"Agriculture is our CULTURE"

Ration Card Update:: ಯಾವಾಗ ಬೇಕಾದರೂ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು ತಿದ್ದುಪಡಿ ಮಾಡಿಸಬಹುದು, ನೋ ಟೈಮ್ ಲಿಮಿಟ್! ಸಕಾ೯ರದಿಂದ ಭಜ೯ರಿ ಗಿಫ್ಟ್! 

ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳುವವರು ಹಾಗೂ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವವರು ಸರ್ಕಾರದಿಂದ ಅರ್ಜಿಯನ್ನು ಆಹ್ವಾನಿಸಿದಾಗಲೇ ಅಜಿ೯ ಸಲ್ಲಿಸಬೇಕಾಗಿತ್ತು, ಆದರೆ ಸಕಾ೯ರದಿಂದ ಈಗ ದೊಡ್ಡ ಅಪ್ಡೇಟ್ ಸಿಕ್ಕಿದ್ದು,

ಇನ್ನು ಮುಂದೆ ನೀವು ರೇಷನ್ ಕಾಡ್೯ ಅಪ್ಡೇಟ್ ಮಾಡಿಸಿಕೊಳ್ಳಲು ಹಾಗೂ ಹೊಸ ರೇಷನ್ ಕಾಡ್೯ ಗೆ ಅಜಿ೯ ಸಲ್ಲಿಸಲು ಸಕಾ೯ರದಿಂದ ಅಜಿ೯ ಅಹ್ವಾನಿಸುವವರೆಗೂ ಕಾಯಬೇಕಿಲ್ಲ.

 ಅವಕಾಶ ಮಾಡಿಕೊಡುವ ತನಕ ಕಾಯಬೇಕಿಲ್ಲ! 24*7 ಅಜಿ೯ ಹಾಕಬಹುದು!

ಹೌದು, ಇನ್ನು ಮುಂದೆ ನೀವು ಯಾವಾಗ ಬೇಕಾದರೂ ರೇಷನ್ ಕಾಡ್೯ ಗೆ ಅಜಿ೯ ಸಲ್ಲಿಸಬಹುದು ಹಾಗೂ ತಿದ್ದುಪಡಿ ಮಾಡಿಸಿಕೊಳ್ಳಬಹುದು. ಅದಕ್ಕಾಗಿ ರಾಜ್ಯ ಸಕಾ೯ರವು ಹೊಸ ವೆಬ್ಸೈಟ್ ಒಂದನ್ನು ಡೆವಲಪ್ ಮಾಡಲು ಕೆಎಸ್ಐಡಿಎಸ್ಐ ಗೆ ವಹಿಸಿದ್ದು, ಈ ವೆಬ್ಸೈಟ್ ಡೆವಲಪ್ ಮಾಡಿದ ನಂತರ ಜನರಿಗೆ ಸಾಕಷ್ಟು ಅನುಕೂಲಗಳಾಗಲಿವೆ.

ಸವ೯ರ್ ಪ್ರಾಬ್ಲಂ ಇರಲ್ಲ!

ಬೆಂಗಳೂರು ಐಟಿಬಿಟಿ ಸೆಕ್ಟರ್ ಗೆ ಹೆಚ್ಚು ಹೆಸರುವಾಸಿಯಾಗಿದ್ದರೂ ಕೂಡ ನಮ್ಮ ಸಕಾ೯ರಿ ವೆಬ್ಸೈಟ್ ಗಳಲ್ಲಿ ಯಾವಾಗಲೂ ಸವ೯ರ್ ಸಮಸ್ಯೆ ಇದ್ದೇ ಇರುತ್ತದೆ.

ಇದಕ್ಕೆ ಮುಖ್ಯ ಕಾರಣ ವೆಬ್ಸೈಟ್ ಗಳು ತುಂಬಾ ವಷ೯ಗಳ ಹಿಂದೆ ಡೆವಲಪ್ ಮಾಡಿರುವುದು.ಆಹಾರ ಇಲಾಖೆ ವೆಬ್ಸೈಟ್ ಕೂಡ ತುಂಬಾ ವಷ೯ಗಳ ಹಿಂದೆಯೇ ಡೆವಲಪ್ ಮಾಡಿದ್ದು, ಇದಕ್ಕೆ ಲಾಗಿನ್ ಆಗಲು ನಿದಿ೯ಷ್ಟ ಸಮಯವಿದೆ.

ಆ ಸಮಯದಲ್ಲಿ ಮಾತ್ರ ಅಪ್ಲಿಕೇಶನ್ ತೆಗೆದುಕೊಳ್ಳುತ್ತದೆ.ಇಲ್ಲವಾದಲ್ಲಿ ವೆಬ್ಸೈಟ್ ಓಪನ್ ಆಗುವುದೇ ಇಲ್ಲ. ಅಜಿ೯ ಕರೆದಾಗಲು ಸಾಕಷ್ಟು ಸವ೯ರ್ ಸಮಸ್ಯೆ ಆಗುತ್ತದೆ.

ಜನವರಿ ಅಥವಾ ಫೆಬ್ರವರಿಗೆ ಜನ ಬಳಕೆಗೆ ಲಭ್ಯ!

ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವೆಂದರೆ 24*7 ಬಳಸಬಹುದಾದ ಹಾಗೂ ಯಾವಾಗ ಬೇಕಾದರೂ ಬಿಪ್ಎಲ್, ಅಂತ್ಯೋದಯ ಅಥವಾ ಎಪಿಎಲ್ ರೇಷನ್ ಕಾಡ್೯ ಗೆ ಅಜಿ೯ ಸಲ್ಲಿಸುವ, ತಿದ್ದುಪಡಿ ಮಾಡಬಹುದಾದ ಬಳಕೆದಾರ ಸ್ನೇಹಿ ವೆಬ್ಸೈಟ್ ಡೆವಲಪ್ ಮಾಡಲು ಸಕಾ೯ರ ಮುಂದಾಗಿದೆ.

ಈಗಾಗಲೇ ಈ ಕೆಲಸ 6 ತಿಂಗಳಿಂದ ಪ್ರಗತಿಯಲ್ಲಿದ್ದು, ಇನ್ನೇನು ಜನವರಿ ಒಳಗೆ ವೆಬ್ಸೈಟ್ ಡೆವಲಪ್ ಮಾಡುವ ಪ್ರಕ್ರಿಯೆ ಮುಗಿಯಲಿದೆ. ಜನವರಿ ಅಥವಾ ಫೆಬ್ರವರಿ 2025 ರ ತಿಂಗಳಲ್ಲಿ ಈ ವೆಬ್ಸೈಟ್ ಬಳಕೆದಾರರಿಗೆ ಬಳಕೆಗೆ ಲಭ್ಯವಾಗಲಿದೆ.

ರೇಷನ್ ಕಾಡ್೯ ತಿದ್ದುಪಡಿಗೆ ಅವಕಾಶ!

ಪ್ರಸ್ತುತ ತಿದ್ದುಪಡಿಗೆ ಅವಕಾಶ ಮಾಡಿಕೊಡಲಾಗಿದ್ದು, ಯಾರಾದರೂ ರೇಷನ್ ಕಾಡ್೯ ತಿದ್ದುಪಡಿ ಮಾಡಿಸಬೇಕೆಂದಿದ್ದರೆ ಕೂಡಲೇ ಮಾಡಿಸಿಕೊಳ್ಳಿ. ಅಥವಾ ಇನ್ನೆರಡು ತಿಂಗಳು ಕಾದಲ್ಲಿ ನಂತರ ನೀವು ಯಾವಾಗ ಬೇಕಾದರೂ ತಿದ್ದುಪಡಿ ಮಾಡಿಸಿಕೊಳ್ಳಬಹುದು.

ಸಕಾ೯ರದ ಈ ಕ್ರಮದಿಂದ ರಾಜ್ಯದ ಜನರಿಗೆ ತುಂಬಾ ಸಹಾಯಕವಾಗುತ್ತದೆ. ಹೊಸ ಸದಸ್ಯರ ಸೇಪ೯ಡೆ ಅಥವಾ ಏನಾದರೂ ಚಿಕ್ಕ ತಿದ್ದುಪಡಿ ಮಾಡಿಸಬೇಕೆಂದರೂ ಕೂಡ ಸಕಾ೯ರ ಅವಕಾಶ ಮಾಡಿಕೊಡುವ ತನಕ ಕಾಯಬೇಕಿತ್ತು.

ಇದರಿಂದ ಆ ಕುಟುಂಬಕ್ಕೆ ಸಿಗಬೇಕಾದ ಸೌಲಭ್ಯ ತಪ್ಪಿಹೋಗುತ್ತಿತ್ತು, ಆದರೆ ಇದೀಗ ಅಂತಹ ಯಾವುದೇ ತೊಂದರೆಗಳು ಆಗುವುದಿಲ್ಲ. ಯಾರೆಲ್ಲಾ ಅಹ೯ ರೇಷನ್ ಕಾರ್ಡ್ ಹೊಂದಿದ್ದಾರೋ ಅವರ ಲಿಸ್ಟ್ ವೆಬ್ಸೈಟ್ ನಲ್ಲಿ ಲಭ್ಯವಿದ್ದು, ನೀವು ಕೂಡ ಅದನ್ನು ಚೆಕ್ ಮಾಡಿಕೊಳ್ಳಬಹುದು.

ಕೇಷನ್ ಕಾಡ್೯ ಲಿಸ್ಟ್ ಚೆಕ್ ಮಾಡಿಕೊಳ್ಳೋದು ಹೇಗೆ?

Step 1: ಲಿಸ್ಟ್ ಪಡೆಯಲು ಮೊದಲು ನೀವು ಈ ಕೆಳಗಿನ ಲಿಂಕ್(link) ಮೇಲೆ ಕ್ಲಿಕ್ ಮಾಡಿ

https://ahara.kar.nic.in/Home/EServices

Step 2: ನಂತರ ಎಡಭಾಗದಲ್ಲಿರುವ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ

Pic 1: Click on three lines

Step 3: ಅದರಲ್ಲಿ ಇ-ರೇಷನ್ ಕಾರ್ಡ್(E-Ration card) ಎಂಬ ಆಯ್ಕೆ ಇದು ಅದರ ಮೇಲೆ ಕ್ಲಿಕ್ ಮಾಡಿ

Pic 2: click on E-Ration card

Step 4: ಕೊನೆಯಲ್ಲಿ show village list ಎಂದು ಇದ್ದು, ಅದರ ಮೇಲೆ ಕ್ಲಿಕ್ ಮಾಡಿ

Pic 3: Click on show village list

Step, 5: ನಂತರ ಓಪನ್ ಆಗುವ ಪೇಜ್ ನಲ್ಲಿ ನಿಮ್ಮ ಜಿಲ್ಲೆ(district), ತಾಲೂಕು(taluk), ಗ್ರಾಮ ಪಂಚಾಯತ್( Gram panchayat) ಹಾಗೂ ಗ್ರಾಮ( village) ವನ್ನು ಸೆಲೆಕ್ಟ್ ಮಾಡಿ ಗೋ ಬಟನ್(Go button) ಮೇಲೆ ಕ್ಲಿಕ್ ಮಾಡಿ

Pic 4: Select your district, taluk, village

Step 6: ಆಗ ನಿಮ್ಮ ಊರಿನಲ್ಲಿ ಯಾರೆಲ್ಲಾ ರೇಷನ್ ಕಾರ್ಡ್ ಹೊಂದಿದ್ದಾರೋ ಅವರ ಹೆಸರು ತೋರಿಸುತ್ತದೆ. ಅದರಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂದು ಚೆಕ್ ಮಾಡಿಕೊಳ್ಳಿ. ಅದರ ಮುಂದೆಯೇ ಬಿಪಿಎಲ್‌ ಕಾರ್ಡ್ ಮಾಹಿತಿ ಸಿಗುತ್ತದೆ.

Pic 5: BPL card details

ಧನ್ಯವಾದಗಳು

< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >

1) ಫೇಸ್ಬುಕ್ / Facebook – ಜೈನ್ ಆಗಿ/ join facebook

2)ವಾಟ್ಸಾಪ್ ಗ್ರೂಪ್ /Whatsapp ಗುಂಪು ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ

3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚


"Agriculture is our CULTURE"