್ಕಿಂತ ಹೆಚ್ಚು ಅಂಕ ಪಡೆದರೆ ₹5,000 ದಿಂದ ₹15,000 ವರೆಗೆ ಪ್ರೋತ್ಸಾಹಧನ ನೀಡಲಾಗುತ್ತದೆ.

8. ದುರ್ಬಲತೆ ಪಿಂಚಣಿ (Disability Pension ):

ಒಂದು ವೇಳೆ ಕಾರ್ಮಿಕರಿಗೆ ಅಂಗವೈಕಲ್ಯ ಉಂಟಾದರೆ ಅಥವಾ ಕೆಲಸ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾದರೆ, ಅವರಿಗೆ ಈ ಪಿಂಚಣಿ ಸೌಲಭ್ಯವು ಅನ್ವಯಿಸುತ್ತದೆ, ಇದು ಅವರ ಜೀವನ ನಿರ್ವಹಣೆಗೆ ಆಧಾರವಾಗುತ್ತದೆ.

9. ಅಂತ್ಯಕ್ರಿಯೆ ವೆಚ್ಚ (Funeral Expenses ) ಕಾರ್ಮಿಕರ ಮರಣದ ನಂತರ ಅವರ ಕುಟುಂಬಕ್ಕೆ ‘ಅನುಗ್ರಹ ರಾಶಿ‘ ಯೋಜನೆಯ ಅಡಿಯಲ್ಲಿ ಅಂತ್ಯಕ್ರಿಯೆ ವೆಚ್ಚವನ್ನು ಭರಿಸಲು ಹಣಕಾಸಿನ ನೆರವು ನೀಡಲಾಗುತ್ತದೆ,ಇದು ದುಃಖದಲ್ಲಿರುವ ಕುಟುಂಬಕ್ಕೆ ಆಸರೆಯಾಗುತ್ತದೆ.

ಕಾರ್ಮಿಕರು ಮರಣ ಹೊಂದಿದರೆ ಅಂತ್ಯಕ್ರಿಯೆಗಾಗಿ ₹54,000 ವರೆಗೆ ಸಹಾಯಧನ ಸಿಗಲಿದೆ

10. ಬಸ್ ಪಾಸ್ ಸೌಲಭ್ಯ (Bus Pass Facility) ಬೆಂಗಳೂರಿನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ BMTCಯಿಂದ ಉಚಿತ ಬಸ್ ಪಾಸ್ ಸೌಲಭ್ಯವನ್ನು ನೀಡಲಾಗುತ್ತದೆ ಮತ್ತು ಅನಿಲ ಭಾಗ್ಯ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕ ಸಿಗುತ್ತದೆ.

ಇದರಿಂದ ಅವರು ಕೆಲಸಕ್ಕೆ ಹೋಗಿ ಬರಲು ಅನುಕೂಲವಾಗುತ್ತದೆ ಮತ್ತು ಪ್ರಯಾಣದ ಖರ್ಚು ಉಳಿತಾಯವಾಗುತ್ತದೆ.

11. ಸ್ವಂತ ಮನೆ ( own house ) ಕಟ್ಟುವ ಬಯಕೆ ಇರುವ ಕಾರ್ಮಿಕರಿಗೆ ಸ್ವಂತ ಗೃಹವನ್ನು ನಿರ್ಮಿಸಲು ಎರಡು ಲಕ್ಷ ರೂಪಾಯಿಗಳವರೆಗೆ ಮುಂಗಡವಾಗಿ ಸಾಲವನ್ನು ಪಡೆಯುವ ಸೌಲಭ್ಯ ಲಭ್ಯವಿದೆ.

(ಪ್ರತಿ ಯೋಜನೆಗೆ ಅರ್ಜಿ ಸಲ್ಲಿಸಲು ನಿರ್ದಿಷ್ಟ ಕಾಲಮಿತಿ (Time Period) ಇರುತ್ತದೆ, ಅದನ್ನು ಅನುಸರಿಸುವುದು ಕಡ್ಡಾಯ) 

ಲೇಬರ್ ಕಾರ್ಡ್ ಕೇವಲ ಗುರುತಲ್ಲ, ಅಸಂಘಟಿತ ಕಾರ್ಮಿಕರ ‘ಸಾಮಾಜಿಕ ಭದ್ರತೆ‘. ಇದು ಕಾರ್ಮಿಕರು ಮತ್ತು ಕುಟುಂಬಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ: ಅಪಘಾತ, ಅನಾರೋಗ್ಯ,ಮರಣದಂತಹ ತುರ್ತು ಸಂದರ್ಭಗಳಲ್ಲಿ ಆರ್ಥಿಕ ನೆರವು ನೀಡಿ, ಸಾಲದ ಸುಳಿಯಿಂದ ತಪ್ಪಿಸುತ್ತದೆ.

ಕಲಿಕೆ ಭಾಗ್ಯ‘ದ ಸ್ಕಾಲರ್ಶಿಪ್ ಕಾರ್ಮಿಕರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಪ್ರೇರಣೆ ನೀಡಿ ಬಡತನ ಹೋಗಲಾಡಿಸುತ್ತದೆ. 60 ವರ್ಷಗಳ ನಂತರದ ಪಿಂಚಣಿ ವೃದ್ಧಾಪ್ಯದಲ್ಲಿ ಸ್ವಾಭಿಮಾನದಿಂದ ಬದುಕಲು ಸಹಾಯ ಮಾಡುತ್ತದೆ.

ಸೌಲಭ್ಯಗಳು ಮತ್ತು ಮದುವೆ ಸಹಾಯಧನವು ಕುಟುಂಬದ ಜವಾಬ್ದಾರಿ ಕಡಿಮೆ ಮಾಡುತ್ತದೆ. ಈ ಯೋಜನೆಗಳು ದೇಶದ ಅಭಿವೃದ್ಧಿಗೆ ದುಡಿಯುವ ಕಾರ್ಮಿಕ ವರ್ಗಕ್ಕೆ ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಭದ್ರತೆ ನೀಡುತ್ತದೆ.

A Labour Card is more than just an ID; it’s a key social security tool for workers in informal jobs, greatly improving their lives and their families’ lives.

It gives quick money help in emergencies like accidents, serious sickness, or death. This support stops families from getting trapped in debt. Also, programs like the ‘Kalike Bhagya‘ scholarship help kids get good education, which can end poverty for future generations.

When workers turn 60, they get a monthly pension, so they can live with respect and not rely on others. Plus, maternity benefits and marriage help make big family responsibilities easier to handle.

In the end, these welfare programs make sure that workers – who are very important for the country’s growth, get the social justice and money security they should have.

Thank you.

ಧನ್ಯವಾದಗಳು

<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು.

ಹೊಸ ಅಡಿಕೆ, ಹಳೆಯ ಅಡಿಕೆ ರಾಶಿ ಇಪ್ಪಿ ​​ಬೆಟ್ಟಿ ಕೆಂಪುಗೋಟು ಚಿಪ್ಪು,ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ.

ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ. 

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸರ ಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"