"Agriculture is our CULTURE"

Shakthi Smart Card :: ಗ್ಯಾರೆಂಟಿ ಯೋಜನೆಗೆ ಮಹಿಳೆಯರಿಗೆ ಶಕ್ತಿ ಸ್ಮಾರ್ಟ್ ಕಾರ್ಡ್!!! ಇನ್ನು ಆಧಾರ್ ಕಾರ್ಡ್ ಬೇಕಿಲ್ಲ!!!

ಇನ್ನು ಆಧಾರ್ ಕಾರ್ಡ್ ಬೇಕಿಲ್ಲ! ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆಯುವುದು ಹೇಗೆ? ::

No more Aadhaar needed! How to get Shakti Smart Card? ::

ಇದು ಕರ್ನಾಟಕ ಸರ್ಕಾರದಿಂದ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದು. ಈ ಯೋಜನೆಯು ರಾಜ್ಯದ ಸಾರಿಗೆ ಸಂಸ್ಥೆಗಳಾದ KSRTC, BMTC, NWKRTC, KKRTC ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ.

ಶಕ್ತಿ ಸ್ಮಾರ್ಟ್ ಕಾರ್ಡ್ :
Shakti smart card :

ಈವರೆಗೆ, ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ತಮ್ಮ ಆಧಾರ್ ಕಾರ್ಡ್ ಅನ್ನು ಗುರುತಿನ ಚೀಟಿಯಾಗಿ ತೋರಿಸುತ್ತಿದ್ದರು.

ಆದರೆ, ಇನ್ನು ಮುಂದೆ ಆಧಾರ್ ಕಾರ್ಡ್‌ನ ಅವಶ್ಯಕತೆ ಇರುವುದಿಲ್ಲ. ಕರ್ನಾಟಕ ಸರ್ಕಾರವು ಮಹಿಳೆಯರಿಗಾಗಿ ಪ್ರತ್ಯೇಕವಾಗಿ ‘ಶಕ್ತಿ ಸ್ಮಾರ್ಟ್ ಕಾರ್ಡ್’ ಅನ್ನು ವಿತರಿಸಲು ನಿರ್ಧರಿಸಿದೆ. 

ಈ ಕಾರ್ಡ್ ಎಟಿಎಂ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ಮಾದರಿಯಲ್ಲಿ ಇರುತ್ತದೆ.

ಮಾದರಿ ಕಾರ್ಡ್ / model card 
ಸ್ಮಾರ್ಟ್ ಕಾರ್ಡ್‌ನಲ್ಲಿರುವ ಮಾಹಿತಿ:

* ಕರ್ನಾಟಕ ಸರ್ಕಾರದ ಲೋಗೋ ಇರುತ್ತದೆ.

 ಕಾರ್ಡ್‌ನ ಕ್ರಮ ಸಂಖ್ಯೆ (ಸೀರಿಯಲ್ ನಂಬರ್) ನಮೂದಿಸಲಾಗಿರುತ್ತದೆ.

* ಫಲಾನುಭವಿಯ ಹೆಸರು ಮತ್ತು ಭಾವಚಿತ್ರವನ್ನು ಮುದ್ರಿಸಲಾಗುತ್ತದೆ.

 ಫಲಾನುಭವಿಯ ಜನ್ಮ ದಿನಾಂಕ ಮತ್ತು ವಿಳಾಸವನ್ನು ನಮೂದಿಸಲಾಗುತ್ತದೆ.

* ಕಾರ್ಡ್ ವಿತರಿಸಿದ ದಿನಾಂಕವನ್ನು ನಮೂದಿಸಲಾಗುತ್ತದೆ.

ಸ್ಮಾರ್ಟ್ ಕಾರ್ಡ್‌ನ ಪ್ರಮುಖ ವೈಶಿಷ್ಟ್ಯಗಳು:

ಈ ಶಕ್ತಿ ಸ್ಮಾರ್ಟ್ ಕಾರ್ಡ್ ಅನ್ನು ಪಡೆಯಲು ಯಾವುದೇ ಹಣವನ್ನು ಪಾವತಿಸುವ ಅಗತ್ಯವಿಲ್ಲ. ಕರ್ನಾಟಕ ಸರ್ಕಾರವು ಇದನ್ನು ಸಂಪೂರ್ಣವಾಗಿ ಉಚಿತವಾಗಿ ವಿತರಿಸುತ್ತಿದೆ.

* ಕರ್ನಾಟಕ ರಾಜ್ಯದ ನಿವಾಸಿಯಾಗಿರುವ ಎಲ್ಲಾ ಮಹಿಳೆಯರು ಈ ಕಾರ್ಡ್ ಪಡೆಯಲು ಅರ್ಹರಾಗಿರುತ್ತಾರೆ.

ಶಕ್ತಿ ಸ್ಮಾರ್ಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?
How to apply for shakti card ? 

* ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆಯಲು ಅರ್ಹ ಮಹಿಳೆಯರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.

 ಶಕ್ತಿ ಸ್ಮಾರ್ಟ್ ಕಾರ್ಡ್‌ಗಾಗಿ ನಿಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ನಾಗರಿಕ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಸರ್ಕಾರವು ಶೀಘ್ರದಲ್ಲೇ ಲಿಂಕ್ ಅನ್ನು ಬಿಡುಗಡೆ ಮಾಡಲಿದೆ.

* ಸಚಿವ ಸಂಪುಟ ಸಭೆಯಲ್ಲಿ ಈ ಕಾರ್ಡ್ ವಿತರಣೆಗೆ ಈಗಾಗಲೇ ಅನುಮೋದನೆಯನ್ನು ನೀಡಲಾಗಿದೆ.

ಮಹಿಳೆಯರ ಮಾಸಿಕ ಪ್ರಯಾಣ ವೆಚ್ಚ ಉಳಿತಾಯ, ಉಚಿತ ಬಸ್ ಸೌಲಭ್ಯದಿಂದ ಮಹಿಳೆಯರು ದೂರದ ಊರುಗಳಿಗೆ ಕೆಲಸಕ್ಕೆ ಹೋಗಲು ಸಾಧ್ಯವಾಗಿ, ಮಹಿಳಾ ಕಾರ್ಮಿಕರ ಭಾಗವಹಿಸುವಿಕೆ ಹೆಚ್ಚಾಗಿದೆ.

 ಉಳಿತಾಯದ ಹಣವನ್ನು ಬೇರೆ ವಸ್ತುಗಳ ಖರೀದಿಗೆ ಬಳಸುತ್ತಿರುವುದರಿಂದ GST ಸಂಗ್ರಹಣೆ ₹300 ಕೋಟಿಗೂ ಹೆಚ್ಚು ಏರಿಕೆಯಾಗಿದೆ. ಇದರಿಂದಾಗಿ ಗ್ರಾಮೀಣ ವಿದ್ಯಾರ್ಥಿನಿಯರಿಗೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಪಡೆಯಲು ಅನುಕೂಲವಾಗಿದೆ.

ಪ್ರಯಾಣಕ್ಕಾಗಿ ಗಂಡಸರ ಮೇಲೆ ಅವಲಂಬನೆ ಕಡಿಮೆಯಾಗಿ ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಿದೆ. ಅಲ್ಲದೆ, ಉತ್ತಮ ವೈದ್ಯಕೀಯ ಸೌಲಭ್ಯಕ್ಕಾಗಿ ದೂರದ ಆಸ್ಪತ್ರೆಗಳಿಗೆ ಭೇಟಿ ನೀಡಲು ಸಾಧ್ಯವಾಗಿದೆ.

Shakthi Card Scheme

ಒಟ್ಟಾರೆಯಾಗಿ , ಶಕ್ತಿ ಯೋಜನೆಯು ಕೇವಲ ಉಚಿತ ಪ್ರಯಾಣದ ಸೌಲಭ್ಯವಾಗಿರದೇ, ಮಹಿಳೆಯರ ಸಾಮಾಜಿಕ ಮತ್ತು ಆರ್ಥಿಕ ಉದ್ಧಾರಕ್ಕೆ ಒಂದು ಪ್ರೇರಕ ಶಕ್ತಿಯಾಗಿದೆ. ಇದು ಮಹಿಳೆಯರಿಗೆ ಕೇವಲ ಆರ್ಥಿಕ ಸ್ವಾವಲಂಬನೆಯನ್ನು ನೀಡುವುದಲ್ಲದೆ,

ಸಮಾಜದಲ್ಲಿ ಪುರುಷರಿಗೆ ಸಮಾನವಾಗಿ ಎಲ್ಲಾ ಅವಕಾಶಗಳನ್ನು ಒದಗಿಸುವಲ್ಲಿ ಸಹಾಯ ಮಾಡುತ್ತದೆ. ಸಾರಿಗೆ ಸೌಕರ್ಯದ ಅಭಾವದಿಂದಾಗಿ ಮನೆಯ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿದ್ದ ಮಹಿಳೆಯರು, ಇಂದು ಈ ಯೋಜನೆಯಿಂದ ಸಮಾಜದ ಮುಖ್ಯ ಪ್ರವಾಹಕ್ಕೆ ಬರಲು ಸಾಧ್ಯವಾಗಿದೆ.

The Shakti Yojana has become more than just a free-travel program , it’s now a strong driver for socio-economic change. By eliminating the cost of travel, it has allowed women to find better jobs, healthcare, and education.

It supports infrastructure that considers the needs of women and helps the state’s economy by boosting spending.

ಧನ್ಯವಾದಗಳು
Thank You

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸರ ಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"