Flood Relief Fund:: 292 ಕೋಟಿ ಬೆಳೆ ಹಾನಿ ಪರಿಹಾರ! ಪ್ರತಿ ಹೆಕ್ಟೇರ್ಗೆ 18000/- ರೈತರ ಖಾತೆಗೆ ಜಮೆ! 579 ಕೋಟಿ ಜಿಲ್ಲಾಧಿಕಾರಿಗಳ ಖಾತೆಗೆ! ರೈತರ ಸಾಲ ಮನ್ನಾ!
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಆದ ಕಾರಣ ರಾಜ್ಯದಲ್ಲಿ ನೆರೆ ಉಂಟಾಗಿ ಬೆಳೆಹಾನಿಯಾಗಿತ್ತು.
ಆದ್ದರಿಂದ ರಾಜ್ಯ ಸರ್ಕಾರವು ಬೆಳೆ ಹಾನಿಗೊಳಗಾದ ರೈತರಿಗೆ 292 ಕೋಟಿ ರೂ ಬೆಳೆ ಹಾನಿ ಪರಿಹಾರ ಒದಗಿಸಿದೆ. ಈಗಾಗಲೇ 75% ರೈತರಿಗೆ ಪರಿಹಾರ ಮೊತ್ತ ಜಮೆಯಾಗಿದ್ದು,
ಇನ್ನುಳಿದ 25% ರೈತರಿಗೆ 4-5 ದಿನಗಳಲ್ಲಿ ಪರಿಹಾರ ಮೊತ್ತ ಜಮೆಯಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಬೆಳೆ ಹಾನಿಗೊಳಗಾದ ಪ್ರತಿ ಹೆಕ್ಟೇರ್ ಗೆ 18000/- ರೂ ಗಳ ಪರಿಹಾರ ಮೊತ್ತ ನೀಡಲಾಗುತ್ತಿದೆ.
ತುತು೯ ಪರಿಹಾರಕ್ಕಾಗಿ 80 ಕೋಟಿ!
ತುತು೯ ಪರಿಹಾರಕ್ಕಾಗಿ 80.47 ಕೋಟಿ ಪರಿಹಾರ ಅನುದಾನವನ್ನು ಒದಗಿಸಲಾಗಿದೆ. ರಸ್ತೆ ಸೇತುವೆ, ಶಾಲಾ ಕೊಠಡಿ, ಅಂಗನವಾಡಿ, ಆರೋಗ್ಯ ಕೇಂದ್ರ ಸೇರಿದಂತೆ
ಮಲ್ನಾಡು ಪ್ರದೇಶದಲ್ಲಿ ವಿದ್ಯುತ್ ಪೂರೈಕೆ ವ್ಯವಸ್ಥೆ ಮಾಡಲು ತುತು೯ ಪರಿಹಾರ ಒದಗಿಸಲು ಈ ಅನುದಾನವನ್ನು ಕಾಯ್ದಿರಿಸಲಾಗಿದೆ. ಈ ಪೈಕಿ 60.16 ಕೋಟಿ ರೂ ಹಣವನ್ನು ಬಿಡುಗಡೆ ಮಾಡಲಾಗಿದೆ.
ಜಿಲ್ಲಾಧಿಕಾರಿಗಳ ಖಾತೆಗೆ 579 ಕೋಟಿ!
ಇನ್ನು ಜಿಲ್ಲಾಧಿಕಾರಿಗಳು ಹಾಗೂ ತಹಸೀಲ್ದಾರರ ಖಾತೆಗೆ 579 ಕೋಟಿ ರೂ. ಪರಿಹಾರ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಪ್ರವಾಹದಿಂದ ಮನೆಗೆ ನೀರುವ ನುಗ್ಗಿರುವ ಕಡೆ ಪರಿಹಾರ ಒದಗಿಸಲು ಹಾಗೂ ನಿತ್ಯದ ಖಚು೯ ನಿವ೯ಹಿಸಲು 5.62 ಕೋಟಿ ರೂ. ಅನುದಾನ ಒದಗಿಸಲಾಗಿದೆ.
860 ಗ್ರಾಮ ಪಂಚಾಯಿತಿಗಳು ಭೂಕುಸಿತ ಪ್ರದೇಶ ಎಂದು ಘೋಷಣೆ!
ರಾಜ್ಯದ 6 ಜಿಲ್ಲೆಗಳ 860 ಗ್ರಾಮ ಪಂಚಾಯತಿಗಳನ್ನು ಅವರು ಭೂ ಕುಸಿತ ಸಂಭವಿಸುವ ಪ್ರದೇಶಗಳು ಎಂದು ನ್ಯಾಷನಲ್ ಜಿಯಾಲಾಜಿಕಲ್ ಸವೇ೯ ಪ್ರಕಾರ ವರದಿ ಪಡೆದು ಗುರುತಿಸಲಾಗಿದೆ ಎಂದು ಸಚಿವರು ಘೋಷಿಸಿದ್ದಾರೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಯಲ್ಲಿ ಈ ಗ್ರಾಮ ಪಂಚಾಯಿತಿಗಳಿವೆ ಎಂದು ಘೋಷಿಸಿದ್ದಾರೆಈ ಗ್ರಾಮ ಪಂಚಾಯಿತಿಗಳಿಗೆ 225 ಕೋಟಿ ರೂಪಾಯಿ ವೆಚ್ಚದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳು ಮನವಿ ಸಲ್ಲಿಸಿದ್ದು,
ಈ ಸಮಸ್ಯೆಗಳ ಬಗ್ಗೆ ಶಾಶ್ವತ ಪರಿಹಾರ ಕೈಗೊಳ್ಳಲು ಸಿಎಂ ಅವರೊಂದಿಗೆ ಚರ್ಚಿಸಿ ಮುಂದಿನ ಎರಡುವರೆ ವರ್ಷದಲ್ಲಿ 400 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ತೀರ್ಮಾನಿಸಲಾಗಿದೆ ಈಗಾಗಲೇ ಈಗಾಗಲೇ 152 ಕೋಟಿ ವೆಚ್ಚದಲ್ಲಿ ನಾನಾ ಕಾಮಗಾರಿಗಳು ಮಂಜೂರಾಗಿದೆ ಎಂದು ಕಂದಾಯ ಸಚಿವರು ವಿವರಿಸಿದರು.
ಕೇಂದ್ರ ಸಕಾ೯ರದಿಂದ ಹಿಂಗಾರು ಹಂಗಾಮಿನಲ್ಲಿ ಉಂಟಾದ ಬೆಳೆಹಾನಿಗೆ ಪರಿಹಾರಕ್ಕಾಗಿ ಮನವಿ ಸಲ್ಲಿಸಿದರೂ ಕೂಡ ಯಾವ ರೀತಿಯ ಸ್ಪಂದನೆ ಸಿಗುತ್ತಿಲ್ಲ ಎಂದು ರಾಜ್ಯ ಸಕಾ೯ರ ತಿಳಿಸಿದೆ. ರಾಜ್ಯ ವಿಪತ್ತು ನಿರ್ವಹಣಾ ಅನುದಾನದಿಂದ ಬೆಳೆಹಾನಿ ಪರಿಹಾರಕ್ಕೆ ವಿಧಾನ ಮಂಡಲದಲ್ಲಿ ಬೇಡಿಕೆ ಇಡುವುದಾಗಿ ಸಕಾ೯ರದ ಮೂಲಗಳು ತಿಳಿಸಿವೆ.
ಬೆಳೆ ಹಾನಿ ಪರಿಹಾರ ಲಿಸ್ಟ್ ಬಿಡುಗಡೆಯಾಗಿದ್ದು, ಈ ಪಟ್ಟಿಯಲ್ಲಿರುವವರಿಗೆ ಮಾತ್ರ ಪರಿಹಾರ ಮೊತ್ತ ಜಮೆಯಾಗಲಿದೆ ಎಂದು ಸಕಾ೯ರ ತಿಳಿಸಿದೆ.
ಈ ಕೆಳಕಂಡ ಲಿಸ್ಟ್ ನಲ್ಲಿರುವ ರೈತರು ಮಾತ್ರ 2 ನೇ ಕಂತಿನ ಪರಿಹಾರ ಪಡೆಯಲು ಅರ್ಹರಾಗಿದ್ದು, ನಿಮ್ಮ ಹೆಸರು ಕೂಡ ಈ ಲಿಸ್ಟ್ ನಲ್ಲಿ ಇದೆಯೇ ಇಲ್ಲವೇ ಎಂಬುದನ್ನು ಕೂಡಲೇ ಚೆಕ್ ಮಾಡಿಕೊಳ್ಳಿ.
ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿಲ್ಲದಿದ್ದರೆ ಬರಪರಿಹಾರ ಹಣ ಬರಲ್ಲ!
Step 1: ಅದಕ್ಕಾಗಿ ನೀವು ಮೊದಲಿಗೆ ಈ ಕೆಳಗಿನ ಲಿಂಕ್(link) ಮೇಲೆ ಕ್ಲಿಕ್ ಮಾಡಿ
https://parihara.karnataka.gov.in/service89/PaymentDetailsReport.aspx
Step 2: ನಂತರ ಅಲ್ಲಿ ಕೇಳಲಾದ ವರ್ಷ, ಋತು, ಕ್ಯಾಲಾಮಿಟಿ ವಿಧ(calamity type) , ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ಎಲ್ಲವನ್ನು ಹಾಕಿ
Step 3: ನಂತರ ಗೆಟ್ ರಿರ್ಪೋಟ್( Get report) ಮೇಲೆ ಕ್ಲಿಕ್ ಮಾಡಿ ಆಗ ನಿಮಗೆ ಬರಪರಿಹಾರ ಪಡೆದುಕೊಂಡ ನಿಮ್ಮ ಊರಿನ ರೈತರ ಲಿಸ್ಟ್ ಸಿಗುತ್ತದೆ. ಅದರಲ್ಲಿ ನಿಮ್ಮ ಹೆಸರು ಇದೆಯೇ ಚೆಕ್ ಮಾಡಿಕೊಳ್ಳಿ
ರೈತರ ಬೆಳೆ ಸಾಲ ಮನ್ನಾ!
ಮುಂಗಾರು ಮತ್ತು ಹಿಂಗಾರು ಹೀಗೆ ಸತತ ಬೆಳೆ ಹಾನಿಗೆ ಸಿಲುಕುತ್ತಿರುವ ರೈತರಿಗೆ ಸಹಕಾರಿ ಸಂಸ್ಥೆ ಹಾಗೂ ಬ್ಯಾಂಕ್ ಸಾಲ ಸಾಧ್ಯವಾಗುತ್ತಿಲ್ಲ ಹಾಗಾಗಿ ರೈತರ ಬೆಳೆ ಸಾಲ ಮನ್ನಾ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ
ಬೆಳಗಾವಿ ಅಧಿವೇಶನದಲ್ಲಿ ಡಿಸೆಂಬರ್ 16ರಂದು ರೈತ ಸಂಘದ ಮುಖ್ಯಸ್ಥ ನಂಜುಂಡಪ್ಪ ಅವರ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಪಾದಯಾತ್ರೆ ಕೈಗೊಳ್ಳಲಾಗಿತ್ತು. ಬೆಳೆ ಸಾಲ ಮನ್ನಾ ಮಾಡುವಂತೆ ವಿರಾಪಕ್ಷದ ನಾಯಕರದ ಆರಕ್ಷಕ ರವರು ಆಗ್ರಹಿಸಿದ್ದಾರೆ.
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
V.K
ಪರಿಸರ ಪರಿಸರದೊಂದಿಗೆ ಆರ್ಥಿಕತೆ