"Agriculture is our CULTURE"

Annabagya :: 1.27 ಕೋಟಿ ಫಲಾನುಭವಿಗಳಿಗೆ ₹657 ಕೋಟಿ ಅನ್ನಭಾಗ್ಯ ಹಣ ಬಾಕಿಯಿದೆ!! ಫಲಾನುಭವಿಗಳ ಖಾತೆಗೆ ಯಾವಾಗ ಜಮೆಯಾಗುತ್ತದೆ?

ಸದನದಲ್ಲಿ ನಡೆದ ಚರ್ಚೆಯ ಒಂದು ಸಮಗ್ರ ವರದಿ, ಇದರಲ್ಲಿ ಸಚಿವರು ಮತ್ತು ವಿರೋಧ ಪಕ್ಷದ ಸದಸ್ಯರ ನಡುವಿನ ಸಂವಾದದ ಪೂರ್ಣ ವಿವರಣೆಯಿದೆ.

Hon’ble MLA Mahesh Tenginkai raised the valid question that an estimated ₹657 crore in arrears,

which was supposed to reach approximately 1 crore 27 lakh ration cardholders (beneficiaries) in January 2025, has not been reached the beneficiaries.

ಅನ್ನಭಾಗ್ಯ ಯೋಜನೆಯ ಅನುಷ್ಠಾನದ ಬಗ್ಗೆ ವಿಧಾನಸಭೆಯಲ್ಲಿ ನಡೆದ ಚರ್ಚೆಯ ವಿವರ:

ಮಾನ್ಯ ಶಾಸಕರಾದ ಮಹೇಶ್ ಟೆಂಗಿನಕಾಯಿ ಅವರ ಪ್ರಶ್ನೆ: ಜನವರಿ ೨೦೨೫ ರಲ್ಲಿ ಸುಮಾರು ೧ ಕೋಟಿ ೨೭ ಲಕ್ಷ ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳಿಗೆ ತಲುಪಬೇಕಾಗಿದ್ದ ಅಂದಾಜು ೬೫೭ ಕೋಟಿ ರೂಪಾಯಿಗಳ ಬಾಕಿ ಹಣವನ್ನು ಈವರೆಗೂ ವಿತರಿಸಿಲ್ಲ ಎಂದು ಶಾಸಕರು ಸರ್ಕಾರದ ಗಮನಕ್ಕೆ ತಂದರು.

ಸಚಿವರಾದ ಕೆ. ಎಚ್. ಮುನಿಯಪ್ಪ ಅವರ ಉತ್ತರ:

ಕೇಂದ್ರ ಸರ್ಕಾರವು ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (Open Market Sales Scheme – OMSS) ಅಡಿಯಲ್ಲಿ ರಾಜ್ಯಕ್ಕೆ ಅಕ್ಕಿ ಪೂರೈಸಲು ತಿಂಗಳ ನಿರಾಕರಿಸಿತು .

ಆದ ಕಾರಣ ರಾಜ್ಯ ಸರಕಾರ ಡಬ್ಟ್ (DBT) ಮುಖಾಂತರ ಹಣ ಅಕೌಂಟ್ ಗೆ ಜಮ್ಮಾ ಮಾಡಲು ನಿರ್ಧಾರ ಮಾಡಿತ್ತು. ಅಷ್ಟರಲ್ಲಿ, ಅಂದರೆ ಜನವರಿ ೧೭, ೨೦೨೫ ರಂದು ಕೇಂದ್ರ ಸರ್ಕಾರವು ಅಕ್ಕಿ ನೀಡಲು ಸಮ್ಮತಿಸಿತು.

ಈ ಹೊಸ ನಿರ್ಧಾರವನ್ನು ಕಾರ್ಯಗತಗೊಳಿಸುವಾಗ ಸ್ವಲ್ಪ ಮಟ್ಟಿನ ತಾಂತ್ರಿಕ ತೊಂದರೆಗಳು ಉಂಟಾದ ಕಾರಣ, ನೇರ ನಗದು ವರ್ಗಾವಣೆ (Direct Benefit Transfer – DBT) ಮೂಲಕ ಹಣವನ್ನು ವರ್ಗಾಯಿಸುವ ಪ್ರಕ್ರಿಯೆನ್ನು ನಿಲ್ಲಿನಿದೆವುಯಾವಾದ್ರು.

ಹಣದ ಬದಲಿಗೆ ಅಕ್ಕಿಯನ್ನು ವಿತರಿಸಲು ನಿರ್ಧರಿಸಿದಾಗ, ಸಾಗಾಣಿಕೆ ವೆಚ್ಚ ಮತ್ತು ದರಗಳನ್ನು ನಿರ್ಧರಿಸುವ ಪ್ರಕ್ರಿಯೆಗಳಿಂದಾಗಿ ಫೆಬ್ರವರಿ ತಿಂಗಳು ಪ್ರಾರಂಭವಾಯಿತು.

ಈ ಕಾರಣದಿಂದಾಗಿ ಜನವರಿ ತಿಂಗಳಿನಲ್ಲಿ ಫಲಾನುಭವಿಗಳಿಗೆ ವಿತರಣೆ ಮಾಡಲು ಸಾಧ್ಯವಾಗಲಿಲ್ಲ ಎಂದು ಸಚಿವರು ವಿವರಿಸಿದರು.

* ಹಣ ಪಾವತಿ ಮಾಡಲು ಅಸಾಧ್ಯ: ಕೇಂದ್ರ ಸರ್ಕಾರವು ಅಕ್ಕಿ ನೀಡಲು ಒಪ್ಪಿಗೆ ನೀಡಿದ ನಂತರ, ನೇರ ನಗದು ವರ್ಗಾವಣೆ (DBT) ಮೂಲಕ ಹಣವನ್ನು ಪಾವತಿಸುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ, ಅಕ್ಕಿ ವಿತರಣೆಗೆ ಹೆಚ್ಚಿನ ಆದ್ಯತೆ ನೀಡಬೇಕಾಯಿತು.

ಆದ್ದರಿಂದ, ಆ ನಿರ್ದಿಷ್ಟ ಅವಧಿಯಲ್ಲಿ ಹಣ ಅಥವಾ ಅಕ್ಕಿ ಎರಡನ್ನೂ ಒದಗಿಸಲು ಸಾಧ್ಯವಾಗಲಿಲ್ಲ ಎಂದು ಸರ್ಕಾರವು ಸ್ಪಷ್ಟಪಡಿಸಿತು.

ಮಹೇಶ್ ಟೆಂಗಿನಕಾಯಿ ಅವರು ಒಂದು ನಿಖರವಾದ ಉತ್ತರವನ್ನು ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು. ಜನವರಿ ತಿಂಗಳ ಬಾಕಿ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡುತ್ತಾರೆಯೇ ಅಥವಾ ಅಕ್ಕಿಯನ್ನು ನೀಡುತ್ತಾರೆಯೇ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಸಚಿವರು, “ಅವಕಾಶವಾಗಲಿಲ್ಲ” ಎಂದು ಹೇಳಿದರು. ಈ ಹೇಳಿಕೆಯನ್ನು ವಿರೋಧ ಪಕ್ಷದ ಸದಸ್ಯರು “ಜನರಿಗೆ ಮಾಡಿದ ದೊಡ್ಡ ವಂಚನೆ” ಎಂದು ಟೀಕಿಸಿದರು.

ಕೊನೆಗೆ, ಸರ್ಕಾರವು ಆ ಒಂದು ತಿಂಗಳು ಅಕ್ಕಿಯನ್ನು ಸಹ ವಿತರಿಸಿಲ್ಲ ಮತ್ತು ಹಣವನ್ನು ಸಹ ನೀಡಿಲ್ಲ ಎಂಬುದು ಸದನದಲ್ಲಿ ಖಚಿತವಾಯಿತು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಅಕ್ಕಿ ಪೂರೈಕೆಯ ಒಪ್ಪಂದದಲ್ಲಿ ಉಂಟಾದ ಸಮಯದ ವ್ಯತ್ಯಾಸದಿಂದಾಗಿ (Transition Period),

ಲಕ್ಷಾಂತರ ಬಡ ಕುಟುಂಬಗಳು ಒಂದು ತಿಂಗಳ ಅನ್ನಭಾಗ್ಯ ಯೋಜನೆಯ ಸೌಲಭ್ಯದಿಂದ ವಂಚಿತರಾದರು ಎಂಬುದು ಸ್ಪಷ್ಟವಾಗುತ್ತದೆ.

Anna Bhagya is not just a subsidy program but a tool for Human Capital building process. 

Its sucess withh be relied upon timely delivery to thr last mile beneficiary meeting need of the time.

State government and cdntre government should work like a hand on glove to ensure true welfare ensuring the proogess of the nation with food accessibility and affordability.

#ಅನ್ನಭಾಗ್ಯ#ಬಿಪಿಎಲ್#ಅನ್ನಭಾಗ್ಯ ಹಣ #ಅನ್ನಭಾಗ್ಯ

Click Here Join WhatsApp Group

ಧನ್ಯವಾದಗಳು

< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >

1) ಫೇಸ್ಬುಕ್ / Facebook – ಜೈನ್ ಆಗಿ/ join facebook

2)ವಾಟ್ಸಾಪ್ ಗ್ರೂಪ್ /Whatsapp ಗುಂಪು ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ

3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V.K

ಪರಿಸರ ಪರಿಸರದೊಂದಿಗೆ ಆರ್ಥಿಕತೆ


"Agriculture is our CULTURE"