Arecanut :: ಅಡಿಕೆಗೆ ಗೊಬ್ಬರ ನೀಡಿದರು ಏಕೆ ಇಳುವರಿ ಸಿಗುತ್ತಿಲ್ಲ? ಇದಕ್ಕೆ ಪರಿಹಾರವೇನು?
Arecanut is popularly known as “adike” in kannada , it is one of the important commercial plantation crop of india,
but Karnataka is the largest producer of arecanut growing state In india.
ಅಡಿಕೆ ನಮ್ಮ ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಅತಿ ಪ್ರಮುಖವಾದ ಬೆಳೆಯಾಗಿದೆ ಹಾಗಾಗಿ ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗದ ಕೆಲವು ಭಾಗಗಳಲ್ಲಿ ಅಡಿಕೆಯನ್ನು ಅತಿ ಹೆಚ್ಚಾಗಿ ಬೆಳೆಯಲಾಗುತ್ತದೆ.
ಅಡಿಕೆ ಬೆಳಯಲ್ಲಿ ರೈತರು ಎದುರಿಸುತ್ತಿರುವ ಸವಾಲುಗಳು:-
Problem faced by Arecanut Farmer?
• ಅಧಿಕ ಇಳುವರಿ ಇಲ್ಲದೆ ಇರುವುದು
• ಸರಿಯಾದ ಗೊಬ್ಬರಗಳನ್ನು ಬೆಳೆಗೆ ನೀಡುವ ಬಗ್ಗೆ ಸರಿಯಾದ ಮಾಹಿತಿಯ ಕೊರತೆ ಇರಬಹುದು
• ಅತಿಯಾದ ನೀರಿನ ಬಳಕೆ
• ಸಾಂಪ್ರದಾಯಿಕ ಪದ್ದತಿಗಳಿಗೆ ರೂಢಿಯಾಗಿ ತಂತ್ರಜ್ಞಾನದ ವೈಜ್ಞಾನಿಕ ಅನ್ವೇಷಣೆಗಳ ಬಗ್ಗೆ ಮಾಹಿತಿ ಕೊರತೆ ಇರಬಹುದು

Arecanut bunch with good yield
ರೈತರ ಸಮಸ್ಯೆಗಳಿಗೆ ಕೆಲವು ಸರಳ ಪರಿಹಾರಗಳು:-
Solution for Arecanut farmer’s:-
ಅಧಿಕ ಇಳುವರಿ ಪಡೆಯಲು ಸರಿಯಾದ ಗೊಬ್ಬರಗಳನ್ನು ನೀಡುವುದು:
ಅಡಿಕೆ ಬೆಳೆಯು ಏಕದಳ ಸಸ್ಯವಾಗಿದ್ದು ಈ ಸಸ್ಯದ ಬೇರಿನ ರಚನೆಯು ತಂತುಬೇರಿನ ಮಾದರಿಯಲ್ಲಿ ಇರುತ್ತದೆ, ತಂತು ಬೇರು ಎಂದರೆ ಬೇರು ಯಾವುದೇ ಮುಖ್ಯ ಬೇರನ್ನು ಹೊಂದದೆ ಒಂದೇ ರೀತಿಯ ಹಲವು ಬೇರುಗಳನ್ನು ಗೊಂಚಲಿನ ಮಾದರಿಯಲ್ಲಿ ಇರುತ್ತದೆ
ಅಲ್ಲದೆ ಗಿಡ ಬೆಳೆದಂತೆಲ್ಲಾ ಬೇರುಗಳು ದೂರ ಸಾಗುತ್ತಾ ಹೋಗುವುದರಿಂದ ಸರಿಯಾದ ರೀತಿಯಲ್ಲಿ ಗೊಬ್ಬರಗಳನ್ನು ನೀಡುವುದು ಅತ್ಯಗತ್ಯ, ಆದ್ದರಿಂದ ಹತ್ತು ವರ್ಷ ಮೇಲ್ಪಟ್ಟ ಗಿಡಗಳಿಗೆ ಗೊಬ್ಬರವನ್ನು ಗಿಡದ ಬುಡದಿಂದ ಎರಡು ಅಡಿ ದೂರದಲ್ಲಿ ಗೊಬ್ಬರವನ್ನು ಗಿಡಸುತ್ತಾ ಹಾಕಬೇಕು
ಅಡಿಕೆ ಸಸ್ಯದ ಬೇರಿನ ರಚನೆ:-
Root system of Arecanut:-
ಸಾಮನ್ಯವಾಗಿ ಅಡಿಕೆ ಗಿಡಗಳಲ್ಲಿ ಮೂರು ರೀತಿಯ ಬೇರುಗಳನ್ನು ಕಾಣಬಹುದು.
1. ಸಹಾಯಕ ಬೇರು
2. ಆಹಾರ ಪೂರೈಕೆ ಬೇರು
3. ಎರಿಯಲ್ ಬೇರು
ಸಹಾಯಕ ಬೇರುಗಳು ಗಿಡ ಭದ್ರವಾಗಿ ನಿಲ್ಲಲು ಸಹಾಯ ಮಾಡುತ್ತವೆ ಹಾಗೆಯೇ ಆಹಾರ ಪೂರೈಕೆಯ ಬೇರುಗಳು ನೀಡುತ್ತಿರುವ ಗೊಬ್ಬರದಿಂದ ಪೋಷಕಾಂಶಗಳನ್ನು ಹೀರಿ ಗಿಡದ ಇತರ ಭಾಗಗಳಿಗೆ ವರ್ಗಾಯಿಸುತ್ತದೆ.
5 ವರ್ಷದ ಸಸ್ಯಗಳಲ್ಲಿ 1 ಅಡಿ ಯಂತೆ ಅಂತರದಲ್ಲಿ ಆಹಾರ ಪೂರೈಕೆ ಬೇರುಗಳು ಕಂಡುಬರುವುದರಿಂದ ಗಿಡದ ಬುಡದಿಂದ ಒಂದು ಅಡಿ ಅಂತರದಲ್ಲಿ ಗೊಬ್ಬರವನ್ನು ನೀಡಬೇಕು 15 ವರ್ಷಗಳ ಅಡಿಕೆ ಸಸ್ಯಗಳ ಬೇರುಗಳು 2 ಅಡಿ ಅಂತರದಲ್ಲಿ ಕಂಡುಬರುವುದರಿಂದ ಗಿಡದ ಬುಡದಿಂದ ಎರಡು ಅಡಿ ಅಂತರದಲ್ಲಿ ಗೊಬ್ಬರವನ್ನು ನೀಡಬೇಕು.
ಈ ಬೇರುಗಳು ಸಾಮಾನ್ಯವಾಗಿ ವೃತ್ತಾಕಾರದಲ್ಲಿ ಇರುವುದರಿಂದ ರೈತರಲ್ಲಿ ಗೊಂದಲ ಉಂಟಾಗಬಹುದು ಗೊಬ್ಬರವನ್ನು ಗಿಡದ ಸುತ್ತಲೂ ನೀಡಬೇಕೇ ಅಥವಾ ಎರಡು ಕಡೆ ನೀಡಿದರೆ ಸಾಕೇ ಎಂಬ ಅನುಮಾನಗಳು ಬರಬಹುದು,
ಗೊಬ್ಬರವನ್ನು ಸುತ್ತಲೂ ನೀಡುವುದಾದರೆ ಗುಣಿಸುತ್ತುಗಳನ್ನು ಮಾಡಬೇಕಾಗುತ್ತದೆ ಇದರಿಂದ ಸಾಕಷ್ಟು ಹಣ ಖರ್ಚಾಗಬಹುದು ಆದರೆ ಗೊಬ್ಬರ ನೀಡುವಿಕೆಯನ್ನು ನೀರು ನೀಡುವ ಜಾಗದಲ್ಲಿ ನೀಡಬೇಕು.ಹಿಂಗಾರಿನಲ್ಲಿ ಒಂದು ಬದಿಗೆ ನೀಡಿದರೆ,
ಮುಂಗಾರಿನಲ್ಲಿ ಮತ್ತೊಂದು ಬದಿಯಲ್ಲಿ ನೀಡುತ್ತಾ ಹೋದರೆ ಮಿತವ್ಯಯವೂ ಆಗುತ್ತದೆ ಮತ್ತು ಸಮಯದ ಉಳಿತಾಯವೂ ಆಗುತ್ತೆ ಜೊತೆಗೆ ಪೋಷಕಾಂಶಗಳನ್ನು ಸರಿಯಾದ ಪ್ರಮಾಣದಲ್ಲಿ ನೀಡುವುದರಿಂದ ಬೇರುಗಳ ಬೆಳವಣಿಗೆಯು ಉತ್ತಮವಾಗಿದೆ.
ಪೋಷಕಾಂಶಗಳನ್ನು ಸಾವಯವ ಗೊಬ್ಬರಗಳು ಅಥವಾ ರಸಾಯನಿಕ ಗೊಬ್ಬರಗಳ ಮೂಲಕ ನೀಡಬಹುದು ಆದರೆ ಯಾವುದೇ ಗೊಬ್ಬರವನ್ನು ನೀಡಿದರು ಸಾವಯವ ಗೊಬ್ಬರವನ್ನು ಬಳಸುವುದು ಅತ್ಯಗತ್ಯ ಇದರಿಂದ ಭೂಮಿಯ ಫಲವತ್ತತೆ ತಿಳಿಯುತ್ತದೆ
ಪೋಷಕಾಂಶಗಳ ನಿರ್ವಹಣೆ:-
Fertilizer management:-
ಅಡಿಕೆ ಬೆಳೆಯಲ್ಲಿ ಎಲ್ಲಾ 16 ಪೋಷಕಾಂಶಗಳು ಇಳುವರಿ ಹೆಚ್ಚಿಸಲು ಅತ್ಯಗತ್ಯ ಆದರೆ ಸಾಮಾನ್ಯವಾಗಿ ತಜ್ಞರು ನೀಡುವ ಶಿಫಾರಸ್ಸು ಎಂದರೆ “100 ಗ್ರಾಂ ಸಾರಜನಕ 40 ಗ್ರಾಂ ರಂಜಕ ಹಾಗೂ 140 ಗ್ರಾಂ ಪೊಟ್ಯಾಷ್” ಈ ಪೋಷಕಾಂಶಗಳನ್ನು ನೀಡಬೇಕು.
ಅಲ್ಲದೆ, ಪ್ರತಿ ಎರಡು ವರ್ಷಕ್ಕೊಮ್ಮೆ ಕೊಟ್ಟಿಗೆ ಗೊಬ್ಬರ ಅಥವಾ ಎರೆಹುಳುವಿನ ಗೊಬ್ಬರ ಅಥವಾ ಕುರಿ ಗೊಬ್ಬರ ಅಥವಾ ಕೋಳಿ ಗೊಬ್ಬರವನ್ನು ಅಥವಾ ಬೇವಿನ ಹಿಂಡಿಯ ಮೂಲಕ ನೀಡಬಹುದು, ಆದರೆ ಇವುಗಳನ್ನು ಸಹ ಅಡಿಕೆ ಗಿಡಗಳ ವಯಸ್ಸಿನ ಆಧಾರದ ಮೇಲೆ ನೀಡಬೇಕು.
ಈ ಗೊಬ್ಬರಗಳನ್ನು ಮುಂಗಾರಿನ ಸಮಯದಲ್ಲಿ ನೀಡುವುದರಿಂದ ವಾತಾವರಣ ಹೋದ ಉಷ್ಣವೂ ಕಡಿಮೆ ಇದ್ದು ನೀರಿನ ಲಭ್ಯತೆಯು ಸಾಕಷ್ಟು ಇರುವುದರಿಂದ ಗಿಡಗಳು ಪೋಷಕಾಂಶಗಳನ್ನು ಸುಲಭವಾಗಿ ಹೀರಿಕೊಳ್ಳುತ್ತವೆ.
ರಾಸಾಯನಿಕ ಗೊಬ್ಬರಗಳನ್ನು ಸಂಯುಕ್ತ ರಾಸಾಯನಿಕಗಳ ಗೊಬ್ಬರಗಳನ್ನು ಮಿಶ್ರಣ ಮಾಡಿ ಗಿಡಗಳಿಗೆ ನೀಡಲಾಗುತ್ತದೆ. ಆದರೆ ಪ್ರಮುಖವಾಗಿ ರೈತ ಬಾಂಧವರು ನೆನಪಿಡಬೇಕಾದ ಅಂಶವೆಂದರೆ ಆ ವರ್ಷದ ಗೊಬ್ಬರ ನೀಡುವಿಕೆಯನ್ನು ನಿರ್ಧರಿಸುವುದು
ಆ ವರ್ಷ ಬಂದಿರುವಂತಹ ಮಳೆ ಮತ್ತು ಮಣ್ಣಿನ ಅನುಗುಣವಾಗಿ ಗೊಬ್ಬರಗಳನ್ನು ನೀಡಬೇಕಾಗುತ್ತದೆ. ಈ ರೀತಿಯಾಗಿ ವ್ಯವಸ್ಥಿತ ವಾಗಿ ಗೊಬ್ಬರಗಳನ್ನು ನೀಡಿದರೆ ಸುಲಭವಾಗಿ ಅಡಿಕೆಯ ಇಳುವರಿ ಹೆಚ್ಚಿಸಿ ಸಾಕಷ್ಟು ಲಾಭ ಗಳಿಸಬಹುದು.

Arecanut with high quality yield
ಅಡಿಕೆ ರೈತರಿಗೆ ಒಂದು ಸಲಹೆ:-
Suggestion for Arecanut Farmer’s:-
ನಾವು ಹೇಗೆ ಬಿಪಿ ಮತ್ತು ಶುಗರ್ ಅನ್ನು ಚೆಕ್ ಮಾಡಿಸಲು ಆರು ತಿಂಗಳಿಗೊಮ್ಮೆ ಹಾಸ್ಪಿಟಲ್ ಗೆ ಹೋಗುತ್ತಿವೋ, ಅದೇ ರೀತಿ ಅಡಿಕೆ ಬೆಳೆಗಾರರು ಕೃಷಿ ಮತ್ತು ತೋಟಗಾರಿಕಾ ಖಾಸಗಿ ಅಥವಾ ತಜ್ಞರನ್ನು ಭೇಟಿಯಾದರೆ
ನಿಮಗೆ ವೈಜ್ಞಾನಿಕವಾಗಿ ವಾತಾವರಣ ತಕ್ಕ ಹಾಗೆ ಹೇಗೆ ಅಡಿಕೆ ಗಿಡಕ್ಕೆ ಗೊಬ್ಬರವನ್ನು ನಿರ್ವಹಣೆ ಮಾಡುವುದು ಎಂಬುವ ಮಾಹಿತಿ ಸಿಗುತ್ತದೆ.
ಉದಾಹರಣೆಗೆ ಅಡಿಕೆ ರೈತರು ಲಕ್ಷಾಂತರ ಗಂಟಲೆ ಲಾಭವನ್ನು ಪಡೆಯುತ್ತಾರೆ ನೀವು 5 ಸಾವಿರವನ್ನು ಕೊಟ್ಟು ತಜ್ಞರನ್ನು ತೋಟಕ್ಕೆ ಕರೆಸಿದರೆ ನಿಮಗೆ ಲಕ್ಷಾಂತರ ಗಟ್ಟಲೆ ಇನ್ನು ಆದಾಯ ಹೆಚ್ಚಾಗುತ್ತದೆ ಮತ್ತು ಭೂಮಿಯ ಫಲವತ್ತತೆ ಕೂಡ ಹೆಚ್ಚಾಗುತ್ತದೆ
There fore arecanut is the important commercial plantation for farmers to increase their profit in agriculture and also we should consider the various factors increase the productivity of the arecanut crop that is amount of fertilizer that we aregiving to the plant.
When we gave sufficient amount of fertilizer to feeding root that observe the micro nutrients and give sufficient productivity that increase the farmers profit.
Thank you
ಧನ್ಯವಾದಗಳು
<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್<span style=”vertical-align: inherit;”> ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ಬೆಟ್ಟಿ ಕೆಂಪುಗೋಟು ಚಿಪ್ಪು,
ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ.
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸರ ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.
Leave a Reply