"Agriculture is our CULTURE"

Crop Insurance:: ತೋಟಗಾರಿಕಾ ಬೆಳೆಗಳಿಗೆ 37300/- ಬೆಳೆ ಹಾನಿ ಪರಿಹಾರ ಜಮೆ! ನಿಮಗೂ ಬಂದಿದಿಯಾ ಚೆಕ್ ಮಾಡೋದು ಹೇಗೆ ಇಲ್ಲಿದೆ ಡೈರೆಕ್ಟ್ ಲಿಂಕ್!

ಬೆಳೆ ಹಾನಿಯಿಂದಾಗುವ ಆರ್ಥಿಕ ಸಂಕಷ್ಟದಿಂದ ರೈತರನ್ನು ಕಾಪಾಡಲು ರಾಜ್ಯ ಸಕಾ೯ರವು ರೈತರಿಗೆ ಬೆಳೆ ಹಾನಿ ಪರಿಹಾರ ಮೊತ್ತವನ್ನು ಒದಗಿಸುತ್ತಿದ್ದು, ರಾಜ್ಯದ ತೋಟಗಾರಿಕಾ ಬೆಳೆಗಾರರಿಗೆ ಎಕರೆಗೆ 37,300 ರೂ. ಗಳಂತೆ ಪರಿಹಾರವನ್ನು ಸಕಾ೯ರ ಒದಗಿಸಿದೆ. ಇದರಿಂದ ರೈತರಿಗೆ ಆಥಿ೯ಕವಾಗಿ ಸಾಕಷ್ಟು ಸಹಾಯವಾಗಿದೆ. ಈಗಾಗಲೇ 75% ರೈತರಿಗೆ ಬೆಳೆ ಹಾನಿ ಪರಿಹಾರ ಮೊತ್ತ ಜಮೆಯಾಗಿದೆ. ಇನ್ನುಳಿದಂತೆ 25% ರೈತರಿಗೆ ಇನ್ನೇನು ಕೆಲವೇ ದಿನಗಳಲ್ಲಿ ಪರಿಹಾರ ಮೊತ್ತ ಜಮೆಯಾಗಲಿದೆ.

#ತೋಟಗಾರಿಕಾ#ಬೆಳೆ ಹಾನಿ#Crop Insurance

ಬೆಳೆ ಪರಿಹಾರ ಮೊತ್ತ ಜಮೆಯಾಗಿರುವ ಸ್ಟೇಟಸ್ ಚೆಕ್ ಮಾಡುವುದು ಹೇಗೆ?

Step 1: ನೀವು ಮೊದಲಿಗೆ ಸಂರಕ್ಷಣೆ ಎಂಬ ವೆಬ್ಸೈಟಿಗೆ ಭೇಟಿ ನೀಡಬೇಕು ಅದಕ್ಕಾಗಿ ಈ ಕೆಳಗಿನ ಲಿಂಕ್(link) ಮೇಲೆ ಕ್ಲಿಕ್ ಮಾಡಿ

https://www.samrakshane.karnataka.gov.in/

Step 2: ನಂತರ ಅಲ್ಲಿ ವರ್ಷ ಹಾಗೂ ಋತು ಸೆಲೆಕ್ಟ್ ಮಾಡಿ ಗೋ(Go) ಬಟನ್ ಕ್ಲಿಕ್ ಮಾಡಿ

Pic 1: Click on Go

Step 3: ನಂತರ ಓಪನ್ ಆಗುವ ಪೇಜ್ ನಲ್ಲಿ ಚಿತ್ರದಲ್ಲಿ ತೋರಿಸಿರುವಂತೆ ಫಾಮ೯ರ್ಸ್ ಆಯ್ಕೆಯಲ್ಲಿರುವ ಚೆಕ್ ಸ್ಟೇಟಸ್ (check status) ಎಂಬ ಆಪ್ಷನ್ ಇದ್ದು, ಅದರ ಮೇಲೆ ಕ್ಲಿಕ್ ಮಾಡಿ

#ತೋಟಗಾರಿಕಾ#ಬೆಳೆ ಹಾನಿ#Crop Insurance

Pic 2: Check status

Step 4: ನಂತರ ಓಪನ್ ಆಗೋ ಪೇಜ್ ನಲ್ಲಿ ನಿಮ್ಮ ವಿಮೆ ಪಾವತಿಸಿದ ಅರ್ಜಿಯ ಸಂಖ್ಯೆ ಇದ್ದರೆ ಅದನ್ನು ಅಥವಾ ನಿಮ್ಮ ಆಧಾರ್ ಕಾರ್ಡ್ ನಂಬರ್ ಅಥವಾ ಮೊಬೈಲ್ ನಂಬ‌ರ್ ಹಾಕಿ ಹಾಗೂ ಕೊಟ್ಟಿರುವ ಕ್ಯಾಪ್ಟಾ ಎಂಟರ್ ಮಾಡಿ ಸರ್ಚ್(Search) ಬಟನ್ ಮೇಲೆ ಕ್ಲಿಕ್ ಮಾಡಿ

Pic 3: Enter aadhar no\mobile no

Step 5: ಆಗ ನಿಮಗೆ ನಿಮ್ಮ ಅರ್ಜಿಯ ಬಗ್ಗೆ ಮಾಹಿತಿ ಸಿಗುತ್ತದೆ. ಅದರಲ್ಲಿ ನಿಮ್ಮ ಅರ್ಜಿ ಸ್ವೀಕೃತವಾಗಿದ್ದರೆ ಕಂಪನಿಯಿಂದ ಅರ್ಜಿ ಸ್ವೀಕರಿಸಲಾಗಿದೆ ಎಂದು ತೋರಿಸಿರುತ್ತಾರೆ. ನಿಮ್ಮ ಹೆಸರಿನ ಮುಂದಿನ ಕೊನೆಯ ಕಾಲಂ ನಲ್ಲಿ ಸೆಲೆಕ್ಟ್(Select) ಎಂಬ ಆಯ್ಕೆ ಇದ್ದು, ಅದರ ಮೇಲೆ ಕ್ಲಿಕ್ ಮಾಡಿ ಆಗ ಇನ್ನಷ್ಟು ವಿವರ ತೋರಿಸುತ್ತದೆ.

Pic 4: Click on select

Step 6: ಆಗ ಓಪನ್ ಆಗುವ ಪೇಜ್ ನಲ್ಲಿ ವೀವ್ ಡಿಟೇಲ್ಸ್ ( View Details) ಎಂದಿದ್ದು, ಅದರ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಅರ್ಜಿಯ ಬಗ್ಗೆ ಹೆಚ್ಚಿನ ಸಂಪೂರ್ಣ ಮಾಹಿತಿ ಸಿಗುತ್ತದೆ.

#ತೋಟಗಾರಿಕಾ#ಬೆಳೆ ಹಾನಿ#Crop Insurance

Pic 4: Click on view details

 

Step 7: ಅದರಲ್ಲಿ ಯಾವ ಸರ್ವೆ ನಂಬರ್ ಗೆ ವಿಮೆ ಕಟ್ಟಿದ್ದೀರಿ, ಯಾವ ಬೆಳೆ ಎಷ್ಟು ವಿಮೆ ಕಟ್ಟಿದ್ದೀರಿ ಎಂಬೆಲ್ಲಾ ಮಾಹಿತಿ ತೋರಿಸುತ್ತದೆ.

Pic 6: Farmer details

ಹೀಗೆ ನೀವು ನಿಮ್ಮ ಬೆಳೆ ಹಾನಿ ಪರಿಹಾರ(crop insurance) ಅರ್ಜಿಯ ಸ್ಥಿತಿ ಏನು? ಇನ್ನೂ ಯಾವಾಗ ಪರಿಹಾರ ಸಿಗುತ್ತದೆ ಎಂಬುದನ್ನು ಮೊಬೈಲ್ ನಲ್ಲಿಯೇ ಪರಿಶೀಲಿಸಬಹುದು.

ಬೆಳೆ ಹಾನಿಯಿಂದಾಗಿ ಆಥಿ೯ಕ ನಷ್ಟಕ್ಕೆ ಒಳಗಾಗುವ ರೈತರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರು ಬೆಳೆಯುವ ಬೆಳೆಗಳಿಗೆ ವಿಮೆ ಮಾಡಿಸುವ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಮೂಲಕ ವಿಮಾ ಪರಿಹಾರ ಮೊತ್ತವನ್ನು ರೈತರು ಪಡೆಯಬಹುದು.

#ತೋಟಗಾರಿಕಾ#ಬೆಳೆ ಹಾನಿ#Crop Insurance

ಧನ್ಯವಾದಗಳು

< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >

1) ಫೇಸ್ಬುಕ್ / Facebook – ಜೈನ್ ಆಗಿ/ join facebook

2)ವಾಟ್ಸಾಪ್ ಗ್ರೂಪ್ /Whatsapp ಗುಂಪು ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ

3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V.K

ಪರಿಸರ ಪರಿಸರದೊಂದಿಗೆ ಆರ್ಥಿಕತೆ


"Agriculture is our CULTURE"