"Agriculture is our CULTURE"

PM Awas yojane:: ಸ್ವಂತ ಮನೆ ಹೊಂದುವ ಕನಸು ಈಗ ನನಸು! ಸಕಾ೯ರದಿಂದ ಪಿಎಂ ಆವಾಸ್ ಯೋಜನೆಗೆ ಅಜಿ೯ ಆಹ್ವಾನ!

ಕೇಂದ್ರ ಸರ್ಕಾರದ ಪಿಎಂ ಆವಾಸ್ ಯೋಜನೆ ಅಡಿಯಲ್ಲಿ ಪಕ್ಕ ಮನೆ ಹೊಂದಿಲ್ಲದ ನಿರಾಶ್ರಿತರಿಗೆ ಸರ್ಕಾರದ ಕಡೆಯಿಂದ ಮನೆ ಕಟ್ಟಿಕೊಳ್ಳಲು ಸಹಾಯಧನ ನೀಡುವ ಯೋಜನೆ ಮತ್ತೆ ಆರಂಭವಾಗಿದ್ದು,

ನಿಮ್ಮಲ್ಲಿ ಯಾರಿಗೆಲ್ಲ ಸ್ವಂತ ಮನೆ ಇಲ್ಲವೋ ಅಂಥವರು ಕೂಡಲೇ ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ಸ್ವಂತ ಮನೆಯನ್ನು ಒಂದುವ ಕನಸನ್ನು ನನಸಾಗಿಸಿಕೊಳ್ಳಬಹುದು.

ಈ ಯೋಜನೆ ಅಡಿಯಲ್ಲಿ 3 ಆಯ್ಕೆಗಳಿದ್ದು ಅದರಲ್ಲಿ
1.BLC ಅಂದರೆ ನಿಮಗೆ ಸ್ವಂತ ಜಾಗವಿದ್ದು ಆದರೆ ಅದರಲ್ಲಿ ಕಟ್ಟಡ ಇನ್ನೂ ನಿರ್ಮಾಣವಾಗಿಲ್ಲ ಅರ್ಥ.
2.AHP ಅಂದರೆ ನಿಮ್ಮ ಬಳಿ ಜಾಗವೂ ಇಲ್ಲ ಮನೆಯು ಇಲ್ಲ ಎಂದಾದಲ್ಲಿ ಸಕಾ೯ರವು ಪಾಲುದಾರಿಕೆಯಲ್ಲಿ ನಿಮಗೆ ಅಧ೯ದಷ್ಟು ಹಣ ನೀಡಿ ಸ್ವಂತ ಮನೆ ಹೊಂದಲು ನೆರವು ನೀಡುತ್ತದೆ.
3.ಬಡ್ಡಿ ಸಬ್ಸಿಡಿ ಯೋಜನೆ (ISS) ಅಂದರೆ ಈಗಾಗಲೇ ಕಟ್ಟಿಿರುವ ಮನೆ ಖರೀದಿಗೆ ನಿಮಗೆ ಸಾಲ ಸೌಲಭ್ಯ ನೀಡಿ ಅದರಲ್ಲಿ ಸಬ್ಸಿಡಿ ನೀಡುವ ಯೋಜನೆ ಆಗಿದೆ.

ಈ ಯೋಜನೆಗೆ ಅಜಿ೯ ಸಲ್ಲಿಸಲು ಅಗತ್ಯವಿರುವ ದಾಖಲೆಗಳು!

1. ಅರ್ಜಿದಾರರ ಆಧಾರ್ ವಿವರಗಳು (ಆಧಾರ್ ಸಂಖ್ಯೆ, ಆಧಾರ್ ಪ್ರಕಾರ ಹೆಸರು, ಹುಟ್ಟಿದ ದಿನಾಂಕ).
2. ಕುಟುಂಬದ ಸದಸ್ಯರ ಆಧಾರ್ ವಿವರಗಳು (ಆಧಾರ್ ಸಂಖ್ಯೆ, ಆಧಾರ್ ಪ್ರಕಾರ ಹೆಸರು, ಹುಟ್ಟಿದ ದಿನಾಂಕ).
3. ಆಧಾರ್‌ನೊಂದಿಗೆ ಲಿಂಕ್ ಮಾಡಲಾದ ಅರ್ಜಿದಾರರ ಸಕ್ರಿಯ ಬ್ಯಾಂಕ್ ಖಾತೆ ವಿವರಗಳು (ಖಾತೆ ಸಂಖ್ಯೆ, ಬ್ಯಾಂಕ್ ಹೆಸರು, ಶಾಖೆ, IFSC ಕೋಡ್).
4. ಆದಾಯ ಪ್ರಮಾಣಪತ್ರ
5. ಜಾತಿ ಪ್ರಮಾಣಪತ್ರ (SC, ST ಅಥವಾ OBC ಯ ಸಂದರ್ಭದಲ್ಲಿ).
6. ಭೂ ದಾಖಲೆ (BLC ಗೆ ಅಜಿ೯ ಹಾಕುವ ಸಂದರ್ಭದಲ್ಲಿ)

ಅಜಿ೯ ಹಾಕುವ ವಿಧಾನ!

ಮೊದಲಿಗೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗಿದ್ದು, ಅದಕ್ಕಾಗಿ ಮೊದಲು ಈ ಕೆಳಗಿನ ಡೈರೆಕ್ಟ ಲಿಂಕ್ ಮೇಲೆ ಕ್ಲಿಕ್ ಮಾಡಿ

https://pmaymis.gov.in/PMAYMIS2_2024/OpenN/EligiblityCheck.aspx

*ನಂತರ ಕೊಡಲಾದ ಮಾಹಿತಿಯನ್ನು ಓದಿಕೊಂಡು ಕೆಳಗಡೆ ಕ್ಲಿಪ್ ಟು ಪ್ರೊಸೀಡ್ ಎಂಬ ಆಯ್ಕೆ ಇದ್ದು, ಅದರ ಮೇಲೆ ಕ್ಲಿಕ್ ಮಾಡಿ

* ನಂತರದ ಪೇಜ್ ನಲ್ಲಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾವ ಯಾವ ದಾಖಲೆಗಳು ಬೇಕು ಎಂಬ ಮಾಹಿತಿ ಇದು ಈಗಾಗಲೇ ನಾವು ಅದನ್ನು ಒದಗಿಸಿದ್ದು, ಕೆಳಗಡೆ ಇರುವ ಪ್ರೊಸೀಡ್ ಬಟನ್ ಮೇಲೆ ಕ್ಲಿಕ್ ಮಾಡಿ

* ನಂತರ ಓಪನ್ ಆಗುವ ಪೇಜ್ ಎಲಿಜಿಬಿಲಿಟಿ ಚೆಕ್ ಮಾಡುವುದಾಗಿದ್ದು, ಅಲ್ಲಿ ಮೊದಲಿಗೆ ನಿಮ್ಮ ಕುಟುಂಬದ ಆದಾಯದ ಮೊತ್ತವನ್ನು ಹಾಕಿ

* ನಂತರ ಈಗಾಗಲೇ ನಾವು ಯೋಜನೆಗೆ ಮೂರು ಆಯ್ಕೆಗಳಿದ್ದು(BLC, AHP, ISS) ಎಂದು ಮೇಲೆ ಹೇಳಿದ್ದು ಅದರಲ್ಲಿ ನಿಮ್ಮ ಆಯ್ಕೆ ಯಾವುದು ಎಂಬುದನ್ನು ಸೆಲೆಕ್ಟ್ ಮಾಡಿ
* ನಂತರ ನಿಮಗೆ ಈಗಾಗಲೇ ಭಾರತದಲ್ಲಿ ಪಕ್ಕ ಹೌಸ್ ಇದೆ ಎಂದು ಕೇಳಿದೆ, ಇದ್ದರೆ ಇದೆ ಎಂದು ಹಾಕಿ ಇಲ್ಲವಾದರೆ ಇಲ್ಲ ಎಂದು ಹಾಕಿ(ಪಕ್ಕಾ ಹೌಸ್ ಇಲ್ಲದವರು ಮಾತ್ರ ಈ ಯೋಜನೆಗೆ ಅರ್ಹರಾಗಿರುತ್ತಾರೆ)
* ನಂತರ ನೀವು ಈಗಾಗಲೇ ಸರ್ಕಾರದ ಯಾವುದಾದರೂ ಯೋಜನೆಯಿಂದ ಮನೆ ಕಟ್ಟಿಕೊಳ್ಳಲು ಹಣ ಪಡೆದಿದ್ದೀರ ಎಂದು ಕೇಳುತ್ತದೆ

ಈಗಾಗಲೇ ಸಹಾಯಧನ ಸಿಕ್ಕಿದ್ದರೆ ಹೌದು ಎಂದು ಹಾಕಿ ಇಲ್ಲವಾದರೆ ಇಲ್ಲ ಎಂದು ಹಾಕಿ (ಸಹಾಯಧನ ಪಡೆಯದವರು ಮಾತ್ರ ಈ ಯೋಜನೆಗೆ ಅರ್ಹರಾಗಿರುತ್ತಾರೆ)
* ನಂತರ ಎಲ್ಲಿಜಿಬಿಲಿಟಿ ಚೆಕ್ ಮೇಲೆ ಕ್ಲಿಕ್ ಮಾಡಿ
* ಆಗ ನಿಮಗೆ ನೀವು ಈ ಯೋಜನೆಗೆ ಎಲಿಜಿಬಿಲಿಟಿ ಹೊಂದಿದ್ದೀರಾ ಇಲ್ಲವಾ ಎಂದು ತೋರಿಸುತ್ತದೆ ಎಲಿಜಿಬಲ್ ಆಗಿದ್ದರೆ ನೀವು ಅರ್ಜಿಯನ್ನು ಸಲ್ಲಿಸಲು ಮುಂದಾಗಬಹುದು.
* ನೀವು ಯೋಜನೆಗೆ ಎಲಿಜಿಬಲ್ ಆದರೆ ಮುಂದಿನ ಪೇಜ್ ಓಪನ್ ಆಗುತ್ತದೆ ಅಲ್ಲಿ ಆಧಾರ್ ಕಾರ್ಡ್ ನಂಬರ್ ಹಾಕಿ ಹಾಗೂ ಆಧಾರ್ ಕಾರ್ಡ್ ನಲ್ಲಿರುವಂತೆ ನಿಮ್ಮ ಹೆಸರನ್ನು ಹಾಕಿ
*ಕೆಳಗಡೆ ಕೊಟ್ಟಿರುವ ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ನಂತರ ಜನರೇಟ್ ಓಟಿಪಿ ಮೇಲೆ ಕ್ಲಿಕ್ ಮಾಡಿ

ಆಗ ನಿಮ್ಮ ಮೊಬೈಲ್ ಸಂಖ್ಯೆಗೆ ಒಂದು ಓಟಿಪಿ ಬರುತ್ತದೆ ಅದನ್ನು ಅಲ್ಲಿ ಎಂಟರ್ ಮಾಡಿ ನಂತರ ಪಿಎಂ ಆವಾಸ್ ಯೋಜನೆಗೆ ಅರ್ಜಿಯನ್ನು ಹಾಕಬಹುದು

ಧನ್ಯವಾದಗಳು

< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >

1) ಫೇಸ್ಬುಕ್ / Facebook – ಜೈನ್ ಆಗಿ/ join facebook

2)ವಾಟ್ಸಾಪ್ ಗ್ರೂಪ್ /Whatsapp ಗುಂಪು ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ

3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V.K

ಪರಿಸರ ಪರಿಸರದೊಂದಿಗೆ ಆರ್ಥಿಕತೆ


"Agriculture is our CULTURE"