Annabhagya December 2024 :: ಯಾವಾಗ ಬರುತ್ತೆ ಅನ್ನಭಾಗ್ಯ ಹಣ!! ನಿಮ್ಮ ಖಾತೆಗೆ ಹಣ ಜಮವಾಗಿದೆ ಚೆಕ್ ಮಾಡಿಕೊಳ್ಳಿ!!
ಕಳೆದ ಮೂರು ತಿಂಗಳಿಂದ ಬಿಪಿಎಲ್ ಕಾಡ್೯ ರದ್ದು ಪ್ರಕ್ರಿಯೆಯಿಂದ ರಾಜ್ಯದ ಜನತೆಗೆ ರೇಷನ್ ಹಾಗೂ ಅನ್ನಭಾಗ್ಯದ ಹಣ ಜಮೆಯಾಗಿರಲಿಲ್ಲ. ಆದರೆ ಬಿಪಿಎಲ್ ಕಾಡ್೯ ರದ್ದತಿ ಪ್ರಕ್ರಿಯೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಕ್ರಿಯೆಯನ್ನು ನಿಲ್ಲಿಸಿದ್ದಾರೆ.
ಹಾಗಾಗಿ ಡಿಸೆಂಬರ್ ತಿಂಗಳಲ್ಲಿ ಪಡಿತರ ಹಾಗೂ ಅನ್ನಭಾಗ್ಯದ ಹಣ ಸಂಬಂಧಿಸಿದ ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ ಎಂದು ಆಹಾರ ಇಲಾಖೆ ಸಚಿವರು ತಿಳಿಸಿದ್ದರು.
ಆದರೆ ಇದುವರೆಗೂ ಇನ್ನು ಸೆಪ್ಟೆಂಬರ್, ಅಕ್ಟೋಬರ್ ಹಾಗೂ ನವೆಂಬರ್ ತಿಂಗಳುಗಳ ಅನ್ನಭಾಗ್ಯದ ಹಣ ಜಮೆಯಾಗಿಲ್ಲ. ಅಲ್ಲದೇ ಕೆಲವೆಡೆ ಇದುವರೆಗೂ ರೇಷನ್ ಕೂಡ ವಿತರಣೆಯಾಗಿಲ್ಲ.
3 ತಿಂಗಳಿಂದ ಅನ್ನಭಾಗ್ಯ ಹಣ ಬಂದಿಲ್ಲ!
ಈ ಬಗ್ಗೆ ಜನರಲ್ಲಿ ಆತಂಕ ಮೂಡಿದ್ದು, ಬಡತನದಲ್ಲಿರುವ ಕುಟುಂಬಗಳಿಗೆ ಸಕಾ೯ರ ನೀಡುವ ಪಡಿತರ ಆಧಾರವಾಗಿತ್ತು. ಆದ್ದರಿಂದ ಜನರು ಪಡಿತರ ನೀಡುವಂತೆ ಆಗ್ರಹಿಸುತ್ತಿದ್ದಾರೆ. ಈಗಾಗಲೇ ಸಕಾ೯ರ ಪಡಿತರ ನೀಡಲು ವ್ಯವಸ್ಥೆ ಮಾಡಲಾಗಿದೆ. ಆದರೆ ಅನ್ನಭಾಗ್ಯದ ಹಣ ಜಮೆಯಾಗುವ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಡಿಸೆಂಬರ್ ನಲ್ಲೂ ಸಿಗಲ್ಲ ಅನ್ನಭಾಗ್ಯ ಹಣ!
ಬಹುತೇಕ ಅನ್ನಭಾಗ್ಯದ ಹಣ ಜಮೆಯಾಗುವುದು ಇನ್ನು ತಡವಾಗಬಹುದು ಎನ್ನಲಾಗುತ್ತಿದೆ. ಏಕೇಂದರೆ ಈಗಾಗಲೇ ಗೃಹಲಕ್ಷ್ಮೀ ಹಣ ಜಮೆ ಮಾಡಲಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ಅನ್ನಭಾಗ್ಯದ 3 ತಿಂಗಳ ಬಾಕಿ ಹಣವನ್ನು ಒಟ್ಟಿಗೆ ಜಮೆ ಮಾಡುವುದು ಸಕಾ೯ರಕ್ಕೆ ಹೊರೆಯಾಗಬಹುದು ಅಲ್ಲದೇ ವಷ೯ದ ಕೊನೆ ತಿಂಗಳು ಆಗಿರುವುದುರಿಂದ ವಿವಿಧ ರೀತಿಯಲ್ಲಿ ವೆಚ್ಚವು ಹೆಚ್ಚಾಗಿರಬಹುದು.
ಅಕ್ರಮ ಬಿಪಿಎಲ್ ಕಾಡ್೯ ಹೊಂದಿದ್ದವರ ವಿರುಧ್ದ ಕಠಿಣ ಕ್ರಮ!
ಅಲ್ಲದೇ ಸಧ್ಯಕ್ಕೆ ಆಹಾರ ಇಲಾಖೆಯು ಎಪಿಎಲ್ ವಗಾ೯ವಣೆಯಾಗಿರುವ ಬಿಪಿಎಲ್ ಕಾಡ್೯ ಹಾಗೂ ರದ್ದಾಗಿರುವ ಬಿಪಿಎಲ್ ಕಾಡ್೯ಗಳನ್ನು ಸರಿಪಡಿಸುವ ಹಾಗೂ ಅಕ್ರಮ ಬಿಪಿಎಲ್ ಕಾಡ್೯ ಮಾಡಿಸಿಕೊಂಡಿರುವವರ ವಿರುಧ್ದ ಕ್ರಮ ಕೈಗೊಳ್ಳಲು ಮುಂದಾಗಿದ್ದು ಆ ಕೆಲಸಗಳಿಗೆ ಮಹತ್ವ ಕೊಟ್ಟಿದೆ. ಅಕ್ರಮ ಬಿಪಿಎಲ್ ಕಾಡ್೯ ಹೊಂದಿದವರ ವಿರುದ್ದ ಈಗಾಗಲೇ ಎಫ್ಐಆರ್ ಆಗಿದ್ದು, ದಂಡವನ್ನು ವಿಧಿಸಲಾಗಿದೆ.
ಬಿಪಿಎಲ್ ಕಾಡ್೯ ಮರುಪರಿಶೀಲನೆ ಪ್ರಕ್ರಿಯೆ ಮುಂದುವರೆಯಲಿದೆ ಯಾರೆಲ್ಲಾ ಅಕ್ರಮ ಕಾಡ್೯ ಹೊಂದಿದ್ದಾರೋ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಆಹಾರ ಇಲಾಖೆ ತಿಳಿಸಿದೆ.
2025 ರ ಹೊಸ ವಷ೯ಕ್ಕೆ ಸಿಗುತ್ತಾ ಅನ್ನಭಾಗ್ಯದ ಹಣ!
ಇನ್ನು ಅನ್ನಭಾಗ್ಯದ ಹಣ ಡಿಸೆಂಬರ್ ತಿಂಗಳಿನಲ್ಲಿ ಬರುವುದು ಅನುಮಾನ. ಆದರೆ ಹೊಸ ವಷ೯ದಲ್ಲಿ ಅಂದರೆ ಜನೇವರಿ 2025 ರಲ್ಲಿ ನಿಮಗೆ ಒಟ್ಟಿಗೆ 4 ತಿಂಗಳ ಅಂದರೆ ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್ ಹಾಗೂ ಡಿಸೆಂಬರ್ ತಿಂಗಳುಗಳ ಅನ್ನಭಾಗ್ಯದ ಹಣ ಜಮೆಯಾಗಲಿದೆ ಎಂದು ಮೂಲಗಳಲ್ಲಿ ಹೇಳಲಾಗುತ್ತಿದೆ.
ರಾಜ್ಯ ಸರ್ಕಾರದ ಡೈರೆಕ್ಟ್ ಬೆನಿಫಿಟ್ ಟ್ರಾನ್ಸರ್ (DBT) ಆಪ್ ಬಳಸಿಕೊಂಡು ಗೃಹಲಕ್ಷ್ಮಿ ಯೋಜನೆಯ ಹಣ ಬಂದಿರುವ ಬಗ್ಗೆ ಪರಿಶೀಲಿಸಬಹುದು.
Step 1: ಡಿಬಿಟಿ ಕರ್ನಾಟಕ(DBT Karnataka) ಆ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುಬೇಕು.
ಅದಕ್ಕಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://play.google.com/store/apps/details?id=com.dbtkarnataka
Step 2: ನಿಮ್ಮ ಆಧಾರ ಕಾಡ್೯ ನಂಬರ್ ಹಾಗೂ ಗೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಿ
Step 3: ನಂತರ ಬಂದಿರುವ ಓಟಿಪಿಯನ್ನು ಎಂಟರ್ ಮಾಡಿ ವೆರಿಫೈ ಬಟನ್ ಮೇಲೆ ಕ್ಲಿಕ್ ಮಾಡಿ
Step 4: ನಂತರ 4 ಸಂಖ್ಯೆಗಳ ಎಮ್-ಪಿನ್ ಕ್ರಿಯೇಟ್ ಮಾಡಿಕೊಳ್ಳಿ
Step 5: ನಂತರ ನಿಮ್ಮ ವಿವರಗಳಿರುವ ಪೇಜ್ ಓಪನ್ ಆಗುತ್ತದೆ ಅಲ್ಲಿ ಮೊಬೈಲ್ ನಂಬರ್ ಹಾಕಿ ಓಕೆ ಮೇಲೆ ಕ್ಲಿಕ್ ಮಾಡಿ
Step 6: ನಂತರದ ಪೇಜ್ ನಲ್ಲಿ ಪೇಮೆಂಟ್ಸ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ
ಅಲ್ಲಿ ನೀವು ಸಕಾ೯ರದಿಂದ ಯಾವೆಲ್ಲಾ ಯೋಜನೆಗಳಲ್ಲಿ ಹಣ ಪಡೆಯುತ್ತಿದ್ದೀರೋ ಆ ಯೋಜನೆಗಳ ಲಿಸ್ಟ್ ತೋರಿಸುತ್ತದೆ.
Step 7: ಅದರಲ್ಲಿ ಅನ್ನ ಭಾಗ್ಯ ಯೋಜನೆಯನ್ನು ಸೆಲೆಕ್ಟ್ ಮಾಡಿ ಆಗ ನಿಮಗೆ ಇದುವರೆಗೂ ಎಷ್ಟು ಕಂತುಗಳಲ್ಲಿ ಹಣ ಬಂದಿದೆ ಯಾವ ದಿನಾಂಕದಂದು ಬಂದಿದೆ ಎಂಬ ವಿವರ ಇರುತ್ತದೆ ಅದರಲ್ಲಿ ನೀವು ಡಿಸೆಂಬರ್ ಅಂದರೆ ಈಗ ಬಂದಿರುವ ಹಣವನ್ನು ಕೂಡ ಚೆಕ್ ಮಾಡಿಕೊಳ್ಳಬಹುದು
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
V.K
ಪರಿಸರ ಪರಿಸರದೊಂದಿಗೆ ಆರ್ಥಿಕತೆ