Bele Parihara:: 38.58 ಲಕ್ಷ ರೈತರಿಗೆ 3535 ಕೋಟಿ ಬೆಳೆ ಪರಿಹಾರ ಹಣ ಬಿಡುಗಡೆ!!!ಅನರ್ಹ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಚೆಕ್ ಮಾಡಿಕೊಳ್ಳಿ!!
ರಾಜ್ಯದಲ್ಲಿ ಈ ವರ್ಷ ಅತಿವೃಷ್ಟಿ ಕಾರಣದಿಂದಾಗಿ ಬಹಳಷ್ಟು ರೈತರ ಜಮೀನುಗಳಲ್ಲಿ ಬೆಳೆ ಹಾನಿಯಾಗಿದ್ದು ಇದಕ್ಕೆ ರಾಜ್ಯ ಸರ್ಕಾರ ಆರ್ಥಿಕವಾಗಿ ರೈತರಿಗೆ ಸಹಾಯಕವಾಗುವಂತೆ ಬೆಳೆ ಹಾನಿ ಪರಿಹಾರ ಕೊಡಲು ಮುಂದಾಗಿದೆ. ರಾಜ್ಯದ ಒಟ್ಟು 38.58 ಲಕ್ಷ ರೈತರಿಗೆ 3535 ಕೋಟಿ ರೂಪಾಯಿ ಬೆಳೆ ಹಾನಿ ಪರಿಹಾರ ಮೊತ್ತ ಸರ್ಕಾರದ ಕಡೆಯಿಂದ ಬಿಡುಗಡೆಯಾಗಿದೆ.
ಯಾವ ರೈತರು ಬೆಳೆ ಹಾನಿಯಿಂದಾಗಿ ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೋ ಅಂತಹವರ ಖಾತೆಗೆ ಬೆಳೆ ಹಾನಿ ಪರಿಹಾರ ಮೊತ್ತ ಜಮೆಯಾಗುತ್ತಿದ್ದು, ಕಲ್ಬುರ್ಗಿ, ಯಾದಗಿರಿ ಬೆಳಗಾವಿ ಹಾಗೂ ಗದಗ ಜಿಲ್ಲೆಯ ರೈತರಿಗೆ ಬೆಳೆ ಹಾನಿ ಪರಿಹಾರ ಮೊತ್ತ ಜಮೆಯಾಗಿದೆ.
ಬೆಳೆ ಹಾನಿ ಪರಿಹಾರ ಪಡೆಯಲು ಅಹ೯ರಾದ ರೈತರ ಪಟ್ಟಿ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಲಭ್ಯವಿದ್ದು, ನಿಮಗೆ ಮಾಹಿತಿ ಬೇಕಾಗಿದ್ದಲ್ಲಿ ನಿಮ್ಮ ಗ್ರಾಮ ಪಂಚಾಯಿತಿಗೆ ಹೋಗಿ ಲಿಸ್ಟ್ ನ್ನು ಪಡೆಯಬಹುದು. ಹಾಗೂ ಈ ಬಗ್ಗೆ ನಿಮಗೆ ಏನಾದರೂ ಆಕ್ಷೇಪಣೆಗಳಿದ್ದಲ್ಲಿ 7 ದಿನಗಳೊಳಗಾಗಿ ಆಕ್ಷೇಪಣೆಗಳನ್ನು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸಲ್ಲಿಸಬಹುದು.
ಬೆಳೆಹಾನಿ ಪರಿಹಾರ ಲಿಸ್ಚ್ ನಲ್ಲಿ ನಿಮ್ಮ ಹೆಸರು ಚೆಕ್ ಮಾಡಿ!
ಆನ್ಲೈನ್ ಮೂಲಕವೂ ಕೂಡ ಈ ಬೆಳೆ ಹಾನಿ ಪರಿಹಾರದ ಲಿಸ್ಟ್ ಪಡೆಯಬಹುದಾಗಿದ್ದು, ಅದಕ್ಕಾಗಿ ನೀವು ಮೊದಲಿಗೆ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://fruitspmk.karnataka.gov.in/MISReport/FarmerDeclarationReport.aspx
*ನಂತರ ಅಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ ಹಾಗೂ ಗ್ರಾಮವನ್ನು ಸೆಲೆಕ್ಟ್ ಮಾಡಿ ವೀಕ್ಷಿಸು ಮೇಲೆ ಕ್ಲಿಕ್ ಮಾಡಿ
*ಆಗ ನಿಮಗೆ ನಿಮ್ಮ ಗ್ರಾಮದಲ್ಲಿ ಬೆಳೆ ಹಾನಿ ಪರಿಹಾರ ಪಡೆಯಲು ಅಹ೯ರಾದವರ ಹೆಸರು ತೋರಿಸುತ್ತದೆ. ಅದರಲ್ಲಿ ನಿಮ್ಮ ಹೆಸರನ್ನು ಹುಡುಕಿಕೊಳ್ಳಬಹುದು
ಬೆಳೆ ಹಾನಿ ಪರಿಹಾರ ಎಷ್ಟು ಬಂದಿದೆ ಚೆಕ್ ಮಾಡುವುದು ಹೇಗೆ?
ಅಲ್ಲದೇ ಈಗಾಗಲೇ ಬೆಳೆ ಹಾನಿ ಪರಿಹಾರ ಪಡೆದವರ ಮಾಹಿತಿಯನ್ನು ತಿಳಿಯಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://parihara.karnataka.gov.in/service87/
*ನಂತರ ಓಪನ್ ಆಗುವ ಪೇಜ್ ನಲ್ಲಿ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ, ವಷ೯(2024-25), ಋತು(ಖಾರಿಫ್), ಕ್ಯಾಲಾಮಿಟಿ(ಫ್ಲಡ್) ಎಂದು ಸೆಲೆಕ್ಟ್ ಮಾಡಿ ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಿ ಆಗ ನಿಮಗೆ ಯಾರಿಗೆ ಎಷ್ಟು ಪರಿಹಾರ ಜಮೆಯಾಗಿದೆ ಎಂಬ ಮಾಹಿತಿ ಸಿಗುತ್ತದೆ.
ಪಿಎಂ ಕಿಸಾನ್ 19 ಕಂತಿನ ಯಾವಾಗ ಬರುತ್ತೆ?
ಇನ್ನು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ 19 ನೇ ಕಂತಿನ ಹಣ ಡಿಸೆಂಬರ್ ತಿಂಗಳಲ್ಲಿ ಜಮೆಯಾಗಲಿದ್ದು, ಈಗಾಗಲೇ ಯಾರಿಗೆಲ್ಲಾ ಜಮೆಯಾಗಲಿದೆ ಎಂಬ ಲಿಸ್ಟ್ ಪಿಎಂ ಕಿಸಾನ್ ವೆಬ್ಸೈಟ್ ನಲ್ಲಿ ಲಭ್ಯವಿದೆ. ನಮ್ಮ ವೆಬ್ಸೈಟ್ ನಲ್ಲಿ ಈ ಬಗ್ಗೆ ಹಿಂದಿನ ಲೇಖನದಲ್ಲಿ ತಿಳಿಸಿದೆ(ಒಮ್ಮೆ ಚೆಕ್ ಮಾಡಿ)
ಈ ಕೆಲಸ ಮಾಡದಿದ್ದರೆ ಪಿಎಂ ಕಿಸಾನ್ ಹಣ ಬರಲ್ಲ!
ಆ ಲಿಸ್ಟ್ ನಲ್ಲಿ ಯಾರ ಹೆಸರಿಲ್ಲವೋ ಕೂಡಲೇ ನೀವು ಬ್ಯಾಂಕ್ ಗೆ ಹೋಗಿ ಇ-ಕೆವೈಸಿ ಮಾಡಿಸಿ ಆಧಾರ್ ಸೀಡಿಂಗ್ ಮಾಡಿಸಿ. ನಂತರದಲ್ಲಿ ನಿಮಗೆ ಪಿಎಂ ಕಿಸಾನ್ ನ 19 ನೇ ಕಂತಿನ ಹಣ ಜಮೆಯಾಗುವುದು
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
V.K
ಪರಿಸರ ಪರಿಸರದೊಂದಿಗೆ ಆರ್ಥಿಕತೆ