"Agriculture is our CULTURE"

Udyogini scheme:: ಮಹಿಳೆಯರಿಗೆ 3,00,000/- ವರೆಗೆ ಸಾಲ ಮತ್ತು ಸಬ್ಸಿಡಿ ಯೋಜನೆ!!ಅರ್ಹತಾ, ದಾಖಲೆಗಳು, ಮತ್ತು ಅರ್ಜಿ ಹಾಕುವ ವಿಧಾನ?

ಉದ್ಯೋಗಿನಿ ಯೋಜನೆ ಕರ್ನಾಟಕ ಸರ್ಕಾರದ ಮಹಿಳಾ ಸಬಲೀಕರಣ ಮತ್ತು ಸ್ವಾಭಿಮಾನದ ಉದ್ದೇಶದಿಂದ ಹಾಗೂ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದ ಮಹಿಳೆಯರನ್ನು ಮೇಲೆತ್ತುವ ಉದ್ದೇಶವನ್ನು ಹೊಂದಿದೆ ಮತ್ತು ಆರ್ಥಿಕ ಸಹಾಯದೊಂದಿಗೆ ಅವರನ್ನು ಸಬಲೀಕರಣಗೊಳಿಸಲು ಮಹಿಳೆಯರಿಗೆ ಉದ್ಯೋಗ ಮತ್ತು ಸ್ವ ಉದ್ಯೋಗದ ಅವಕಾಶಗಳನ್ನು ಒದಗಿಸಿ ಅವರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುವುದು.

ಎಷ್ಟು ಸಾಲ ಸಿಗುತ್ತೆ? ಸಬ್ಸಿಡಿ ಎಷ್ಟು?

ಸ್ವಯಂ ಉದ್ಯೋಗ ಮಾಡಲು ಮುಂದಾಗುವ ಮಹಿಳೆಯರಿಗೆ ಬ್ಯಾಂಕ್ ತೆಗೆದುಕೊಳ್ಳಲು ಸಾಲಕ್ಕಾಗಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ
ಉದ್ಯೋಗಿನಿ ಯೋಜನೆಯಡಿ, ಮಹಿಳೆಯರು ಬ್ಯಾಂಕ್‌ಗಳಿಂದ ರೂ.1.00 ಲಕ್ಷದಿಂದ ರೂ.3.00 ಲಕ್ಷಗಳವರೆಗೆ ಸಾಲವನ್ನು ಪಡೆಯಬಹುದು, *ಇದಕ್ಕಾಗಿ ಸಾಮಾನ್ಯ ಮತ್ತು ವಿಶೇಷ ವರ್ಗದ ಮಹಿಳೆಯರಿಗೆ 30% ಸಹಾಯಧನವನ್ನು ಮತ್ತು *SC / ST ವರ್ಗದ ಮಹಿಳೆಯರಿಗೆ 50% ಸಹಾಯಧನ(ಸಬ್ಸಿಡಿ) ವನ್ನು ನೀಡಲಾಗುತ್ತದೆ.

ಯೋಜನೆಗೆ ಬೇಕಾದ ಅರ್ಹತಾ ಮಾನದಂಡಗಳು!

*ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
*ವಯಸ್ಸಿನ ಮಿತಿ 18 ರಿಂದ 55 ವರ್ಷ ವಯಸ್ಸಿನವರಾಗಿರಬೇಕು.
*ಆರ್ಥಿಕವಾಗಿ ಹಿಂದುಳಿದ ಮಹಿಳೆಯರು ಅಥವಾ ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳೆಯರು ಪ್ರಾಮುಖ್ಯತೆ ಪಡೆಯುತ್ತಾರೆ.
*ಯಾವುದೇ ಸಂಘ-ಸಂಸ್ಥೆಗಎಲು ಅಥವಾ ಸಕಾ೯ರದ ಇತರೆ ಸಂಸ್ಥೆಗಳಿಂದ ಸಾಲ ಪಡೆದಿರಬಾರದು.

ಅಜಿ೯ ಸಲ್ಲಿಸಲು ಬೇಕಾಗಿರುವ ದಾಖಲೆಗಳು!

*ಆಧಾರ್ ಕಾರ್ಡ್
*ವಸತಿ ಪ್ರಮಾಣಪತ್ರ / ಮತದಾರರ ಗುರುತಿನ ಚೀಟಿ / ಪಡಿತರ ಚೀಟಿ
*ಚಟುವಟಿಕೆಗೆ ಸಂಬಂಧಿಸಿದ ಯೋಜನಾ ವರದಿ
*ಫಲಾನುಭವಿಗಳ ಬ್ಯಾಂಕ್ ಪುಸ್ತಕ (ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಕಡ್ಡಾಯವಾಗಿದೆ)
*ಸಂಬಂಧಪಟ್ಟ ತಹಶೀಲ್ದಾರರಿಂದ ಪಡೆದ ಆದಾಯ ಮತ್ತು ಜಾತಿ ಪ್ರಮಾಣಪತ್ರ
(ಸಾಮಾನ್ಯ/ವಿಶೇಷ ವರ್ಗದವರಿಗೆ ವಾರ್ಷಿಕ ಆದಾಯ ಮಿತಿ ರೂ.1.50 ಲಕ್ಷಗಳು, ಎಸ್‌ಸಿ/ಎಸ್‌ಟಿ ವರ್ಗದವರು ರೂ.2.00 ಲಕ್ಷಕ್ಕಿಂತ ಕಡಿಮೆ)

ಈ ಯೋಜನೆಯ ಪ್ರಮುಖ ವಿವರಗಳು ಹೀಗಿವೆ!

1. ಮಹಿಳೆಯರಿಗೆ ಸ್ವಾಭಿಮಾನದ ಜೀವನ ನಡೆಸಲು ಸಹಾಯ ಮಾಡುವುದು.
2. ಸ್ವ ಉದ್ಯೋಗ ಪ್ರಾರಂಭಿಸಲು ಹಣಕಾಸು ನೆರವು ನೀಡುವುದು.
3. ಮಹಿಳೆಯರಿಗೆ ಶಿಕ್ಷಣ ಮತ್ತು ತರಬೇತಿಯಲ್ಲಿ ಬೆಂಬಲ ನೀಡುವುದು.
4. ಗ್ರಾಮೀಣ ಮತ್ತು ಹಿಂದುಳಿದ ಮಹಿಳೆಯರಿಗೆ ವಿಶೇಷ ಪ್ರೋತ್ಸಾಹ.

ಯೋಜನೆಯ ಪ್ರಮುಖ ಲಾಭಗಳು:

1. ಹಣಕಾಸು ನೆರವು: ಮಹಿಳೆಯರಿಗೆ ಸಾಲ ಅಥವಾ ಶೂನ್ಯ ಬಡ್ಡಿ ಸಾಲದೊಂದಿಗೆ ಸ್ವ ಉದ್ಯೋಗ ಆರಂಭಿಸಲು ನೆರವು.

2. ತರಬೇತಿ: ಮಹಿಳೆಯರಿಗೆ ಉದ್ಯಮಶೀಲತೆಯಲ್ಲಿ ತರಬೇತಿ.

3. ಸಹಾಯಧನ: ಬಡ ಮಹಿಳೆಯರಿಗೆ ಉದ್ಯಮ ಆರಂಭಿಸಲು ಸಹಾಯಧನ.

4. ಆರ್ಥಿಕ ನೆರವು: ಜಂಟಿ ಹೊಣೆಗಾರಿಕೆ ಗುಂಪುಗಳು (SHG) ಮತ್ತು ಮಹಿಳಾ ಸಂಘಟನೆಗಳಿಗೆ ಸಹಾಯ.

ಅಜಿ೯ ಸಲ್ಲಿಸುವುದು ಹೇಗೆ?

ಸಮೀಪದ ಬ್ಲಾಕ್ ಅಭಿವೃದ್ಧಿ ಅಧಿಕಾರದ ಕಚೇರಿ ಅಥವಾ ಸಿಡಬ್ಲ್ಯೂಡಿಟಿ ಕಚೇರಿ( ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ) ಯಲ್ಲಿ ಅರ್ಜಿ ಸಲ್ಲಿಸಬಹುದು.

ಆನ್ಲೈನ್ ಮೂಲಕ: ಕನಾ೯ಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಅಥವಾ ಸಿಎಸ್ಸಿ ಸೆಂಟರ್ ಗಳ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.

ಮತ್ತಷ್ಟು ಮಾಹಿತಿಗಾಗಿ ಸಮೀಪದ ತಾಲ್ಲೂಕು ಕಚೇರಿಗೆ ಸಂಪರ್ಕಿಸಬಹುದು ಅಥವಾ ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಬಹುದು.

ಧನ್ಯವಾದಗಳು

< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >

1) ಫೇಸ್ಬುಕ್ / Facebook – ಜೈನ್ ಆಗಿ/ join facebook

2)ವಾಟ್ಸಾಪ್ ಗ್ರೂಪ್ /Whatsapp ಗುಂಪು ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ

3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V.K

ಪರಿಸರ ಪರಿಸರದೊಂದಿಗೆ ಆರ್ಥಿಕತೆ


"Agriculture is our CULTURE"