"Agriculture is our CULTURE"

Arecanut Board:: ಅಡಕೆ ಮಂಡಳಿ ಕನಸಿಗೆ ಪೆಟ್ಟು ನೀಡಿದ ಕೇಂದ್ರ ಸಕಾ೯ರ! ಮಂಡಳಿ ಸ್ಥಾಪನೆ ಅನಗತ್ಯ! ಅಡಕೆ ಬೆಳೆ ನಿವ೯ಹಣೆಗೆ ಹಲವು ಸಂಸ್ಥೆ! 

ಅಡಿಕೆ ಬೆಳೆಗಾರರ ಅಡಿಕೆ ಮಂಡಳಿ ಸ್ಥಾಪನೆಯ ಕನಸನ್ನು ಕೇಂದ್ರ ಸರ್ಕಾರ ಚೂರು ಮಾಡಿದ್ದು, ಅಡಿಕೆ ಮಂಡಳಿ ಸ್ಥಾಪನೆ ಅಗತ್ಯವಿಲ್ಲವೆಂದು ಪತ್ರದ ಮೂಲಕ ತಿಳಿಸಿದೆ.

ಏಕೆಂದರೆ ಈಗಾಗಲೇ ಅ್ಕೆ ಬೆಳೆಗೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಕ್ಯಾಂಪ್ಕೋ,ಕಾಸರಗೋಡಿನಲ್ಲಿ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ, ಅಡಕೆ ಮತ್ತು ಸಾಂಬಾರು ಬೆಳೆಗಳ ಅಭಿವೃದ್ಧಿ ನಿರ್ದೇಶನಾಲಯ ಹೀಗೆ ಹಲವು ಸಂಸ್ಥೆಗಳು

ಅಡಕೆ ಬೆಳೆಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುತ್ತಿರುವುದರಿಂದ ಮತ್ತೊಂದು ಪ್ರತ್ಯೇಕ ಅಡಕೆ ಮಂಡಳಿ ಸ್ಥಾಪನೆ ಅನಗತ್ಯ ಎಂಬುದು ಕೇಂದ್ರ ಸಕಾ೯ರದ ವಾದವಾಗಿದೆ.

ದೇಶದಲ್ಲಿಯೇ ಅತಿಹೆಚ್ಚು ಅಡಕೆ ಉತ್ಪಾದಿಸುವ ರಾಜ್ಯ ಕನಾ೯ಟಕ! 

ಆದರೆ ದೇಶದಲ್ಲಿಯೇ ಅತಿಹೆಚ್ಚು ಅಡಿಕೆ ಉತ್ಪಾದಿಸುವ ರಾಜ್ಯವಾದ ಕನಾ೯ಟಕದ ಅಡಿಕೆ ಬೆಳೆಗಾರರು ಮಾತ್ರ ಅಡಕೆ ಬೆಳೆಯುವಲ್ಲಿ ಇರುವ ಸಮಸ್ಯೆಗಳನ್ನು ಪರಿಹರಿಸಲು ಮಂಡಳಿ ಅಗತ್ಯವಿದೆ ಎನ್ನುತ್ತಿದ್ದಾರೆ.

ರಾಜ್ಯದಲ್ಲಿ ಅಡಕೆ ಬೆಳೆಯನ್ನು ಪ್ರಮುಖವಾಗಿ ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಉಡುಪಿ, ಚಿತ್ರದುರ್ಗ, ದಾವಣಗೆರೆ ಹಾಗೂ ಹಾಸನ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತದೆ.

ರೋಗಗಳ ಬಗ್ಗೆ ಸಂಶೋಧನೆ ಅಗತ್ಯ! 

ಹೆಚ್ಚಾಗಿ ಮಲೆನಾಡು ಪ್ರದೇಶವಾದ್ದರಿಂದ ಅಡಕೆ ಬೆಳೆಯಲ್ಲಿ ಇತ್ತೀಚೆಗೆ ಎಲೆಚುಕ್ಕೆ, ಕೊಳೆ ರೋಗ ಹಾಗೂ ಹಳದಿ ರೋಗವು ಹೆಚ್ಚಾಗಿ ಬಾಧಿಸುತ್ತಿದೆ. ಇದರಿಂದ ರೈತರು ಆಥಿ೯ಕವಾಗಿ ನಷ್ಟ ಅನುಭವಿಸುತ್ತಿದ್ದಾರೆ.

ಅಲ್ಲದೇ ಈ ರೋಗಗಳಿಗೆ ಸರಿಯಾದ ವೈಜ್ಞಾನಿಕ ಔಷಧೋಪಚಾರ ಹಾಗೂ ರೋಗ ಬರದಂತೆ ತಡೆಯಲು ಕ್ರಮ ಕೈಗೊಳ್ಳಲು ವೈಜ್ಞಾನಿಕ ಸಂಶೋಧನೆಯ ಅಗತ್ಯವಿದೆ.

ಅಡಕೆ ಕಳ್ಳಸಾಗಾಣಿಕೆ, ಕಲಬೆರಕೆಗೆ ಬ್ರೇಕ್ ಹಾಕಲು ಮಂಡಳಿ ಅಗತ್ಯ! 

ಇಷ್ಟೇ ಅಲ್ಲದೇ ವಿದೇಶಗಳಿಂದ ಅಡಕೆ ಕಳ್ಳ ಸಾಗಾಣಿಕೆ, ಕಡಮೆ ಗುಣಮಟ್ಟದ ಅಡಿಕೆಯನ್ನು ರಾಜ್ಯದಲ್ಲಿ ಬೆಳೆದ ಉತ್ತಮ ಗುಣಮಟ್ಟದ ಅಡಿಕೆಯೊಂದಿಗೆ ಕಲಬೆರಕೆ,

ದರಗಳಲ್ಲಿ ಏರಿಳಿತ ಹೀಗೆ ಹತ್ತು ಹಲವು ಸಮಸ್ಯೆಗಳು ಅಡಕೆ ಬೆಳೆಗಾರರಿಗೆ ಕಾಡುತ್ತಿದ್ದು, ಅಡಕೆ ಮಂಡಳಿ ಸ್ಥಾಪನೆಯಾದರೆ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸುಲಭವಾಗುತ್ತದೆ ಎಂಬುದು ಅಡಕೆ ಬೆಳೆಗಾರರ ವಾದವಾಗಿದೆ.

ರಾಜ್ಯದಿಂದ ಮಂಡಳಿ(Board) ಸ್ಥಾಪನೆಗೆ ಮನವಿ ಸಲ್ಲಿಕೆ!

ಈ ಹಿಂದೆ ಶ್ರೀ ಬಿ. ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅಡಕೆ ಮಂಡಳಿ ಸ್ಥಾಪನೆ ಮಾಡಲು ಮನವಿ ಮಾಡಿದ್ದರು. ಅದಕ್ಕೆ ಬೇಕಾದ ಪೂವ೯ ತಯಾರಿಗಳನ್ನು ರಾಜ್ಯದ ತೋಟಗಾರಿಕಾ ಇಲಾಖೆ ಕೂಡ ಆರಂಭಿಸಿತ್ತು.

ಆದರೆ ಒಂದುವರೆ ವಷ೯ದ ಹಿಂದೆಯೇ ಮಂಡಳಿ ಸ್ಥಾಪನೆ ಅನಗತ್ಯವೆಂದು ಕೇಂದ್ರ ಸಕಾ೯ರ ಪತ್ರ ಬರೆದಿದೆ. ಆದರೆ ಅಧಿಕಾರಿಗಳು ರೈತರು ಸಿಟ್ಟೀಗೇಳಬಹುದು ಎಂದು ವಿಷಯವನ್ನು ಪ್ರಕಟಿಸಿರಲಿಲ್ಲ ಎಂದು ತಿಳಿದುಬಂದಿದೆ.

ಮಎಡಳಿ (Board) ಸ್ಥಾಪನೆಗೆ ವಿರೋಧಿಸಿ ಕೇಂದ್ರದ ವಾದ!

ಅಡಿಕೆ ಮಂಡಳಿ ಸ್ಥಾಪನೆಯಾದರೆ ಅಡಕೆ ಬೆಳೆಗಾರರ ಸಮಸ್ಯೆಗಳ ಪರಿಹಾರ ತೀವ್ರಗತಿಯಲ್ಲಿ ಆಗುತ್ತದೆ. ಇದು ಅಡಕೆ ಬೆಳೆಗಾರರಿಗೆ ವರದಾನವಾಗಲಿದೆ. ಆದರೆ ಈಗಾಗಲೇ ಹಲವು ಸಂಸ್ಥೆಗಳ ಮೂಲಕ ಅಡಕೆ ಬೆಳೆಯನ್ನು ನಿವ೯ಹಿಸಲಾಗುತ್ತಿದ್ದು,

ಪ್ರತ್ಯೇಕ ಮಂಡಳಿ ಮಾಡುವುದು ಹೆಚ್ಚು ವ್ಯಯದಾಯಕ ಹಾಗೂ ಅನಗತ್ಯವೆಂದು ಕೇಂದ್ರ ಸಕಾ೯ರ ತೀಮಾ೯ನಿಸಿದಂತಿದೆ. ಈ ಬಗ್ಗೆ ಮಂಡಳಿ ಸ್ಥಾಪನೆ ಅನಗತ್ಯವೆಂದು ಮಾಜಿ ಕ್ಯಾಂಪ್ಕೋ ಅಧ್ಯಕ್ಷ ಅರಗ ಜ್ಞಾನೇಂದ್ರ ರವರು ಕೂಡ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಧನ್ಯವಾದಗಳು

<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ : ಇಂದಿನ ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ​​ಬೆಟ್ಟಿ ಕೆಂಪುಗೋಟು ಚಿಪ್ಪು, ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ. 

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸರ ಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"