PM Kisan Samman Nidhi Yojane::ಈ ಕೆಲಸ ಮಾಡಿಲ್ಲ ಅಂದ್ರೆ 19 ನೇ ಕಂತಿನ ಪಿಎಂ ಕಿಸಾನ್ ಹಣ ಬರಲ್ಲ! ಅಜಿ೯ಯಲ್ಲಿ ಅಪ್ಡೇಟ್ ಮಾಡುವುದು ಹೇಗೆ?
ಪಿಎಂ ಕಿಸಾನ್ ಸನ್ಮಾನ ನಿಧಿಯ 18 ಕಂತುಗಳ ಹಣ ಈಗಾಗಲೇ ಜಮೆಯಾಗಿದ್ದು 19ನೇ ಕಂತಿನ ಹಣವನ್ನು ಜಮೆ ಮಾಡಲು ಸರ್ಕಾರ ಈಗಾಗಲೇ ವೆಬ್ಸೈಟ್ನಲ್ಲಿ ರೈತರ ಲಿಸ್ಟ್ ಅನ್ನು ಪ್ರಕಟಿಸಿದೆ.
ಆದರೆ ನೀವು 19ನೇ ಕಂತಿನ ಹಣವನ್ನು ಪಡೆಯಬೇಕಾದರೆ ಕಡ್ಡಾಯವಾಗಿ ಈ ಕೆಲಸವನ್ನು ಮಾಡಲೇಬೇಕು ಅದೇನೆ ಎಂಬುದನ್ನು ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.
ಮೊಬೈಲ್ ನಂಬರ್ ಬಂದ್ ಆಗಿದ್ದರೆ ಅಪ್ಡೇಟ್ ಮಾಡಿಸಲೇಬೇಕು!
ಪಿಎಂ ಕಿಸಾನ್ ಸಮ್ಮಾನ್ ನಿಧಿಯ 19ನೇ ಕಂತಿನ ಹಣವನ್ನು ಪಡೆಯಬೇಕೆಂದರೆ ವೆಬ್ ಸೈಟ್ ನಲ್ಲಿ ಒಂದು ಹೊಸ ಸೂಚನೆಯನ್ನು ಸರ್ಕಾರ ನೀಡಿದ್ದು ಅದರಂತೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿ ರೈತರು
ತಮ್ಮ ಮೊಬೈಲ್ ನಂಬರ್ ನ್ನು ಅಪ್ಡೇಟ್ ಮಾಡಬೇಕಾಗಿದೆ. ಏಕೆಂದರೆ ಅಜಿ೯ ಸಲ್ಲಿಸುವಾಗ ರೈತರು ಕೊಟ್ಟಿರುವ ಮೊಬೈಲ್ ನಂಬರ್ ಸಧ್ಯಕ್ಕೆ ಬಳಕೆಯಲ್ಲಿ ಇಲ್ಲವಾಗಿರಬಹುದು ಕಳೆದು ಹೋಗಿರಬಹುದು.
ಆದ್ದರಿಂದ ರೈತರು ತಮ್ಮ ಪ್ರಸ್ತುತ ಬಳಕೆಯಲ್ಲಿರುವ ಮೊಬೈಲ್ ನಂಬರ್ ನ್ನು ವೆಬ್ಸೈಟ್ ಮೂಲಕ ಅಪ್ಡೇಟ್ ಮಾಡಿಸಲು ಕೇಂದ್ರ ಸಕಾ೯ರ ಅವಕಾಶ ಮಾಡಿಕೊಟ್ಟಿದೆ.
ಆದ್ದರಿಂದ ಈ ಕೆಳಗೆ ಕೊಟ್ಟಿರುವ ವಿವರಗಳನ್ನು ಅನುಸರಿಸಿ ನೀವು ಕೂಡ ನಿಮ್ಮ ಮೊಬೈಲ್ ನಂಬರನ್ನು ಅಪ್ಡೇಟ್ ಮಾಡಬೇಕು. ಆಗ ಮಾತ್ರ ನಿಮಗೆ 19 ನೇ ಕಂತಿನ ಹಣ ಜಮೆಯಾಗಲಿದೆ.
ಹಾಗೂ ನೀವು ಅಜಿ೯ ಸಲ್ಲಿಸುವಾಗ ಹಾಕಿರುವ ಮೊಬೈಲ್ ನಂಬರ್ ಇನ್ನು ಕೂಡ ಚಾಲ್ತಿಯಲ್ಲಿದ್ದು, ಅದನ್ನೇ ನೀವು ಈಗಲೂ ಬಳಸುತ್ತಿದ್ದರೆ ಅಪ್ಡೇಟ್ ಮಾಡಿಸುವ ಅಗತ್ಯವಿಲ್ಲ.
ಮೊಬೈಲ್ ನಂಬರ್ ಅಪ್ಡೇಟ್ ಮಾಡುವುದು ಹೇಗೆ?
Step 1: ಅದಕ್ಕಾಗಿ ಮೊದಲು ನೀವು ಈ ಕೆಳಗೆ ಕೊಟ್ಟಿರುವ ಲಿಂಕ್(link) ಮೇಲೆ ಕ್ಲಿಕ್ ಮಾಡಿ
Step 2: ಅಲ್ಲಿ ಮೊಬೈಲ್ ನಂಬರ್ ಅಪ್ಡೇಟ್(Update mobile number) ಎಂಬ ಆಯ್ಕೆಯಿದ್ದು ಅದರ ಮೇಲೆ ಕ್ಲಿಕ್ ಮಾಡಿ
Step 3: ಆಗ ಓಪನ್ ಆಗುವ ಪೇಜ್ ನಲ್ಲಿ ಸಚ್೯ ಬೈ (Search by) ನಂತರ ಇರುವ ಆಧಾರ್ ನಂಬರ್(Aadhar number) ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ
Step 3: ನಂತರ ಕೆಳಗಡೆ ನಿಮ್ಮ ಆಧಾರ್ ನಂಬರ್ ಹಾಕಿ ಕೊಟ್ಟಿರುವ ಕ್ಯಾಪ್ಚಾ ಎಂಟರ್ ಮಾಡಿ ಸಚ್೯(Search) ಮೇಲೆ ಕ್ಲಿಕ್ ಮಾಡಿ
Step 4: ನಂತರ ಗೆಟ್ ಓಟಿಪಿ(Get otp) ಮೇಲೆ ಕ್ಲಿಕ್ ಮಾಡಿ ಆಗ ನಿಮ್ಮ ಆಧಾರ್ ನಲ್ಲಿ ರಿಜಿಸ್ಟರ್ ಆಗಿರುವ ಮೊಬೈಲ್ ನಂಬರ್ ಗೆ ಒಂದು ಓಟಿಪಿ ಬರುತ್ತದೆ. ಅದನ್ನು ಎಂಟರ್ ಮಾಡಿ ವೆರಿಫೈ ಓಟಿಪಿ(Verify otp) ಮೇಲೆ ಕ್ಲಿಕ್ ಮಾಡಿ
Step 5: ಆಗ ನಿಮಗೆ ಓಟಿಪಿ ವೆರಿಫೈಡ್(Otp verified) ಎಂಬ ಪಾಪಪ್ ತೋರಿಸುತ್ತದೆ ಅಲ್ಲಿ ಓಕೆ(ok) ಮೇಲೆ ಕ್ಲಿಕ್ ಮಾಡಿ
Step 6: ಆಗ ಮತ್ತೊಂದು ಪೇಜ್ ಓಪನ್ ಆಗುತ್ತದೆ. ಅದರಲ್ಲಿ ನಿಮ್ಮ ಅಜಿ೯ಯಲ್ಲಿನ ಹಳೆಯ ಮೊಬೈಲ್ ನಂಬರ್ ಅಜಿ೯ ಸಂಖ್ಯೆ ಇತ್ಯಾದಿ ರೈತರ ವಿವರಗಳು ಇರುತ್ತವೆ. ಕೆಳಗಡೆ ಎಂಟರ್ ನ್ಯೂ ಮೊಬೈಲ್ ನಂಬರ್(Enter new mobile number) ಎಂಬ ಆಯ್ಕೆಯಿದ್ದು, ಅದರಲ್ಲಿ ಹೊಸ ಮೊಬೈಲ್ ನಂಬರ್ ಎಂಟರ್ ಮಾಡಿ
Step 7: ಹಾಗೂ ಗೆಟ್ ಓಟಿಪಿ(Get otp) ಮೇಲೆ ಕ್ಲಿಕ್ ಮಾಡಿ ಆಗ ನಿಮ್ಮ ಹೊಸ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ. ಅದನ್ನು ಎಂಟರ್ ಮಾಡಿ ವೆರಿಫೈ ಓಟಿಪಿ(Verify otp) ಮೇಲೆ ಕ್ಲಿಕ್ ಮಾಡಿ
Step 8: ಕೆಳಗಡೆ ಅಪ್ಡೇಟ್ ಯುವರ್ ಮೊಬೈಲ್ ನಂಬರ್ (Update your mobile number) ಎಂದು ಇದ್ದು, ಅದರ ಮೇಲೆ ಕ್ಲಿಕ್ ಮಾಡಿ
Step 9: ಆಗ ನಿಮಗೆ ಯುವರ್ ಮೊಬೈಲ್ ನಂಬರ್ ಅಪ್ಡೇಟೆಡ್(your mobile number updated) ಎಂಬ ಪಾಪಪ್ ತೋರಿಸುತ್ತದೆ ಓಕೆ(ok) ಮೇಲೆ ಕ್ಲಿಕ್ ಮಾಡಿ
ಹೀಗೆ ನೀವು ನಿಮ್ಮ ಮೊಬೈಲ್ ನಂಬರ್ ಅನ್ನು ಅಪ್ ಡೇಟ್ ಮಾಡಬಹುದು
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ಮಾರುಕಟ್ಟೆ ದರವನ್ನು ದಿನನಿತ್ಯ ತಿಳಿದುಕೊಳ್ಳಲು….
ಇತರ ಜಿಲ್ಲೆಗಳ ಕೊಬ್ಬ ರಿ ಮಾರುಕಟ್ಟೆಯ ದರವು ನಿಮಗೆ ಬೆಳೆದ ಫಸಲಿಗೆ ಒಳ್ಳೆ ದರವು ದೊರೆತಂತಾಗುತ್ತದೆ. ಈ ಕಾರಣಕ್ಕಾಗಿ ರೈತರಿಗೆ ಸಹಾಯವಾಗಲು ನಮ್ಮ ವೆಬ್ಸೈಟ್ನಲ್ಲಿ ಇರುವ ದಿನಾಂಕಗಳಲ್ಲಿ ಇಂದಿನ ಮಾರುಕ ಟ್ಟೆ ದರವನ್ನು ಪ್ರಕಟಿಸಲಾಗುತ್ತದೆ.
<<< ಅಡಿಕೆ ಮಾರುಕಟ್ಟೆ : ಇಂದಿನ ಅಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ )>>>
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
ವಿ.ಕೆ
ಪರಿಸರ ಪರಿಸರದೊಂದಿಗೆ ಆರ್ಥಿಕತೆ