Flood Relief Fund:: 7000 ರೈತರ ಖಾತೆಗೆ 156.14 ಕೋಟಿ ಪರಿಹಾರ!! ರೈತರಿಗೆ ಡಬಲ್ ಧಮಾಕಾ ಬೆಳೆ ವಿಮೆ ಪರಿಹಾರ ಹಾಗೂ ಬೆಳೆ ಹಾನಿ!!
156.14 ಕೋಟಿ ರೂಪಾಯಿ ಪರಿಹಾರ ಹಣ ಬಿಡುಗಡೆ!
ರಾಜ್ಯದ ರೈತರಿಗೆ ನೆರೆಹಾವಳಿಯಿಂದ ಉಂಟಾಗಿರುವ ಬೆಳೆ ಹಾನಿಗೆ ಪರಿಹಾರವಾಗಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಈಗಾಗಲೇ ಬೆಳೆ ಹಾನಿ ಪರಿಹಾರ ಮಹತ್ವವನ್ನು ಘೋಷಿಸಿದ್ದು, ಅದರಲ್ಲೂ ಮುಖ್ಯವಾಗಿ ಶಿವಮೊಗ್ಗ ಜಿಲ್ಲೆಯ ರೈತರಿಗೆ ಸರ್ಕಾರದಿಂದ ಗುಡ್ ನ್ಯೂಸ್ ಸಿಕ್ಕಿದ್ದು, ಜಿಲ್ಲೆಯ ಒಟ್ಟು 71117 ರೈತರ ಖಾತೆಗೆ PM-ಫಸಲ್ ಬಿಮಾ ಯೋಜನೆ ಅಡಿಯಲ್ಲಿ 156.14 ಕೋಟಿ ರೂಪಾಯಿ ಬೆಳೆ ವಿಮೆ ಹಣ ಬಿಡುಗಡೆಯಾಗಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ ವೈ ರಾಘವೇಂದ್ರ ರವರು ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ ರೈತರು ಹೆಚ್ಚಾಗಿ ಅಡಿಕೆ, ಮಾವು, ಮೆಣಸು ಮತ್ತು ಶುಂಠಿ ಬೆಳೆಗಳನ್ನು ಬೆಳೆದಿದ್ದು, ಈ ಬೆಳೆಗಳನ್ನು ಬೆಳೆದ ಜಿಲ್ಲೆಯ 73,271 ರೈತರು ವಿಮೆ ಮಾಡಿಸಿ ವಿಮಾ ಕಂತುಗಳನ್ನು ಪಾವತಿಸಿದ್ದರು. ಅದರಲ್ಲಿ ಪ್ರಸ್ತುತ 71,177 ರೈತರಿಗೆ ಪಸಲ್ ಬಿಮಾ ಯೋಜನೆಯಡಿ ವಿಮೆ ಪರಿಹಾರ ಮೊತ್ತ ಬಿಡುಗಡೆಯಾಗಿದೆ
ಮಾವು, ಮೆಣಸು ಮತ್ತು ಶುಂಠಿ ಬೆಳೆಗಾರರಿಗೆ ಪರಿಹಾರ ಜಮೆ! ಅಡಿಕೆ ಬೆಳೆಗಾರರಿಗೆ ಸಧ್ಯದಲ್ಲಿಯೇ ಪರಿಹಾರ!
ಪರಿಹಾರ ಪಡೆದುಕೊಳ್ಳಲಿರುವ ರೈತರಲ್ಲಿ ಮಾವು, ಮೆಣಸು ಮತ್ತು ಶುಂಠಿ ಬೆಳೆದ 2226 ರೈತರ ಖಾತೆಗೆ ಈಗಾಗಲೇ ಬೆಳೆ ವಿಮೆ
ಪರಿಹಾರ ಜಮೆ ಆಗಿದೆ. ಉಳಿದಂತೆ ಅಡಿಕೆ ವಿಮೆ ಮಾಡಿಸಿದವರು 68,951 ರೈತರಾಗಿದ್ದು, ಇವರಿಗೆ ಮುಂದಿನ ಸೋಮವಾರ ಅಂದರೆ 9 ನೇ ತಾರೀಖಿನಿಂದ ಅವರ ಖಾತೆಗಳಿಗೆ ನೇರವಾಗಿ ಹಣ ಬಿಡುಗಡೆಯಾಗುತ್ತದೆ.
ಬೆಳೆ ವಿಮೆ ಪರಿಹಾರ ಹಣ ಪಡೆದಿರುವ ತಾಲ್ಲೂಕಾವಾರು ರೈತರ ವಿವರ!
*ಭದ್ರಾವತಿ ತಾಲ್ಲೂಕಿನ 3110 ರೈತರು ಬೆಳೆ ವಿಮೆ ಪರಿಹಾರ ಮೊತ್ತ ಪಡೆದಿದ್ದು, ಇದರಲ್ಲಿ 3108 ಅಡಿಕೆ ಬೆಳೆಗಾರರು, 2 ಮೆಣಸು ಬೆಳೆಗಾರರಿದ್ದಾರೆ.
*ಹೊಸನಗರ ತಾಲ್ಲೂಕಿನಲ್ಲಿ ಒಟ್ಟು 7305 ರೈತರಿಗೆ ವಿಮೆ ಪರಿಹಾರ ಹಣ ಪಡೆದಿದ್ದು, ಇದರಲ್ಲಿ 6878 ಅಡಿಕೆ ಬೆಳೆಗಾರರು, 397 ಮೆಣಸು, 30 ಶುಂಠಿ ಬೆಳೆಗಾರಿದ್ದಾರೆ.
*ಸಾಗರ ತಾಲ್ಲೂಕಿನಲ್ಲಿ 7662 ರೈತರಿಗೆ ವಿಮೆ ಪರಿಹಾರ ಮೊತ್ತ ಪಡೆದಿದ್ದು, ಇದರಲ್ಲಿ 7524 ಅಡಿಕೆ ಬೆಳೆಗಾರರು, 104 ಮೆಣಸು, 34 ಶುಂಠಿ ಬೆಳೆಗಾರರಿದ್ದಾರೆ.
*ಶಿಕಾರಿಪುರ ತಾಲ್ಲೂಕಿನಲ್ಲಿ 15,386 ಬೆಳೆಗಾರರಿಗೆ ವಿಮೆ ಪರಿಹಾರ ಜಮೆಯಾಗಲಿದ್ದು, ಇದರಲ್ಲಿ 15,063 ಅಡಿಕೆ ಬೆಳೆಗಾರರು, 5 ಮೆಣಸು, 106 ಶುಂಠಿ, 212 ಮಾವು ಬೆಳೆಗಾರರಿದ್ದಾರೆ.
*ಶಿವಮೊಗ್ಗ ತಾಲ್ಲೂಕಿನಲ್ಲಿ 7398 ಬೆಳೆಗಾರರಿಗೆ ವಿಮೆ ಪರಿಹಾರ ಜಮೆಯಾಗಲಿದ್ದು, ಇದರಲ್ಲಿ 7292 ಅಡಿಕೆ ಬೆಳೆಗಾರರು, 7 ಮೆಣಸು, 75 ಶುಂಠಿ, 24 ಮಾವು ಬೆಳೆಗಾರರಿದ್ದಾರೆ.
*ಸೊರಬ ತಾಲ್ಲೂಕಿನಲ್ಲಿ 18,627 ರೈತರಿಗೆ ವಿಮೆ ಪರಿಹಾರ ಹಣ ಜಮೆಯಾಗಲಿದ್ದು, 17,807 ಅಡಿಕೆ ಬೆಳೆಗಾರರು, 23 ಮೆಣಸು, 139 ಶುಂಠಿ ಬೆಳೆಗಾರರು, 658 ಮಾವು ಬೆಳೆಗಾರರಿದ್ದಾರೆ.
*ತೀರ್ಥಹಳ್ಳಿ ತಾಲೂಕಿನಲ್ಲಿ 11,689 ರೈತರಿಗೆ ವಿಮೆ ಪರಿಹಾರ ಜಮೆಯಾಗಲಿದ್ದು, ಇದರಲ್ಲಿ 11,279 ಅಡಿಕೆ ಬೆಳೆಗಾರರು, 410 ಮೆಣಸು ಬೆಳೆಗಾರರಿದ್ದಾರೆ.
ರಾಜ್ಯ ಸಕಾ೯ರದಿಂದಲೂ ಬೆಳೆಹಾನಿ ಪರಿಹಾರ!
ಅಷ್ಟೇ ಅಲ್ಲದೇ ರಾಜ್ಯ ಸಕಾ೯ರದ ವತಿಯಿಂದಲೂ ಕೂಡ ರಾಜ್ಯದ ರೈತರಿಗೆ ಖುಷಿ ಸುದ್ದಿ ಸಿಕ್ಕಿದ್ದು, ರಾಜ್ಯ ಸಕಾ೯ರದಿಂದಲೂ ಕೂಡ ಬೆಳೆಹಾಣಿ ಪರಿಹಾರ ಹಣವನ್ನು ಸದ್ಯದಲ್ಲಿಯೇ ಬಿಡುಗಡೆ ಮಾಡಲು ಮುಂದಾಗಿದ್ದು, ಇದಕ್ಕಾಗಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿರುವ 642.39 ಕೋಟಿ ಹಣವನ್ನು ಬಳಸಿಕೊಳ್ಳಲು ರಾಜ್ಯ ಸಕಾ೯ರ ಮುಂದಾಗಿದೆ.
ಬೆಳೆ ಪರಿಹಾರ (crop insurance) ಅರ್ಜಿ ಸ್ಥಿತಿ ಪರಿಶೀಲಿಸುವುದು ಹೇಗೆ?
ನೀವು ಮೊದಲಿಗೆ ಸಂರಕ್ಷಣೆ ಎಂಬ ವೆಬ್ಸೈಟಿಗೆ ಭೇಟಿ ನೀಡಬೇಕು ಅದಕ್ಕಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://www.samrakshane.karnataka.gov.in/
*ನಂತರ ಅಲ್ಲಿ ವರ್ಷ ಹಾಗೂ ಋತು ಸೆಲೆಕ್ಟ್ ಮಾಡಿ ಗೋ(Go) ಬಟನ್ ಕ್ಲಿಕ್ ಮಾಡಿ
*ನಂತರ ಓಪನ್ ಆಗುವ ಪೇಜ್ ನಲ್ಲಿ ಚಿತ್ರದಲ್ಲಿ ತೋರಿಸಿರುವಂತೆ ಫಾಮ೯ರ್ಸ್ ಆಯ್ಕೆಯಲ್ಲಿರುವ ಚೆಕ್ ಸ್ಟೇಟಸ್ (check status) ಎಂಬ ಆಪ್ಷನ್ ಇದ್ದು, ಅದರ ಮೇಲೆ ಕ್ಲಿಕ್ ಮಾಡಿ 2
*ನಂತರ ಓಪನ್ ಆಗೋ ಪೇಜ್ ನಲ್ಲಿ ನಿಮ್ಮ ವಿಮೆ ಪಾವತಿಸಿದ ಅರ್ಜಿಯ ಸಂಖ್ಯೆ ಇದ್ದರೆ ಅದನ್ನು ಅಥವಾ ನಿಮ್ಮ ಆಧಾರ್ ಕಾರ್ಡ್ ನಂಬರ್ ಅಥವಾ ಮೊಬೈಲ್ ನಂಬರ್ ಹಾಕಿ ಹಾಗೂ ಕೊಟ್ಟಿರುವ ಕ್ಯಾಪ್ಟಾ ಎಂಟರ್ ಮಾಡಿ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ
*ಆಗ ನಿಮಗೆ ನಿಮ್ಮ ಅರ್ಜಿಯ ಬಗ್ಗೆ ಮಾಹಿತಿ ಸಿಗುತ್ತದೆ. ಅದರಲ್ಲಿ ನಿಮ್ಮ ಅರ್ಜಿ ಸ್ವೀಕೃತವಾಗಿದ್ದರೆ ಕಂಪನಿಯಿಂದ ಅರ್ಜಿ ಸ್ವೀಕರಿಸಲಾಗಿದೆ ಎಂದು ತೋರಿಸಿರುತ್ತಾರೆ. ನಿಮ್ಮ ಹೆಸರಿನ ಮುಂದಿನ ಕೊನೆಯ ಕಾಲಂ ನಲ್ಲಿ ಸೆಲೆಕ್ಟ್ ಎಂಬ ಆಯ್ಕೆ ಇದ್ದು, ಅದರ ಮೇಲೆ ಕ್ಲಿಕ್ ಮಾಡಿ ಆಗ ಇನ್ನಷ್ಟು ವಿವರ ತೋರಿಸುತ್ತದೆ.
*ಆಗ ಓಪನ್ ಆಗುವ ಪೇಜ್ ನಲ್ಲಿ ವೀವ್ ಡಿಟೇಲ್ಸ್ ಎಂದಿದ್ದು, ಅದರ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಅರ್ಜಿಯ ಬಗ್ಗೆ ಹೆಚ್ಚಿನ ಸಂಪೂರ್ಣ ಮಾಹಿತಿ ಸಿಗುತ್ತದೆ.
*ಅದರಲ್ಲಿ ಯಾವ ಸರ್ವೆ ನಂಬರ್ ಗೆ ವಿಮೆ ಕಟ್ಟಿದ್ದೀರಿ, ಯಾವ ಬೆಳೆ ಎಷ್ಟು ವಿಮೆ ಕಟ್ಟಿದ್ದೀರಿ ಎಂಬೆಲ್ಲಾ ಮಾಹಿತಿ ತೋರಿಸುತ್ತದೆ.
ಹೀಗೆ ನೀವು ನಿಮ್ಮ ಬೆಳೆ ಹಾನಿ ಪರಿಹಾರ(crop insurance) ಅರ್ಜಿಯ ಸ್ಥಿತಿ ಏನು? ಇನ್ನೂ ಯಾವಾಗ ಪರಿಹಾರ ಸಿಗುತ್ತದೆ ಎಂಬುದನ್ನು ಮೊಬೈಲ್ ನಲ್ಲಿಯೇ ಪರಿಶೀಲಿಸಬಹುದು.
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
V.K
ಪರಿಸರ ಪರಿಸರದೊಂದಿಗೆ ಆರ್ಥಿಕತೆ