Coconut Price High:: ಗಗನಕ್ಕೇರುತ್ತಿರುವ ತೆಂಗಿನಕಾಯಿ ಬೆಲೆ, ಬೆಳೆಗಾರರು ಖುಷ್!!! ಹೋಟೆಲ್ ಗಳಲ್ಲಿ ತೆಂಗಿನಕಾಯಿ ಚಟ್ನಿಗೆ ಕತ್ತರಿ!!
ಸಾಮಾನ್ಯವಾಗಿ ಪ್ರತಿ ವರ್ಷವೂ ಅಕ್ಟೋಬರ್ ನವೆಂಬರ್ ತಿಂಗಳುಗಳ ನಂತರ ಹಬ್ಬದ ಸೀಸನ್ ಮುಗಿಯುವುದರಿಂದ ತೆಂಗಿನಕಾಯಿ ಬೆಲೆಯಲ್ಲಿ ಸ್ವಲ್ಪ ಇಳಿಕೆ ಕಂಡು ಬರುತ್ತಿತ್ತು
ಆದರೆ ಈ ಬಾರಿ ಹಬ್ಬಗಳು ಮುಗಿದು ಆಗಲೇ ಜನೇವರಿ ಪ್ರಾರಂಭವಾಗಿದ್ದರೂ ಕೂಡ ಬೆಲೆ ಇಳಿಕೆಯಾಗುವುದಲ್ಲ ಸ್ಥಿರವಾಗಿಯೂ ಇರದೇ ಏರಿಕೆಯಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ತೆಂಗಿನಕಾಯಿ ಇಳುವರಿ ಕಡಿಮೆಯಾಗಿರುವುದು.
ದೇವಸ್ಥಾನದಲ್ಲೂ ತೆಂಗಿನಕಾಯಿಗೆ ಕೊರತೆ!
ಪ್ರತಿ ವಷ೯ವೂ ಈ ಸಮಯದಲ್ಲಿ ಸ್ವಲ್ಪ ಮಟ್ಟಿಗೆ ಇಳುವರಿ ಕಡಿಮೆಯಾಗುವುದು ವಾಡಿಕೆ. ಆದರೆ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದ್ದು, ಇದರಿಂದ ಮಾರುಕಟ್ಟೆಗೆ ಸಾಕಾಗುವಷ್ಟು ತೆಂಗಿನಕಾಯಿ ಪೂರೈಕೆಯಾಗದಿರುವುದರಿಂದ ದರದಲ್ಲಿ ತೀವ್ರ ಏರಿಕೆಯಾಗುತ್ತಿದೆ.
ಇದರಿಂದಾಗಿ ಒಂದೆಡೆ ತೆಂಗು ಬೆಳೆಗಾರರು ಖುಷಿಯಾಗಿದ್ದರೆ, ಮತ್ತೊಂದೆಡೆ ಗ್ರಾಹಕರು, ದೇವಸ್ಥಾನಗಳು, ಹೊಟೇಲ್ ಮಾಲೀಕರು, ಚಟ್ನಿ ಪುಡಿ ತಯಾರಿಕಾ ಕಂಪನಿಗಳು ಹಾಗೂ ಎಳನೀರು ಮಾರಾಟಗಾರರು ತೆಂಗಿನಕಾಯಿಗೆ ಹೆಚ್ಚು ಬೆಲೆ ತೆತ್ತು ಕೊಳ್ಳಬೇಕಾಗಿದೆ.
ತೋಟಕ್ಕೆ ಹೋಗಿ ಖರೀದಿಸುತ್ತಿರುವ ವ್ಯಾಪಾರಿಗಳು!
ಮಾರುಕಟ್ಟೆಯಲ್ಲಿ ಸಾಕಷ್ಟು ಪೂರೈಕೆಯಾಗದಿರುವ ಕಾರಣ ಮಧ್ಯವತಿ೯ಗಳು, ವ್ಯಾಪಾರಸ್ಥರು ಹಾಗೂ ಕಂಪನಿಗಳು ನೇರವಾಗಿ ತೆಂಗಿನ ತೋಟಗಳಿಗೆ ಹೋಗಿ ತೆಂಗಿನಕಾಯಿ ಖರೀದಿ ಮಾಡಲು ಮುಂದಾಗಿದ್ದಾರೆ.
ಇದರಿಂದಾಗಿ ರೈತರಿಗೆ ಅನುಕೂಲವಾಗುತ್ತಿದೆ. ಯಾವುದೇ ಸಾಗಾಣಿಕಾ ವೆಚ್ಚ, ಮಧ್ಯವತಿ೯ಗಳ ಕಮೀಷನ್ ಇತ್ಯಾದಿ ಹೆಚ್ಚುವರಿ ಖಚಿ೯ಲ್ಲದೇ ತೋಟದಲ್ಲಿಯೇ ಕಾಯಿಗಳನ್ನು ಮಾರಾಟ ಮಾಡುತ್ತಿದ್ದಾರೆ.
ಎಲ್ಲಾ ವಿಧದ ತೆಂಗಿನಕಾಯಿ ದರದಲ್ಲಿ ಬೆಲೆ ಏರಿಕೆ!
15-20 ರೂ ಗೆ ಸಿಗುತ್ತಿದ್ದ ತೆಂಗಿನಕಾಯಿ ಬೆಲೆ ಏರಿಕೆಯಿಂದಾಗಿ ತೆಂಗಿನಕಾಯಿ ಬೆಲೆ 40 ರಿಂದ 50 ರೂ. ಗೆ ಏರಿಕೆಯಾಗಿದೆ. ಎಳನೀರಿನ ಬೆಲೆ ಗ್ರಾಮೀಣ ಪ್ರದೇಶಗಳಲ್ಲಿ 45 ರಿಂದ 50 ರೂ.
ಇದ್ದರೆ ನಗರಗಳಲ್ಲಿ 65 ರೂ. ಗೆ ತಲುಪಿದೆ. ಕೊಬ್ಬರಿ ಕ್ವಿಂಟಾಲ್ ಗೆ 17000 ರೂ. ದಾಟಿದೆ. ತೆಂಗಿನಕಾಯಿ ಬೆಲೆ ಹೆಚ್ಚಳದಿಂದ ತೆಂಗಿನೆಣ್ಣೆ ಬೆಲೆಯು ಹೆಚ್ಚಾಗಿದ್ದು, ಲೀಟರ್ ಗೆ 250 ರೂ. ತಲುಪಿದೆ.
ಬೇಸಿಗೆಗೂ ಮುನ್ನವೇ ಎಳನೀರು ದರ ಗಗನಕ್ಕೆ!
ಬೇಸಿಗೆ ಹತ್ತಿರವಾಗುತ್ತಿದ್ದು, ಎಳನೀರಿಗೂ ಬೇಡಿಕೆ ಹೆಚ್ಚಾಗಿದೆ. ಇದರಿಂದಾಗಿ ತೋಟದ ಮಾಲೀಕರು ಎಳನೀರನ್ನು ಹೆಚ್ಚಾಗಿ ಕೊಯ್ದು ಮಾಡುತ್ತಿರುವುದರಿಂದ
ಬೆಲೆ ಏರಿಕೆಯಾಗಲು ಹಾಗೂ ತೆಂಗಿನಕಾಯಿ ಪೂರೈಕೆ ಕಡಿಮೆಯಾಗಲು ಕಾರಣ ಎಂದು ದಾವಣಗೆರೆಯ ಸಗಟು ವ್ಯಾಪಾರಿಯಾದ ಧನಂಜಯ ಗುಬ್ಬಿ ರವರು ಮಾಹಿತಿ ನೀಡಿದ್ದಾರೆ.
ತೆಂಗಿನಕಾಯಿ ದರ ಹೆಚ್ಚಳಕ್ಕೆ ಪ್ರಮುಖ ಕಾರಣಗಳು:
*ರೋಗಭಾದೆ, ಹವಾಮಾನ ವೈಪರೀತ್ಯದಿಂದ ತೆಂಗಿನ ಇಳುವರಿ ಕಡಿಮೆಯಾಗಿರುವುದು
* ಇಳುವರಿ ಕುಸಿತದಿಂದ ಬೇಡಿಕೆಗೆ ತಕ್ಕಂತೆ ಪೂರೈಕೆ ಇಲ್ಲದಿರುವುದು
*ಬೇಸಿಗೆಯಿಂದಲೂ ಎಳನೀರಿಗೆ ಬೇಡಿಕೆ ಹೆಚ್ಚಿರುವುದು
*ಕರಾವಳಿ ಪ್ರದೇಶದಲ್ಲಿ ಮಂಗಗಳ ಕಾಟದಿಂದ ಬೆಳೆ ನಾಶ
ತೆಂಗಿನಕಾಯಿಯಿಂದ ಹೋಟೆಲ್ ಉದ್ಯಮಕ್ಕೆ ನಷ್ಟ!
ಹೋಟೆಲ್ ಗಳಲ್ಲಿ ಎಲ್ಲಾ ಆಹಾರ ಪದಾಥ೯ಗಳೊಂದಿಗೆ ತೆಂಗಿನಕಾಯಿ ಚಟ್ನಿ ಬಳಸುವುದು ಸಾಮಾನ್ಯ. ಈಗಾಗಲೇ ಮದುವೆ ಸೀಸನ್ ಕೂಡ ಪ್ರಾರಂಭವಾಗಿದ್ದು,
ಇಂತಹ ಸಮಯದಲ್ಲಿ ತೆಂಗಿನಕಾಯಿ ಬೆಲೆ ಏರಿಕೆಯಾಗುತ್ತಿರುವುದು ತೆಂಗಿನಕಾಯಿಯನ್ನು ಮುಖ್ಯವಾಗಿ ಬಳಸುತ್ತಿದ್ದ ಹೋಟೆಲ್ ಉದ್ಯಮ ಇದರಿಂದ ಸಾಕಷ್ಟು ನಷ್ಟ ಅನುಭವಿಸುತ್ತಿದೆ ಎಂದು ಚನ್ನಪಟ್ಟಣದ ಹೋಟೆಲ್ ಉದ್ಯಮಿಯಾಗಿರುವ ಪ್ರದೀಪ್ ಕುಮಾರ್ ರವರು ಹೇಳಿದ್ದಾರೆ.
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp Group – ಜೈನ್ ಆಗಿ/join whatsapp
3) ” ಟ್ವಿಟರ್ / Twitter – ಸೇರು/join Twitter
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
ವಿ.ಕೆ
ಪರಿಸರ ಪರಿಸರದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.