"Agriculture is our CULTURE"

Property Documents :: ಕಳೆದುಹೋಗಿರುವ ಆಸ್ತಿಯ ಒರಿಜಿನಲ್ ಡಾಕ್ಯುಮೆಂಟ್ ಪಡೆಯೋದು ಹೇಗೆ? ಆಸ್ತಿ ಖರೀದಿ ಮಾಡುತ್ತಿದ್ದಲ್ಲಿ ಡಾಕ್ಯೂಮೆಂಟ್ ಅಸಲಿ ಅಥವಾ ನಕಲಿ ಎಂಬುದನ್ನು ಹೀಗೆ ಪರಿಶೀಲಿಸಿಕೊಳ್ಳಿ?

ರಾಜ್ಯ ಸಕಾ೯ರ ಜಾರಿಗೆ ತಂದಿರುವ ಕಾವೇರಿ ವೆಬ್ ಸೈಟ್ ಮೂಲಕ ಸುಲಭವಾಗಿ ಆಸ್ತಿಯ ಒರಿಜಿನಲ್ ಪ್ರಮಾಣ ಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಇದರಿಂದಾಗಿ ನೀವು ಹಳೆಯ ಆಸ್ತಿ ಪತ್ರಗಳನ್ನು ಕಳೆದುಕೊಂಡಿದ್ದರು ಕೂಡ ಚಿಂತೆ ಇಲ್ಲದೆ ಅದರಷ್ಟೇ ವ್ಯಾಲಿಡ್ ಆಗಿರುವ ಆಸ್ತಿ ಪತ್ರಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.

ಹಾಗೂ ನೀವೇನಾದ್ರೂ ಆಸ್ತಿ ಖರೀದಿ ಮಾಡುತ್ತಿದ್ದಲ್ಲಿ ಅದರ ದಾಖಲೆಗಳು ಅಸಲಿ ಅಥವಾ ನಕಲಿ ಎಂಬುದನ್ನು ಈ ರೀತಿ ಚೆಕ್ ಮಾಡುವುದರ ಮೂಲಕ ಖಚಿತಪಡಿಸಿಕೊಳ್ಳಬಹುದು

ಕಾವೇರಿ ವೆಬ್‌ಸೈಟ್‌ನಲ್ಲಿ ಆಸ್ತಿ ದಾಖಲೆಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ?
Step 1: ಕಾವೇರಿ ವೆಬ್‌ಸೈಟ್‌ಗೆ ಭೇಟಿ ನೀಡಿ https://kaverionline.karnataka.gov.in

Step2: ಈಗಾಗಲೇ ನಿಮ್ಮ ಬಳಕೆದಾರ ಖಾತೆ ಇದ್ದರೆ ಲಾಗಿನ್ ಆಗಿ ಖಾತೆ ಇಲ್ಲದಿದ್ದರೆ, ಹೊಸದಾಗಿ ನೋಂದಣಿ ಮಾಡಿಕೊಳ್ಳಬೇಕು.

Step 3: ರಿಜಿಸ್ಟರ್ ಮಾಡಿಕೊಳ್ಳಲು ನಿಮ್ಮ ಪೂಣ೯ ಹೆಸರು, ಮೊಬೈಲ್ ನಂಬರ್, ಇಮೇಲ್ ಐಡಿ, ಜೆಂಡರ್(Gender) ಸೆಕ್ಯೂರಿಟಿ ಟೈಪ್ ಹಾಗೂ ಉತ್ತರವನ್ನು ಸೆಲೆಕ್ಟ್ ಹಾಗೂ ಕೊಟ್ಟಿರುವ ಕ್ಯಾಪ್ಚಾ ಎಂಟರ್ ಮಾಡಿ ರಿಜಿಸ್ಟರ್(register) ಮೇಲೆ ಕ್ಲಿಕ್ ಮಾಡಿ

Step 4: ನಂತರ ನಿಮ್ಮ ಇಮೇಲ್ ಐಡಿ ಹಾಗೂ ಪಾಸ್ವರ್ಡ್ ಮೂಲಕ ಕೊಟ್ಟಿರುವ ಕ್ಯಾಪ್ಚಾ ಮಾಡಿ ಲಾಗಿನ್ (login) ಮೇಲೆ ಕ್ಲಿಕ್ ಮಾಡಿ

Step 5: ಆಗ ನಿಮಗೆ ಒಂದು ಒಟಿಪಿ ಬರುತ್ತದೆ ಅದನ್ನು ಎಂಟರ್ ಮಾಡಿ ಲಾಗಿನ್ ಆಗಿ

Step 6: ಅಲ್ಲಿ ಪೇಜ್ ನ ಬಲಭಾಗದಲ್ಲಿ ಸ್ಟಾಟ್೯ ನ್ಯೂ ಅಪ್ಲಿಕೇಶನ್(stert new application) ಎಂಬ ಆಯ್ಕೆ ಇದು ಅದರ ಮೇಲೆ ಕ್ಲಿಕ್ ಮಾಡಿ

Step 7: ನಂತರ ಓಪನ್ ಆಗುವ ಪೇಜ್ ನಲ್ಲಿ ಹಲವು ಆಯ್ಕೆಗಳಿದ್ದು ಸರ್ಟಿಫೈಡ್ ಕಾಪಿ(Certified copy) ಸಿಸಿ ಮೇಲೆ ಕ್ಲಿಕ್ ಮಾಡಿ

Step 8: ನಂತರ ಓಪನ್ ಆಗುವ ಪೇಜ್ ನಲ್ಲಿ ಕೆಲವು ವಿವರಗಳು ಅದನ್ನು ಓದಿ ಕಂಟಿನ್ಯೂ(continue) ಮೇಲೆ ಕ್ಲಿಕ್ ಮಾಡಿ

Step 9: ನಂತರ ನಿಮಗೆ 24ರ ನಂತರ ಅಥವಾ ಮುಂಚೆ ಎಂಬ ಎರಡು ಆಯ್ಕೆಗಳಿದ್ದು ನೀವು 2004 ರನಂತರದ ಅತವಾ ಮೊದಲಿನ ಸಿಸಿ ಯನ್ನು ಡೌನ್ಲೋಡ್ ಮಾಡಬೇಕೆಂದಿರುವಿರೋ ಅದರ ಪ್ರಕಾರ ಆಯ್ಕೆಯನ್ನು ಮಾಡಿಕೊಂಡು ಪ್ರೋಸಿಡ್(proceed) ಮೇಲೆ ಕ್ಲಿಕ್ ಮಾಡಿ

Step 10: ನಂತರ ಓಪನ್ ಆಗೋ ಪೇಜ್ ನಲ್ಲಿ ಡಾಕ್ಯೂಮೆಂಟ್ ಟೈಪ್ ,ಜಿಲ್ಲೆ , ಸಬ್ ರಿಜಿಸ್ಟರ್ ಆಫೀಸ್, ಬುಕ್ ಟೈಪ್(book type), ಡಾಕ್ಯುಮೆಂಟ್ ನಂಬರ್, ರಿಜಿಸ್ಟ್ರೇಷನ್ ಆದ ವರ್ಷವನ್ನು ಸೆಲೆಕ್ಟ್ ಮಾಡಿಕೊಂಡು ಸಚ್೯ ಬಟನ್(search) ಮೇಲೆ ಕ್ಲಿಕ್ ಮಾಡಿ

Step 11: ಆಗ ನಿಮಗೆ ನಿಮ್ಮ ಆಸ್ತಿಯ ಸಟಿ೯ಫೈಡ್ ಕಾಪಿ( certified copy) ಸಿಗುತ್ತದೆ. ಅದನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದ್ದು, ಇದು ಓರಿಜಿನಲ್ ಕಾಪಿಯಷ್ಟೇ ವ್ಯಾಲಿಡ್ ಆಗಿರುತ್ತದೆ.

ನಿಮ್ಮ ಡಾಕ್ಯೂಮೆಂಟ್ ನಂಬರ್ ಗೊತ್ತಿರದಿದ್ದರೆ ಹೀಗೆ ನಂಬರ್ ಪಡೆಯಬಹುದು!

ಡಾಕ್ಯೂಮೆಂಟ್ ನಂಬರ್ ಅನ್ನು ಪಡೆದುಕೊಳ್ಳಲು ಇದರ ಕೆಳಗೆ ವಿವರಗಳನ್ನು ಕೊಟ್ಟಿದ್ದು ಅದನ್ನು ಫಾಲೋ ಮಾಡಿ ನೀವು ಡಾಕುಮೆಂಟ್ ನಂಬರ್ ವಿವರ ಪಡೆದುಕೊಳ್ಳಬಹುದು

Step 1: ಅದಕ್ಕಾಗಿ ಮೊದಲು ಭೂಮಿ ಆನ್ಲೈನ್ ವೆಬ್ಸೈಟ್ ಗೆ ಭೇಟಿ ನೀಡಿ ಅದಕ್ಕಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

rtc.karnataka.gov.in

Step 2: ನಂತರ ರಿಜಿಸ್ಟರ್ ಮಾಡಿಕೊಂಡು ಲಾಗಿನ್ ಆಗಿ

Step 3: ನಂತರ ವಾಲೆಟ್ ಸವ೯ಸಸ್(wallet services) ಆಯ್ಕೆಯಲ್ಲಿ ನಿಮಗೆ i-MR ಎಂಬ ಆಯ್ಕೆಯಿದ್ದು, ಅದರ ಮೇಲೆ ಕ್ಲಿಕ್ ಮಾಡಿ

Step 4: ಅಲ್ಲಿ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ಹಾಗೂ ಸವೆ೯ ನಂಬರ್ ಹಾಕಿದರೆ ಫೆಚ್ ಡೀಟೆಲ್ಸ್(Fetch details) ಎಂಬ ಆಯ್ಕೆ ಬರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ

Step 5: ಅಲ್ಲಿ ನಿಮ್ಮ ಜಮೀನಿನಲ್ಲಿ ಯಾವುದಾದರೂ ಹೆಸರು ಬದಲಾವಣೆ ಇನ್ನೀತರ ಬದಲಾವಣೆ ಮಾಡಿದ್ದರೆ ವಿವರಗಳು ಕಾಣಿಸುತ್ತದೆ. ಅದರ ಎಡಭಾಗದಲ್ಲಿ ಸೆಲೆಕ್ಟ್ (select) ಎಂಬ ಆಯ್ಕೆಯಿದ್ದು, ಅದರ ಮೇಲೆ ಕ್ಲಿಕ್ ಮಾಡಿ

Step 6: ಆಗ ಅದರ ವಿವರ ಬಲಭಾಗದಲ್ಲಿ ಕಾಣಿಸುತ್ತದೆ. ಕೆಳಗಡೆ ಪ್ರಿವೀವ್(preview) ಎಂಬ ಆಯ್ಕೆಯಿದ್ದು, ಅದರ ಮೇಲೆ ಕ್ಲಿಕ್ ಮಾಡಿ ಹಣ ಕಟ್ ಆಗುವುದಿಲ್ಲ.

Step 7: ಆಗ ನಿಮಗೆ ವಿವರಗಳು ಸಿಗುತ್ತದೆ. ಅಲ್ಲಿ ಬಲಭಾಗದಲ್ಲಿ ಸಂಖ್ಯೆ ಎಂಬ ಆಯ್ಕೆಯಿದ್ದು, 5 ಅಂಕಿಗಳ ಸಂಖ್ಯೆ ಹಾಗೂ ಅದರ ಮುಂದೆ ವಷ೯ ಇರುತ್ತದೆ. ಆ 5 ಅಂಕಿಗಳ ಸಂಖ್ಯೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ. ಅದೇ ನಿಮ್ಮ ಡಾಕ್ಯುಮೆಂಟ್ ನಂಬರ್(document number) ಆಗಿರುತ್ತದೆ. ಅದನ್ನೇ ಅಲ್ಲಿ ಮೇಲೆ ಹಾಕಿ ನೀವು ಓರಿಜಿನಲ್ ಸಿಸಿ(Certified Copy) ಯನ್ನು ಪಡೆಯಬಹುದು

ಧನ್ಯವಾದಗಳು

<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ : ಇಂದಿನ ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ​​ಬೆಟ್ಟಿ ಕೆಂಪುಗೋಟು ಚಿಪ್ಪು, ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ. 

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸರ ಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"