"Agriculture is our CULTURE"

Status Approved :: ಬೆಳೆ ಹಾನಿ ಪರಿಹಾರಕ್ಕೆ ತಹಸೀಲ್ದಾರ್ ಅಪ್ರೂವಲ್ ಬೇಕು! ವೆರಿಫಿಕೇಷನ್ ಪೆಂಡಿಂಗ್ ಇದ್ರೆ ಹಣ ಬರಲ್ಲ! ಕೂಡಲೇ ಈ ಲಿಸ್ಟ್ ನಲ್ಲಿ ಹೆಸರಿದಿಯಾ ಚೆಕ್ ಮಾಡಿ!

ರಾಜ್ಯದಲ್ಲಿ ಕಳೆದ ವಷ೯ ಹಾಗೂ ಈ ವಷ೯ ಬರಗಾಲ ಹಾಗೂ ನೆರೆಹಾವಳಿ ಉಂಟಾಗಿ ಬೆಳೆ ಹಾನಿಯಾಗಿತ್ತು ರಾಜ್ಯ ಸರ್ಕಾರವು ಕೃಷಿ ಇಲಾಖೆ ಕಂದಾಯ ಇಲಾಖೆ ಹಾಗೂ

ತೋಟಗಾರಿಕಾ ಇಲಾಖೆಯ ಜಂಟಿ ಸಮೀಕ್ಷೆ ನಡೆಸಿ ಅದರ ವರದಿ ಅನ್ವಯ ಬೆಳೆ ಹಾನಿಗೆ ಒಳಗಾದ ರೈತರಿಗೆ ಬೆಳೆ ಹಾನಿ ಪರಿಹಾರವನ್ನು ಬಿಡುಗಡೆ ಮಾಡಿದ್ದು ಇದೀಗ ರೈತರಿಗೆ ಬೆಳೆ ಹಾನಿ ಪರಿಹಾರ ಮತ್ತು ಜಮೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ.

ಈ ಲಿಸ್ಟ್ ಅಲ್ಲಿ ಹೆಸರಿಲ್ಲ ಅಂದ್ರೆ ಹಣ ಬರಲ್ಲ!

ಆದರೆ ಸಮೀಕ್ಷೆ ಅನ್ವಯ ಬೆಳೆ ಹಾನಿ ಪರಿಹಾರ ಪಡೆಯುವ ರೈತರ ಪಟ್ಟಿಯನ್ನು ಭೂಮಿ ವೆಬ್ ಸೈಟ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ಈ ಲಿಸ್ಟಿನಲ್ಲಿ ಹೆಸರಿರುವವರಿಗೆ ಮಾತ್ರ ಬೆಳೆ ಹಾನಿ ಪರಿಹಾರ ಸಿಗುತ್ತದೆ.

ಅದರಲ್ಲೂ ಕೂಡ ನಿಮ್ಮ ತಾಲ್ಲೂಕಿನ ತಹಸೀಲ್ದಾರ್ ರವರು ರೈತರ ಬೆಳೆ ಹಾನಿ ಪರಿಹಾರ ಪಡೆಯುವ ಲಿಸ್ಟ್ ನಲ್ಲಿರುವ ರೈತರ ಬೆಳೆಹಾನಿ ಪರಿಹಾರಕ್ಕೆ ಅಪ್ರೂವಲ್ ಕೊಟ್ಟಿದ್ದರೆ ಮಾತ್ರ ಹಣ ಜಮೆಯಾಗುತ್ತದೆ. ವೆರಿಫಿಕೇಷನ್ ಪೆಂಡಿಂಗ್ ಎಂದು ಇದ್ದಲ್ಲಿ ನಿಮಗೆ ಹಣ ಬರುವುದಿಲ್ಲ ಎನ್ನಲಾಗುತ್ತಿದೆ.

ಹಾಗಾದರೆ ಬೆಳೆ ಹಾನಿ ಪರಿಹಾರದ ಲಿಸ್ಟ್ ನಲ್ಲಿ ನಿಮ್ಮ ಹೆಸರನ್ನು ಚೆಕ್ ಮಾಡುವುದು ಹೇಗೆ?

Step 1:ಅದಕ್ಕಾಗಿ ನೀವು ಮೊದಲಿಗೆ ಈ ಕೆಳಗಿನ ಲಿಂಕ್(link) ಮೇಲೆ ಕ್ಲಿಕ್ ಮಾಡಿ

https://parihara.karnataka.gov.in/service92/

Step 2: ನಂತರ ಓಪನ್ ಆಗುವ ವೆಬ್ಸೈಟ್ ನಲ್ಲಿ ವಷ೯ವನ್ನು 2023-24 ಎಂದಿದ್ದು, ಅದನ್ನು ಸೆಲೆಕ್ಟ್ ಮಾಡಿ ನಂತರ ಸೀಸನ್(season) ಖಾರಿಫ್(kharif) ಎಂದು ಹಾಗೂ ಕ್ಯಾಲಾಮಿಟಿ ಟೈಪ್(calamity type) ಬರ (drought) ಎಂದು ಸೆಲೆಕ್ಟ್ ಮಾಡಿ ಗೆಟ್ ಡಾಟಾ( Get data) ಮೇಲೆ ಕ್ಲಿಕ್ ಮಾಡಿ

Step 3: ಆಗ ಕೆಳಗೆ ಮತ್ತೊಂದು ಪೇಜ್ ಓಪನ್ ಆಗುತ್ತದೆ. ಅದರಲ್ಲಿ ಸಚ್೯ ಬೈ(Search by) ಎಂದಿದ್ದು, ಅದರಲ್ಲಿ 4 ಆಯ್ಕೆ ಇರುತ್ತವೆ. ನೀವು ಆಧಾರ್ ನಂಬರ್ ಅಥವಾ ನಿಮ್ಮ ಮೊಬೈಲ್ ನಂಬರ್ ಮೂಲಕ ನಿಮ್ಮ ಹೆಸರನ್ನು ಹುಡುಕಬಹುದು. ಮೊಬೈಲ್ ನಂಬರ್ ಮೂಲಕ ಹುಡುಕುವವರು ಮೊಬೈಲ್ ನಂಬರ್ ಮೇಲೆ ಕ್ಲಿಕ್ ಮಾಡಿ

 

Step 4: ಆಗ ನಿಮಗೆ ಮತ್ತೊಂದು ಪೇಜ್ ಓಪನ್ ಆಗುತ್ತದೆ. ಅದರಲ್ಲಿ ಮೊಬೈಲ್ ನಂಬರ್/ಆಧಾರ್ ನಂಬರ್ ನೀವು ಯಾವುದನ್ನು ಮೇಲೆ ಆಯ್ಕೆ ಮಾಡಿರುತ್ತೀರೋ ಅದನ್ನು ಹಾಕಿ ಫೆಚ್ ಬಟನ್(Fetch button) ಮೇಲೆ ಕ್ಲಿಕ್ ಮಾಡಿ

Step 5: ಆಗ ನಿಮಗೆ ನಿಮ್ಮ ಅಜಿ೯ಯ ಸ್ಥಿತಿ ಏನು ತಹಸೀಲ್ದಾರ್ ರವರು ವೆರಿಫಿಕೇಷನ್ ಅಲ್ಲಿ ಅಪ್ರೂವಲ್(Approval) ಮಾಡಿದ್ದಾರೋ ಅಥವಾ ಇನ್ನು ಪೆಂಡಿಂಗ್(Verification Pending) ಇದಿಯೋ ಎಂದು ತೋರಿಸುತ್ತದೆ.

ಪೆಂಡಿಂಗ್ ಇದ್ದರೆ ಏನು ಮಾಡಬೇಕು?

ವೆರಿಫಿಕೇಷನ್ ಪೆಂಡಿಂಗ್(Verification pending) ಎಂದು ಇದ್ದಲ್ಲಿ ನೀವು ನಿಮ್ಮ ಗ್ರಾಮ ಆಡಳಿತಾಧಿಕಾರಿಗೆ ಮಾಹಿತಿ ನೀಡಿ ಅವರ ಮೂಲಕ ತಹಸೀಲ್ದಾರ್ ರಿಂದ ಅಜಿ೯ಗೆ ಅಪ್ರೂವಲ್ ಕೊಡುವಂತೆ ಮಾಡಿ. ನಂತರದಲ್ಲಿ ವಿಮಗೆ ಬೆಳೆ ಹಾನಿ ಪರಿಹಾರ ಸಿಗುತ್ತದೆ ಇಲ್ಲವಾದಲ್ಲಿ ಹಣ ಸಿಗುವುದಿಲ್ಲ.

ಧನ್ಯವಾದಗಳು

< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >

1) ಫೇಸ್ಬುಕ್ / Facebook – ಜೈನ್ ಆಗಿ/ join facebook

2)ವಾಟ್ಸಾಪ್ ಗ್ರೂಪ್ /Whatsapp ಗುಂಪು ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ

3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V.K

ಪರಿಸರ ಪರಿಸರದೊಂದಿಗೆ ಆರ್ಥಿಕತೆ


"Agriculture is our CULTURE"