Free Gas Cylinder :: ಮಹಿಳೆಯರಿಗೆ ಉಚಿತ ಗ್ಯಾಸ್ ಸಿಲೆಂಡರ್!! ಕೂಡಲೇ ಅರ್ಜಿ ಸಲ್ಲಿಸಿ!!
ಉಜ್ವಲ ಯೋಜನೆಯ ಹೊಸ ಗ್ಯಾಸ್ ಕನೆಕ್ಷನ್ ಉಚಿತ:: ಮಹಿಳೆಯರೇ!! ಮನೆಯಲ್ಲಿಯೇ ಕುಳಿತು ಹೊಸ ಗ್ಯಾಸ್ ಕನೆಕ್ಷನ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಲು ಈ ಕೆಲಸ ಈಗಲೇ ಮಾಡಿ!!!!
Pradhan Mantri Ujjwala Yojana (PMUY) is a welfare scheme of the Government of India, launched in 2016, to provide free LPG (cooking gas) connections to women from poor households, especially in rural and disadvantaged areas. now it call new applications for 2026 from women who wish to get free lpg connection.
2026 ನೇ ಸಾಲಿನಲ್ಲಿ ಹೊಸ LPG ಗ್ಯಾಸ್ ಕನೆಕ್ಷನ್ ಬಯಸುವ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ, ಪ್ರಧಾನ ಮಂತ್ರಿ ಉಜ್ವಲ ಯೋಜನೆಯು ಭಾರತ ಸರ್ಕಾರದ ಒಂದು ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು,
ಹಳ್ಳಿ ಹಾಗೂ ಹಳ್ಳಿ ಮಹಿಳೆಯರು ಸಾಂಪ್ರದಾಯಿಕ ಇಂಧನಗಳಾದ ಮರ, ಕಲ್ಲಿದ್ದಲು, ಗೋಮಯ ಬಳಕೆಯನ್ನು ಕಡಿಮೆ ಮಾಡಿ, ಮಾಲಿನ್ಯ ರಹಿತ LPG ಗ್ಯಾಸ್ ಸಿಲಿಂಡರನ್ನು ಅಡುಗೆಗೆ ಬಳಸುವುದನ್ನು ಪ್ರೋತ್ಸಾಹಿಸುವ ಒಂದು ಕಾರ್ಯಕ್ರಮವಾಗಿದೆ.
ಈಗಾಗಲೇ ಈ ಒಂದು ಯೋಜನೆಯಿಂದ ಕೋಟ್ಯಾಂತರ ಮಹಿಳೆಯರು ಇದರ ಸದುಪಯೋಗ ಪಡೆದಿದ್ದು ಇನ್ನು ಹೆಚ್ಚಿನ ಮಹಿಳೆಯರನ್ನು ತಲುಪುವ ಉದ್ದೇಶದಿಂದ 2026 ನೇ ಸಾಲಿನ ಅರ್ಜಿ ಆಹ್ವಾನವನ್ನು ಕೇಂದ್ರ ಸರ್ಕಾರ ಪ್ರಾರಂಭಿಸಿದೆ.
ಅಲ್ಲದೆ ಅರ್ಜಿ ಸಲ್ಲಿಸುವ ವಿಧಾನ ತುಂಬ ಸರಳವಾಗಿದ್ದು ಮನೆಯಲ್ಲಿಯೇ ಕುಳಿತು ಅರ್ಜಿಯನ್ನು ಸಲ್ಲಿಸಬಹುದು.
ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು? :-
who eligible for apply PRADHANMANTRI UJJWAL YPJANA(PMUY) ? :-
ಬಡತನ ರೇಖೆಗಿಂತ ಕೆಳಗಿನ (BPL) ಕುಟುಂಬಗಳು.
ಸಾಮಾಜಿಕ ಆರ್ಥಿಕ ಹಾಗೂ ಜಾತಿಗಣತಿಯ (SECC) ಪಟ್ಟಿಯಲ್ಲಿರುವ ಕುಟುಂಬಗಳು.
SC/ST, ಅರಣ್ಯವಾಸಿಗಳು ಮತ್ತು ಗ್ರಾಮೀಣ ಬಡ ಕುಟುಂಬಗಳು.
ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು ಯಾವ್ಯಾವು? :-
which documents need to apply? :-
ಮಹಿಳೆಯ ಆಧಾರ್ ಕಾರ್ಡ್
ರೇಷನ್ ಕಾರ್ಡ್
ಬ್ಯಾಂಕ್ ಖಾತೆ (ಆಧಾರ್ ಲಿಂಕ್ ಆಗಿರಬೇಕು)
ವಿಳಾಸ ಪ್ರಮಾಣಪತ್ರ
ಡಿಪ್ರವೇಶನ್ ಹಾಗೂ ಡಿಕ್ಲರೇಷನ್ ಪ್ರತಿ
ಅರ್ಜಿ ಸಲ್ಲಿಸುವುದು ಹೇಗೆ? :-
How to apply for PMUY? :-

Step 1 : ಮೊದಲಿಗೆ ಈ ಕೆಳಗೆ ಕೊಟ್ಟಿರುವ ಲಿಂಕ್ ಬಳಸಿ ಜಾಲತಾಣದ ಮುಖಪುಟವನ್ನು ತಲುಪಬೇಕು.
https://www.pmuy.gov.in/index.aspx
Click above link to reach main web page.

Step 2: ಜಾಲತಾಣದ ಮುಖಪುಟ ತೆಗೆದುಕೊಂಡ ನಂತರ ಸ್ಕ್ರಾಲ್ ಮಾಡುತ್ತಾ ಕೆಳಗೆ ಹೋದರೆ ಅಲ್ಲಿ “ಕ್ಲಿಕ್ ಫಾರ್ ನ್ಯೂ ಗ್ಯಾಸ್ ಕನೆಕ್ಷನ್” ಎನ್ನುವ ಆಯ್ಕೆ ಕಾಣುತ್ತದೆ, ಅದನ್ನು ಆಯ್ಕೆ ಮಾಡಿಕೊಳ್ಳಬೇಕು.

Step 3: ಇಲ್ಲಿ ಮೂರು ರೀತಿಯ “ಗ್ಯಾಸ್ ಕನೆಕ್ಷನ್ ಏಜೆನ್ಸಿ ಗಳಾದ ಇಂಡಿಯನ್, ಭಾರತ್ ಹಾಗೂ ಎಚ್ ಪಿ ಗ್ಯಾಸ್ ಏಜೆನ್ಸಿ” ಗಳಲ್ಲಿ ಒಂದು ಏಜೆನ್ಸಿಯನ್ನು ಆಯ್ಕೆ ಮಾಡಿಕೊಳ್ಳಬೇಕು.

Step 4: ನಂತರ “ಗೆಟ್ ನ್ಯೂ ಕನೆಕ್ಷನ್” ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿದಾಗ, “ಟೈಪ್ ಆಫ್ ಕನೆಕ್ಷನ್” ಎನ್ನುವ ಆಯ್ಕೆ ಕಾಣಿಸುತ್ತದೆ, ಅಲ್ಲಿ “ಉಜ್ವಲ 3.O ನ್ಯೂ ಕನೆಕ್ಷನ್” ಎನ್ನುವ ಆಯ್ಕೆಯನ್ನು ಆಯ್ಕೆ ಮಾಡಬೇಕು.
ನಂತರ “ರಾಜ್ಯ”ವನ್ನು ಅಂದರೆ ಕರ್ನಾಟಕ ಎಂದು ಆಯ್ಕೆ ಮಾಡಿಕೊಳ್ಳಬೇಕು.
ನಂತರ “ಜಿಲ್ಲೆ”ಯನ್ನು ಆಯ್ಕೆ ಮಾಡಿಕೊಳ್ಳಬೇಕು

Step 5: ಜಿಲ್ಲೆ ಆಯ್ಕೆಯ ನಂತರ “ಷೋ ಲಿಸ್ಟ್” ಎಂದು ಕೊಟ್ಟಾಗ ಆ ಜಿಲ್ಲೆಯಲ್ಲಿರುವ “ಗ್ಯಾಸ್ ಏಜೆನ್ಸಿಗಳ ಡಿಸ್ಟ್ರಿಬ್ಯೂಟರ್” ಗಳ “ವಿಳಾಸ ಹಾಗೂ ಫೋನ್ ನಂಬರ್” ಸಹಿತ ಮಾಹಿತಿ ಬರುತ್ತದೆ.
ಆಗ ಅರ್ಜಿದಾರರು ತಮಗೆ “ಹತ್ತಿರವಿರುವ ಗ್ಯಾಸ್ ಏಜೆನ್ಸಿಯ ಡಿಸ್ಟ್ರಿಬ್ಯೂಟರ್” ಅನ್ನು ಆಯ್ಕೆ ಮಾಡಿ “ಕಂಟಿನ್ಯೂ” ಎಂದು ಕೊಡಬೇಕು.

Step 6: ನಂತರ ಕಾಣಿಸುವ ಟ್ಯಾಬ್ ನಲ್ಲಿ ಅರ್ಜಿದಾರರು ತಮ್ಮ ಆಧಾರ್ ಮತ್ತು ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ “ಮೊಬೈಲ್ ನಂಬರ”ನ್ನು ನೀಡಿ ಕ್ಯಾಪ್ಚಾವನ್ನು ಸರಿಯಾಗಿ ನಮೂದಿಸಬೇಕು.

Step7: ಮೊಬೈಲ್ ನಂಬರನ್ನು ನೀಡಿದ ನಂತರ “ಜನರೇಟ್ ಓಟಿಪಿ” ಎನ್ನುವ ಆಯ್ಕೆ ಕಾಣಿಸುತ್ತದೆ. * ಆ ಆಯ್ಕೆಯನ್ನು ಕ್ಲಿಕ್ ಮಾಡಿದಾಗ ಓಟಿಪಿ ಬರುತ್ತದೆ, ಆ “ಒಟಿಪಿಯನ್ನು ನಮೂದಿಸಿ” ಸಬ್ಮಿಟ್ ಕೊಡಬೇಕು.

Step 8: ಇಲ್ಲಿ “new e- KYC” ಎನ್ನುವ ಆಕೆಯಲ್ಲಿ “yes” ಎಂದು ನಮೂದಿಸಬೇಕು.

Step 9: * ಮೊದಲಿಗೆ “consumer migrate family” ಎನ್ನುವ ಆಯ್ಕೆಗೆ “no” ಎಂದು ನಮೂದಿಸಿ.
ನಂತರ “ಫ್ಯಾಮಿಲಿ ಐಡೆಂಟಿಫೈಯರ್”ಗೆ “ರೇಷನ್ ಕಾರ್ಡ್” ಎಂದು ಕೊಟ್ಟು, ಕೆಳಗಿನ ಟಾಪ್ ನಲ್ಲಿ “ರೇಷನ್ ಕಾರ್ಡ್ ನಂಬರ”ನ್ನು ನಮೂದಿಸಬೇಕು.
ನಂತರ ಅರ್ಜಿದಾರರು “ತಮ್ಮ ರಾಜ್ಯ”ವನ್ನು ಆಯ್ಕೆ ಮಾಡಿ ಕ್ಲಿಕ್ಕಿಸಬೇಕು.
ನಂತರ ಟೈಪ್ ಆಫ್ ಸ್ಕೀಮ್ ಎನ್ನುವ ಆಯ್ಕೆ ಬರುತ್ತದೆ, ಇಲ್ಲಿ ಅರ್ಜಿದಾರರು ಅರ್ಜಿದಾರರು SC/ST/OBC ಅಡಿಯಲ್ಲಿ ಯೋಜನೆಯ ಫಲವನ್ನು ಪಡೆಯಲು ಬಯಸುತ್ತಿದ್ದಾರೆ ಎಂದು ನಮೂದಿಸಬೇಕು.

Step 10: ನಂತರ ಒಂದು “ಹೊಸ e- KYC ಫಾರ್ಮ್” ತೆರೆದುಕೊಳ್ಳುತ್ತದೆ.
ಇಲ್ಲಿ ಅರ್ಜಿದಾರರನ್ನು ಹೊರತುಪಡಿಸಿ 18 ವರ್ಷಕ್ಕಿಂತ ಮೇಲ್ಪಟ್ಟ “ಮನೆಯ ಸದಸ್ಯರು” ಎಷ್ಟಿದ್ದಾರೆಂದು ನಮೂದಿಸಬೇಕು.
ನಂತರ ಅರ್ಜಿದಾರರು ನಮೂದಿಸಿದ ಸಂಖ್ಯೆಯ “ಸದಸ್ಯರ ಮಾಹಿತಿ”ಯನ್ನು ನಮೂದಿಸಬೇಕು.

Step11 : ನಂತರ ಅರ್ಜಿದಾರರ ವೈಯಕ್ತಿಕ ವಿವರಗಳನ್ನು ನಮೂದಿಸಬೇಕು.

Step 12 : ನಂತರ ಇಲ್ಲಿ proof of address (POA) ಅನ್ನು ತುಂಬಬೇಕು,
ಇಲ್ಲಿ ಅರ್ಜಿದಾರರು ನೀಡುತ್ತಿರುವ ಗುರುತಿನ ಚೀಟಿ ಹಾಗೂ ಅರ್ಜಿದಾರರ ವಿಳಾಸವನ್ನು ನೀಡಬೇಕಾಗುತ್ತದೆ.

Step 13 : ನಂತರ ಇಲ್ಲಿ ಅರ್ಜಿದಾರರು ತಮ್ಮ ಬ್ಯಾಂಕ್ ವಿವರಗಳನ್ನು ನೀಡಬೇಕು.
ನಂತರ ಕೆಳಗೆ ಪ್ಯಾಕೇಜ್ ಸೆಲೆಕ್ಷನ್ ಅಲ್ಲಿ ಸಿಲಿಂಡರ್ ನ ಗಾತ್ರ 14.2 kg ಯನ್ನು ಸೆಲೆಕ್ಟ್ ಮಾಡಬೇಕು.
ನಂತರ ಕೆಳಗಡೆ ಅರ್ಜಿದಾರರು ರೂರಲ್ ಅಥವಾ ಅರ್ಬನ್ ಇಂದು ನಮೂದಿಸಬೇಕು.
ನಂತರ ಕೊನೆಗೆ ಸಬ್ಮಿಟ್ ಎಂದು ಕೊಟ್ಟರೆ ಯಶಸ್ವಿಯಾಗಿ ಉಜ್ವಲ 3.O ಯೋಜನೆಯ ಅರ್ಜಿ ಸಲ್ಲಿಕೆಯಾಗಿದೆ ಎಂದರ್ಥ.

Step 14: ಇಲ್ಲಿ ಗ್ರಾಹಕರಿಗೆ ಒಂದು “ರಿಕ್ವೆಸ್ಟ್ ಐಡಿ ಜನರೇಟ್” ಆಗುತ್ತದೆ
ನಂತರ “ಕ್ಲಿಕ್ ಹಿಯರ್ ಟು ಅಪ್ಲೋಡ್ ಡಾಕ್ಯುಮೆಂಟ್ಸ್” ಅನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿದಾಗ, ಅರ್ಜಿದಾರರ “ಡಾಕ್ಯುಮೆಂಟ್ ಅಪ್ಲೋಡ್” ಮಾಡುವ ಮುಖಪುಟ ತೆರೆದುಕೊಳ್ಳುತ್ತದೆ.
ಇಲ್ಲಿ ಅರ್ಜಿದಾರರು ತಮ್ಮ ದಾಖಲೆಗಳಾದ. *ರೇಷನ್ ಕಾರ್ಡ್
ಆಧಾರ್ ಕಾರ್ಡ್
ಡೆಪ್ರವೇಶನ್ ಹಾಗೂ ಡಿಕ್ಲೆರೇಷನ್ ಪ್ರತಿ
ಮನೆಯ ಸದಸ್ಯರ ಆಧಾರ್ ಪ್ರತಿಯನ್ನು ಅಪ್ಲೋಡ್ ಮಾಡಬೇಕು.
ನಂತರ “ಸಬ್ಮಿಟ್” ಮಾಡಬೇಕಾಗುತ್ತದೆ.
ಈ ರೀತಿಯಾಗಿ ಹಂತ ಹಂತವಾಗಿ ಉಜ್ವಲ 3.O ಯೋಜನೆಗೆ ಮಹಿಳೆಯರು ಸುಲಭವಾಗಿ ಅರ್ಜಿ ಸಲ್ಲಿಸಬಹುದು.
ಈ ಇಷ್ಟು ಪ್ರಕ್ರಿಯೆ ನಡೆದ ನಂತರ ಸ್ವಲ್ಪ ದಿನಗಳಲ್ಲಿಯೇ ನೀವು ಸಲ್ಲಿಸಿದ ಏಜೆನ್ಸಿಯ ಡಿಸ್ಟ್ರಿಬ್ಯೂಟರ್ ಗಳ ಕಡೆಯಿಂದ ನೀಡಿದ ಮೊಬೈಲ್ ಸಂಖ್ಯೆಗೆ ಕರೆ ಬರುತ್ತದೆ
ನಂತರ ಮಹಿಳೆಯರು ಉಚಿತವಾಗಿ ಗ್ಯಾಸ್ ಕನೆಕ್ಷನ್ನು ಪಡೆದುಕೊಳ್ಳಬಹುದು.ಹೀಗಾಗಿ ಪ್ರಧಾನಮಂತ್ರಿ ಉಜ್ಜ್ವಲಾ ಯೋಜನೆ ಗ್ರಾಮೀಣ ಹಾಗೂ ಬಡ ಕುಟುಂಬಗಳಲ್ಲಿ ಸ್ವಚ್ಛ ಅಡುಗೆ ಸಂಸ್ಕೃತಿಗೆ ಮಹತ್ವದ ಕೊಡುಗೆ ನೀಡುತ್ತಿದೆ.
ಅಲ್ಲದೆ ಇದು ಮಹಿಳೆಯರ ಆರೋಗ್ಯ ಮತ್ತು ಸಬಲೀಕರಣದತ್ತ ತೆಗೆದುಕೊಳ್ಳಲಾದ ಪ್ರಮುಖ ಹೆಜ್ಜೆಯಾಗಿದೆ ಎನ್ನಬಹುದು.
PMUY has significantly improved rural living conditions by encouraging the use of clean cooking fuel, contributing to better health and women’s empowerment.
which encourage the women to prepare the food with zero pollution and give subsidy amount to refill of cylinder and one free extra cylinder which regularly promote women to continue with PMUY Scheme without Discontinuity due to shortage of amount.
Thank you.
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸರ ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.
