4 Lakh Subsidy ::ಟ್ಯಾಕ್ಟರ್, ಟ್ಯಾಕ್ಸಿ ಅಥವಾ ಇತರೆ ವಾಹನ 4 ಲಕ್ಷ ರೂಪಾಯಿ ಸಹಾಯದಾನ!!! ಸಾರಥಿ ಸ್ವಾವಲಂಬಿ ಯೋಜನೆಗೆ ಅರ್ಜಿ ಆಹ್ವಾನ!!!
ಸಾರಥಿ ಸ್ವಾವಲಂಬಿ ಯೋಜನೆಗೆ ಅರ್ಜಿ ಆಹ್ವಾನ:: ಸ್ವ ಉದ್ಯೋಗ ಮಾಡಲು ಬಯಸುವವರು ಈಗಲೇ ಅರ್ಜಿ ಸಲ್ಲಿಸಬಹುದು, ಸುಲಭವಾಗಿ ಮನೆಯಲ್ಲಿ ಅರ್ಜಿ ಸಲ್ಲಿಸುವ ವಿಧಾನವನ್ನು ಈಗಲೇ ತಿಳಿಯಿರಿ!!!
Sarathi Swavalambi is a Karnataka Government initiative aimed at empowering unemployed youth and aspiring entrepreneurs by providing financial assistance upto 4 lakh, skill development, and self-employment opportunities.
ಸಾರಥಿ ಸ್ವಾವಲಂಬಿ ಯೋಜನೆ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ರಾಜ್ಯದ ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕರು ಮತ್ತು ಸ್ವಯಂ ಉದ್ಯೋಗ ಆರಂಭಿಸಲು ಆಸಕ್ತಿ ಹೊಂದಿರುವವರಿಗೆ “ಆರ್ಥಿಕ ಹಾಗೂ ತಾಂತ್ರಿಕ ನೆರವು” ನೀಡುವ ಉದ್ದೇಶವನ್ನು ಹೊಂದಿದೆ. ಈ ಯೋಜನೆಯ ಮೂಲಕ ಯುವಕರು ತಮ್ಮದೇ ಆದ ಉದ್ಯಮ, ಸಣ್ಣ ವ್ಯಾಪಾರ, ಸೇವಾ ಚಟುವಟಿಕೆಗಳು ಅಥವಾ ಕೃಷಿ ಆಧಾರಿತ ಕಾರ್ಯಗಳನ್ನು ಆರಂಭಿಸಿ ಸ್ವಾವಲಂಬಿಗಳಾಗಲು ಅವಕಾಶ ಕಲ್ಪಿಸಲಾಗುತ್ತದೆ.
ಈ ಯೋಜನೆ ಕೌಶಲ್ಯಾಭಿವೃದ್ಧಿ, ಮಾರ್ಗದರ್ಶನ ಹಾಗೂ ಸಾಲ ಸೌಲಭ್ಯಗಳ ಮೂಲಕ ಯುವಕರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಿ, ಉದ್ಯೋಗ ಹುಡುಕುವವರನ್ನು ಉದ್ಯೋಗ ಸೃಷ್ಟಿಸುವವರಾಗಿಸುವ ದಿಕ್ಕಿನಲ್ಲಿ ಕಾರ್ಯನಿರ್ವಹಿಸುತ್ತದೆ.
ಇದರಿಂದ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಯುವಕರ ಆರ್ಥಿಕ ಸ್ಥಿತಿ ಸುಧಾರಿಸಿ, ಹಳ್ಳಿ ಯುವಕರು ನಗರ ಪ್ರದೇಶಗಳಿಗೆ ಕೆಲಸ ಉದ್ಯೋಗವನ್ನು ಅರಸಿ “ವಲಸೆ ಹೋಗು”ವುದನ್ನು ತಪ್ಪಿಸಬಹುದಾದ ಕ್ರಮವಾಗಿದೆ.
ಈ ಯೋಜನೆಯೆಲ್ಲಿ ಯುವಕರು 4 ಲಕ್ಷ ರೂಗಳ ವರೆಗೂ ಸಹಾಯಧನವನ್ನು ಪಡೆಯಬಹುದು. ಅಲ್ಲದೆ ಇದರಿಂದ “ಟ್ಯಾಕ್ಟರ್, ಟ್ಯಾಕ್ಸಿ ಅಥವಾ ಇತರೆ ವಾಹನ”ಗಳನ್ನು ಖರೀದಿಸಿ ಸ್ವಂತ ಉದ್ಯೋಗವನ್ನು ಸೃಷ್ಟಿಸಿಕೊಳ್ಳಬಹುದು.
ಈ ಯೋಜನೆಗೆ ಬೇಕಾದ ಅರ್ಹತೆಗಳು:-
what are the qualifications for apply for the scheme:-
- ಕರ್ನಾಟಕ ರಾಜ್ಯದ “ಶಾಶ್ವತ ನಿವಾಸಿ” ಆಗಿರಬೇಕು.
- “ಪರಿಶಿಷ್ಟ ಪಂಗಡ”ಕ್ಕೆ ಸೇರಿರಬೇಕು.
- ನಿರುದ್ಯೋಗಿ ಯುವಕರು / ಯುವತಿಯರು ಅಥವಾ ಸ್ವಯಂ ಉದ್ಯೋಗ ಆರಂಭಿಸಲು ಆಸಕ್ತರು.
- ಸಾಮಾನ್ಯವಾಗಿ 18 ರಿಂದ 45 ವರ್ಷ ವಯೋಮಿತಿ ಇರಬೇಕು.
- ಈಗಾಗಲೇ ಕುಟುಂಬದ ಇದ್ದರೆ ಸದಸ್ಯರು ಈ ಯೋಜನೆಯ ಸಾಲ ಸೌಲಭ್ಯ ಪಡೆದಿರಬಾರದು.
- ಸ್ವಂತವಾಗಿ ಉದ್ಯಮ/ವ್ಯವಹಾರ ಆರಂಭಿಸುವ “ಸ್ಪಷ್ಟ ಯೋಜನೆ” ಇರಬೇಕು.
- ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವ ಯುವಕರಾದರೆ ಅವರ “ಆದಾಯ ಮಿತಿ” 1,50,000 ಇರಬೇಕು ಹಾಗೆ ನಗರ ಪ್ರದೇಶದ ಯುವಕರಿಗಾದರೆ ಎರಡು ಲಕ್ಷದಷ್ಟು ಆದಾಯ ಮಿತಿ ಕಡ್ಡಾಯವಾಗಿ ಇರಲೇಬೇಕು.
- ಅರ್ಜಿದಾರರು ಘಟಕವನ್ನು ಸ್ಥಾಪಿಸಲು ಅಗತ್ಯವಿರುವ “ಸ್ಥಳಾವಕಾಶ”ವನ್ನು ಹೊಂದಿರಬೇಕು.
- ಅರ್ಜಿದಾರರು ಈ ಅರ್ಜಿಯನ್ನು “ಸೇವಾ ಸಿಂಧು ಪೋರ್ಟಲ್, ಗ್ರಾಮ ವನ್, ಕರ್ನಾಟಕ ವನ್” ಮುಖಾಂತರ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:-
Documents need to apply for the scheme:-
- ಆಧಾರ್ ಕಾರ್ಡ್
- ನಿವಾಸ ಪ್ರಮಾಣಪತ್ರ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ವಯಸ್ಸು ದೃಢೀಕರಣ ಪ್ರಮಾಣಪತ್ರ
- ಶೈಕ್ಷಣಿಕ ಪ್ರಮಾಣಪತ್ರಗಳು (ಇದ್ದಲ್ಲಿ)
- ಬ್ಯಾಂಕ್ ಖಾತೆ ವಿವರಗಳು
- ಪಾಸ್ಪೋರ್ಟ್ ಗಾತ್ರದ ಫೋಟೋ
ಅರ್ಜಿ ಸಲ್ಲಿಸುವುದು ಹೇಗೆ?
How to apply?
ಅರ್ಜಿಯನ್ನು ಸೇವಾ ಸಿಂಧು ಕೋರ್ಟಲ್ಲಿ ಹೋಗಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ವಿಧಾನ,

Enter Mobile Number
Step 1:- ಮೊದಲಿಗೆ ಕೆಳಗೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ “ಅಧಿಕೃತ ವೆಬ್ ಜಾಲ” ಪ್ರವೇಶಿಸಬೇಕು.
https://sevasindhuservices.karnataka.gov.in

Click on Apply For Services
Step 2:- ಈ ಲಿಂಕ್ ಅನ್ನು ಕ್ಲಿಕ್ ಮಾಡಿದ ನಂತರ “ಅಪ್ಲೈ ಫಾರ್ ಸರ್ವಿಸ್” ಎನ್ನುವ ಆಯ್ಕೆಯನ್ನು ಒತ್ತಬೇಕು.

Click on ಸಾರಥಿ ಸ್ವವಲಂಬಿ
Step 3:- ಇಲ್ಲಿ “ಸಾರಥಿ ಸ್ವಾವಲಂಬಿ” ಯೋಜನೆ ಎನ್ನುವ ಲಿಂಕ್ ಕಾಣುತ್ತದೆ, ಈ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಅಪ್ಲಿಕೇಶನ್ ಹಾಕುವ ಪುಟ ತೆರೆದುಕೊಳ್ಳುತ್ತದೆ.
Step 4:- ಹೀಗೆ ತೆರೆದ ಹೊಸ ಪುಟದಲ್ಲಿ ಅರ್ಜಿದಾರರು ತಮ್ಮ “ವೈಯಕ್ತಿಕ ಹಾಗೂ ಬ್ಯಾಂಕ್ ವಿವರ”ಗಳು ಸೇರಿದಂತೆ ಮೇಲೆ ತಿಳಿಸಿರುವ ಎಲ್ಲಾ ದಾಖಲೆಗಳನ್ನು ನಮೂದಿಸಿ ಮತ್ತು ಅಪ್ಲೋಡ್ ಮಾಡಿ ಅರ್ಜಿಯನ್ನು ಸಬ್ಮಿಟ್ ಮಾಡಬೇಕು.
ಈ ರೀತಿಯಾಗಿ ಅರ್ಜಿ ಸಬ್ಮಿಟ್ ಆದ ನಂತರ, ಮೇಲಿನ ಅಧಿಕಾರಿಗಳು ಅರ್ಜಿಯನ್ನು ಪರಿಶೀಲಿಸಿ ಈ ಯೋಜನೆಗೆ ನೀವು ಅರ್ಹರಿದ್ದೀರಾ? ಅಥವಾ ಇಲ್ಲವೇ? ಎಂಬುದನ್ನು ಪರಿಶೀಲಿಸುತ್ತಾರೆ.
ಒಂದು ವೇಳೆ ಈ ಯೋಜನೆಗೆ ಅರ್ಹರಿದ್ದರೆ ಹಂತ ಹಂತವಾಗಿ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿ ನಾಲ್ಕು ಲಕ್ಷ ಹಣಗಳನ್ನು ಬ್ಯಾಂಕ್ ಖಾತೆಗೆ ಹಾಕುವ ಮೂಲಕ ಅರ್ಜಿದಾರರಿಗೆ ಅಗತ್ಯ ನೆರವನ್ನು ನೀಡುತ್ತದೆ.
ಸಾರಥಿ ಸ್ವಾವಲಂಬಿ ಯೋಜನೆಯ ಗ್ರಾಮೀಣ ಯುವಕರ ಸ್ವ ಉದ್ಯೋಗದ ಕನಸಿಗೆ ನೀರಿರುವ ಸಂಜೀವಿನಿಯಂತ ಯೋಜನೆ ಎಂದರೆ ತಪ್ಪಾಗಲಾರದು. ಸರ್ಕಾರ ನೀಡುವ 4 ಲಕ್ಷ ಹಣದಲ್ಲಿ ಉದ್ಯೋಗವನ್ನು ಮಾಡಬಯಸುವವರು ಟ್ಯಾಕ್ಟರ್, ಟ್ಯಾಕ್ಸಿ ಅಥವಾ ಟೆಂಪೋ ರೀತಿಯ ವಾಹನಗಳನ್ನು ತೆಗೆದುಕೊಂಡು, ಅವುಗಳನ್ನು ಚಲಾಯಿಸುವ ಮೂಲಕ ತಮ್ಮ ಸ್ವಉದ್ಯೋಗವನ್ನು ನಡೆಸಬಹುದು. ಇದರಿಂದ ನಿರುದ್ಯೋಗವನ್ನು ಕಡಿಮೆ ಮಾಡಬಹುದು ಹಾಗೂ ಅವಶ್ಯಕತೆ ಇರುವವರಿಗೆ ಅಗತ್ಯ ನೆರವನ್ನು ನೀಡಬಹುದು.
ಹಾಗಾಗಿ ಸಾರಥಿ ಸ್ವಾವಲಂಬನೆ ಯೋಜನೆಯು “ನಿರುದ್ಯೋಗಿ ಯುವಕರು ಮತ್ತು ಉದ್ಯಮಶೀಲತೆ”ಯ ಆಸಕ್ತಿ ಹೊಂದಿರುವವರಿಗೆ ಸ್ವಂತ ಬದುಕನ್ನು ಕಟ್ಟಿಕೊಳ್ಳುವ ಅವಕಾಶವನ್ನು ಒದಗಿಸುತ್ತದೆ. ಆರ್ಥಿಕ ನೆರವು, ಕೌಶಲ್ಯಾಭಿವೃದ್ಧಿ ಮತ್ತು ಮಾರ್ಗದರ್ಶನದ ಮೂಲಕ ಈ ಯೋಜನೆ ಯುವಕರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿ ಸ್ವಾವಲಂಬಿ ಜೀವನದತ್ತ ದಾರಿತೋರಿಸುತ್ತದೆ.
Therefore, Sarathi Swavalambi scheme is a meaningful initiative by the Government of Karnataka aimed at promoting self-reliance among unemployed youth.By providing financial assistance of 4 lakhs, skill development, and institutional support,
The scheme encourages individuals to start their own ventures and build sustainable livelihoods. It not only helps reduce unemployment but also strengthens local economies by transforming job seekers into job creators. Overall, Sarathi Swavalambi plays an important role in empowering youth and contributing to inclusive economic development in the state.

ಧನ್ಯವಾದಗಳು
<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು.
ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ಬೆಟ್ಟಿ ಕೆಂಪುಗೋಟು ಚಿಪ್ಪು,ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ.
ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ.
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸರ ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.
Leave a Reply