Gruhalakshmi & Ration kit :: ಗೃಹಲಕ್ಷ್ಮಿ 26ನೇ ಕಂತು, ಜೀವಿತಾವಧಿ ಪ್ರಮಾಣಪತ್ರ ಕಡ್ಡಾಯವೇ?ದಿನಸಿ ಕಿಟ್ ವಿತರಣೆ!!!
ಗೃಹಲಕ್ಷ್ಮಿ 26ನೇ ಕಂತು, ಜೀವಿತಾವಧಿ ಪ್ರಮಾಣಪತ್ರ ಕಡ್ಡಾಯವೇ? ಹಾಗೂ ಮಾರ್ಚ್‌ನಿಂದ ದಿನಸಿ ಕಿಟ್ ವಿತರಣೆ ಮಾಹಿತಿ!!!
Gruhalakshmi 26th Installment update,Is Life Certificate Really Required? Distribution of Dinasi kit from march ::
ಗೃಹಲಕ್ಷ್ಮಿ ಯೋಜನೆಯ 26ನೇ ಕಂತು ಮತ್ತು ಜೀವಿತಾವಧಿ ಪ್ರಮಾಣಪತ್ರ
* ಸಾಮಾಜಿಕ ಜಾಲತಾಣಗಳಲ್ಲಿ ( social media) ಹರಡುತ್ತಿರುವ ಮಾಹಿತಿಯ ಪ್ರಕಾರ, ಗೃಹಲಕ್ಷ್ಮಿ ಯೋಜನೆಯ 26ನೇ ಕಂತಿನ ಹಣವನ್ನು ಪಡೆಯಲು ಸದ್ಯಕ್ಕೆ ಜೀವಿತಾವಧಿ ಪ್ರಮಾಣಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿರುವುದಿಲ್ಲ.
ಮೃತಪಟ್ಟ ಮಹಿಳೆಯರ ಖಾತೆಗಳಿಗೂ ಹಣ ಜಮೆಯಾಗುವುದನ್ನು ತಡೆಗಟ್ಟುವ ಸಲುವಾಗಿ, ಕೇವಲ ಬದುಕಿರುವ ಫಲಾನುಭವಿಗಳಿಗೆ ಮಾತ್ರ ಹಣ ತಲುಪಬೇಕು ಎನ್ನುವ ಉದ್ದೇಶದಿಂದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ದಿನೇಶ್ ಗುಳಿಗೌಡ ಅವರು ಸರ್ಕಾರಕ್ಕೆ ಒಂದು ಮನವಿ ಪತ್ರವನ್ನು ಸಲ್ಲಿಸಿದ್ದಾರೆ.
* ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಆದೇಶವನ್ನು ಸರ್ಕಾರವು ಹೊರಡಿಸಿಲ್ಲ. 26ನೇ ಕಂತಿನ ಹಣವನ್ನು ಬಿಡುಗಡೆ ಮಾಡುವ ಪ್ರಕ್ರಿಯೆಯು ಈಗಾಗಲೇ ಪ್ರಾರಂಭವಾಗಿದ್ದು, ಸಾರ್ವಜನಿಕರು ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.
ಅನ್ನಭಾಗ್ಯ ಯೋಜನೆ ಮತ್ತು ದಿನಸಿ ಕಿಟ್ :
• ಆಹಾರ ಇಲಾಖೆಯ ಸಚಿವರಾದ ಕೆ.ಎಚ್. ಮುನಿಯಪ್ಪ ಅವರ ಹೇಳಿಕೆಯ ಪ್ರಕಾರ, ದಿನಸಿ ಕಿಟ್ ಅನ್ನು ವಿತರಿಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಮಾರ್ಚ್ ತಿಂಗಳಿನಿಂದ ದಿನಸಿ ಕಿಟ್ ವಿತರಣೆ ಮಾಡುವ ದಿನಾಂಕವನ್ನು ಸರ್ಕಾರವು ಪ್ರಕಟಿಸುವ ಸಾಧ್ಯತೆ ಇದೆ.
• ಸರ್ಕಾರವು ಈಗಾಗಲೇ ಸುಮಾರು 3.5ಲಕ್ಷ ಹೊಸ ಪಡಿತರ ಚೀಟಿಗಳನ್ನು ವಿತರಿಸಿದೆ. ಶೀಘ್ರದಲ್ಲೇ ಅನ್ನಭಾಗ್ಯ ಯೋಜನೆಯ ಸೌಲಭ್ಯಗಳನ್ನು ಹೊಂದಿರುವ ಹೊಸ ಪಡಿತರ ಚೀಟಿಗಳನ್ನು ವಿತರಿಸುವ ಬಗ್ಗೆಯೂ ಸರ್ಕಾರವು ಪರಿಶೀಲನೆ ನಡೆಸುತ್ತಿದೆ.
ಮಹಿಳಾ ಸಬಲೀಕರಣಕ್ಕಾಗಿ ಗೃಹಲಕ್ಷ್ಮಿ ಯೋಜನೆಯು ಒಂದು ಪ್ರಮುಖ ಹೆಜ್ಜೆಯಾಗಿದೆ. ಈ ಯೋಜನೆಯ ಅಡಿಯಲ್ಲಿ, ಮನೆಯ ಯಜಮಾನಿಗೆ ಪ್ರತಿ ತಿಂಗಳು 2,000 ರೂಪಾಯಿಗಳನ್ನು ಜಮಾ ಮಾಡಲಾಗುತ್ತದೆ.
ಇದರಿಂದ ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗಲು ಸಹಾಯವಾಗುತ್ತದೆ. ಈ ಹಣವನ್ನು ಮುಖ್ಯವಾಗಿ ಅವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಳಸಬಹುದು, ಆರೋಗ್ಯದ ಸಮಸ್ಯೆಗಳಿಗೆ ವಿನಿಯೋಗಿಸಬಹುದು ಮತ್ತು ದಿನಸಿ ಸಾಮಾನುಗಳನ್ನು ಖರೀದಿಸಲು ಉಪಯೋಗಿಸಲು ನೇರವಾಗಿದೆ.
ಆಹಾರ ಭದ್ರತೆಗಾಗಿ ಅನ್ನಭಾಗ್ಯ ಯೋಜನೆಯು ಬಡವರಿಗೆ ಒಂದು ವರದಾನವಾಗಿದೆ. ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಪ್ರತಿ ತಿಂಗಳು 5 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತದೆ.
ಇದರ ಜೊತೆಗೆ, ಉಳಿದ 5 ಕೆಜಿ ಅಕ್ಕಿಯ ಹಣವನ್ನು, ಅಂದರೆ ಕೆಜಿಗೆ 34 ರೂಪಾಯಿಯಂತೆ ,ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ (DBT – Direct Benefit Transfer) ವರ್ಗಾಯಿಸಲಾಗುತ್ತದೆ.
ಈ ಯೋಜನೆಯಿಂದ ಹಸಿವು ಕಡಿಮೆಯಾಗುವುದರ ಜೊತೆಗೆ, ಬಡವರ ಆಹಾರದ ಖರ್ಚು ಕೂಡ ಹೆರಾಳವಾಗಿ ತಗ್ಗಿದೆ.
In Karnataka, the Gruhalakshmi Scheme empowers women by transferring ₹2,000 per month into the bank accounts of the female head of the home, promoting financial independence for essentials like food, school tuition, and medical bills.
The Annabhagya Scheme provides 5 kg of rice monthly to individuals holding Below Poverty Line (BPL) and Antyodaya cards, thereby assuring food security for vulnerable populations.
To enhance food security and alleviate expenses for individuals experiencing impoverishment, the government employs Direct Benefit Transfer (DBT), allocating ₹170 per person monthly for the additional 5 kg of rice as previously committed.
ಧನ್ಯವಾದಗಳು
Thank You
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸರ ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

Leave a Reply