Crop Insurance:: ಬೆಳೆಹಾನಿಯಾಗಿದ್ದರೂ ಪರಿಹಾರ ಸಿಕ್ಕಿಲ್ಲವೇ? ಮುಂದೇನು ಮಾಡಬೇಕು? ನನಗೆ 36000 ರೂ. ಪರಿಹಾರ ಬಂತು!
ಇತ್ತೀಚೆಗೆ ರೈತರೊಬ್ಬರಿಗೆ 36000 ರೂ. ಗಳ ಬೆಳೆಹಾನಿ ಪರಿಹಾರ ಮೊತ್ತ ಜಮೆಯಾಗಿದೆ. ಆದರೆ ಆ ರೈತರ ಗ್ರಾಮದವರೆಲ್ಲರಿಗೂ 2 ತಿಂಗಳ ಮುಂಚೆಯೇ ಬೆಳೆ ಹಾನಿ ಪರಿಹಾರ ಮೊತ್ತವು ಜಮೆಯಾಗಿತ್ತು. ಇವರಿಗೆ ಮಾತ್ರ ಬೆಳೆ ಹಾನಿಯಾಗಿದ್ದರೂ ಕೂಡ ಪರಿಹಾರ ಜಮೆಯಾಗಿರಲಿಲ್ಲ.
ಸಮೀಕ್ಷೆಯಲ್ಲಿ ಮಾಡಿದ ತಪ್ಪಿನಿಂದ ಪರಿಹಾರ ಸಿಕ್ಕಿರಲಿಲ್ಲ!
ಆಗ ಈ ರೈತರು ತಮ್ಮ ಅಜಿ೯ಯ ಸ್ಥಿತಿಯನ್ನು ಚೆಕ್ ಮಾಡಿದರು. ಅಲ್ಲಿ ಬೆಳೆಹಾನಿ ಪರಿಹಾರ ಬರುವುದಿಲ್ಲ ಎಂದು ತೋರಿಸಿದಾಗ ಇವರು ಎಡಿ ಯವರ ಕಛೇರಿಗೆ ಹೋಗಿ ವಿಚಾರಿಸಿದರು. ಆಗ ತಿಳಿದುಬಂದಿದ್ದು, ಇವರ ಜಮೀನಿನಲ್ಲಿ ಅಡಿಕೆ ಬೆಳೆ ಬೆಳೆದಿದ್ದರು. ಅಡಿಕೆ ಬೆಳೆ ಹಾನಿಯಾಗಿದ್ದರೂ ಕೂಡ ಬೆಳೆಹಾನಿ ಸಮೀಕ್ಷೆ ನಡೆಸಿದಾಗ ಅಡಿಕೆ ಬದಲು ಮೆಕ್ಕೆಜೋಳ ಎಂದು ನಮೂದಾಗಿತ್ತು. ಇದರಿಂದ ಇವರಿಗೆ ಪರಿಹಾರ ಸಿಕ್ಕಿರಲಿಲ್ಲ.
ನಂತರ ರೈತ ಮಾಡಿದ್ದೇನು?
ಪರಿಹಾರ ಪಡೆಯಲು ಈ ರೈತ ಎಡಿಯವರಿಗೆ ಬೆಳೆ ಹಾನಿ ವಿವರ ನೀಡಿದರು. ನಂತರ ಮತ್ತೊಮ್ಮೆ ಸಮೀಕ್ಷೆ ನಡೆಸಲಾಯಿತು. ಆಗ ಇವರಿಗೆ 36000 ರೂ. ಗಳ ಪರಿಹಾರ ಮೊತ್ತ ಜಮೆಯಾಯಿತು.
ನೀವು ಕೂಡಲೇ ಈ ಕೆಲಸ ಮಾಡಿ!
ನೀವು ಕೂಡ ಬೆಳೆಹಾನಿ ಪರಿಹಾರಕ್ಕೆ ಸೂಚಿಸಲಾಗಿರುವ ಬೆಳೆ ಬೆಳೆದಿದ್ದರೂ ಕೂಡ ಇನ್ನು ಪರಿಹಾರ ಬಂದಿಲ್ಲವಾದರೆ ಕೂಡಲೇ ನಿಮ್ಮ ಬೆಳೆಹಾನಿ ಪರಿಹಾರ ಅಜಿ೯ಯ ಸ್ಟೇಟಸ್ ಚೆಕ್ ಮಾಡಿ. ಅದರಲ್ಲಿ ಏನಾದರೂ ತಾಂತ್ರಿಕ ದೋಷಗಳು ಕಂಡುಬಂದಲ್ಲಿ ಅಥವಾ ಮಾಹಿತಿ ತಪ್ಪಾಗಿದ್ದಲ್ಲಿ ಕೂಡಲೇ ನಿಮ್ಮ ಹತ್ತಿರದ ಎಡಿ ಕಛೇರಿಗೆ ಭೇಟಿ ನೀಡಿ ಮಾಹಿತಿ ಪಡೆಯಿರಿ. ವಿವರಗಳು ಸರಿಯಿದ್ದಲ್ಲಿ ನಿಮಗೆ ಖಂಡಿತ ಪರಿಹಾರ ಮೊತ್ತ ಸಿಗುತ್ತದೆ.
ಬೆಳೆಹಾನಿ ಪರಿಹಾರ( Crop Insurance)ದ ಸ್ಟೇಟಸ್( status) ಚೆಕ್ ಮಾಡುವುದು ಹೇಗೆ?
step 1: ಅದಕ್ಕಾಗಿ ನೀವು ಮೊದಲಿಗೆ ಬೆಳೆ ದಶ೯ಕ್(Bele darshak) ಎಂಬ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕು.
https://play.google.com/store/apps/details?id=com.crop.offcskharif_2021
ನಂತರ ಆ ಆ್ಯಪ್ ನಲ್ಲಿ ಕೇಳಲಾದ ಎಲ್ಲಾ ಪಮಿ೯ಷನ್(permissions) ನ್ನು ನೀಡಿ
step 2: ನಂತರ ಅಲ್ಲಿ ಒಂದು ಪೇಜ್ ಓಪನ್ ಇರುತ್ತದೆ. ಅದರಲ್ಲಿ ವಷ೯ 2024-25 ಅಂತಾ ಹಾಕಿ, ಋತು ಮುಂಗಾರು(kharif) ಅಂತಾ ಸೆಲೆಕ್ಟ್(select) ಮಾಡಿ, ನಂತರ ನಿಮ್ಮ ಜಿಲ್ಲೆ(district), ತಾಲ್ಲೂಕು(taluk), ಹೋಬಳಿ(hobli), ಗ್ರಾಮ(village) ಸೆಲೆಕ್ಟ್(select) ಮಾಡಿ
step 3: ನಂತರ ನಿಮ್ಮ ಜಮೀನಿನ ಸವೇ೯ ನಂಬರ್(survey number) ಹಾಕಿ ವಿವರ ಪಡೆಯಿರಿ ಮೇಲೆ ಕ್ಲಿಕ್ ಮಾಡಿ
ನಂತರ ಸವೇ೯ ನಂಬರ್ / ಹಿಸ್ಸಾ ಲಿಸ್ಟ್ ತೋರಿಸುತ್ತೆ ಇಲ್ಲವಾದಲ್ಲಿ ಸ್ಟಾರ್ಸ್ ತೋರಿಸುತ್ತೆ ಅದರಲ್ಲಿ ನಿಮ್ಮ ಸವೇ೯ ನಂಬರ್ ಸೆಲೆಕ್ಟ್ ಮಾಡಿ
step 4: ನಂತರ ಮಾಲೀಕರ ವಿವರ ತೋರಿಸುತ್ತೆ. ಅದರಲ್ಲಿ ನಿಮ್ಮ ಯಾರ ಹೆಸರಿನಲ್ಲಿ ಅಜಿ೯ ಹಾಕಿದ್ದೀರೋ ಅವರ ಹೆಸರನ್ನು ಸೆಲೆಕ್ಟ್ ಮಾಡಿ
step 5: ನಂತರ ಗ್ರಾಮದ ಬೆಳೆ ಸಮೀಕ್ಷೆಗಾರರ ವಿವರ ಎಂದು ಇದ್ದು, ಅದರ ಮೇಲೆ ಕ್ಲಿಕ್ ಮಾಡಿದರೆ ಬೆಳೆ ಸಮೀಕ್ಷೆ ಮಾಡುವವರ ಹೆಸರು ಮೊಬೈಲ್ ನಂಬರ್ ತೋರಿಸುತ್ತೆ. ನೀವು ಅವರ ಬಳಿ ಬೆಳೆ ಸಮೀಕ್ಷೆ ಮಾಡಿಸಬಹುದು ಅಥವಾ ಆಕ್ಷೇಪಣೆ ಸಲ್ಲಿಸಬಹುದು
step 6: ಗ್ರಾಮದ ಬೆಳೆ ಸಮೀಕ್ಷೆಗಾರರ ವಿವರದ ಪಕ್ಕದಲ್ಲಿಯೇ ಇನ್ನೊಂದು ಆಯ್ಕೆಯಿದ್ದು, ಸಮೀಕ್ಷೆಯ ಮಾಹಿತಿ ಪಡೆಯಿರಿ ಎಂದಿದೆ. ಅದರ ಮೇಲೆ ಕ್ಲಿಕ್ ಮಾಡಿ ಸ್ವಲ್ಪ ಕೆಳಗೆ ಸ್ಕ್ರೋಲ್ ಮಾಡಿದರೆ ನಿಮ್ಮ ಬೆಳೆ ಸಮೀಕ್ಷೆ ಮಾಡಿದವರ ವಿವರ ಕಾಣಿಸುತ್ತದೆ. ಅದರ ಮೇಲೆ ಸುಮ್ಮನೆ ಕ್ಲಿಕ್ ಮಾಡಿ
ಅದರ ಕೆಳಗೆ ಬೆಳೆ ವಿವರ ವೀಕ್ಷಿಸಿ ಎಂದಿದ್ದು, ಅದರ ಮೇಲೆ ಕ್ಲಿಕ್ ಮಾಡಿ
step 7: ಆಗ ನಿಮ್ಮ ಬೆಳೆಹಾನಿಯ. ಸಂಪೂರ್ಣ ವಿವರ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಹೆಸರು ಸವೇ೯ ನಂಬರ್, ಬೆಳೆಯ ಹೆಸರು ಹಾಗೂ ಸಂಪೂರ್ಣ ವಿವರ, ಫೋಟೋ ತೋರಿಸುತ್ತದೆ. ಅದನ್ನು ಸರಿಯಾಗಿ ಪರಿಶೀಲಿಸಿ.
step 8: ಏನಾದರೂ ತಪ್ಪು ಕಂಡುಬಂದಲ್ಲಿ ಅಲ್ಲೇ ಕೆಳಗೆ ಕೊಟ್ಟಿರುವ ಆಕ್ಷೇಪಣೆ ಮೇಲೆ ಕ್ಲಿಕ್ ಮಾಡಿ ಆಕ್ಷೇಪಣೆ ಸಲ್ಲಿಸಬಹುದು. ನೀವೇ ಮತ್ತೊಮ್ಮೆ ಫೋಟೋ ಅಪ್ಲೋಡ್(upload) ಮಾಡಬಹುದು ಅಥವಾ ಕೂಡಲೇ ಎಡಿ ಅವರನ್ನು ಭೇಟಿ ಮಾಡಿ ನಿಮ್ಮ ಆಕ್ಷೇಪಣೆ ತಿಳಿಸಿದಲ್ಲಿ ಅವರು ಕೂಡ ದೋಷ ಸರಿಪಡಿಸಿ ಮತ್ತೊಮ್ಮೆ ಸಮೀಕ್ಷೆ ನಡೆಸಿ ಪರಿಹಾರ ಸಿಗುವಂತೆ ಮಾಡುತ್ತಾರೆ.
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
V.K
ಪರಿಸರ ಪರಿಸರದೊಂದಿಗೆ ಆರ್ಥಿಕತೆ