Weather/Rain Report:: 2 ವಾಯುಭಾರ ಕುಸಿತದಿಂದ ಮುಂದಿನ 10 ದಿನದಲ್ಲಿ ಮಳೆಯಾಗುವ ಸಾಧ್ಯತೆ!! ಯಾವ ಯಾವ ಜಿಲ್ಲೆಗಳಲ್ಲಿ?
ಈಗಾಗಲೇ ರಾಜ್ಯದಲ್ಲಿ ಫೆಂಗಲ್ ಚಂಡಮಾರುತದಿಂದ ವಾತಾವರಣದಲ್ಲಿ ಏರುಪೇರಾಗಿದ್ದು, ಹಿಂಗಾರಿನಲ್ಲೂ ಮಳೆಯಾಗುತ್ತಿದೆ. ಇದೀಗ ಬಂಗಾಳಕೊಲ್ಲಿಯಲ್ಲಿ ಎರಡು ವಾಯು ಭಾರ ಕುಸಿತ ಉಂಟಾಗುವ ಸಾಧ್ಯತೆಯಿದ್ದು, ಆಗ ರಾಜ್ಯದಲ್ಲಿ ಮತ್ತೇ ಮುಂದಿನ 10 ದಿನದಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗುವ ಈ ಎರಡು ವಾಯುಭಾರ ಕುಸಿತದ ಪ್ರಭಾವವು ಜೋರಾಗಿರಲಿದ್ದು, ಮತ್ತೇ ರಾಜ್ಯದಲ್ಲಿ ಮಳೆ ಆಗುವ ಬಗ್ಗೆ ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.
ಫೆಂಗಲ್ ಮುಗಿತು, ವಾಯು ಭಾರ ಕುಸಿತದಿಂದ ಮತ್ತೇ ಸಂಕಷ್ಟ!
ಬೆಂಗಳೂರಿನಲ್ಲಂತೂ ಫೆಂಗಲ್ ಚಂಡಮಾರುತದ ಪ್ರಭಾವ ಹೆಚ್ಚಾಗಿದ್ದು, ರಾಜ್ಯದ ಎಲ್ಲಾ ಭಾಗಗಳಲ್ಲೂ ಈ ಚಂಡಮಾರುತದ ಪ್ರಭಾವದಿಂದ ಅಕಾಲಿಕ ಮಳೆಯಾಗಿ ಸಾಕಷ್ಟು ಹಾನಿ ಉಂಟಾಗಿದೆ. ರೈತರು ಇದರಿಂದ ಇದೀಗ ತಾನೆ ಸುಧಾರಿಸಿಕೊಳ್ಳುತ್ತಿದ್ದು, ಆಗಲೇ ವಾಯುಭಾರ ಕುಸಿತ ಸೃಷ್ಟಿಯಾಗುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ.
ಡಿಸೆಂಬರ್ 14,15,17,18 ಮಳೆ ಸಾಧ್ಯತೆ!
ಇನ್ನೇನು ಒಂದೆರಡು ದಿನದಲ್ಲಿ ಮೊದಲ ವಾಯುಭಾರ ಕುಸಿತ ಪ್ರಾರಂಭವಾಗುತ್ತಿದ್ದು, ದಿನಕಳೆದಂತೆ ಇದರ ಪ್ರಭಾವ ಹೆಚ್ಚಾಗಿ ಡಿ.14-15 ರಂದು ದಕ್ಷಿಣ ಒಳನಾಡಿನ ಜಿಲ್ಲೆಗಳು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಡಿ.16ರ ನಂತರ 2ನೇ ವಾಯುಭಾರ ಕುಸಿತ ರೂಪುಗೊಂಡು ಡಿ.17-18ಕ್ಕೆ ರಾಜ್ಯದಲ್ಲಿ ಮಳೆಯನ್ನು ತರುತ್ತದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.
ರೈತರು ಎಚ್ಚರಿಕೆಯಿಂದಿರಬೇಕು!
ಈಗ ಹಿಂಗಾರು ಹಂಗಾಮಿನ ಬೆಳೆಗಳು ಕಟಾವು ಮಾಡುವ ಹಂತದಲ್ಲಿದ್ದು, ಇಂತಹ ಸಮಯದಲ್ಲಿ ಮಳೆಯಾದರೆ ಬೆಳೆ ಮತ್ತೆ ಹಾನಿಯಾಗಬಹುದು. ಆದ್ದರಿಂದ ರೈತರು ಹೆಚ್ಚಿನ ನಿಗಾ ವಹಿಸಬೇಕು ಎಂದು ಹವಾಮಾನ ತಜ್ಞ ಶ್ರೀನಿವಾಸ್ ರೆಡ್ಡಿ ರವರು ಮಾಧ್ಯಮಗಳಿಗೆ ಮಾಹಿತಮ ನೀಡಿದ್ದಾರೆ. ಆತಂಕ ಪಡುವುದಕ್ಕಿಂತ ಎಚ್ಚರಿಕೆಯಿಂದ ನಿಗಾ ವಹಿಸಿ ಬೆಳೆಹಾನಿಯಾಗದಂತೆ ನೋಡಿಕೊಳ್ಳುವುದರ ಬಗ್ಗೆ ರೈತರು ಯೋಚಿಸಬೇಕು.
ಈಗಾಗಲೇ ಮುಂಗಾರಿನಲ್ಲಿ ಸಾಕಷ್ಟು ಬೆಳೆಹಾನಿಯಾಗಿದ್ದು, ಇನ್ನೂ ಕೆಲವರಿಗೆ ಅದರ ಬೆಳೆಹಾನಿ ಪರಿಹಾರವೇ ಸಿಕ್ಕಿಲ್ಲ. ಈಗಾಗಲೇ ರೈತರು ಪ್ರತಿ ವಷ೯ ಬೆಳೆಹಾನಿಯಿಂದ ಸಂಕಷ್ಟ ಅನುಭವಿಸುತ್ತಿದ್ದು, ಈ ಬಾರಿಯೂ ಹಾಗೆಯೇ ಆದರೆ ರೈತರು ಮತ್ತೆ ಆಥಿ೯ಕ ಸಂಕಷ್ಟಕ್ಕೆ ಸಿಲುಕುತ್ತಾರೆ. ಆದ್ದರಿಂದ ಹವಾಮಾನ ಇಲಾಖೆಯ ಮುನ್ಸೂಚನೆ ಬಗ್ಗೆ ತಿಳಿದುಕೊಂಡು ಎಚ್ಚರಿಕೆ ವಹಿಸಬೇಕು ಎಂಬುದು ನಮ್ಮ ಆಶಯ. ರೈತರು ಬೆಳೆ ಬಗ್ಗೆ ಹೆಚ್ಚಿನ ಕಾಳಜಿವಹಿಸಿ ಆದಷ್ಟು ಬೇಗ ಕಟಾವು ಮಾಡಬಹುದು. ಅಥವಾ ತಜ್ಞರ ಸಲಹೆ ಪಡೆದು ಯಾವ ಎಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದನ್ನು ಮಾಹಿತಿ ಪಡೆದು ಅವುಗಳನ್ನು ಪಾಲಿಸಬಹುದು.
ಈ ಚಂಡಮಾರುತ ಹಾಗೂ ವಾಯುಭಾರ ಕುಸಿತದಿಂದಾಗಿ ರಾಜ್ಯದಲ್ಲಿ ಅಕಾಲಿಕ ಮಳೆಯುಂಟಾಗಿ ವಾತಾವರಣದಲ್ಲಿ ಬದಲಾವಣೆಯಾಗುವುದರಿಂದ ರೈತರಿಗೆ ಮಾತ್ರವಲ್ಲದೇ ಸಾಮಾನ್ಯ ಜನರಿಗೂ ತೊಂದರೆ. ಆರೋಗ್ಯದಲ್ಲಿ ಏರುಪೇರಾಗುತ್ತಿದೆ. ಆದ್ದರಿಂದ ಜನರು ಸಹ ಎಚ್ಚರಿಕೆಯಿಂದಿರುವುದು ಒಳ್ಳೆಯದು.
ಒಟ್ಟಿನಲ್ಲಿ ಭಾರತದಲ್ಲಿನ ಕೃಷಿ ಮಾನ್ಸೂನ್ ಜೊತೆಗಿನ ಜೂಜಾಟವೆಂಬುದು ಪದೇ ಪದೇ ಸಾಬೀತಾಗುತ್ತದೆ. ಕೃಷಿಯನ್ನು ನಂಬಿದ ರೈತ ನೆಮ್ಮದಿಯಿಂದಿರಲಾರ. ಯಾವಾಗಲೂ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತದೆ. ಆದರೆ ತಜ್ಞರ ಸಲಹೆ ಪಡೆದು ಎಚ್ಚರಿಕೆ ಕ್ರಮಗಳನ್ನು ಅನುಸರಿಸಿದಲ್ಲಿ ಇದರಿಂದ ನೀವು ಪಾರಾಗಬಹುದು. ಹಾಗಾಗಿ ರೈತರು ಆತಂಕಕ್ಕೊಳಗಾಗದೇ ಎಚ್ಚರಿಕೆಯಿಂದ ಬೆಳೆಯ ಬಗ್ಗೆ ಕಾಳಜಿ ವಹಿಸಿ
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚