"Agriculture is our CULTURE"

Gruhalaxmi scheme:: 15ನೇ ಕಂತಿನ ಗೃಹಲಕ್ಷ್ಮೀ ಹಣ 2000 ರೂ. ಬಂತು! ಈ 14 ಜಿಲ್ಲೆಯವರಿಗೆ ಜಮೆ! ನಿಮಗೂ ಬಂದಿದಿಯಾ ಚೆಕ್ ಮಾಡಿ?

15 ನೇ ಕಂತಿನ ಹಣ ಗೃಹಲಕ್ಷ್ಮೀ ಸ್ವಲ್ಪ ತಡವಾಗಬಹುದು ಎಂದುಕೊಳ್ಳುತ್ತಿರುವಾಗಲೇ ರಾಜ್ಯದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಖುಷಿ ಸುದ್ದಿ ಸಿಕ್ಕಿದ್ದು ಮೊನ್ನೆಯಿಂದಲೇ ಅಂದರೆ 11-12-2024 ರಿಂದಲೇ ಗೃಹಲಕ್ಷ್ಮೀ ಹಣ ಹಾಕಲು ಪ್ರಾರಂಭಿಸಲಾಗಿದೆ ಅಲ್ಲದೇ ದಿನಾಂಕ 12-12-2024 ರಂದು ಅಂದರೆ ನಿನ್ನೆಯೇ ಬಹಳಷ್ಟು ಫಲಾನುಭವಿಗಳಿಗೆ ಗೃಹ ಲಕ್ಷ್ಮೀ ಜಮೆ ಕೂಡ ಆಗಿದೆ.

ರಾಜ್ಯದ ಯಾವೆಲ್ಲಾ ಜಿಲ್ಲೆಗಳ ಫಲಾನುಭವಿಗಳಿಗೆ ಹಣ ಜಮೆಯಾಗಿದೆ?

ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ಕೊಡಲಾಗುವ 15 ನೇ ಕಂತಿನ 2000/- ಗಳನ್ನು ಮೊದಲ ಹಂತದಲ್ಲಿ ರಾಜ್ಯದ 14 ಜಿಲ್ಲೆಗಳ ಫಲಾನುಭವಿಗಳಿಗೆ ಬಿಡುಗಡೆ ಮಾಡುವುದಾಗಿ ಈ ಮುಂಚೆಯೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವರು ಈ ಹಿಂದೆಯೇ ಹೇಳಿಕೆ ನೀಡಿದ್ದರು.

ಅದರಂತೆ ಇದೀಗ ಉಡುಪಿ, ಯಾದಗಿರಿ, ಬಾಗಲಕೋಟೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಉತ್ತರ ಕನ್ನಡ, ಕೊಡಗು, ಕೊಪ್ಪಳ, ಚಿಕ್ಕಬಳ್ಳಾಪುರ, ಕಲ್ಬುರ್ಗಿ, ಗದಗ, ಬೀದರ್, ಮಂಡ್ಯ, ರಾಯಚೂರು ಸೇರಿದಂತೆ ಈ ಒಟ್ಟು 14 ಜಿಲ್ಲೆಗಳಿಗೆ ಗೃಹಲಕ್ಷ್ಮೀ ಹಣವನ್ನು ಬಿಡುಗಡೆ ಮಾಡಿದ್ದಾರೆ.

ಇನ್ನುಳಿದ ಜಿಲ್ಲೆಗಳಿಗೆ ಯಾವಾಗ ಜಮೆ?

ಇನ್ನೆರಡು ಅಥವಾ ಮೂರು ದಿನಗಳಲ್ಲಿ ರಾಜ್ಯದ ಉಳಿದ 14 ಜಿಲ್ಲೆಗಳ ಗೃಹಲಕ್ಷ್ಮೀ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡುತ್ತಾರೆ.

ತಡವಾಗಿದ್ದೇಕೆ ಗೃಹಲಕ್ಷ್ಮೀ ಹಣ?

ನವ್ಹೆಂಬರ್ ತಿಂಗಳಲ್ಲಿ ದೀಪಾವಳಿಗೆ ಡಬಲ್ ಆಫರ್ ಆಗಿ 14 ಮತ್ತು 15ನೇ ಕಂತಿನ ಹಣವನ್ನು ಒಟ್ಟಿಗೆ ಹಾಕುತ್ತಾರೆ ಎನ್ನಲಾಗುತ್ತಿತ್ತು ಆದರೆ ಆಗ ಎರಡು ಕಂತಿನ ಹಣವನ್ನು ಒಟ್ಟಿಗೆ ಹಾಕಲಿಲ್ಲ ಹಾಗಾಗಿ ಡಿಸೆಂಬರ್ ಮೊದಲ ವಾರದಲ್ಲಿಯೇ ಗೃಹಲಕ್ಷ್ಮೀಯರ ಖಾತೆಗೆ 15ನೇ ಕಂತಿನ ಹಣ ಜಮೆಯಾಗಲಿದೆ ಎನ್ನಲಾಗಿತ್ತು ಆದರೆ ಕೆಲವು ಕಾರಣಗಳಿಂದ ಅದು ಕೂಡ ಸಾಧ್ಯವಾಗಲಿಲ್ಲ.

ಅಲ್ಲದೇ ದಿವಂಗತ ಶ್ರೀ ಎಸ್ ಎಮ್ ಕೃಷ್ಣ ರವರ ನಿಧನದ ಕಾರಣ ಗೃಹಲಕ್ಷ್ಮಿಯ ಹಣ ಜಮೆಯಾಗುವುದು ಸ್ವಲ್ಪ ತಡವಾಗಬಹುದು ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿತ್ತು. ಆದರೆ ಸರ್ಕಾರವು ಮನೆ ಒಡತಿಯರಿಗೆ ಕುಟುಂಬ ನಿವ೯ಹಣೆಗೆ ತೊಂದರೆಯಾಗಬಾರದೆಂದು ಈಗಾಗಲೇ ಹಣ ಜಮೆ ಮಾಡುತ್ತಿದ್ದು, ಇದು ಮನೆ ಯಜಮಾನಿಯರಿಗೆ ಖುಷಿ ತಂದಿದೆ.

ಇವರಿಗೆ ಗೃಹಲಕ್ಷ್ಮೀ ಹಣ ಬರಲ್ಲ!

ತಾಂತ್ರಿಕ ಕಾರಣ ಅಥವಾ ನಿಮ್ಮ ದಾಖಲೆಗಳ ಮಾಹಿತಿ ಸರಿಯಾಗಿ ಇಲ್ಲದಿರುವ ಕಾರಣದಿಂದ ಯಾರಿಗಾದರೂ 14ನೇ ಕಂತಿನ ಹಣ ಇನ್ನು ಜಮೆಯಾಗದಿದ್ದರೆ ಈ ಬಾರಿ ಎರಡು ಕೊಂತಿನ ಹಣವನ್ನು ಸೇರಿಸಿ ಖಾತೆಗೆ ಹಾಕಲಾಗುವುದು ಎಂದು ಸಚಿವೆ ತಿಳಿಸಿದ್ದಾರೆ.

ಆದರೆ ಇತ್ತೀಚಿಗೆ ನಡೆದ ಬಿಪಿಎಲ್ ರದ್ದತಿ ಪ್ರಕ್ರಿಯೆಯಲ್ಲಿ ನಿಮ್ಮ ಬಿಪಿಎಲ್ ಕಾರ್ಡ್ ತೆರಿಗೆ ಪಾವತಿದಾರರು ಅಥವಾ ಸರ್ಕಾರಿ ನೌಕರರು ಅಕ್ರಮವಾಗಿ ಪಡೆದ ಬಿಪಿಎಲ್ ಕಾರ್ಡ್ ಆಗಿದ್ದರೆ ಅಂತಹ ಫಲಾನುಭವಿಗಳ ಖಾತೆಗೆ ಹಣ ಬರುವುದಿಲ್ಲ ಅಲ್ಲದೆ ಇನ್ನು ಮುಂದೆ ಈ ಯೋಜನೆಯಯಿಂದ ಅಂತಹ ಫಲಾನುಭವಿಗಳನ್ನು ಕೈ ಬಿಡಲಾಗುತ್ತದೆ.

 15ನೇ ಕಂತಿನ ಹಣ ಬಂದಿರುವ ಬಗ್ಗೆ ಚೆಕ್ ಮಾಡುವುದು ಹೇಗೆ?

ರಾಜ್ಯ ಸರ್ಕಾರದ ಡೈರೆಕ್ಟ್ ಬೆನಿಫಿಟ್ ಟ್ರಾನ್ಸರ್ (DBT) ಆಪ್ ಬಳಸಿಕೊಂಡು ಗೃಹಲಕ್ಷ್ಮಿ ಯೋಜನೆಯ ಹಣ ಬಂದಿರುವ ಬಗ್ಗೆ ಪರಿಶೀಲಿಸಬಹುದು.

Step 1: ಡಿಬಿಟಿ ಕರ್ನಾಟಕ(DBT Karnataka) ಆ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುಬೇಕು.

ಅದಕ್ಕಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://play.google.com/store/apps/details?id=com.dbtkarnataka

Step 2: ನಿಮ್ಮ ಆಧಾರ ಕಾಡ್೯ ನಂಬರ್ ಹಾಗೂ ಗೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಿ

Pic 1: Enter aadhar number

Step 3: ನಂತರ ಬಂದಿರುವ ಓಟಿಪಿಯನ್ನು ಎಂಟರ್ ಮಾಡಿ ವೆರಿಫೈ ಬಟನ್ ಮೇಲೆ ಕ್ಲಿಕ್ ಮಾಡಿ

Pic 2: Enter the OTP

Step 4: ನಂತರ 4 ಸಂಖ್ಯೆಗಳ ಎಮ್-ಪಿನ್ ಕ್ರಿಯೇಟ್ ಮಾಡಿಕೊಳ್ಳಿ

Pic 3: Create M-PIN

Step 5: ನಂತರ ನಿಮ್ಮ ವಿವರಗಳಿರುವ ಪೇಜ್ ಓಪನ್ ಆಗುತ್ತದೆ ಅಲ್ಲಿ ಮೊಬೈಲ್ ನಂಬರ್ ಹಾಕಿ ಓಕೆ ಮೇಲೆ ಕ್ಲಿಕ್ ಮಾಡಿ

Pic 4: Enter mobile number

Step 6: ನಂತರದ ಪೇಜ್ ನಲ್ಲಿ ಪೇಮೆಂಟ್ಸ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ

ಅಲ್ಲಿ ನೀವು ಸಕಾ೯ರದಿಂದ ಯಾವೆಲ್ಲಾ ಯೋಜನೆಗಳಲ್ಲಿ ಹಣ ಪಡೆಯುತ್ತಿದ್ದೀರೋ ಆ ಯೋಜನೆಗಳ ಲಿಸ್ಟ್ ತೋರಿಸುತ್ತದೆ.

Pic 5: Eligible scheme

Step 7: ಅದರಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ಸೆಲೆಕ್ಟ್ ಮಾಡಿ ಆಗ ನಿಮಗೆ ಇದುವರೆಗೂ ಎಷ್ಟು ಕಂತುಗಳಲ್ಲಿ ಹಣ ಬಂದಿದೆ ಯಾವ ದಿನಾಂಕದಂದು ಬಂದಿದೆ ಎಂಬ ವಿವರ ಇರುತ್ತದೆ ಅದರಲ್ಲಿ ನೀವು ಡಿಸೆಂಬರ್ ಅಂದರೆ ಈಗ ಬಂದಿರುವ ಹಣವನ್ನು ಕೂಡ ಚೆಕ್ ಮಾಡಿಕೊಳ್ಳಬಹುದು

Pic 6: Credicted status

ಧನ್ಯವಾದಗಳು

< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >

1) ಫೇಸ್ಬುಕ್ / Facebook – ಜೈನ್ ಆಗಿ/ join facebook

2)ವಾಟ್ಸಾಪ್ ಗ್ರೂಪ್ /Whatsapp ಗುಂಪು ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ

3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V.K

ಪರಿಸರ ಪರಿಸರದೊಂದಿಗೆ ಆರ್ಥಿಕತೆ


"Agriculture is our CULTURE"