PM Kisan Samman Nidhi Scheme:: ಈ ಲಿಸ್ಟ್ ನಲ್ಲಿ ಹೆಸರಿರುವವರಿಗೆ 2025 ರ ಫೆಬ್ರವರಿ ತಿಂಗಳಲ್ಲಿ 19 ನೇ ಕಂತಿನ 2000!! 9.5 ಕೋಟಿ ರೈತರಿಗೆ 28,000 ಕೋಟಿ ರೂ!!
ಪಿಎಂ ಕಿಸಾನ್ 19 ನೇ ಕಂತಿನ ಹಣ ಯಾವಾಗ ಜಮೆ! ಈ ಲಿಸ್ಟ್ ನಲ್ಲಿ ಹೆಸರಿಲ್ಲ ಅಂದರೆ ಹಣ ಬರಲ್ಲ! ಕೂಡಲೇ ಈ ಕೆಲಸ ಮಾಡಿ!
ಈಗಾಗಲೇ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ದೇಶದ 9.5 ಕೋಟಿ ರೈತರಿಗೆ 28,000 ಕೋಟಿ ರೂಪಾಯಿಗಳ 18 ನೇ ಕಂತಿನ ಹಣ ಬಿಡುಗಡೆಯಾಗಿದ್ದು, ಇನ್ನೇನು ಸಧ್ಯದಲ್ಲಿಯೇ 19 ನೇ ಕಂತಿನ ಹಣ ಬಿಡುಗಡೆ ಮಾಡಲು ಸಕಾ೯ರ ಸಿದ್ದತೆ ನಡೆಸಿದ್ದು, ಈಗಾಗಲೇ ಅಹ೯ರಾದ ರೈತರ ಲಿಸ್ಟ್ ನ್ನು ವೆಬ್ಸೈಟ್ ನಲ್ಲಿ ಪ್ರಕಟಿಸಿದ್ದಾರೆ.
ನಿಮಗೆ ಕಿಸಾನ್ ಸಮ್ಮಾನ್ ಹಣ (PM kisan samman nidhi) ಗೆ ಅಹ೯ರಾದ ರೈತರ ಲಿಸ್ಟ್ ಪಡೆಯುವುದು ಹೇಗೆ?
step 1:ಅದಕ್ಕಾಗಿ ನೀವು ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://pmkisan.gov.in/Rpt_BeneficiaryStatus_pub.aspx
step 2: ಆಗ ಓಪನ್ ಆಗುವ ಪೇಜ್ ನಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ತಾಲ್ಲೂಕು, ಹೋಬಳಿ ಹಾಗೂ ಗ್ರಾಮವನ್ನು ಎಂಟರ್ ಮಾಡಿ ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಗ್ರಾಮದಲ್ಲಿ ಯೋಜನೆಗೆ ಅಹ೯ರಾದ ಎಲ್ಲಾ ರೈತರ ಲಿಸ್ಟ್ ತೋರಿಸುತ್ತದೆ. ಅದರಲ್ಲಿ ನಿಮ್ಮ ಹೆಸರನ್ನು ಹುಡುಕಬಹುದು.
19 ನೇ ಕಂತಿನ ಹಣ ಯಾವಾಗ ಜಮೆ?
ಕಳೆದ ಅಕ್ಟೋಬರ್ ತಿಂಗಳಿನಲ್ಲಿಯೇ 18 ನೇ ಕಂಂತಿನ ಹಣ ಬಿಡುಗಡೆಯಾಗಿದ್ದರೂ ಕೂಡ ಒಂದಷ್ಟು ರೈತರಿಗೆ ಇನ್ನು ಹಣ ಖಾತೆಗೆ ಜಮೆಯಾಗಿಲ್ಲ. ಅಲ್ಲದೇ ಇದೀಗ ಯೋಜನೆಯ ಅಧಿಕೃತ ವೆಬ್ಸೈಟ್ನಲ್ಲಿ 19ನೇ ಕಂತಿನ ಹಣ ಬಿಡುಗಡೆಗೆ ಅರ್ಹರಾದ ರೈತರ ಲಿಸ್ಟ್ ಅನ್ನು ಪ್ರಕಟಿಸಲಾಗಿದೆ. ಈ ಲಿಸ್ಟ್ ನಲ್ಲಿ ಹೆಸರಿರುವವರಿಗೆ 2025 ರ ಫೆಬ್ರವರಿ ತಿಂಗಳಲ್ಲಿ 19 ನೇ ಕಂತಿನ 2000/- ಹಣ ರೈತರ ಖಾತೆಗೆ ಜಮೆಯಾಗಲಿದೆ.
ಹಾಗಂತ ಎಲ್ಲ ರೈತರಿಗೂ ಜಮೆಯಾಗಲ್ಲ. 18 ನೇ ಕಂತಿನಲ್ಲಿ ಆಗಿರುವ ಸಮಸ್ಯೆ ಈಗಲೂ ಕೂಡ ಆಗಬಹುದು. ಹಾಗಾದಲ್ಲಿ ನಿಮಗೆ ಈ ಕಂತಿನ ಹಣ ಕೂಡ ಸಿಗುವುದಿಲ್ಲ.
ಇದಕ್ಕೆ ಪ್ರಮುಖ ಕಾರಣವೆಂದರೆ ರೈತರು ಲಿಸ್ಟ್ ನಲ್ಲಿ ಹೆಸರು ಬಂದಿದೆ ಹಣ ಬರುತ್ತದೆ ಎಂದು ಸುಮ್ಮನಾಗುತ್ತಾರೆ ಆದರೆ ಲಿಸ್ಟ್ ನಲ್ಲಿ ಹೆಸರು ಬಂದಿದ್ದರೂ ಕೂಡ ರೈತರು ಈ ಕೆಲಸ ಮಾಡಲೇಬೇಕು. ಆಗಲೇ ನಿಮ್ಮ ಖಾತೆಗೆ ಹಣ ಬರುತ್ತದೆ.
ಈ ಕೆಲಸ ಮಾಡದಿದ್ದರೆ ಹಣ ಬರಲ್ಲ!
ಅದೇನೆಂದರೆ ರೈತರು 19 ನೇ ಕಂತಿನ ಹಣ ಪಡೆಯಬೇಕಾದಲ್ಲಿ ನೀವು ಮೊದಲು ನಿಮ್ಮ ಬ್ಯಾಂಕ್ ಖಾತೆಗೆ ಇ-ಕೆವೈಸಿ ಮಾಡಿಸಬೇಕು. ಇಲ್ಲವಾದಲ್ಲಿ ಇನ್ನುಮುಂದೆ ಯಾವುದೇ ಕಂತಿನ ಹಣ ನಿಮಗೆ ಸಿಗಲ್ಲ. ಇ-ಕೆವೈಸಿ ಆಗಿರುವದನ್ನು ನೀವು ಮನೆಯಲ್ಲಿಯೇ ಚೆಕ್ ಮಾಡಿಕೊಳ್ಳಬಹುದು.
ಇ-ಕೆವೈಸಿ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡುವುದು ಹೇಗೆ?
step 1: ಅದಕ್ಕಾಗಿ ನೀವು ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://pmkisan.gov.in/aadharekyc.aspx
step 2: ನಂತರ ಓಪನ್ ಆಗುವ ಪೇಜ್ನಲ್ಲಿ ಆಧಾರ್ ನಂಬರ್ ಹಾಕಿ ಸಚ್೯ ಬಟನ್ ಮೇಲೆ ಕ್ಲಿಕ್ ಮಾಡಿ
step 3: ಆಗ ಮೊಬೈಲ್ ಗೆ ಓಟಿಪಿ ಬರುತ್ತದೆ ಅದನ್ನು ಎಂಟರ್ ಮಾಡಿ ಸಬ್ಮಿಟ್ ಮಾಡಿದರೆ ನಿಮ್ಮ ಬ್ಯಾಂಕ್ ಖಾತೆಗೆ ಇ-ಕೆವೈಸಿ ಆಗಿದೆಯೋ ಇಲ್ಲವೋ ಎಂಬುದು ಗೊತ್ತಾಗುತ್ತದೆ.
ಸಹಾಯವಾಣಿ:-
PM kisan samman nidhi ಅಜಿ೯ಯಲ್ಲಿ ಅಥವಾ ನಿಮ್ಮ ದಾಖಲೆಗಳಲ್ಲಿ ಏನಾದರೂ ಬದಲಾವಣೆ ಮಾಡಿದ್ದಲ್ಲಿ ನಿಮ್ಮ ವಿವರಗಳು ತಪ್ಪಾಗಿದ್ದರೆ ಅಥವಾ ಹೆಚ್ಚಿನ ಮಾಹಿತಿ ಅಥವಾ ಸಹಾಯ ಬೇಕಾಗಿದ್ದಲ್ಲಿ ನೀವು ಪಿಎಂ ಕಿಸಾನ್ ಯೋಜನಾ ಸಹಾಯವಾಣಿ ಸಂಖ್ಯೆ- 155261 ಅಥವಾ ಟೋಲ್-ಫ್ರೀ ಸಂಖ್ಯೆ- 1800115526 ಗೆ ಕರೆ ಮಾಡಬಹುದಾಗಿದೆ. ಅಥವಾ 011-23381092 ಸಂಖ್ಯೆಗೆ ಕಾಲ್ ಮಾಡಬಹುದು. ಅಥವಾ ನೀವು ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಇಮೇಲ್ ಐಡಿ- pmkisan-ict@gov.in ಗೆ ನಿಮ್ಮ ಸಮಸ್ಯೆಯ ಬಗ್ಗೆ ತಿಳಿಸಿ ಮೇಲ್ ಮಾಡಬಹುದು.
ಬೆಳೆ ಹಾನಿ ಪರಿಹಾರ ಜಮೆ!
25.3 ಲಕ್ಷ ರೈತರಿಗೆ 2019.69 ಕೋಟಿ ಬೆಳೆ ಹಾನಿ ಪರಿಹಾರ ಜಮೆಯಾಗಿದೆ. 1.58 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 120 ಕೋಟಿ ರೂ ನಷ್ಟು ಬೆಳೆ ಹಾನಿಯಾಗಿದೆ ಎನ್ನಲಾಗಿದೆ. ರೈತರು ನಿಮಗೆ ಬೆಳೆ ಹಾನಿ ಪರಿಹಾರ ಬಂದಿದೆಯೋ ಇಲ್ಲವೋ ಎಂಬುದನ್ನು ಕೂಡಲೇ ಪರಿಶೀಲಿಸಿ
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ಮಾರುಕಟ್ಟೆ ದರವನ್ನು ದಿನನಿತ್ಯ ತಿಳಿದುಕೊಳ್ಳಲು….
ಇತರ ಜಿಲ್ಲೆಗಳ ಕೊಬ್ಬ ರಿ ಮಾರುಕಟ್ಟೆಯ ದರವು ನಿಮಗೆ ಬೆಳೆದ ಫಸಲಿಗೆ ಒಳ್ಳೆ ದರವು ದೊರೆತಂತಾಗುತ್ತದೆ. ಈ ಕಾರಣಕ್ಕಾಗಿ ರೈತರಿಗೆ ಸಹಾಯವಾಗಲು ನಮ್ಮ ವೆಬ್ಸೈಟ್ನಲ್ಲಿ ಇರುವ ದಿನಾಂಕಗಳಲ್ಲಿ ಇಂದಿನ ಮಾರುಕ ಟ್ಟೆ ದರವನ್ನು ಪ್ರಕಟಿಸಲಾಗುತ್ತದೆ.
<<< ಅಡಿಕೆ ಮಾರುಕಟ್ಟೆ : ಇಂದಿನ ಅಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ )>>>
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
ವಿ.ಕೆ
ಪರಿಸರ ಪರಿಸರದೊಂದಿಗೆ ಆರ್ಥಿಕತೆ