"Agriculture is our CULTURE"

5 Lakh for House :: ಸ್ವಂತ ಮನೆ ಕಟ್ಟಲು, 5 ಲಕ್ಷ ಆರ್ಥಿಕ ನೆರವು!!! 1.80 ಲಕ್ಷ ಹೊಸ ಮನೆಗಳ ನಿರ್ಮಾಣ ಗುರಿ, ₹2,500 ಕೋಟಿಗೂ ಮಂಜೂರು!!

Rajiv Gandhi Vasati Yojane is a housing scheme launched to provide “permanent shelter for poor” and homeless families in Karnataka.The main aim of the scheme is to “support economically weaker sections” by offering financial assistance for “house construction”. Under the scheme, funds are directly transferred to the beneficiary’s account for transparent implementation. Overall, the scheme helps vulnerable families achieve safe, secure, and dignified housing.

ರಾಜೀವ್ ಗಾಂಧಿ ವಸತಿ ಯೋಜನೆ ಕರ್ನಾಟಕದ ಅತಿ ಪ್ರಮುಖ ಯೋಜನೆಯಾಗಿದ್ದು, ಈ ಯೋಜನೆಯಿಂದ ಸಾಕಷ್ಟು ಜನರಿಗೆ ಆಶ್ರಯ ದೊರೆಯುತ್ತಿದೆ.ಗಾಳಿ ನೀರು ಆಹಾರದಂತೆಯೇ ಆಶ್ರಯ ಕೂಡ ಒಂದು ಮೂಲ ಸೌಕರ್ಯ ಒಬ್ಬ ಮನುಷ್ಯನಿಗೆ ಸುಭದ್ರವಾದ ಮನೆಯೊಂದಿದ್ದರೆ,

ಆತ ತನ್ನ ಜೀವನದ ಗುಣಮಟ್ಟವನ್ನು ಸುಧಾರಿಸಿಕೊಳ್ಳಬಹುದು ಆದ್ದರಿಂದ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಅನುಕೂಲವಾಗಲೆಂದು ರಾಜ್ಯ ಸರ್ಕಾರ ಈ ಯೋಜನೆಯನ್ನು ತಂದಿದೆ.ರಾಜ್ಯ ಸರ್ಕಾರ ತಂದಿರುವ ಕೆಲವೇ ಯೋಜನೆಗಳ ಪೈಕಿ ಬಸವಕಲ್ಯಾಣ ಯೋಜನೆಯು ಅತಿ ಪ್ರಮುಖ ಯೋಜನೆಯಾಗಿದೆ.

ಬಸವಕಲ್ಯಾಣ ಯೋಜನೆ ಎಂದರೆ ಏನು?
What is Basavakalyana Yojane?

ಬಸವ ವಸತಿ ಯೋಜನೆ ಕರ್ನಾಟಕ ಸರ್ಕಾರದ ಪ್ರಮುಖ ವಸತಿ ಕಲ್ಯಾಣ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಈ ಯೋಜನೆಯ ಉದ್ದೇಶ ಬಿಪಿಎಲ್, ಎಸ್‌ಸಿ/ಎಸ್‌ಟಿ ಹಾಗೂ ಒಬಿಸಿ ಸೇರಿದಂತೆ ಆರ್ಥಿಕವಾಗಿ ದುರ್ಬಲ ಕುಟುಂಬಗಳಿಗೆ ತಮ್ಮದೇ ಮನೆಯ ಕನಸನ್ನು ನನಸು ಮಾಡುವಂತೆ ಹಣಕಾಸಿನ ನೆರವು ಒದಗಿಸುವುದು.

 2025–26ನೇ ಸಾಲಿನಲ್ಲಿ ಈ ಯೋಜನೆಯನ್ನು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ ಯೋಜನೆ (PMAY) ಯೊಂದಿಗೆ ಒಂದುಗೂಡಿಸಲಾಗಿದೆ. ಇದರಿಂದ ಫಲಾನುಭವಿಗಳಿಗೆ ಸಿಗುವ ಅನುದಾನದ ಮೊತ್ತ ಹೆಚ್ಚುವರಿಯಾಗಿ ಹೆಚ್ಚಿಸಲಾಗಿದೆ.

ಈ ವರ್ಷದಲ್ಲೇ ಸರ್ಕಾರ ರಾಜ್ಯದಾದ್ಯಂತ ಸುಮಾರು 1.80 ಲಕ್ಷ ಹೊಸ ಮನೆಗಳ ನಿರ್ಮಾಣ ಗುರಿ ಇಟ್ಟುಕೊಂಡಿದ್ದು, ಇದನ್ನು ಯಶಸ್ವಿಯಾಗಿ ಜಾರಿಗೊಳಿಸಲು ₹2,500 ಕೋಟಿಗೂ ಅಧಿಕ ಮೊತ್ತವನ್ನು ಬಜೆಟ್‌ನಲ್ಲಿ ವಿನಿಯೋಗಿಸಲಾಗಿದೆ.

ಈ ಯೋಜನೆಗೆ ಯಾರು ಅರ್ಹರು?
Who eligible for this Scheme?

ಸರ್ಕಾರವು ಈ ಯೋಜನೆಯ ಪ್ರಯೋಜನವನ್ನು ನಿಜವಾಗಿ ಅರ್ಹರಾಗಿರುವ ಬಡ ಕುಟುಂಬಗಳಿಗೆ ಮಾತ್ರ ತಲುಪಿಸುವ ಉದ್ದೇಶದಿಂದ ಕೆಲವು ಸ್ಪಷ್ಟ ಹಾಗೂ ಕಠಿಣ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ.

ಸ್ಥಿರ ನಿವಾಸದ ನಿಯಮ: ಅರ್ಜಿದಾರರು ಕಡ್ಡಾಯವಾಗಿ ಕರ್ನಾಟಕ ರಾಜ್ಯದ ಶಾಶ್ವತ ನಿವಾಸಿಗಳಾಗಿರಬೇಕು.ಆದಾಯ ಮಿತಿ: ಕುಟುಂಬದ ವಾರ್ಷಿಕ ಆದಾಯ ₹32,000ಕ್ಕಿಂತ ಕಡಿಮೆ ಇರಬೇಕು. ಇದು ಆರ್ಥಿಕವಾಗಿ ತುಂಬಾ ದುರ್ಬಲ ವರ್ಗಗಳಿಗೆ ಮೀಸಲಾದ ಮಾನದಂಡ.

ಭೂಮಿ ಅಥವಾ ಖಾಲಿ ಜಾಗ: ಅರ್ಜಿದಾರರ ಹೆಸರಿನಲ್ಲಿ ಕನಿಷ್ಠ 20×30 ಅಥವಾ 30×40 ಅಡಿ ಗಾತ್ರದ ಸ್ವಂತ ಜಾಗ ಅಥವಾ ಕಚ್ಚಾ ಮನೆ ಇದ್ದೇ ಇರಬೇಕು.

ಪಕ್ಕಾ ಮನೆ ನಿಷೇಧ: ಅರ್ಜಿದಾರರು ಅಥವಾ ಅವರ ಕುಟುಂಬದ ಯಾವುದೇ ಸದಸ್ಯರ ಹೆಸರಿನಲ್ಲಿ ಇನ್ನೊಂದು ಪಕ್ಕಾ ಮನೆ ಇರಬಾರದು ಮತ್ತು ಹಿಂದಿನಿಂದಲೂ ಸರ್ಕಾರದ ಬೇರೆ ವಸತಿ ಯೋಜನೆಯ ಅನುದಾನ ಪಡೆದಿರಬಾರದು.

ಆದ್ಯತೆ ನೀಡುವ ವರ್ಗ:

ವಿಧವೆಯರು, ದಿವ್ಯಾಂಗರು, ಪೌರಕಾರ್ಮಿಕರು ಹಾಗೂ ಅಲೆಮಾರಿ ಸಮುದಾಯದವರಿಗೆ ಅರ್ಜಿ ಮಂಜೂರು ಮಾಡುವಾಗ ವಿಶೇಷ ಆದ್ಯತೆ ನೀಡಲಾಗುತ್ತದೆ.

ಈ ಯೋಜನೆಯಿಂದ ಸಿಗುವ ಸಹಾಯಧನ ಮತ್ತು ಸಹಾಯಧನ ನೀಡುವ ಹಂತಗಳು:-
Subsidy Provided by the Scheme and the Stages of Subsidy Release:-

ಈ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕಾಗಿ ಸರ್ಕಾರದಿಂದ ಆರ್ಥಿಕ ಸಹಾಯ ನೀಡಲಾಗುತ್ತದೆ. ಫಲಾನುಭವಿಗಳ ವರ್ಗ ಹಾಗೂ PMAY ಯೋಜನೆಯೊಡನೆ ಸಂಯೋಜನೆಯ ಹಿನ್ನಲೆಯಲ್ಲಿ ಸಹಾಯಧನದ ಮೊತ್ತದಲ್ಲಿ ವ್ಯತ್ಯಾಸ ಇರಬಹುದು.

ಸರ್ಕಾರದಿಂದ ಬರುವ ಸಹಾಯಧನವನ್ನು ಒಂದೇ ಬಾರಿ ಕೊಡೋದಿಲ್ಲ. ಮನೆ ನಿರ್ಮಾಣ ಹೇಗೆ ಸಾಗುತ್ತಿದೆ ಎಂಬುದನ್ನು ಪರಿಶೀಲಿಸಿ ಮೂರು ಕಂತುಗಳಲ್ಲಿ ನಿಮ್ಮ ಖಾತೆಗೆ ಜಮೆ ಮಾಡುತ್ತಾರೆ:

ಮೊದಲ ಕಂತು (40%):

ಮನೆಗೆ ಅಡಿಪಾಯ ಹಾಕಿ, ಪ್ಲಿಂತ್ ಮಟ್ಟದ ಕೆಲಸ ಮುಗಿದ ಬಳಿಕ ಮೊದಲ ಕಂತಿನ ಹಣವನ್ನು ಜಮೆ ಮಾಡುತ್ತಾರೆ.

ಎರಡನೇ ಕಂತು (40%):

ಗೋಡೆಗಳ ನಿರ್ಮಾಣ ಪೂರ್ಣಗೊಂಡು, ಛಾವಣಿ ಹಾಕುವ ಹಂತಕ್ಕೆ ಬಂದಾಗ ಎರಡನೇ ಕಂತು ಬಿಡುಗಡೆ ಮಾಡುತ್ತಾರೆ.

ಮೂರನೇ/ಕೊನೆಯ ಕಂತು (20%):

ಮನೆ ಸಂಪೂರ್ಣವಾಗಿ ನಿರ್ಮಾಣಗೊಂಡು, ಅದರ ಫೋಟೋಗಳನ್ನು ಆನ್‌ಲೈನ್‌ಗೆ ಅಪ್‌ಲೋಡ್ ಮಾಡಿದ ನಂತರ ಅಂತಿಮ ಕಂತನ್ನು ಜಮೆ ಮಾಡಲಾಗುತ್ತದೆ.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು?
Which documents need to apply for this scheme?

ಕುಟುಂಬದ ಮುಖ್ಯಸ್ಥರ ಮತ್ತು ಸದಸ್ಯರ ಆಧಾರ್ ಕಾರ್ಡ್ ಈ ಆಧಾರ್ ಮೊಬೈಲ್ ಲಿಂಕ್ ಆಗಿರಬೇಕು.

ಬಿಪಿಎಲ್ (BPL) ಅಥವಾ ಅಂತ್ಯೊದಯ (AAY) ರೇಷನ್ ಕಾರ್ಡ್.

ತಹಶೀಲ್ದಾರ್ ನೀಡಿದ ವಾರ್ಷಿಕ ಆದಾಯ ಪ್ರಮಾಣ ಪತ್ರ ₹32,000 ಒಳಗೆ ಇರಬೇಕು.

ನಿವೇಶನದ ದಾಖಲೆಗಳು ,RTC, ಪಹಣಿ ಅಥವಾ ಇ-ಸ್ವತ್ತು ಪ್ರತಿಗಳನ್ನು ಸಲ್ಲಿಸಬೇಕು.

ಬ್ಯಾಂಕ್ ಪಾಸ್‌ಬುಕ್ ಪ್ರತಿ DBT ಸಕ್ರಿಯವಾಗಿರಲಿ.

SC/ST/OBC ಅಭ್ಯರ್ಥಿಗಳಿಗೆಜಾತಿ ಪ್ರಮಾಣ ಪತ್ರ.

ಜಾಗದ ಅಥವಾ ಹಳೆಯ ಮನೆಯ ಭಾವಚಿತ್ರ.

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ?
How to apply on online?

2026ರಲ್ಲಿ ಅರ್ಜಿ ಪ್ರಕ್ರಿಯೆಯು ಸಂಪೂರ್ಣವಾಗಿ ಡಿಜಿಟಲ್ ಆಗಿದ್ದು, ನೀವು ಮನೆಯಲ್ಲೇ ಕುಳಿತು ಅರ್ಜಿ ಸಲ್ಲಿಸಬಹುದು:

Step 1: ಮೊದಲು ಕೆಳಗೆ ನೀಡಿರುವ ಅಧಿಕೃತ ವೆಬ್‌ಸೈಟ್ಗೆ ಭೇಟಿ ನೀಡಿ.

ashraya.karnataka.gov.in.

Click above link.

Step 2 :- ಹೋಮ್ ಪೇಜ್‌ನಲ್ಲಿ ‘Online Application’ ಅಥವಾ ‘ಬಸವ ವಸತಿ ಯೋಜನೆ ಅರ್ಜಿ’ ಲಿಂಕ್ ಮೇಲೆ ಕ್ಲಿಕ್ ಮಾಡಿ.

Step 3:- ನಿಮ್ಮ ಜಿಲ್ಲೆ, ತಾಲೂಕು ಮತ್ತು ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಿ.

Step 4:- ವೈಯಕ್ತಿಕ ವಿವರಗಳು, ಆಧಾರ್ ಸಂಖ್ಯೆ ಮತ್ತು ಆದಾಯದ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ.

Step 5:- ಕೇಳಲಾದ ಎಲ್ಲಾ ದಾಖಲೆಗಳನ್ನು ಅಪ್‌ಲೋಡ್ ಮಾಡಿ ‘Submit’ ಬಟನ್ ಕ್ಲಿಕ್ ಮಾಡಿ.

Step 6:- ಅರ್ಜಿ ಸಲ್ಲಿಸಿದ ನಂತರ ಸಿಗುವ ರೆಫರೆನ್ಸ್ ನಂಬರ್ (Reference Number) ಅನ್ನು ಜೋಪಾನವಾಗಿ ಇಟ್ಟುಕೊಳ್ಳಿ.

Rajiv Gandhi Vasithi Yojane

Rajiv Gandhi Vasithi Yojane

ಫಲಾನುಭವಿಗಳ ಆಯ್ಕೆ ಪಟ್ಟಿಯನ್ನು ನೋಡುವುದು ಹೇಗೆ?
How to check beneficiaries list?

ಅರ್ಜಿಯನ್ನು ಸಲ್ಲಿಸಿದ ಬಳಿಕ ನಿಮ್ಮ ಹೆಸರು ಪಟ್ಟಿಯಲ್ಲಿ ಸೇರಿದಿದೆಯೇ ಎಂದು ತಿಳಿದುಕೊಳ್ಳಲು ಅಶ್ರಯ ಪೋರ್ಟಲ್‌ಗೆ ಲಾಗಿನ್ ಮಾಡಬೇಕು.

ನಂತರ ‘Beneficiary Information’ ಎಂಬ ಆಯ್ಕೆಯನ್ನು ತೆರೆಯಿರಿ.

ಅಲ್ಲಿ ನೀವು ನಿಮ್ಮ ಜಿಲ್ಲೆ ಮತ್ತು ತಾಲೂಕು ಆಯ್ದುಕೊಂಡರೆ, ನಿಮ್ಮ ಗ್ರಾಮದ ಆಯ್ಕೆಯಾದ ಫಲಾನುಭವಿಗಳ ಪಟ್ಟಿ ತೋರಿಸುತ್ತದೆ.

ಇದೇ ಪುಟದಲ್ಲಿ ನಿಮ್ಮ ಸಹಾಯಧನ ಬಿಡುಗಡೆ ಸ್ಥಿತಿ (Payment Status) ಯನ್ನೂ ಸುಲಭವಾಗಿ ನೋಡಬಹುದು.

ಈ ರೀತಿಯಾಗಿ ಫಲಾನುಭಾವಿಗಳು ಸುಲಭವಾಗಿ ಆಶ್ರಯ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಿ, ತಮ್ಮ ಅರ್ಜಿ ಸ್ಟೇಟಸ್ ಅನ್ನು ಪರಿಶೀಲಿಸುವ ವಿಧಾನವನ್ನು ಸುಲಭವಾಗಿ ಮಾಡಬಹುದು.

ಬಸವ ವಸತಿ ಯೋಜನೆ ರಾಜ್ಯದ ಬಡ ಕುಟುಂಬಗಳಿಗೆ ಸುರಕ್ಷಿತ ಮತ್ತು ಗೌರವಯುತ ವಾಸಸ್ಥಳವನ್ನು ಒದಗಿಸುವುದರಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ಕಟ್ಟುನಿಟ್ಟಿನ ಅರ್ಹತಾ ನಿಯಮಗಳು,

ಹಂತ ಹಂತವಾಗಿ ನೀಡುವ ಸಹಾಯಧನ ಮತ್ತು ಆನ್‌ಲೈನ್‌ ಮೂಲಕ ಪಾರದರ್ಶಕ ಪರಿಶೀಲನೆ ಸೌಲಭ್ಯ ಈ ಯೋಜನೆಯ ಪರಿಣಾಮವಾಗಿ ಗ್ರಾಮೀಣ ಮತ್ತು ನಗರ ಬಡ ಕುಟುಂಬಗಳ ಮನೆಯ ಪರಿಸ್ಥಿತಿ ಉತ್ತಮಗೊಂಡು,

ಸಾಮಾಜಿಕ ಭದ್ರತೆ ಮತ್ತು ಜೀವನ ಗುಣಮಟ್ಟದ ಏರಿಕೆ ಕಂಡುಬರುತ್ತಿದೆ. ಸರ್ಕಾರದ ಬದ್ಧತೆ ಮತ್ತು ಜನರ ಸಹಕಾರದಿಂದ, “ಪ್ರತಿ ಬಡವನಿಗೂ ಒಂದು ಮನೆ” ಎಂಬ ಗುರಿ ಸಾಧಿಸುವ ದಾರಿಯಲ್ಲಿ ಕರ್ನಾಟಕ ರಾಜ್ಯವು ದೃಢವಾದ ಹೆಜ್ಜೆಯನ್ನು ಇಡುತ್ತಿದೆ.

DCM D K Shivakumar

DCM D K Shivakumar

Basava Vasati Yojana stands as a significant welfare initiative designed to provide secure housing for economically weaker families in Karnataka. joining hands with PMAY and implementing strict eligibility norms, the scheme ensures that assistance reaches only deserving beneficiaries. The structured, phased release of subsidy promotes transparency and accountability in construction progress.

Online monitoring through the Ashraya portal further enhances efficiency and prevents misuse of funds. Overall, the scheme has strengthened social security, improved living standards, and contributed meaningfully to the state’s mission of achieving inclusive and equitable housing for all.

Thank you.

ಧನ್ಯವಾದಗಳು

<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ : ಇಂದಿನ ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್< ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ​​ಬೆಟ್ಟಿ ಕೆಂಪುಗೋಟು ಚಿಪ್ಪು,

ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ. 

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸರ ಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"