"Agriculture is our CULTURE"

Gruhalaxmi Scheme:: ಇಂತಹವರಿಗೆ ಎರಡು ಕಂತಿನ ಹಣ ಒಟ್ಟಿಗೆ 20 ತಾರೀಕಿನೊಳಗಾಗಿ ಸಿಗಲಿದೆ!! 15ನೇ ಕಂತಿನ ಗೃಹಲಕ್ಷ್ಮಿ ಹಣ ಜಮೆಯಾಗಿಲ್ಲ!!

ಡಿಸೆಂಬರ್ ಮೊದಲ ವಾರದಲ್ಲಿಯೇ ಗೃಹಲಕ್ಷ್ಮಿ 15 ನೇ ಕಂತಿನ ಹಣ ಜಮೆಯಾಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿದ್ದವು ಆದರೆ ಇದುವರೆಗೂ ಯಾವುದೇ ಮನೆ ಒಡತಿಯರಿಗೆ 15ನೇ ಕಂತಿನ ಗೃಹಲಕ್ಷ್ಮಿ ಹಣ ಜಮೆಯಾಗಿಲ್ಲ. ಹಾಗಾಗಿ ಮನೆಯ ಯಜಮಾನಿಯರು ಆದಷ್ಟು ಬೇಗ ಗೃಹಲಕ್ಷ್ಮೀ ಹಣ ಹಾಕುವಂತೆ ಸಕಾ೯ರಕ್ಕೆ ಮನವಿ ಮಾಡುತ್ತಿದ್ದಾರೆ.

ಮೊದಲ ವಾರದಲ್ಲೇ ಬರಬೇಕಿದ್ದ ಹಣ ಇನ್ನು ಬಂದಿಲ್ಲ!

ಈ ಹಿಂದೆಯೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ರವರು 14 ಜಿಲ್ಲೆಯವರಿಗೆ ಡಿಸೆಂಬರ್ ಮೊದಲ ವಾರದಲ್ಲಿಯೇ ಗೃಹಲಕ್ಷ್ಮೀ 15 ನೇ ಕಂತಿನ ಹಣ ಹಾಕುವುದಾಗಿ ಹೇಳಿದ್ದರು. ಆದರೆ ಅನಿರೀಕ್ಷಿತ ಕಾರಣದಿಂದ ಇದುವರೆಗೂ ಯಾವುದೇ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಹಣ ಹಾಕಿಲ್ಲ.

ಗೃಹ ಲಕ್ಷ್ಮೀ(Gruhalaxmi) ಹಣ ಹಾಕದಿರುವುದಕ್ಕೆ ಕಾರಣವೇನು?

ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಹಾಗೂ ಮಾಜಿ ಕೇಂದ್ರ ಸಚಿವರಾಗಿದ್ದಂತಹ ಸನ್ಮಾನ್ಯ ಶ್ರೀ ಎಸ್ ಎಮ್ ಕೃಷ್ಣ ರವರು 10-12-2024 ರಂದು ಅನಾರೋಗ್ಯದಿಂದ ನಿಧನ ಹೊಂದಿದ್ದು, ಅವರು ಕಾಂಗ್ರೆಸ್ ಪಕ್ಷದ ಹಿರಿಯ ರಾಜಕಾರಣಿಯಾಗಿದ್ದರು.

ಹೀಗಾಗಿ ತಮ್ಮ ಕುಟುಂಬದಂತಿರುವ ಪಕ್ಷದ ಹಿರಿಯ ಸದಸ್ಯರನ್ನು ಕಳೆದುಕೊಂಡು ಸಕಾ೯ರ ಹಾಗೂ ಕಾಂಗ್ರೆಸ್ ಪಕ್ಷವು ನೋವಿನಲ್ಲಿದೆ. ಹಾಗಾಗಿ ಯೋಜನೆಯ 15 ಕಂತಿನ ಹಣ ಹಾಕುವುದು ಸ್ವಲ್ಪ ತಡವಾಗಬಹುದು ಎನ್ನಲಾಗುತ್ತಿದೆ.

ಗಣ್ಯರಿಂದ ಸಂತಾಪ!

ಸನ್ಮಾನ್ಯ ಶ್ರೀ ಎಸ್ ಎಮ್ ಕೃಷ್ಣ ರವರ ನಿಧನಕ್ಕೆ ಕೇಂದ್ರ ಸಚಿವರಾದ ಬಿಜೆಪಿಯ ಪ್ರಲ್ಹಾದ್ ಜೋಶಿ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ರವರು ಸಂತಾಪ ಸೂಚಿಸಿದ್ದು, ಪ್ರಧಾನಿಗಳ ಸಂತಾಪವನ್ನು ಎಸ್ ಎಮ್ ಕೃಷ್ಣರವರ ಕುಟುಂಬಕ್ಕೆ ತಲುಪಿಸಿದ್ದಾರೆ.

ಅಲ್ಲದೇ ಎಸ್ ಎಮ್ ಕೃಷ್ಣ ರವರ ಬಗ್ಗೆ ಮಾತನಾಡಿ ಪಕ್ಷಭೇದ ಮರೆತು ತಮ್ಮಿಂದಾಗಬಹುದಾದ ಕೆಲಸಗಳನ್ನು ಕೂಡಲೇ ಮಾಡಿಕೊಡುತ್ತಿದ್ದರು ಎಂದಿದ್ದಾರೆ. ಬಿಜೆಪಿಯ ಶಾಸಕರಾದ ಮುನಿರತ್ನ ರವರು ಮಾತನಾಡಿ ಎಸ್ ಎಮ್ ಕೃಷ್ಣ ರವರು ಅಜಾತಶತ್ರು ಆಗಿದ್ದರು ಎಂದಿದ್ದಾರೆ.

ಡಿಸೆಂಬರ್ 20 ರೊಳಗೆ ಸಿಗಲಿದೆ ಗೃಹಲಕ್ಷ್ಮೀ(Gruhalaxmi scheme) ಹಣ!

ಅನಿರೀಕ್ಷಿತ ಘಟನೆಯಿಂದ ಸಕಾ೯ರದಲ್ಲಿ ಮೌನ ಆವರಿಸಿದ್ದು, ಮನೆಯ ಯಜಮಾನಿಯರಿಗೆ ಈಗಾಗಲೇ ಬರಬೇಕಿದ್ದ ಗೃಹಲಕ್ಷ್ಮೀ ಹಣ ಇನ್ನು ಸ್ವಲ್ಪ ತಡವಾಗಲಿದೆ ಆದರೆ ಡಿಸೆಂಬರ್ 20 ರೊಳಗಾಗಿ ನಿಮ್ಮ ಖಾತೆಗೆ ಹಣ ಬಂದು ಸೇರಲಿದೆ. ಆದ್ದರಿಂದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಗೃಹಲಕ್ಷ್ಮೀಯರು ಯೋಜನೆಯ ಹಣಕ್ಕಾಗಿ ಸ್ವಲ್ಪ ಕಾಯಬೇಕಾಗಿದೆ.

ಒಟ್ಟಿಗೆ ಸಿಗಲಿದೆ ಎರಡು ಕಂತಿನ ಹಣ!

ಇನ್ನು ಕೆಲವರಿಗೆ 14 ನೇ ಕಂತಿನ ಹಣವೇ ಬಂದಿಲ್ಲ. ಅಂತಹವರಿಗೆ 15ನೇ ಕಂತಿನ ಹಣದ ಜೊತೆಗೆ 14 ನೇ ಕಂತಿನ ಹಣವನ್ನು ಹಾಕಲಾಗುವುದು ಎಂದು ಸಚಿವೆ ತಿಳಿಸಿದ್ದರು. ಹಾಗಾಗಿ ಇಂತಹವರಿಗೆ ಎರಡು ಕಂತಿನ ಹಣ ಒಟ್ಟಿಗೆ 20 ತಾರೀಕಿನೊಳಗಾಗಿ ಸಿಗಲಿದೆ.

ಇನ್ನು ಕೆಲವರು ತೆರಿಗೆ ಕಟ್ಟುತ್ತಿದ್ದರೂ ಕೂಡ ಅಕ್ರಮವಾಗಿ ಬಿಪಿಎಲ್ ಕಾಡ್೯ ಹೊಂದಿದ್ದರು. ಅಂತಹವರ ಕಾಡ್೯ ರದ್ದು ಮಾಡಲಾಗಿದ್ದು, ಅವರ ಮನೆಯ ಯಜಮಾನಿಗೆ ಬರುತ್ತಿದ್ದ ಗೃಹಲಕ್ಷ್ಮೀ ಹಣ ಇನ್ನು ಮುಂದೆ ಬರುವುದಿಲ್ಲ.

ಅದು ಕ್ಯಾನ್ಸಲ್ ಆಗುತ್ತದೆ. ಇನ್ನುಳಿದಂತೆ ಯಾವುದಾದರೂ ತಾಂತ್ರಿಕ ಕಾರಣಗಳಿಂದ ಹಣ ಹಾಕುವುದು ಬಾಕಿಯಿದ್ದರೆ ಅಂತಹವರಿಗೆ ಹಣ ಸಿಗಲಿದೆ.

ಧನ್ಯವಾದಗಳು

< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >

1) ಫೇಸ್ಬುಕ್ / Facebook – ಜೈನ್ ಆಗಿ/ join facebook

2)ವಾಟ್ಸಾಪ್ ಗ್ರೂಪ್ /Whatsapp ಗುಂಪು ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ

3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V.K

ಪರಿಸರ ಪರಿಸರದೊಂದಿಗೆ ಆರ್ಥಿಕತೆ


"Agriculture is our CULTURE"