"Agriculture is our CULTURE"

Yield Increase :: ಉತ್ತಮ ಇಳುವರಿ ಪಡೆಯಲು ಹೂಗಳ ಪರಾಗ ಸ್ಪರ್ಶ ಹೆಚ್ಚಿಸುವುದು ಹೇಗೆ? ಅಗತ್ಯ ದುಂಬಿಗಳನ್ನು ಸೆಳೆಯುವುದು ಹೇಗೆ?

ಬೆಲ್ಲದ ಸಿಂಪಡಣೆ ಮಾಡಿ ಉತ್ತಮ ಇಳುವರಿ ಪಡೆಯಿರಿ :: ಉತ್ತಮ ಇಳುವರಿ ಪಡೆಯಲು ಸರಿಯಾದ ಹಾಗೂ ನಿರ್ದಿಷ್ಟ ಹೂಗಳ ಪರಾಗ ಸ್ಪರ್ಶ ನಡೆಸಲು ದುಂಬಿಗಳ ಅಗತ್ಯ ಆ ದುಂಬಿಗಳನ್ನು ಸೆಳೆಯಲು ಬೆಲ್ಲದ ಸಿಂಪಡಣೆ ಕೂಡ ಒಂದು ವಿಧಾನ ಈ ವಿಧಾನದ ಬಗ್ಗೆ ಇಲ್ಲಿದೆ ಮುಖ್ಯ ಮಾಹಿತಿ!! 

Jaggery spray is a natural and eco-friendly practice used in agriculture to improve plant growth and soil health. Jaggery is rich in carbohydrates and small amounts of minerals, which act as an energy source for beneficial microorganisms present in the soil. 

ಬೆಲ್ಲ (Jaggery) ಒಂದು ನೈಸರ್ಗಿಕ ಕಾರ್ಬೋಹೈಡ್ರೇಟ್ ಮೂಲ. ಇದನ್ನು ನೀರಿನಲ್ಲಿ ಕರಗಿಸಿ ಸಸ್ಯಗಳಿಗೆ ಸಿಂಪಡಿಸಿದರೆ, ಮಣ್ಣಿನಲ್ಲಿರುವ ಉಪಯುಕ್ತ ಸೂಕ್ಷ್ಮಜೀವಿಗಳ ಚಟುವಟಿಕೆ ಹೆಚ್ಚಾಗಿ ಸಸ್ಯಗಳ ಬೆಳವಣಿಗೆ, ಹೂ ಬಿಡುವಿಕೆ ಮತ್ತು ಫಲಧಾರಣೆ ಉತ್ತಮವಾಗುತ್ತದೆ. ಇದು ಸಂಪೂರ್ಣವಾಗಿ ಸಸ್ಯಸ್ನೇಹಿ ಮತ್ತು ರಾಸಾಯನಿಕ ರಹಿತ.

Sunlight View For Flower

Sunlight View For Flower

ಭಾರತೀಯ ಕೃಷಿ ಪದ್ಧತಿಯಲ್ಲಿ ಬೆಲ್ಲ ಸಿಂಪಡಣೆಯು ಒಂದು ಸಾಂಪ್ರದಾಯಿಕ ಪದ್ಧತಿಯಾಗಿದ್ದು ಅನಾದಿಕಾಲದಿಂದಲೂ ಬೆಲ್ಲ ಸಿಂಪಡಣೆಯಿಂದ ಹಾಗುವ ಹಲವು ಉಪಯೋಗಗಳನ್ನು ರೈತರು ಪಡೆಯುತ್ತಾ ಬಂದಿದ್ದಾರೆ. ಹಾಗಾಗಿ ಇದು ಆಧುನಿಕ ಅನ್ವೇಷಣೆ ಅಲ್ಲದೆ, ಇದು ರೈತರು ಸಾಂಪ್ರದಾಯಿಕವಾಗಿ ಕಂಡುಕೊಂಡ ಅನ್ವೇಷಣೆ ಎನ್ನಬಹುದು.

ಬೆಲ್ಲದಲ್ಲಿ ಅತಿ ಹೆಚ್ಚು ಕಬ್ಬಿನಾಂಶ ಹೊಂದಿರುವುದರಿಂದ ಬೆಲ್ಲವನ್ನು ಉಪಯೋಗಿಸುವುದರಿಂದ “ರಕ್ತ ಹೀನತೆ”ಯಿಂದ ಬಳಲುತ್ತಿರುವರು ಸುಲಭವಾಗಿ ಚೇತರಿಸಿಕೊಳ್ಳಬಹುದು ಅಲ್ಲದೆ ಕಬ್ಬಿನಂಶ ಮಾತ್ರವಲ್ಲದೆ ಇನ್ನೂ ಹಲವು ಪೋಷಕಾಂಶಗಳಿರುವುದರಿಂದ ದೇಹಕ್ಕೆ ಹೊಸ “ಚೈತನ್ಯ” ದೊರೆಯುತ್ತದೆ ಇದೇ ರೀತಿಯಾಗಿ

 ಬೆಲ್ಲದ ಉಪಯೋಗವೂ ಕೇವಲ ಮನುಷ್ಯರ ಆರೋಗ್ಯ ಸುಧಾರಣೆ ಮಾತ್ರವಲ್ಲದೆ ಸಸ್ಯಗಳಿಗೆ ಅಗತ್ಯ ಪೋಷಕಾಂಶಗಳನ್ನು ನೀಡಿ, ಉತ್ತಮ ಇಳುವರಿ ಪಡೆಯಲು ಸಹಾಯಕವಾಗುತ್ತದೆ. 

ಬೆಲ್ಲದಲ್ಲಿರುವ ಖನಿಜಾಂಶಗಳು:-
 Minerals in jaggery:-
  1. ಪೊಟ್ಯಾಸಿಯಂ
  2. ಮ್ಯಾಗ್ನೇಶಿಯಂ
  3. ಕಬ್ಬಿಣಾಂಶ
  4. ಹಲವು ಸೂಕ್ಷ್ಮ ಪೋಷಕಾಂಶಗಳು

ಬೆಳೆಗೆ ಲಭಿಸಿ “ಉತ್ತಮವಾದ ಇಳುವರಿ”ಯನ್ನು ಕೊಡಲು ಸಹಾಯ ಮಾಡುತ್ತದೆ. 

ಬೆಲ್ಲದ ಸಿಂಪಡಣೆಯಿಂದ ಆಗುವ ಉಪಯೋಗಗಳು ಏನು? 
What are the advantage of jaggery spray on crops? 
  1. ಬೆಲ್ಲವನ್ನು ರಾಸಾಯನಿಕ ಗೊಬ್ಬರಗಳಲ್ಲಿ ಮಿಶ್ರಣ ಮಾಡಿ ಸಿಂಪಡಿಸುವುದರಿಂದ ಈ ಬೆಲ್ಲ ಸಾವಯವ ಅಂಟಾಗಿ ಕಾರ್ಯನಿರ್ವಹಿಸುತ್ತದೆ. 
  2. ಬೆಲ್ಲದ ಸಿಂಪಡಣೆಯಿಂದ “ಮೆಗ್ನೀಷಿಯಂ, ಪೊಟ್ಯಾಶಿಯಂ ಹಾಗೂ ಕಬ್ಬಿಣದ ಅಂಶದ” ಕೊರತೆ ಸರಿದೂಗುತ್ತದೆ. 
  3. ಬೆಲ್ಲದ ಸಿಂಪರಣೆಯಿಂದ ಕೀಟಗಳು ಆಕರ್ಷಿತವಾಗಿ ಸಸ್ಯದ ಹೂಗಳತ್ತ ಬಂದಾಗ “ಪರಾಗಸ್ಪರ್ಶ”ವು ಸರಾಗವಾಗಿ ನಡೆಯುತ್ತದೆ. 
  4. ಬೆಲ್ಲದ ಸಿಂಪಡಣೆಯಿಂದ ಸಸ್ಯಗಳಿಗೆ “ಉತ್ತಮ ಪೋಷಕಾಂಶ” ದೊರೆಯುವುದರಿಂದ ಮಾರುಕಟ್ಟೆಯಲ್ಲಿ ತಾವು ಬೆಳೆದ ಬೆಳೆಗಳಿಗೆ “ಉತ್ತಮ ಬೆಲೆ” ಸಿಗುತ್ತದೆ. 
  5. ಅಷ್ಟೇ ಅಲ್ಲದೆ, ಬೆಲ್ಲವನ್ನು ಗೊಬ್ಬರಗಳ ಜೊತೆಗೆ ಮಿಶ್ರಣ ಮಾಡಿ ಹಾಕುವುದರಿಂದ “ಸಸ್ಯಗಳು ಪೋಷಕಾಂಶಗಳನ್ನು ಹೀರಿಕೊಳ್ಳುವ ಕ್ಷಮತೆ” ಹೆಚ್ಚುತ್ತದೆ. 
ಬೆಳೆಗೆ ಸಿಂಪಡಿಸಲು ಯಾವ ಬೆಲ್ಲ ಉತ್ತಮ? 
Which jaggeryis best on crops? 
  • ಮಾರುಕಟ್ಟೆಯಲ್ಲಿ ಹಲವು ರೀತಿಯ ಬೆಲ್ಲಗಳು ದೊರೆಯುತ್ತವೆ, ಆದರೆ ಸಸ್ಯಕ್ಕೆ ನಿಗದಿತ ಪೋಷಕಾಂಶಗಳು ದೊರೆಯಬೇಕಾದರೆ ರೈತರು ಆದಷ್ಟು ಆರ್ಗಾನಿಕ್ ಬೆಲ್ಲವನ್ನು ಬಳಸುವುದು ಉತ್ತಮ.

Fly On Top Of Flower

ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಸಿಗುವ ಬಿಳಿಯ ಅಥವಾ ಕೆಂಪು ಬಣ್ಣದ ಬೆಲ್ಲವನ್ನು ಉಪಯೋಗಿಸದೆ ಕಪ್ಪು ಬಣ್ಣದಲ್ಲಿ ಇರುವ ಆರ್ಗ್ಯಾನಿಕ್ ಬೆಲ್ಲವನ್ನು ಉಪಯೋಗಿಸಬೇಕು. 

 ಇದರಿಂದ ಸಸ್ಯಗಳಿಗೆ ನಿಗದಿತ ಪ್ರಮಾಣದ ಕಬ್ಬಿಣ ಪೊಟ್ಯಾಶಿಯಂ ಹಾಗೂ ಮ್ಯಾಗ್ನಿಷಿಯಂ ಮತ್ತು ಕೆಲವು ಸೂಕ್ಷ್ಮ ಪೋಷಕಾಂಶಗಳು ದೊರೆಯುತ್ತದೆ. 

ಬೆಲ್ಲ ದ್ರಾವಣ ತಯಾರಿಸುವ ವಿಧಾನ ಹೇಗೆ? 
How to prepare jaggery spray? 
  1. ಬೆಲ್ಲ – 50 ರಿಂದ 100 ಗ್ರಾಂ
  2. ನೀರು – 10 ಲೀಟರ್
  3. ಬೆಲ್ಲವನ್ನು ನೀರಿನಲ್ಲಿ ಚೆನ್ನಾಗಿ ಕರಗಿಸಿ ಶೋಧಿಸಿ (ಗಟ್ಟಿದ ಕಣಗಳು ಇರಬಾರದು)
  4. ಗೋಮೂತ್ರ 100–200 ಮಿ.ಲಿ. ಸೇರಿಸಿದರೆ ಪರಿಣಾಮ ಇನ್ನಷ್ಟು ಉತ್ತಮ.
ಸಿಂಪಡಿಸುವ ವಿಧಾನ 
How to spray? 
  1. ಬೆಳಿಗ್ಗೆ ಅಥವಾ ಸಂಜೆ ಸಮಯದಲ್ಲಿ ಸಿಂಪಡಿಸಬೇಕು. 
  2. ಎಲೆಗಳ ಮೇಲೂ ಮತ್ತು ಮಣ್ಣಿನ ಮೇಲೂ ಸಿಂಪಡಿಸಬಹುದು. 
  3. 10–15 ದಿನಕ್ಕೊಮ್ಮೆ ಬಳಸುವುದು ಉತ್ತಮ. 
ಯಾವ ಬೆಳೆಗಳಿಗೆ ಉಪಯುಕ್ತ?
This method useful for which crops? 
  • ತರಕಾರಿ ಬೆಳೆಗಳು 
  • ಹೂ ಬೆಳೆಗಳು 
  • ಹಣ್ಣು ಬೆಳೆಗಳು 
  • ತೋಟಗಾರಿಕಾ ಮತ್ತು ಕ್ಷೇತ್ರ ಬೆಳೆಗಳು 

ಹಾಗಾಗಿ, ಬೆಲ್ಲ ಸಿಂಪಡನೆ ಅತ್ಯಂತ ಸರಳ ಹಾಗೂ ಸುಲಭ ರೀತಿಯಲ್ಲಿ ಮಾಡಬಹುದಾದ ಸಿಂಪಡಣೆಯಾಗಿದೆ. ಈ ಸಿಂಪಡಣೆಡೆಯಿಂದ ಸಸ್ಯಗಳು ಚೇತರಿಸಿಕೊಳ್ಳುವುದಲ್ಲದೆ “ಉತ್ತಮ ಇಳುವರಿ ನೀಡಲು ಸಮೃದ್ಧಿಯಾಗಿ ಬೆಳೆಯಲು” ಸಹಾಯ ಮಾಡುತ್ತದೆ

At last, jaggery spray is a simple, economical, and eco-friendly agricultural practice that supports healthy plant growth. By providing an energy source for beneficial microorganisms, it improves soil fertility, enhances nutrient uptake, and strengthens plant health. Regular and proper use of jaggery spray can lead to better flowering, improved fruit setting, and increased crop yield, while reducing dependence on chemical inputs. Overall, jaggery spray is a sustainable solution that benefits both crops and the environment.

Thank you.

 

ಧನ್ಯವಾದಗಳು

<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ : ಇಂದಿನ ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು.

ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ​​ಬೆಟ್ಟಿ ಕೆಂಪುಗೋಟು ಚಿಪ್ಪು,ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ.

ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ. 

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸರ ಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"