BPL card cancellation:: ರದ್ದಾದ ಬಿ.ಪಿ.ಎಲ್ ಕಾಡ್೯ ಮರುಸಕ್ರಿಯ ಆಗುವುದು ಯಾವಾಗ! ಕೆ. ಎಚ್ ಮುನಿಯಪ್ಪ ಹೇಳಿಕೆ ಏನು?
ಕಳೆದ ಎರಡು ತಿಂಗಳಿಂದ ರಾಜ್ಯದಲ್ಲಿ ಬಡವರ ಪಾಲಿಗೆ ಬಿಸಿ ತುಪ್ಪವಾಗಿದ್ದ ಬಿಪಿಎಲ್ ಕಾರ್ಡ್ ರದ್ದು ಪ್ರಕ್ರಿಯೆ ಅಂತ್ಯಗೊಂಡಿದ್ದರು ಕೂಡ ಅದರ ಸುತ್ತಲಿನ ಚರ್ಚೆಗಳು ಇನ್ನು ನಡೆಯುತ್ತಲೇ ಏಕೆಂದರೆ ಸರ್ಕಾರವು
ಈ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾಗಿಂದ ಒಟ್ಟು 13 ಲಕ್ಷ ಕಾರ್ಡುಗಳನ್ನು ಪರಿಶೀಲನೆಗೆ ಒಳಪಡಿಸಿತ್ತು.
ಈ 13 ಲಕ್ಷ ಕಾರ್ಡುಗಳಲ್ಲಿ ಲಕ್ಷಾಂತರ ಅರ್ಹಬಡ ಬಿಪಿಎಲ್ ಕಾರ್ಡ್ ಕುಟುಂಬದವರ ಬಿಪಿಎಲ್ ಕಾರ್ಡ್ ಕೂಡ ರದ್ದಾಗಿದ್ದವು.
ಬಡತನ ರೇಖೆಗಾಗಿ ರೇಖೆಗಿಂತ ಕೆಳಗಿರುವ ಅರ್ಹ ಕುಟುಂಬಗಳ ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ ಈಗ ಪ್ರಕ್ರಿಯೆ ಏನು ಹಿಂತೆಗೆದುಕೊಂಡಿದ್ದು,
ಅರ್ಹ ಫಲಾನುಭವಿಗಳಿಗೆ ಮತ್ತೆ ಬಿಪಿಎಲ್ ಕಾರ್ಡ್ಗಳನ್ನು ಮರು ಸಕ್ರಿಯಗೊಳಿಸಿ ಕೊಡಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿತ್ತು.
ಆದರೆ ಕಾಡ್೯ ರದ್ದುಗೊಂಡ ಫಲಾನುಭವಿಗಳು ಇನ್ನು ಯಾವಾಗ ಕಾರ್ಡ್ ಮರುಸಕ್ರಿಯಗೊಳ್ಳುತ್ತವೆ ಎಂದು ಚಿಂತೆಗೊಳಗಾಗಿದ್ದರು.
ನವೆಂಬರ್ 28 ರೊಳಗೆ ಮರುಸಕ್ರಿಯ! 29 ರಿಂದ ಪಡಿತರ ವಿತರಣೆ!
ಈ ಎಲ್ಲಾ ಪ್ರಶ್ನೆಗಳಿಗೆ ಆಹಾರ ಇಲಾಖೆ ಸಚಿವರಾದ ಕೆಎಚ್ ಮುನಿಯಪ್ಪ ರವರು ಇದೀಗ ಉತ್ತರವನ್ನು ನೀಡಿದ್ದು, ನವೆಂಬರ್ 28ರ ವರೆಗೆ ಎಲ್ಲಾ ಕಾರ್ಡ್ಗಳನ್ನು ಮರು ಸಕ್ರಿಯಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ ಅಲ್ಲದೆ ನವೆಂಬರ್ 29 ರಿಂದ ಅರ್ಹ ಬಿಪಿಎಲ್ ಕಾರ್ಡ್ದಾರರಿಗೆ ಪಡಿತರ ವಿತರಿಸಲಾಗುವುದು ಎಂದು ಮಾಹಿತಿಯನ್ನು ನೀಡಿದ್ದಾರೆ.
ಹೊಸ ಕಾಡ್೯ ಕೊಡಲ್ಲ!
ಹೀಗೆ ಬಿಪಿಎಲ್ ಕಾರ್ಡ್ ರದ್ದಾಗಿರುವ ಕುಟುಂಬಗಳಿಗೆ ಯಾವುದೇ ರೀತಿಯ ಹೊಸ ಕಾರ್ಡ್ಗಳನ್ನು ಕೊಡಲಾಗುವುದಿಲ್ಲ ಹಳೆಯ ರೇಷನ್ ಕಾರ್ಡು ನಂಬರ್ ಅನ್ನು ನಮೂದಿಸಿಕೊಂಡು ರೇಷನ್ ಪಡೆಯಬಹುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಯಾವುದೇ ಸೌಲಭ್ಯಗಳು ಕೈ ತಪ್ಪಲ್ಲ!
ಎರಡು ತಿಂಗಳುಗಳಿಂದ ಬಿಪಿಎಲ್ ಕಾರ್ಡ್ ರದ್ದಾಗಿರುವುದರಿಂದ ಸಾಕಷ್ಟು ಬಡಜನರು ಸಿಗುತ್ತಿದ್ದ ಯಾವ ಸೌಲಭ್ಯಗಳು ಸಿಗುತ್ತಿಲ್ಲವೆಂದು ತುಂಬಾ ಚಿಂತೆಗೊಳಗಾಗಿದ್ದರು ಅದಕ್ಕಾಗಿ ಸಚಿವರು
ಈ ಬಗ್ಗೆ ಮಾತನಾಡಿ ಅರ್ಹ ಬಡ ಬಿಪಿಎಲ್ ಕಾರ್ಡ್ದಾರರಿಗೆ ಯಾವುದೇ ಸೌಲಭ್ಯಗಳು ಕೈ ತಪ್ಪುವುದಿಲ್ಲ ಎಂದಿನಂತೆ 5 ಕೆ.ಜಿ ಅಕ್ಕಿಯನ್ನು ಉಚಿತವಾಗಿ ಕೊಡಲಾಗುವುದು ಯಾವ ಯಾವ ಸೌಲಭ್ಯಗಳು ಎರಡು ತಿಂಗಳಿಂದ ಬಂದ್ ಆಗಿದ್ದವೋ ಅವೆಲ್ಲವೂ ನವೆಂಬರ್ 29 ರಿಂದ ಸಿಗಲು ಪ್ರಾರಂಭಿಸುತ್ತವೆ. ಅಲ್ಲದೆ ಆರೋಗ್ಯ ಸೌಲಭ್ಯವು ಕೂಡ ಸಿಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಬಿಪಿಎಲ್ ಕಾಡ್೯ ಹೊಂದಿದ್ದ ತೆರಿಗೆ ಪಾವತಿದಾರರ ಹಾಗೂ ನೌಕರರ ಮೇಲೆ ಕ್ರಮ!
ತೆರಿಗೆ ಪಾವತಿಸುತ್ತಿದ್ದ ಹಾಗೂ ಸಕಾ೯ರಿ ನೌಕರರು ಹೊಂದಿದ್ದ ಬಿಪಿಎಲ್ ಕಾಡ್೯ಗಳನ್ನು ಮಾತ್ರ ರದ್ದು ಮಾಡಲಾಗಿದ್ದು, ಮಿಕ್ಕ ಎಲ್ಲ ಅಹ೯ ಫಲಾನುಭವಿಗಳ ಬಿಪಿಎಲ್ ಕಾಡ್೯ಗಳನ್ನು ಮರು ಸಕ್ರಿಯಗೊಳಿಸಲಾಗುವುದು.ಮರುಸಕ್ರಿಯಗೊಳಿಸುವ ಪ್ರಕ್ರಿಯೆಗೆ ಹೆಚ್ಚು ಒತ್ತು ನೀಡಲಾಗಿದ್ದು, ಸಧ್ಯಕ್ಕೆ ಸಕಾ೯ರಿ ನೌಕರರ ಹಾಗೂ ತೆರಿಗೆ ಪಾವತಿದಾರರ ಮೇಲೆ ಯಾವ ಕ್ರಮವನ್ನೂ ಕೈಗೊಳ್ಳುವ ಬಗ್ಗೆ ನಿಧಾ೯ರ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ.
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚