Free Bus Big Loss :: ಬಂದ್ ಆಗುತ್ತಾ ಉಚಿತ ಬಸ್ ಪ್ರಯಾಣ ಯೋಜನೆ! ಬರೋಬ್ಬರಿ 1761 ಕೋಟಿ, 2994 ಕೋಟಿ, 625 ಕೋಟಿ, 314 ಕೋಟಿ…. ಸಾಲ!
ಕಳೆದ ಎರಡು ಮೂರು ದಿನಗಳಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯನ್ನು ಬಂದ್ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಶಕ್ತಿ ಯೋಜನೆಯನ್ನು ನಿಲ್ಲಿಸುವಂತೆ ಬಸ್ ಕಂಡಕ್ಟರ್ಗಳು ಹಾಗೂ ಚಾಲಕರು ದಿನಾಂಕ 31-12-2024 ರಂದು ಮುಷ್ಕರ ನಡೆಸುವುದಾಗಿಯೂ ಕೂಡ ತಿಳಿಸಿದ್ದಾರೆ. ಹಾಗಾದ್ರೆ ಇಷ್ಟೊಂದು ಯಶಸ್ವಿಯಾಗಿ ನಡೆಯುತ್ತಿದ್ದ
ಶಕ್ತಿ ಯೋಜನೆಯನ್ನು ಬಂದ್ ಮಾಡಲು ಯಾಕೆ ಮುಷ್ಕರ ನಡೆಯುತ್ತಿದೆ ಎಂದು ಹಲವರಲ್ಲಿ ಗೊಂದಲ ಉಂಟಾಗಿದೆ ಅದಕ್ಕೆ ಈ ಲೇಖನದಲ್ಲಿ ಸಂಪೂರ್ಣವಾಗಿ ಉತ್ತರವನ್ನು ನೀಡಲಾಗಿದೆ.
ಸಾರಿಗೆ ನೌಕಕರಿಂದ ಮುಷ್ಕರ!
ಶಕ್ತಿ ಯೋಜನೆ(Shakti scheme) ಯಿಂದ ಸಾರಿಗೆ ನಿಗಮಗಳಿಗೆ ನಷ್ಟವಾಗುತ್ತದೆ ಎಂದು ಯೋಜನೆ ಜಾರಿಯಾಗುವ ಮುನ್ನವೇ ಅಂದಾಜಿಸಲಾಗಿತ್ತು.
ಆದರೆ ಸಾರಿಗೆ ಸಚಿವರು ಸಕಾ೯ರ ಉಚಿತ ಬಸ್ ಟಿಕೆಟ್ ದರವನ್ನು ನಿಗಮಗಳಿಗೆ ಭರಿಸುವುದರಿಂದ ನಿಗಮಗಳಿಗೆ ನಷ್ಟವಾಗುವುದಿಲ್ಲ.
ಬದಲಾಗಿ ಹೆಚ್ಚಿನ ಲಾಭವಾಗಲಿದೆ ಎಂದು ತಿಳಿಸಿದ್ದರು. ಆದರೆ ಇದೀಗ ನಿಗಮಗಳು ಸಾಕಷ್ಟು ನಷ್ಟದಲ್ಲಿದ್ದು, ಹೀಗೆಯೇ ಮುಂದುವರೆದರೆ ಮುಂದೆ ನಿಗಮಗಳ ಸಿಬ್ಬಂದಿಗಳಿಗೆ ವೇತನ ಪಾವತಿಸಲು ಕಷ್ಟವಾಗುತ್ತದೆ ಹಾಗಾಗಿ ಯೋಜನೆಯನ್ನು ನಿಲ್ಲಿಸಿ ಎಂದು ಇದೀಗ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದಾರೆ.
ನಿಗಮಗಳು ನಷ್ಟದಲ್ಲಿರಲು ಮುಖ್ಯ ಕಾರಣ ಸಕಾ೯ರ ನಿಗಮಕ್ಕೆ ಪಾವತಿಸಬೇಕಾದ ಹಣವನ್ನು ಪಾವತಿಸದೇ ಇರುವುದು. ಹೌದು ಶಕ್ತಿ ಯೋಜನೆ(Shakti scheme) ಅಡಿಯಲ್ಲಿ ಮಹಿಳೆಯರ ಉಚಿತ ಪ್ರಯಾಣದ ಟಿಕೆಟ್ ಹಣವನ್ನು ಸಕಾ೯ರ ಭರಿಸಬೇಕಿತ್ತು. ಆದರೆ ಸಕಾ೯ರ ಸಾಕಷ್ಟು ಹಣವನ್ನು ಬಾಕಿ ಉಳಿಸಿಕೊಂಡಿದ್ದು, ಇದರಿಂದ ನಿಗಮವು ನಷ್ಟದಲ್ಲಿದೆ.
ಸಕಾ೯ರವು ಬಾಕಿ ಉಳಿಸಿಕೊಂಡಿರುವ ಹಣವೆಷ್ಟು?
ಕೆ ಎಸ್ ಆರ್ ಟಿ ಸಿ(KSRTC) ಗೆ 714 ಕೋಟಿ ರೂ, ಬಿಎಂಟಿಸಿ(BMTC) ಗೆ 290 ಕೋಟಿ ರೂ. ಎನ್ ಡಬ್ಲ್ಯೂ ಕೆಆರ್ಟಿಸಿ(NWKRTC) ಗೆ 408 ಕೋಟಿ ರೂ. ಕೆಆರ್ಟಿಸಿ(KKRTC) ಗೆ 347 ಕೋಟಿ ರೂ ಗಳನ್ನು ಪಾವತಿಸುವುದು ಬಾಕಿ ಇದೆ.
ಒಟ್ಟು 4 ನಿಗಮಗಳಿಗೆ ಸಕಾ೯ರ ಕೊಡಬೇಕಾಗಿರುವ ಹಣ 1761 ಕೋಟಿ ರೂ. ಗಳು. ಮೊದಲೇ ಉಚಿತ ಪಾಸ್ ನಂತಹ ಯೋಜನೆಗಳಿಂದ ನಷ್ಟದಲ್ಲಿದ್ದ ನಿಗಮಗಳು ಈಗ ಮತ್ತಷ್ಟು ನಷ್ಟಕ್ಕೆ ತುತ್ತಾಗಿದ್ದು,
ಸಾರಿಗೆ ನೌಕಕರಿಗೆ ಇದರಿಂದ ತೊಂದರೆಯಾಗುತ್ತಿದೆ. ಹೇಗೆಂದರೆ ನೌಕರರ ಭವಿಷ್ಯ ನಿಧಿಗೆ ನಿಗಮಗಳು ಪಾವತಿಸುತ್ತಿದ್ದ 2994 ಕೋಟಿ ರೂ. ಹಣವನ್ನು ನಿಗಮಗಳು ಕಟ್ಟದೇ ಬಾಕಿ ಉಳಿಸಿಕೊಂಡಿವೆ.
ನಿವೃತ್ತ ಸಾರಿಗೆ ನೌಕರರಿಗೆ ಕೊಡಬೇಕಾದ ಬಾಕಿ 625 ಕೋಟಿ ಇದೆ. ಹಾಲಿ ನೌಕರರಿಗೆ ಕೊಡಬೇಕಾದ ಬಾಕಿ 314 ಕೋಟಿ ರೂ. ಇಷ್ಟೇ ಅಲ್ಲದೇ ಬಸ್ ಗಳಿಗೆ ಇಂಧನ ಪೂರೈಸುವವರಿಗೆ ಕೊಡಬೇಕಾದ ಬಾಕಿ 851 ಕೋಟಿ ರೂ ಬಾಕಿ ಉಳಿಸಿಕೊಂಡಿವೆ.
ಬಿಡಿ ಭಾಗಗಳನ್ನು ಪೂರೈಸುವ ಕಂಪನಿಗಳಿಗೆ 883 ಕೋಟಿ ರೂ ಬಾಕಿ ಉಳಿಸಿಕೊಂಡಿದೆ. ಹೀಗೆ ಒಟ್ಟು ಸಕಾ೯ರ 6468 ಕೋಟಿ ರೂ. ಗಳನ್ನು ಬಾಕಿ ಉಳಿಸಿಕೊಂಡಿದೆ. ಹೀಗೆ ಮುಂದುವರೆದರೆ ಇಂದನ ಬಿಡಿಭಾಗಗಳನ್ನು ಪೂರೈಸುವ ಕಂಪನಿಗಳು ಕೂಡ ಪೂರೈಕೆಯನ್ನು ನಿಲ್ಲಿಸುತ್ತವೆ.
ರಾಜ್ಯದ ಎಲ್ಲಾ ನಿಗಮಗಳು ನಷ್ಟದಲ್ಲಿವೆ!
ಶಕ್ತಿ ಯೋಜನೆಯಿಂದ ಲಾಭವಾಗುತ್ತದೆ ಎನ್ನುತ್ತಿದ್ದ ಸಕಾ೯ರಕ್ಕೆ ಈ ಮಾಹಿತಿ ಪ್ರಮುಖವಾಗಿದ್ದು, ಈ ವಷ೯ ಕೆ ಎಸ್ ಆರ್ ಟಿ ಸಿ ಗೆ 295 ಕೋಟಿ ರೂ, ಬಿಎಂಟಿಸಿ ಗೆ 575 ಕೋಟಿ ರೂ. ಎನ್ ಡಬ್ಲ್ಯೂ ಕೆಆರ್ಟಿಸಿ ಗೆ 322 ಕೋಟಿ ರೂ. ಕೆಆರ್ಟಿಸಿ ಗೆ 161 ಕೋಟಿ ರೂಪಾಯಿ ನಷ್ಟವಾಗಿದೆ.
ಸಾರಿಗೆ ನೌಕಕರಿಗೆ ಆಗುತ್ತಿರುವ ತೊಂದರೆಗಳೇನು?
ಮುಷ್ಕರಕ್ಕೆ ಮತ್ತೊಂದು ಮುಖ್ಯ ಕಾರಣವೆಂದರೆ ನಿಗಮಗಳಲ್ಲಿ ಒಟ್ಟು 1.25 ಲಕ್ಷ ನೌಕರರಿದ್ದು, ಅವರಿಗೆ 2020 ರಿಂದ ವೇತನ ಹೆಚ್ಚಳವಾಗಿದ್ದು,
ಇದುವರೆಗೂ ಹೆಚ್ಚಳವಾದ ವೇತನದ ಹಿಂಬಾಕಿ ವೇತನವನ್ನು ನೀಡಿಲ್ಲ. 2024 ರ ಜನೇವರಿಯಿಂದ ಹೊಸ ವೇತನ ಪರಿಷ್ಕರಣೆಯಾಗಬೇಕಾಗಿತ್ತು. ಆದರೆ ಇದುವರೆಗೂ ವೇತನ ಪರಿಷ್ಕರಣೆ ಆಗಿಲ್ಲ.
ಇಷ್ಟೆಲ್ಲಾ ಸಮಸ್ಯೆಯಿದ್ದರೂ ಕೂಡ ಡಿಸಿಎಂ ಡಿ. ಕೆ ಶಿವಕುಮಾರ ರವರು ಯೋಜನೆಯನ್ನು ಗಂಡಸರಿಗೂ ಕೂಡ ವಿಸ್ತರಣೆ ಮಾಡುವ ಬಗ್ಗೆ ಮಾತನಾಡಿದ್ದರು.
ಆದರೆ ಈ ಉಚಿತ ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಸಾರಿಗೆ ನಿಗಮ ಮಾತ್ರವಲ್ಲದೇ ಯಾವುದೇ ಅಭಿವೃದ್ಧಿ ಕಾಯ೯ಕ್ರಮಗಳು ಆಗುತ್ತಿಲ್ಲ.
ಗ್ಯಾರಂಟಿ ಕೊಟ್ಟು ಕಾಂಗ್ರೆಸ್ ಸಕಾ೯ರ ಗೆದ್ದಿದ್ದೆ ತಡ ಬೇರೆ ಎಲ್ಲಾ ರಾಜ್ಯಗಳಲ್ಲೂ ಗ್ಯಾರಂಟಿಗಳು ಸದ್ದು ಮಾಡುತ್ತಿವೆ. ಆದರೆ ಗ್ಯಾರಂಟಿ ಕೊಟ್ಟ ರಾಜ್ಯಗಳು ಅಷ್ಟೇ ಬೇಗ ಆಥಿ೯ಕವಾಗಿ ಪಾತಾಳಕ್ಕೆ ಬೀಳುತ್ತಿವೆ.
ಉಚಿತ ಯೋಜನೆಗಳು ರಾಜ್ಯದ ಅಭಿವೃದ್ಧಿ ಮಾತ್ರವಲ್ಲ ಆಥಿ೯ಕತೆಯನ್ನೇ ನುಂಗಿ ಕೊನೆಗೆ ಸಕಾ೯ರಿ ನೌಕರರಿಗೆ ವೇತನ ಪಾವತಿಸಲು ಸಾಧ್ಯವಾಗದ ಪರಿಸ್ಥಿತಿ ತಲುಪಿವೆ ಇದಕ್ಕೆ ಉತ್ತಮ ಉದಾಹರಣೆ ಹಿಮಾಚಲ ಪ್ರದೇಶ.
ಆದ್ದರಿಂದ ಕಾಂಗ್ರೆಸ್ ಸಕಾ೯ರ ಆದಷ್ಟು ಬೇಗ ಆಥಿ೯ಕತೆ ಪಾತಾಳ ತಲುಪುವ ಮುನ್ನ ಎಚ್ಚೆತ್ತುಕೊಳ್ಳಬೇಕಾಗಿದೆ.
ಧನ್ಯವಾದಗಳು
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– ವಿಕೆ
ಪರಿಸರ ಪರಿಸರದೊಂದಿಗೆ ಆರ್ಥಿ0ಕತೆ