Pension Schemes:: ನನ್ನ ಅಜ್ಜಿಯ ಖಾತೆಗೆ ಪಿಂಚಣಿ ಹಣ ಜಮಾ!!! ಎಷ್ಟು ತಿಂಗಳು ಬಾಕಿ ಇದೆ, ಮತ್ತೇ ಪಿಂಚಣಿ ಪಡಿಯೋದು ಹೇಗೆ?
ಇತ್ತೀಚಿಗೆ ಕೆಲವೊಂದು ಕಾರಣಗಳಿಂದ ಅದೆಷ್ಟೋ ಜನರಿಗೆ ಈ ಪಿಂಚಣಿ ನೀಡುವುದನ್ನು ತಡೆಹಿಡಿಯಲಾಗುತ್ತಿದೆ ಅಥವಾ ರದ್ದು ಮಾಡಲಾಗುತ್ತಿದೆ. ನಿಮಗೂ ಕೂಡ ಬರುತ್ತಿದ್ದ ಪಿಂಚಣಿಯು ನಿಂತುಹೋಗಿದ್ದರೆ ಮತ್ತೇ ಅದನ್ನು ಪಡೆಯುವುದು ಹೇಗೆ ಎಂಬ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಿದೆ. ರಾಜ್ಯ ಹಾಗೂ ಕೇಂದ್ರ ಸಕಾ೯ರದಿಂದ ಅಸಹಾಯಕರಿಗೆ ಸ್ವಲ್ಪ ಮಟ್ಟಿಗೆ ಆಥಿ೯ಕ ಸಹಾಯವಾಗಲಿ ಎಂದು ಸಕಾ೯ರದಿಎದ ಹಲವು ಪಿಂಚಣಿ ಯೋಜನೆಗಳನ್ನು ಜಾರಿಗೆ ತರಲಾಗಿದೆ.
ಕೇಂದ್ರ ಹಾಗೂ ರಾಜ್ಯ ಸಕಾ೯ರದ ಪಿಂಚಣಿ ಯೋಜನೆಗಳು( Pension Schemes )!!!
ಸರ್ಕಾರದಿಂದ ವೃದ್ಧರಿಗೆ ವಿಧವೆಯರಿಗೆ ಹಾಗೂ ಅಂಗವಿಕಲರಿಗೆ ಪಿಂಚಣಿ ಯೋಜನೆಗಳನ್ನು ಜಾರಿಗೆ ತಂದು ಮಾಸಿಕವಾಗಿ ಪಿಂಚಣಿಯನ್ನು ಕೊಡಲಾಗುತ್ತದೆ ಇಂತಹ ಹಲವಾರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು ಲಭ್ಯವಿದ್ದು, ವೃದ್ಧರಿಗೆ ವೃದ್ಧಾಪ್ಯ ವೇತನ, ಇಂದಿರಾ ಗಾಂಧಿ ಓಲ್ಡ್ ಏಜ್ ಪೆನ್ಷನ್ ಸ್ಕೀಮ್ ಹಾಗೂ ಸಂಧ್ಯಾ ಸುರಕ್ಷಾ ಯೋಜನೆ, ವಿಧವೆಯರಿಗೆ ವಿಧವಾ ವೇತನ ಹಾಗೂ ಅಂಗವಿಕಲರಿಗೆ ವಿಕಲಚೇತನರ ಪಿಂಚಣಿಯನ್ನು ಕೊಡಲಾಗುತ್ತಿದೆ.
ಪಿಂಚಣಿ( Pension ) ತಡೆಹಿಡಿಯಲು ಕಾರಣ!
ಮಾಸಿಕವಾಗಿ ಸಕಾ೯ರದಿಂದ ವೃದ್ದಾಪ್ಯ ವೇತನ 1200/-, ವಿಧವಾ ವೇತನ 800/-, ಹಾಗೂ ಅಂಗವಿಕಲರ ವೇತನ 1400/- ಹಾಗೂ ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಅವರ ವಿಧವಾ ಹೆಂಡತಿಗೆ 2000/-ಗಳ ಪಿಂಚಣಿಯನ್ನು ನೀಡಲಾಗುತ್ತಿದೆ. ಆದರೆ ಇತ್ತೀಚೆಗೆ ನಕಲಿ ದಾಖಲೆ ಬಳಸಿ ಪಿಂಚಣಿ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದ್ದು, ಇದರಿಂದಾಗಿ ಅಧಿಕಾರಿಗಳು ಕೆಲವೊಂದು ಪಿಂಚಣಿಗಳನ್ನು ರದ್ದು ಮಾಡುತ್ತಿದ್ದಾರೆ. ಅಥವಾ ತಾಂತ್ರಿಕ ತೊಂದರೆಗಳಿಂದಾಗಿಯೂ ಕೂಡ ಪಿಂಚಣಿ ನಿಂತುಹೋಗುತ್ತಿವೆ. ಹಾಗಾಗಿ ಎಷ್ಟೋ ಜನರಿಗೆ ಮಾಸಿಕವಾಗಿ ಸರಿಯಾಗಿ ಪಿಂಚಣಿ ಬರುತ್ತಿಲ್ಲ.
ಪಿಂಚಣಿ ಮರಳಿ ಪಡೆಯಲು ಏನು ಮಾಡಬೇಕು?
ಹೀಗಾದಾಗ ಅಸಹಾಯಕರಿಗೆ ತೊಂದರೆಯಾಗುತ್ತಿದೆ. ಒಂದು ವೇಳೆ ನಿಮಗೂ ಕೂಡ ಹೀಗೆ ಆಗಿದ್ದಲ್ಲಿ ಅದನ್ನು ನೀವು ಸರಿಪಡಿಸಿಕೊಂಡು ಪಿಂಚಣಿ ಪಡೆಯಬಹುದು. ಮೊದಲಿಗೆ ನಿಮ್ಮ ಪಿಂಚಣಿ ಸ್ಥಿತಿಯನ್ನು ಮೊಬೈಲ್ ನಲ್ಲಿಯೇ ಚೆಕ್ ಮಾಡಿಕೊಳ್ಳಿ. ಒಂದು ವೇಳೆ ಪಿಂಚಣಿ ನಿಂತುಹೋಗಿದ್ದರೆ ಅದರ ಬಗ್ಗೆ ತಹಸೀಲ್ದಾರ್ ಕಛೇರಿಯಲ್ಲಿ ಮಾಹಿತಿ ಪಡೆದು ಸೂಕ್ತ ದಾಖಲೆಗಳನ್ನು ಕೊಟ್ಟು ಅದನ್ನು ಸರಿಪಡಿಸಿಕೊಳ್ಳಿ.
ನಿಮ್ಮ ಪಿಂಚಣಿ ಸ್ಥಿತಿಯನ್ನು ಮೊಬೈಲ್ ನಲ್ಲಿಯೇ ಚೆಕ್ ಮಾಡಿಕೊಳ್ಳುವುದು ಹೇಗೆ?
Step 1: ಅದಕ್ಕಾಗಿ ನೀವು ಮೊದಲು ಈ ಕೆಳಗಿನ ಡೈರೆಕ್ಟ್ ಲಿಂಕ್( Direct Link ) ಮೇಲೆ ಕ್ಲಿಕ್ ಮಾಡಿ
Step 2: ನಂತರ ಅಲ್ಲಿ ನೀವು ಗ್ರಾಮೀಣದವರಾಗಿದ್ದರೆ ಗ್ರಾಮೀಣ ಎಂಬುದರ ಪಕ್ಕದ ವೃತ್ತದ ಮೇಲೆ ಅಥವಾ ನಗರ ಎಂಬುದರ ಪಕ್ಕದ ವೃತ್ತದ ಮೇಲೆ ಕ್ಲಿಕ್ ಮಾಡಿ
Step 3: ನಂತರ ನಿಮ್ಮ ಜಿಲ್ಲೆ( District ) , ತಾಲ್ಲೂಕು( Taluk ) , ಹೋಬಳಿ( Hobli ) ಹಾಗೂ ಗ್ರಾಮ( Village )ವನ್ನು ಸೆಲೆಕ್ಟ್ ಮಾಡಿ ಸಬ್ಮಿಟ್( Submit ) ಮೇಲೆ ಕ್ಲಿಕ್ ಮಾಡಿ
Step 4: ನಂತರ ನಿಮ್ಮ ಗ್ರಾಮದಲ್ಲಿ ಯಾರೆಲ್ಲಾ ಪಿಂಚಣಿ ಪಡೆಯುತ್ತಿದ್ದಾರೋ ಎಲ್ಲರ ಲಿಸ್ಟ್(list) ಓಪನ್ ಆಗುತ್ತದೆ. ಆಗ ಅದರಲ್ಲಿ ನಿಮ್ಮ ಹೆಸರನ್ನು ಹುಡುಕಿ ಅದರಲ್ಲಿ ನಿಮ್ಮ ಹೆಸರು, ಜಾತಿ, ನಿಮಗೆ ಯಾವ ಯೋಜನೆಯಲ್ಲಿ ಪಿಂಚಣಿ ಬರುತ್ತಿದೆ ಎಂಬುದರ ಬಗ್ಗೆ ಮಾಹಿತಿ ಇರುತ್ತದೆ.
Step 5: ಆ ಲಿಸ್ಟ್ ನಲ್ಲಿ ಮುಂದಕ್ಕೆ ಸರಿಸಿದರೆ ಮುಂಭಾಗದಲ್ಲಿ ಪಿಂಚಣಿ ವಿವರ ಎಂದು ನೀಲಿ ಬಾಕ್ಸ್ನಲ್ಲಿ ಇರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ
ಅಲ್ಲಿ ನಿಮಗೆ ಯಾವಾಗಿನಿಂದ ಪಿಂಚಣಿ ಬರುತ್ತದೆ ಎಂಬ ಮಾಹಿತಿ ಸಿಗುತ್ತದೆ. ಹಾಗೂ ಅಲ್ಲಿ ರನ್ನಿಂಗ್( Running ) ಎಂಬ ಆಯ್ಕೆ ಇರುತ್ತದೆ. ಈ ರೀತಿಯಿದ್ದರೆ ನಿಮಗೆ ಈಗಲೂ ಪಿಂಚಣಿ ಬರುತ್ತಿದೆ ಎಂದು ಅಥ೯ ಸ್ಟಾಪ್( Stop )ಅಥವಾ ಹೋಲ್ಡ್( Hold ) ಎಂದು ಇದ್ದರೆ ನಿಮಗೆ ಪಿಂಚಣಿ ಬರುತ್ತಿಲ್ಲ ಎಂದು ಅಥ೯. ಒಂದು ವೇಳೆ ಸ್ಟಾಪ್ / ಹೋಲ್ಡ್ ಎಂದು ಇದ್ದರೆ ನೀವು ತಹಸೀಲ್ದಾರ್ ಕಛೇರಿಗೆ ಹೋಗಿ ಅದನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸಬಹುದು.ಅಲ್ಲಿ ಕೆಳಗೆ ಕ್ಲೋಸ್ ಬಟನ್(close)ಮೇಲೆ ಕ್ಲಿಕ್ ಮಾಡಿದರೆ ಲಿಸ್ಟ್ ಇರುವ ಪೇಜ್ ಗೆ ಬರುತ್ತೀರಿ
Step 6: ನಂತರ ಅದರ ಮುಂದಿನ ಬಾಕ್ಸ್ ಪಿಂಚಣಿ ಖಾತಾ ಪುಸ್ತಕ ಎಂದು ಇದ್ದು, ಅದರ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಇದುವರೆಗೂ ಯಾವ ಕಂತಿನ ಹಣ ಬಂದಿದೆ ಎಂದು ತಿಳಿಯುತ್ತದೆ. ಸಾಮಾನ್ಯವಾಗಿ ನಿಮಗೆ ಪಿಂಚಣಿ ಪ್ರಾರಂಭವಾದಾಗಿನಿಂದ ಹಿಡಿದು ಒಂದು ವಷ೯ದ ಹಿಂದಿನವರೆಗೆ ಎಲ್ಲಾ ಮಾಹಿತಿ ಅಲ್ಲಿ ಸಿಗುತ್ತದೆ.
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ಮಾರುಕಟ್ಟೆ ದರವನ್ನು ದಿನನಿತ್ಯ ತಿಳಿದುಕೊಳ್ಳಲು….
ಇತರ ಜಿಲ್ಲೆಗಳ ಕೊಬ್ಬ ರಿ ಮಾರುಕಟ್ಟೆಯ ದರವು ನಿಮಗೆ ಬೆಳೆದ ಫಸಲಿಗೆ ಒಳ್ಳೆ ದರವು ದೊರೆತಂತಾಗುತ್ತದೆ. ಈ ಕಾರಣಕ್ಕಾಗಿ ರೈತರಿಗೆ ಸಹಾಯವಾಗಲು ನಮ್ಮ ವೆಬ್‌ಸೈಟ್‌ನಲ್ಲಿ ಇರುವ ದಿನಾಂಕಗಳಲ್ಲಿ ಇಂದಿನ ಮಾರುಕ ಟ್ಟೆ ದರವನ್ನು ಪ್ರಕಟಿಸಲಾಗುತ್ತದೆ.
<<< ಅಡಿಕೆ ಮಾರುಕಟ್ಟೆ : ಇಂದಿನ ಅಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ )>>>
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
ವಿ.ಕೆ
ಪರಿಸರ ಪರಿಸರದೊಂದಿಗೆ ಆರ್ಥಿಕತೆ