"Agriculture is our CULTURE"

Crop Insurance 2026 :: ಬೆಳೆ ವಿಮೆ ಬಿಡುಗಡೆಯಾಗಲು ಏನೆಲ್ಲ ಚೆಕ್ ಮಾಡುತ್ತಾರೆ!!! ಬೆಳೆ ವಿಮೆ ಜಮವಾಗಲು ಯಾಕೆ ತಡವಾಗುತ್ತದೆ?

ರೈತ ಸುರಕ್ಷಾ ಫಸಲ್ ಭೀಮಾ ಯೋಜನೆಯಿಂದ ಬೆಳೆ ವಿಮೆ ಪರಿಹಾರ ಬಿಡುಗಡೆ!!

“Karnataka Raitha surkasha fasal bheema yojane” Introduced to safeguard farmers’ livelihoods, offers financial relief when crop are damaged due to bad weather conditions or natural disasters.

those who farmers register for crop insurance in pre monsoon time, they will initiated to credit amount to beneficiaries account by first week and second week of January 2026.

ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ ತಿಳಿಸಿರುವಂತೆ, ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಹವಮಾನ ವೈಪರಿತ್ಯದಿಂದ ತೋಟಗಾರಿಕೆ ಬೆಳೆಯಗಳು ಸಹ

ಹಾನಿಯಾಗಿದ್ದು, ಮುಂಗಾರು ಹಂಗಾಮಿನಲ್ಲಿ ಅರ್ಜಿ ಸಲ್ಲಿಸಿದ ರೈತರಿಗೆ ಜನವರಿ ಮೊದಲ ಹಾಗೂ ಎರಡನೇ ವಾರದಲ್ಲಿ ವಿಮಾ ಮಧ್ಯಂತರ ಹಣವನ್ನು ಬಿಡುಗಡೆ ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ.

* ತೋಟಗಾರಿಕೆ ಬೆಳೆಗಳ ಹಾನಿಯನ್ನು ಪರೀಕ್ಷಿಸಲು ಸರ್ಕಾರ ಟೆಲಿಮೆಟ್ರಿಕ್ ಅನ್ನು ಅಳವಡಿಕೆ ಮಾಡಲಾಗಿದೆ.

ಟೆಲಿಮೆಟ್ರಿಕ್ ಎಂದರೇನು?

what is Telimetric?

ಈ ಟೆಲಿಮೆಟ್ರಿಕ್ ವಿಧಾನವೆಂದರೆ ನಿರ್ದಿಷ್ಟ ಪ್ರದೇಶದಲ್ಲಿ ಎಷ್ಟು ಪ್ರಮಾಣದ ಮಳೆ ಆಗಿದೆ, ಮತ್ತು ಆ ಬೆಳೆ ಹಾನಿಗೆ ಎಷ್ಟು ಪ್ರಮಾಣದ ಪರಿಹಾರ ನೀಡಬೇಕು ಎಂದು ನಿರ್ಧರಿಸುವ ಒಂದು ಪ್ರಕ್ರಿಯೆ.

ಹೀಗಾಗಿ ರಾಜ್ಯದ ಮಲೆನಾಡು ಜಿಲ್ಲೆಗಳಾದ “ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ, ಚಿಕ್ಕಮಗಳೂರು ಹಾಗೂ ಇತರೆ ಜಿಲ್ಲೆ”ಗಳಲ್ಲಿ “ತೋಟಗಾರಿಕೆ ಬೆಳೆ”ಯು ಅಧಿಕ ಮಳೆಯಿಂದ ಹಾಳಾಗಿದೆ.

ಹಾಗಾಗಿ ಈ ಜಿಲ್ಲೆಯ ರೈತರು ಕಟ್ಟಿರುವ ಪ್ರಿಮಿಯಂ ಆಧಾರದ ಮೇಲೆ ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ ಮಧ್ಯಂತರ ವಿಮಾ ಪರಿಹಾರ ಹಣವನ್ನು ಬಿಡುಗಡೆ ಮಾಡಲು ಯೋಜಿಸಿದೆ.

ಇನ್ನು ರಾಜ್ಯದ ಬಯಲು ಸೀಮೆ ಪ್ರದೇಶಗಳಲ್ಲಿ “ಬೆಳೆ ಹೂ ಬಿಡುವ ಸಮಯ”ಕ್ಕೆ ಅಧಿಕ ಮಳೆಯಾಗಿರುವುದರಿಂದ “ಚಿತ್ರದುರ್ಗ” ಹಾಗೂ ಹಲವು ಜಿಲ್ಲೆಗಳಲ್ಲಿ ಬೆಳೆಗಳಲ್ಲಿ ಇಳುವರಿ ಕಡಿಮೆಯಾಗಿದೆ.

“ಕಲ್ಬುರ್ಗಿ, ರಾಯಚೂರು ಹಾಗೂ ಇತರೆ ತೊಗರಿ ಬೆಳೆಯುವ ಜಿಲ್ಲೆ”ಗಳಲ್ಲೂ ಸಹ ಇಳುವರಿ ಕುಂಠಿತವಾಗಿದೆ. ಇಂತಹ ಜಿಲ್ಲೆಗಳಿಗೆ ರೈತರಿಗೆ ಜನವರಿ ಮೊದಲ ಹಾಗೂ ಎರಡನೇ ವಾರದಲ್ಲಿ ವಿಮಾ ಮಧ್ಯಂತರ ಹಣವನ್ನು ಬಿಡುಗಡೆ ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ.

ಈಗಿರುವ ಪ್ರಸ್ತುತ ಸಮಸ್ಯೆ:-

Present problems in crop insurance issue:-

ಪ್ರಸ್ತುತ ಎರಡು ವರ್ಷಗಳಿಂದ ರೈತರು ಸಲ್ಲಿಸಿದ ಪ್ರಿಮಿಯಂ ಹಣಕ್ಕಿಂತ ಕಡಿಮೆ ವಿಮಾ ಮೊತ್ತವನ್ನು ಪಾವತಿಸಿದ್ದು, ಇದು ರೈತರ ಕೆಂಗಣ್ಣಿಗೆ ಗುರಿಯಾಗಿ ವಿಮಾ ಕಂಪನಿಗಳ ವಿರುದ್ಧ ದೂರು ಸಲ್ಲಿಸಿರುವ ವರದಿ ಸದನದಲ್ಲಿ ಚರ್ಚೆಯಾಗಿದೆ.

ಹಾಗಾಗಿ ಸದನವು, ರೈತರಿಗೆ ಸರಿಯಾದ ಸಮಯಕ್ಕೆ ವಿಮಾ ಹಣವನ್ನು ಪಾವತಿಸಲು ಸೂಚಿಸಲಾಗಿದೆ.

ಆದ್ದರಿಂದ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ, ನೀಡಿರುವ ಮಾಹಿತಿ ಬಹಳಷ್ಟು ರೈತ ಫಲಾನುಭವಿಗಳಿಗೆ ಉಪಯುಕ್ತವಾಗಿದೆ.

ರೈತರು ಒಂದಿಲ್ಲೊಂದು ಸಂಕಷ್ಟಗಳನ್ನು ಎದುರಿಸುತ್ತಲೇ ಇರುತ್ತಾರೆ. ಒಮ್ಮೆ ಅತಿವೃಷ್ಟಿಯಾದರೆ, ಇನ್ನೊಮ್ಮೆ ಅನಾವೃಷ್ಟಿ.

ಸಾಲಸೋಲ ಮಾಡಿ ಬೆಳೆದ ಬೆಳೆ ಹಾನಿಗೀಡಾದರೆ ರೈತ ತನ್ನ ಜೀವನೋಪಾಯಕ್ಕೆ ಏನು ಮಾಡಬೇಕು? ಹೀಗಾಗಿಯೇ ಸರ್ಕಾರ ರೈತರ ಸಂಕಷ್ಟದ ಸಮಯದಲ್ಲಿ ನೆರವಾಗಲು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೊಳಿಸಿದೆ.

ಆದರೆ ಅದರ ಫಲಶೃತಿ ರೈತರನ್ನು ತಲುಪುವ ಪ್ರಕ್ರಿಯೆ ವಿಳಂಬವಾಗುತ್ತಿದೆ.

ಹಾಗಾದರೆ ಬೆಳೆ ವಿಮೆಯ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ :-

How to Check crop insurance status:-

ಬೆಳೆ ವಿಮೆಯ “ಅರ್ಜಿಯ ಸ್ಥಿತಿ”ಯನ್ನು ಪಡೆಯಲು ಈ ಕೆಳಗೆ ನೀಡಿರುವ ಮಾಹಿತಿಯನ್ನು ಅನುಸರಿಸಬೇಕು.

Step 1 : ಮೊದಲಿಗೆ ಬೆಳೆ ವಿಮೆಗೆ ಸಂಬಂಧಪಟ್ಟಂತಹ “ವೆಬ್ಸೈಟ್ ಅಥವಾ ಜಾಲತಾಣದ ಲಿಂಕ್” ಅನ್ನು ಕೆಳಗೆ ನೀಡಿದೆ.

https://www.samrakshane.karnataka.gov.in/
Click above link to get crop insurance application status.

Step 2 : ನಂತರ ಮೇಲೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡಿದಾಗ, “ಸಂರಕ್ಷಣೆ” ಜಾಲತಾಣದ ಪುಟ ತೆರೆದುಕೊಳ್ಳುತ್ತದೆ.

Select Go

Select Go

Step 3 : ಮೊದಲಿಗೆ ಜಾಲತಾಣ ಪುಟದಲ್ಲಿ ಕಾಣುವ ಬೆಳೆ ವಿಮೆ ಪಡೆಯಲು ಇಚ್ಚಿಸುವ ವರ್ಷ ಅಂದರೆ “2025 -26” ವರ್ಷ ಹಾಗೂ ಬೆಳೆಯು “ಖಾರಿಫ್” ಅಥವಾ “ರಾಬಿ” ಬೆಳೆ ಎಂಬುದನ್ನು ನಮೂದಿಸಬೇಕು.

* ನಮೂದಿಸಿದ ಮೇಲೆ ಮುಂದೆ ಎನ್ನುವ ಟ್ಯಾಬ್ ಮೇಲೆ ಕ್ಲಿಕ್ ಮಾಡಬೇಕು.

Click Check Status

Click Check Status

Step 4 : ನಂತರ ಈ ಪುಟದಲ್ಲಿ “ಫಾರ್ಮರ್ಸ್” ಎನ್ನುವ ಟ್ಯಾಬ್ ನಲ್ಲಿ “ಚೆಕ್ ಸ್ಟೇಟಸ್” ಎನ್ನುವ ಆಯ್ಕೆಯು ಮೂರನೇ ಸ್ಥಾನದಲ್ಲಿರುತ್ತದೆ, ಅದನ್ನು ಒತ್ತಿದಾಗ ನಮ್ಮನ್ನು ಮತ್ತೊಂದು ಪುಟಕ್ಕೆ ಕರೆದೊಯ್ಯುತ್ತದೆ.

Select Proposal

Select Proposal

Step 5 : ಇಲ್ಲಿ “ಬೆಳೆ ವಿಮೆಯ ವರ್ಷ 2025-26” ಎಂದು ನಮೂದಿಸಿ,

* ನಂತರ ಸ್ಟೇಟಸ್ ಚೆಕ್ ಮಾಡುವ ವಿಧಾನದಲ್ಲಿ “ರೈತರು ಪ್ರೊಪೋಸಲ್ ನಂಬರ್ ಅಥವಾ ಮೊಬೈಲ್ ನಂಬರ್” ಮುಖಾಂತರ ಸ್ಟೇಟಸ್ ಚೆಕ್ ಮಾಡಬಹುದು.

* ಪ್ರಪೋಸಲ್ ನಂಬರ್ ಎಂದರೆ ನಿಮಗೆ ಅರ್ಜಿ ಸಲ್ಲಿಸುವ ಸಮಯದಲ್ಲಿ ತಮಗೆ ದೊರಕಿರುವ “ಅಪ್ಲಿಕೇಶನ್ ನಂಬರ” ನ್ನು ಪ್ರೊಪೋಸಲ್ ನಂಬರ್ ಎನ್ನುತ್ತಾರೆ.

ನಂತರ ಕೆಳಗೆ ಕಾಣುವ ಕ್ಯಾಪ್ಚಾ ಅನ್ನು ಸರಿಯಾಗಿ ನಮೂದಿಸಿ ಹುಡುಕಲು ತಿಳಿಸಬೇಕು.
Verify Farmer Details

Verify Farmer Details

Step 6 : ಹುಡುಕಲು ತಿಳಿಸಿದ ನಂತರ ಅದೇ ಪುಟದ ಕೆಳಭಾಗದಲ್ಲಿ ಫಲಾನುಭವಿಗಳ ಬೆಳೆ ವಿಮೆಯ ಅರ್ಜಿ ಸ್ಥಿತಿಯನ್ನು ತಿಳಿಯಬಹುದು. ಒಂದು ವೇಳೆ ಹಣ ಜಮವಾಗಿದ್ದರೆ “ಯಾವ ಅಕೌಂಟ್ ಸಂಖ್ಯೆಗೆ ಹಣ ಜಮಾವಾಗಿದೆ ಮತ್ತು ಎಷ್ಟು ಹಣ ಜಮಾವಾಗಿದೆ ಹಾಗೂ ಬ್ಯಾಂಕ್ ಮ್ಯಾನೇಜರ್ ಇಂದ ಅನುಮೋದಿಸಿ ಪರಿಶೀಲಿಸಲಾಗಿದೆ ಎಂದು ತಿಳಿಸಿರುತ್ತಾರೆ.

Application Status

Application Status

ಅಲ್ಲದೆ, ಯಾವ ಬ್ಯಾಂಕಿನಲ್ಲಿ ಯಾವ ಯಾವ ಸಮಯಕ್ಕೆ ಹಣ ಜಮಾ ಆಗಿದೆ ಮತ್ತು ಇತರೆ ಮಾಹಿತಿಗಳ ಬಗ್ಗೆ ಕರಾರುವಕ್ಕಾಗಿ ಸಮಯ ಸಮೇತ ತಿಳಿದುಕೊಳ್ಳಬಹುದು.

ಒಂದು ವೇಳೆ ಹಣ ಜಮಾ ಆಗದೇ ಇದ್ದಲ್ಲಿ, “ನೋ ಡಾಟಾ ಫೌಂಡ್” ಎಂದು ತೋರಿಸುತ್ತದೆ. ಇದರ ಅರ್ಥ ಹಣ ಜಮಾವಣೆ ಪ್ರಕ್ರಿಯೆಯು ಇನ್ನೂ ಪೂರ್ಣವಾಗಿಲ್ಲ ಎಂದು ತಿಳಿಯಬಹುದು.

ಈಗಾಗಲೇ ದಾವಣಗೆರೆ ಹಾಗೂ ಸುತ್ತಮುತ್ತಲಿನ ಜಿಲ್ಲೆಯಲ್ಲಿ ಅಡಿಕೆ ಮತ್ತು ಇತರೆ ಬೆಳೆಗಳನ್ನು ಬೆಳೆಯುತ್ತಿರುವ ರೈತರಿಗೆ ಯಶಸ್ವಿಯಾಗಿ ಬೆಳೆ ವಿಮೆ ಹಣವು ಜಮಾ ಆಗಿದೆ.

ಆದರೆ ಇನ್ನೂ ಕೆಲವು ಜಿಲ್ಲೆಗಳಲ್ಲಿ ಯಾವುದೇ ಹಣ ಜಮಾ ಆಗಿರುವುದಿಲ್ಲ, ಅಂದರೆ ಹಣ ಜಮಾವಣೆಯು ಹಂತ ಹಂತವಾಗಿ ನಡೆಯುತ್ತಿದ್ದು ವಿಮಾ ಹಣ ದೊರೆಯದ ರೈತರು ಆತಂಕ ಪಡುವ ಅಗತ್ಯವಿಲ್ಲ.

ಹಂತ ಹಂತವಾಗಿ ಹಣ ಜಮಾ ಆಗುತ್ತಿದ್ದು ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಇನ್ನು ಕೆಲವೇ ದಿನಗಳಲ್ಲಿ ಪೂರ್ತಿ ವಿಮಾ ಹಣ ಜಮಾ ಆಗಲಿದೆ.

ಹಾಗಾಗಿ ಸರ್ಕಾರ ನೀಡುತ್ತಿರುವ ಬೆಳೆ ವಿಮೆಯು ರೈತರಿಗೆ ಬಹಳಷ್ಟು ಉಪಯೋಗಕಾರಿಯಾಗಿದ್ದು ರೈತರು ಬೆಳೆ ನಷ್ಟದಿಂದ ತಪ್ಪಿಸಿಕೊಳ್ಳಲು ಹಾಗೂ ಆರ್ಥಿಕ ಸಂಕಷ್ಟದಿಂದ ಹೊರಬರಲು ಸಹಾಯಕವಾಗಿದೆ.

Crop insurance is great initiative which give financial support to farmers whose crop is damaged from natural Calmaties like flood, draught and pest diseases PM FASAL BHIMA YOJANA is one of the best example for crop insurance by government of India.

when beneficiaries apply for crop insurance it is very important to take a regular status check on website about the updates that we can easily get to know whether amount is credited or not to beneficiaries bank account. therefore its very important to take a look on crop insurance application status on time to time.

Thank you.

ಧನ್ಯವಾದಗಳು

<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ : ಇಂದಿನ ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು.

ಹೊಸ ಅಡಿಕೆ, ಹಳೆಯ ಅಡಿಕೆ ರಾಶಿ ಇಪ್ಪಿ ​​ಬೆಟ್ಟಿ ಕೆಂಪುಗೋಟು ಚಿಪ್ಪು,ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ.

ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ. 

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸರ ಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"