"Agriculture is our CULTURE"

3 Lakh Subsidy :: ಆಹಾರ ವಾಹಿನಿ ಯೋಜನೆ!! ಅರ್ಜಿಯನ್ನು ಹೇಗೆ ಸಲ್ಲಿಸುವುದು?

3 ಲಕ್ಷ ರೂ ಸಹಾಯಧನ – ಆಹಾರ ವಾಹಿನಿ ಯೋಜನೆ!! ಅರ್ಜಿಯನ್ನು ಹೇಗೆ ಸಲ್ಲಿಸುವುದು? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು::

 ₹3 Lakh Subsidy for Ahara Vahini Scheme a initiative by the Government of Karnataka, how to apply and last date to apply ::

ಹಿಂದುಳಿದ ಸಮುದಾಯಗಳ ಅಭ್ಯುದಯಕ್ಕಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ರೂಪಿಸಿರುವ ಆಹಾರ ವಾಹಿನಿ ಯೋಜನೆ (Mobile Canteen Scheme) ,ಈ ಯೋಜನೆಯಡಿಯಲ್ಲಿ ಸಾರಿಗೆ ಕ್ಯಾಂಟೀನ್ ತೆರೆಯಲು ಸರ್ಕಾರವು ಗರಿಷ್ಠ 3 ಲಕ್ಷ ರೂಪಾಯಿಗಳ ಆರ್ಥಿಕ ನೆರವು ನೀಡಲಿದೆ.

* ನಾಲ್ಕು ಚಕ್ರಗಳ ಎಲೆಕ್ಟ್ರಿಕ್ (EV) ಸರಕು ಸಾಗಣೆ ವಾಹನಗಳನ್ನು ಆಹಾರ ಸಾಗಣೆ ವಾಹನಗಳನ್ನಾಗಿ ಪರಿವರ್ತಿಸಲು ಸರ್ಕಾರವು 3 ಲಕ್ಷ ರೂಪಾಯಿಗಳವರೆಗಿನ ಆರ್ಥಿಕ ನೆರವು ನೀಡುತ್ತದೆ .ಉಳಿದ ಹಣವನ್ನು ಬ್ಯಾಂಕ್ ಸಾಲದ ಮುಖಾಂತರ ಪಡೆದುಕೊಳ್ಳಬಹುದು.

 ಅರ್ಹತೆಗಳು:

 ಅರ್ಜಿದಾರರು ಹಿಂದುಳಿದ ವರ್ಗಗಳಾದ ಪ್ರವರ್ಗ-1, 2A, 3A ಮತ್ತು 3Bಗೆ ಸೇರಿದವರಾಗಿರಬೇಕು.

* ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ 3 ಲಕ್ಷ ರೂಪಾಯಿಗಳಿಗಿಂತ ಕಡಿಮೆ ಇರಬೇಕು.

ಅರ್ಜಿದಾರರ ವಯಸ್ಸು 21 ವರ್ಷದಿಂದ 45 ವರ್ಷದ ಒಳಗಿರಬೇಕು.

ಅರ್ಜಿ ಸಲ್ಲಿಸುವ ಪ್ರಕ್ರಿಯೆ: 
How to apply :

* ಅರ್ಜಿಯನ್ನು ಸೇವಾ ಸಿಂಧು ಪೋರ್ಟಲ್ ಮುಖಾಂತರ ಆನ್‌ಲೈನ್‌ನಲ್ಲಿ ಸಲ್ಲಿಸಬೇಕು. ನಿಮ್ಮ ಸಮೀಪದ ಗ್ರಾಮ ಒನ್, ಬೆಂಗಳೂರು ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳಲ್ಲೂ ಅರ್ಜಿಯನ್ನು ಸಲ್ಲಿಸಬಹುದು.

ಅಗತ್ಯವಿರುವ ದಾಖಲೆಗಳು ;
Required documents ;

ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಜಾತಿ ಮತ್ತು ಆದಾಯ ಪ್ರಮಾಣಪತ್ರಗಳು ಕಡ್ಡಾಯವಾಗಿರಬೇಕು. 

ನಿಮ್ಮ ಬ್ಯಾಂಕ್ ಖಾತೆಯು ಆಧಾರ್ ಕಾರ್ಡ್‌ನೊಂದಿಗೆ ಜೋಡಣೆಯಾಗಿರಬೇಕು.

* ಬೇರೆ ದಾಖಲೆಗಳಾದ ಜಾತಿ ಮತ್ತು ಆದಾಯ ದೃಢೀಕರಣ ಪತ್ರ ಹಾಗೂ ಬ್ಯಾಂಕಿನ ಪಾಸ್ ಪುಸ್ತಕದಲ್ಲಿರುವ ವಿವರಗಳು ತಾಳೆಯಾಗಬೇಕು. 

ಒಂದು ವೇಳೆ ನಿಗಮದ ಯಾವುದೇ ಯೋಜನೆಯಲ್ಲಿ ಈ ಹಿಂದೆ ಸಹಾಯಧನ ಪಡೆದಿದ್ದರೆ, ಅವರು ಮತ್ತು ಅವರ ಕುಟುಂಬದ ಸದಸ್ಯರು ಮತ್ತೊಮ್ಮೆ ಅದೇ ಸೌಲಭ್ಯಕ್ಕಾಗಿ ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿರುವುದಿಲ್ಲ.

* ಈ ಯೋಜನೆಯು ಸದ್ಯಕ್ಕೆ ಬೆಂಗಳೂರು, ಶಿವಮೊಗ್ಗ ನಗರ, ತುಮಕೂರು ನಗರ, ವಿಜಯನಗರ, ಚಾಮರಾಜನಗರ, ಮಂಗಳೂರು ನಗರ, ಬೆಳಗಾವಿ ಉತ್ತರ, ಧಾರವಾಡ, ಹುಬ್ಬಳ್ಳಿ, ಕಲಬುರ್ಗಿ ಉತ್ತರ ಹಾಗು ಬಳ್ಳಾರಿ ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದೆ.

ಕೊನೆಯ ದಿನಾಂಕ: Last date 

  ಅರ್ಜಿಯನ್ನು ಸಲ್ಲಿಸಲು ಮಾರ್ಚ್ 4, 2026 ಕೊನೆಯ ದಿನಾಂಕವಾಗಿರುತ್ತದೆ.

ಈ ಕಾರ್ಯಕ್ರಮವು ಕೇವಲ ಹಣಕಾಸಿನ ನೆರವನ್ನು ನೀಡುವುದರ ಜೊತೆಗೆ, ವಾಹನದಂತಹ ಸ್ಥಿರ ಆಸ್ತಿಯನ್ನು ಒದಗಿಸುವ ಮೂಲಕ ಫಲಾನುಭವಿಗಳು ದೀರ್ಘಾವಧಿಯವರೆಗೆ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಅನುವು ಮಾಡಿಕೊಡುತ್ತದೆ.

ಇದು ಯುವ ಸಮುದಾಯದಲ್ಲಿ ಉದ್ಯೋಗವನ್ನು ಅರಸುವ ಮನೋಭಾವನೆಯನ್ನು ಹೋಗಲಾಡಿಸಿ, ಸ್ವಂತ ಉದ್ಯಮವನ್ನು ಪ್ರಾರಂಭಿಸಿ ಇತರರಿಗೆ ಉದ್ಯೋಗವನ್ನು ನೀಡುವ (Job Creators) ಧೈರ್ಯವನ್ನು ತುಂಬುತ್ತದೆ.

ಸಂಚಾರಿ ವಾಹನಗಳು ಮಾರುಕಟ್ಟೆಯ ಅಗತ್ಯಕ್ಕೆ ಅನುಗುಣವಾಗಿ ಸ್ಥಳವನ್ನು ಬದಲಾಯಿಸಲು ಅವಕಾಶ ನೀಡುವುದರಿಂದ, ಉದ್ಯಮಿಯು ಹೆಚ್ಚಿನ ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ. 

ಇದು ಸಾಂಪ್ರದಾಯಿಕ ಬೀದಿ ಬದಿಯ ವ್ಯಾಪಾರವನ್ನು ವೃತ್ತಿಪರ ಮತ್ತು ಸುಸಜ್ಜಿತವಾದ ‘ಮೊಬೈಲ್ ಕ್ಯಾಂಟೀನ್’ ಮಾದರಿಯಾಗಿ ಪರಿವರ್ತಿಸಿ ವ್ಯಾಪಾರದ ಘನತೆಯನ್ನು ಹೆಚ್ಚಿಸುತ್ತದೆ.

ಸಮಾಜದ ಹಿಂದುಳಿದ ವರ್ಗಗಳ ಯುವಕರಿಗೆ ಬಂಡವಾಳದ ಸಮಸ್ಯೆಯನ್ನು ನಿವಾರಿಸಿ, ಆರ್ಥಿಕ ಪ್ರಗತಿಯಲ್ಲಿ ಪಾಲ್ಗೊಳ್ಳಲು ಒಂದು ವೇದಿಕೆಯನ್ನು ನಿರ್ಮಿಸುತ್ತದೆ.

ಡಿಜಿಟಲ್ ಪಾರದರ್ಶಕತೆಗಾಗಿ ಡಿಬಿಟಿ (DBT) ಮೂಲಕ ಸಹಾಯಧನವನ್ನು ನೀಡುವುದರಿಂದ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲದಂತೆ ನೇರವಾಗಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯವು ತಲುಪುತ್ತದೆ.

Ahara Vahini scheme help to change job seeker to job creator with the motto of human dignity allowing business on wheel model with focusing on traditional welfare with sustainable entrepreneurship using DBT allowing digital transparency benefiting the beneficiary.

Thank you.

ಧನ್ಯವಾದಗಳು

<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು.

ಹೊಸ ಅಡಿಕೆ, ಹಳೆಯ ಅಡಿಕೆ ರಾಶಿ ಇಪ್ಪಿ ​​ಬೆಟ್ಟಿ ಕೆಂಪುಗೋಟು ಚಿಪ್ಪು,ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ.

ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ. 

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸರ ಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"