"Agriculture is our CULTURE"

Tadapal Distribution : ಅರ್ಜಿ ಸಲ್ಲಿಸಿ, ಸರ್ಕಾರದಿಂದ ಹೊಸ ತಾರ್ಪಾಲ್ ವಿತರಣೆ ಆರಂಭ!!

ರೈತರಿಗೆ ಗುಡ್ ನ್ಯೂಸ್ :: ಸರ್ಕಾರದಿಂದ ಹೊಸ ತಾರ್ಪಾಲ್ ವಿತರಣೆ ಆರಂಭ!! ಈಗಲೇ ಅರ್ಜಿ ಸಲ್ಲಿಸಿ ಹೊಸ ತಾಡಬಲನ್ನು ಪಡೆಯುವ ಪ್ರಕ್ರಿಯೆಯನ್ನು ತಿಳಿದುಕೊಳ್ಳಿ!!

Tarpaulins are waterproof sheets essential for modern farming. They protect crops, harvested goods, and equipment from harsh weather, pests, and mold.

Key uses include covering, drying, silage storage, pond lining, and creating temporary structures, ultimately reducing post-harvest losses and ensuring better yield preservation.

Hence karnataka government providing Tarpaulin for free or at subsidy price to farmers.

ಸರ್ಕಾರವು ರೈತರಿಗೆ ಅನುಕೂಲವಾಗಲಿ ಎಂದು ಬಿತ್ತನೆ ಸಮಯದಲ್ಲೂ ಹಾಗೂ ಸುಗ್ಗಿ ಸಮಯದಲ್ಲಿ ಹಲವರು ಯೋಜನೆಗಳನ್ನು ತರುತ್ತದೆ, ಅದರಲ್ಲೂ ಸುಗ್ಗಿ ಸಮಯದಲ್ಲಿ ರೈತರಿಗೆ ಬೆಳೆಗಳನ್ನು ಸಂರಕ್ಷಿಸಿಕೊಳ್ಳಲು ಅನುಕೂಲಕರವಾಗಲೆಂದು ಉಚಿತವಾಗಿ ಅಥವಾ ಸಬ್ಸಿಡಿ ದರದಲ್ಲಿ ಟಾರ್ಪಲ್ ನೀಡುತ್ತದೆ.

ಟಾರ್ಪಲ್ ಎನ್ನುವುದು ಕೇವಲ ಒಂದು ಹೊದಿಕೆಯಾಗಿರದೆ ಬೆಳೆಗಳನ್ನು ಸಂರಕ್ಷಿಸುವ ಕವಚದಂತೆ ಕೆಲಸ ಮಾಡುತ್ತದೆ, ಹಾಗಾಗಿ ಸುಗ್ಗಿ ಸಮಯದಲ್ಲಿ ರೈತರಿಗೆ ಟಾರ್ಪಾನ ಅವಶ್ಯಕತೆ ಸಾಕಷ್ಟಿದೆ.

ಬೆಳೆದಿರುವ ಬೆಳೆಗಳನ್ನು ಶೇಖರಣೆ ಮಾಡಲು ತೇವಾಂಶವಿರುವ ಬೆಳೆಗಳನ್ನು ಒಣಗಿಸಲು, ಸುಗ್ಗಿ ಬೆಳೆಗಳನ್ನು ಶೇಖರಿಸಲು ತಾತ್ಕಾಲಿಕ ಶಡ್ ನಿರ್ಮಿಸಲು ಹೀಗೆ ಹಲವಾರು ರೀತಿಯಲ್ಲಿ ರೈತರು ಟಾರ್ಪಲ್ ನ ಪ್ರಯೋಜನ ಪಡೆಯುತ್ತಿದ್ದಾರೆ

ಹಾಗಾಗಿ ಇದರ ಅಗತ್ಯತೆಯನ್ನು ಅರಿತು ಸರ್ಕಾರ ರೈತರಿಗೆ ನೀಡುವ ಯೋಜನೆಗಳಲ್ಲಿ ಟಾರ್ಪಲ್ ವಿತರಣೆಯು ಕೂಡ ಬಹು ಮುಖ್ಯ ಪಾತ್ರ ವಹಿಸುತ್ತಿದೆ ಆದರೆ ಈ ಟಾರ್ಪಲ್ ವಿತರಣೆ ಯಾವಾಗ ಮತ್ತು ಎಲ್ಲಿ ಎನ್ನುವುದರ ಕುರಿತು ರೈತರಿಗೆ ಮಾಹಿತಿ ಕಡಿಮೆ ಇದೆ. ಹಾಗಾಗಿ ಯೋಜನೆಯ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯ.

ಈ ಯೋಜನೆಯಿಂದ ಸಿಗಬಹುದಾದ ಸಹಾಯಧನ ಎಷ್ಟು?
How much subsidy will get from this scheme?

* SC/ST ವರ್ಗದವರಿಗೆ 90% ನಷ್ಟು ಸಬ್ಸಿಡಿ ಸಿಗಲಿದೆ.

* ಇನ್ನು ಸಾಮಾನ್ಯ ಮತ್ತು OBC ವರ್ಗದ ರೈತರಿಗೆ 50 ರಿಂದ 75% ನಷ್ಟು ಸಹಾಯಧನ ದೊರೆಯಲಿದೆ.

ಈ ಯೋಜನೆಯಿಂದ ಸಿಗುವ ಟಾರ್ಪಲ್ ನ ಗುಣಮಟ್ಟ ಹೇಗಿರುತ್ತದೆ?
What is the Quality of Tarpaulin?

ಈ ಯೋಜನೆಯಿಂದ ಸಿಗುವ ಟಾರ್ಪಲ್ ನ ಗುಣಮಟ್ಟ ಉತ್ತಮವಾಗಿದ್ದು ಸಾಮಾನ್ಯವಾಗಿ “250 ರಿಂದ 300 GSMನಷ್ಟು ದಪ್ಪ”ವಿರುತ್ತದೆ, ಹಾಗಾಗಿ ಇದು ಅಧಿಕ ಮಳೆಗೂ ಹಾಗೂ ಅಧಿಕ ಬಿಸಿಲನ್ನು ತಡೆದುಕೊಳ್ಳುವಂತಹ ಗುಣಮಟ್ಟದ ಶೀಟ್ ಆಗಿರುತ್ತದೆ.

ಈ ಯೋಜನೆಯ ಟಾರ್ಪಲ್ ನ ಗಾತ್ರ ಎಷ್ಟಿರುತ್ತದೆ?
What is the size of the Tarpaulin?

ಈ ಯೋಜನೆಯಲ್ಲಿ ದೊರೆಯುವ ಟಾರ್ಪಲ್ ನ ಗಾತ್ರವು ಸಹ ಅಗತ್ಯಕ್ಕಿಂತ ಹೆಚ್ಚಾಗಿದ್ದು ರೈತರಿಗೆ ಅನುಕೂಲಕರವಾಗಲೆಂದು ದೊಡ್ಡದಾದ ಟಾರ್ಪಲ್ ನನ್ನೇ ನೀಡಲಾಗುತ್ತದೆ.

ಇದರ “ಗಾತ್ರ 6*8 ಅಥವಾ ಅದಕ್ಕಿಂತ ಅಧಿಕ” ವಿಸ್ತಿರ್ಣ ಹೊಂದಿರುವ ಶೀಟ್ ನೀಡಲಾಗುತ್ತದೆ.

ಈ ಯೋಜನೆಗೆ ಯಾರೆಲ್ಲಾ ಅರ್ಹರು?
Who eligible for this scheme?

ಕರ್ನಾಟಕ ರಾಜ್ಯದ ಸಣ್ಣ ಮತ್ತು ಮಧ್ಯಮ ರೈತರಿಗೆ ಮೊದಲ ಆದ್ಯತೆ.

ರೈತರು ಕಡ್ಡಾಯವಾಗಿ “FRUITS ID” ಯಲ್ಲಿ ನೋಂದಾಯಿಸಿಕೊಂಡಿರಬೇಕು.

ಕೃಷಿಭೂಮಿಯ “ಪಹಣಿ ರೈತರ ಹೆಸರಿ“ನಲ್ಲಿಯೇ ಇರಬೇಕು.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಏನು?
Documents need to apply for scheme benifit?
  1. ರೈತರ ಆಧಾರ್ ಕಾರ್ಡ್
  2. ರೈತರ ಹೆಸರಿನಲ್ಲಿರುವ ಜಮೀನಿನ RTC ಅಥವಾ ಪಹಣಿ ಪ್ರತಿ.
  3. ರೈತರ ಬ್ಯಾಂಕ್ ಅಕೌಂಟ್ ನಂಬರ್.
  4. ಬಹು ಮುಖ್ಯವಾಗಿ ರೈತರು FRUITS ನಲ್ಲಿ ನೋಂದಣಿ ಆಗಿರುವ ಸಂಖ್ಯೆ.
  5. ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸಬ್ಸಿಡಿ ಪಡೆಯಲು ಸಹಾಯಕವಾಗುತ್ತದೆ.
  6. ರೈತರ ಪಾಸ್ಪೋರ್ಟ್ ಸೈಜ್ ಫೋಟೋ ಮತ್ತು ಅವರ “ಆಧಾರ್ ಕಾರ್ಡಿಗೆ ಲಿಂಕ್” ಆಗಿರುವ ಮೊಬೈಲ್ ನಂಬರ್.
ಈ ಅರ್ಜಿ ಸಲ್ಲಿಸುವುದು ಹೇಗೆ?
How to apply for Tarpaulin scheme?

 ಈ ಯೋಜನೆಗೆ ಅರ್ಜಿ ಸಲ್ಲಿಸಲು ಆನ್ಲೈನ್ ಮೂಲಕ “ಅವಕಾಶ ಕಲ್ಪಿಸದೇ ಇರುವುದರಿಂದ” ಈ ಯೋಜನೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ರೈತರು ತಮ್ಮ ಹತ್ತಿರದ “ತಾಲೂಕು ಅಥವಾ ಹೋಬಳಿಯ ರೈತ ಸಂಪರ್ಕ ಕೇಂದ್ರ“ಕ್ಕೆ ಹೋಗಿ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ರೈತರು ಹತ್ತಿರದ “ರೈತ ಸಂಪರ್ಕ ಕೇಂದ್ರ”ಕ್ಕೆ ಹೋಗಿ ಅಲ್ಲಿನ ಅಧಿಕಾರಿಗಳನ್ನು ಭೇಟಿ ಮಾಡಿ “ಅರ್ಜಿ ನಮೂನೆ”ಯನ್ನು ಪಡೆದು, “ಅಗತ್ಯ ದಾಖಲೆ”ಗಳನ್ನು “ಲಗತ್ತಿಸಿ” ಅರ್ಜಿ ಸಲ್ಲಿಸಬೇಕಾಗುತ್ತದೆ.

* ಅಧಿಕಾರಿಗಳಿಂದ ಪಡೆದ ಅರ್ಜಿಯ ನಮೂನೆಗೆ ದಾಖಲೆಗಳನ್ನು ಲಗತ್ತಿಸಿದ ನಂತರ ಅದನ್ನು ಭರ್ತಿ ಮಾಡಿ, “ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಧಿಕಾರಿಗಳಿಗೆ ಹಿಂದಿರುಗಿಸಿ, ರೈತರು ಅಧಿಕಾರಿಗಳಿಂದ ಸ್ವೀಕೃತಿ”ಯನ್ನು ಪಡೆಯಬೇಕು.

 ರೈತರಿಗಿರುವ ವಿಶೇಷ ಸೂಚನೆ ಏನೆಂದರೆ:-
What is the special notice to farmers? 

ಟಾರ್ಪಲ್ ವಿತರಣೆಯ ಯೋಜನೆಯಲ್ಲಿ ಸರ್ಕಾರವು “ಪ್ರತಿ ಜಿಲ್ಲೆಗೂ ಇಂತಿಷ್ಟೇ ಎಂದು ಗುರಿ ನೀಡಿದ್ದು“, ಆ ಜಿಲ್ಲಾ ವ್ಯಾಪ್ತಿಯಲ್ಲಿ ಅಷ್ಟು ಟಾರ್ಪಲ್ ಗಳನ್ನು ಮಾತ್ರ ವಿತರಿಸಲಾಗುತ್ತದೆ.

ಹಾಗಾಗಿ ರೈತರು ಎಷ್ಟು ಸಾಧ್ಯವೊ ಅಷ್ಟು ಶೀಘ್ರದಲ್ಲಿ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ, ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭ ಪಡೆಯಬೇಕು.

ಮಳೆಗಾಲ ಹಾಗೂ ಬೇಸಿಗೆಕಾಲದಲ್ಲಿ “ಬೆಳೆಗಳನ್ನು ಸಂರಕ್ಷಿಸಲು” ರೈತರಿಗೆ ಸವಾಲಿನ ಕೆಲಸವಾಗಿರುತ್ತದೆ. ಇಂತಹ ಸವಾಲಿನ ಕೆಲಸಕ್ಕೆ “ಟಾರ್ಪಲಿನ್ ಅವಶ್ಯಕತೆ” ತುಂಬಾ ಇದ್ದು, ಸರ್ಕಾರ ತಂದಿರುವ

ಈ ಯೋಜನೆ ರೈತರಿಗೆ ಅಗತ್ಯ ರೀತಿಯಲ್ಲಿ ನೆರವಾಗುವಂತಹ ಯೋಜನೆಯಾಗಿದೆ. ಒಟ್ಟಿನಲ್ಲಿ ಈ ಯೋಜನೆಯಿಂದ ಸಿಗುವ ಟಾರ್ಪಲ್ ನ ಗುಣಮಟ್ಟ ಗಾತ್ರ ಹಾಗೂ ಅರ್ಜಿ ಸಲ್ಲಿಸುವ ವಿಧಾನ ಪ್ರತಿಯೊಂದು ವ್ಯವಸ್ಥಿತವಾಗಿದ್ದು, ಇದರ ಬಗ್ಗೆ ಇನ್ನೂ ಹೆಚ್ಚಿನ ರೈತರಿಗೆ ಮಾಹಿತಿ ದೊರೆತಲ್ಲಿ. ಇದೊಂದು ಯಶಸ್ವಿ ಯೋಜನೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

Hence, Tarpaulin distribution by government is best initiative took by government of karnataka for conservation of post harvest crops from sunny days and rainy days.

Tarpaulin not only act as a sheet for cover but also act as a temporary shed for crops storage. therefore every farmer should had Tarpaulin in their agriculture field is necessary,

But in market Tarpaulin cost is high, Hence government giving Tarpaulin in subsidy price or free. so farmers can get the benefit of the scheme.

Thank you.

ಧನ್ಯವಾದಗಳು

*********ಅಂತ್ಯ************

< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >

1) ಫೇಸ್ಬುಕ್ / Facebook – ಜೈನ್ ಆಗಿ/ join facebook

2)ವಾಟ್ಸಾಪ್ ಗ್ರೂಪ್ /Whatsapp ಗುಂಪು ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ

3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್

Click Here Join WhatsApp Group

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

   -VK  ಪರಿಸರದೊಂದಿಗೆ 
   ಆರ್ಥಿಕತೆ


"Agriculture is our CULTURE"