Free Adhar card update:: ಉಚಿತ ಆಧಾರ್ ಕಾರ್ಡ್ ಅಪ್ಡೇಟ್ ಗೆ ಡಿಸೆಂಬರ್ 14 ರವರೆಗೆ ಅವಕಾಶ! ಮಾಡಿಸದಿದ್ದರೆ ನೀವು ಶುಲ್ಕವನ್ನು ಕಟ್ಟಬೇಕಾಗುತ್ತದೆ!!
ಇತ್ತೀಚಿನ ವರ್ಷಗಳಲ್ಲಿ ಸರ್ಕಾರದ ಪ್ರತಿಯೊಂದು ಯೋಜನೆಗೆ ಅರ್ಹರಾಗಬೇಕಾದರೆ ಮುಖ್ಯವಾಗಿ ಆಧಾರ್ ಕಾರ್ಡ್ ಹೊಂದಿರಲೇಬೇಕು ಯಾವುದೇ ಯೋಜನೆಯ ಸವಲತ್ತು ಪಡೆಯಲು ಆಧಾರ್ ಕಾರ್ಡ್ ಒಂದು ಪ್ರಮುಖ ದಾಖಲೆಯಾಗಿದೆ.
ಆಧಾರ್ ಕಾರ್ಡ್ ಭಾರತೀಯ ನಾಗರಿಕತ್ವಕ್ಕೆ ದಾಖಲೆಯಲ್ಲ ಆದರೆ ಭಾರತದಲ್ಲಿನ ಯಾವುದೇ ಯೋಜನೆ, ಸೌಲಭ್ಯ ಸಿಗುವುದು ಆಧಾರ ಕಾಡ್೯ ಮುಖಾಂತರವೇ ಆಗಿದೆ.
ತಪ್ಪಾದ ವಿವರಗಳನ್ನು ಅಪ್ಡೇಟ್(update) ಮಾಡಿಸಬೇಕು!
ಆಧಾರ ಕಾಡ್೯ ಜಾರಿಗೆ ಬಂದು ಈಗಾಗಲೇ ದಶಕಗಳೇ ಕಳೆದಿವೆ. ಹಲವರು ಆಧಾರ ಕಾಡ್೯ ಗಳಲ್ಲಿ ಮೊಬೈಲ್ ನಂಬರ್, ವಿಳಾಸ, ಹೆಸರು, ಜನ್ಮ ದಿನಾಂಕ ಹೀಗೆ ಮುಂತಾದವುಗಳನ್ನು ಬದಲಾಯಿಸಿಕೊಂಡಿರುತ್ತಾರೆ.
ಆದರೆ ಕೆಲವರು ಮಾತ್ರ ಆಧಾರ ಕಾಡ್೯ ಮಾಡಿಸಿಟ್ಟ ಮೇಲೆ ಅದರಲ್ಲಿ ಯಾವುದೇ ಬದಲಾವಣೆ ಮಾಡಿಸಿರುವುದಿಲ್ಲ. ಅಂತಹವರಿಗೆ ಇಲ್ಲಿ ಒಂದು ಮುಖ್ಯ ಸೂಚನೆ ನೀಡಲಾಗಿದೆ. ಹಾಗಾಗಿ ಲೇಖನವನ್ನು ಸಂಪೂರ್ಣವಾಗಿ ಓದಿ
ದಾಖಲೆ ಅಪ್ಡೇಟ್(update) ಮಾಡಿಸುವುದು ಎಷ್ಟು ಮುಖ್ಯ!
ಭಾರತದಲ್ಲಿ ನವಜಾತ ಶಿಶುವಿನಿಂದ ಹಿಡಿದು ಹಾಸಿಗೆ ಹಿಡಿದು ಇನ್ನೇನು ಕೊನೆಯ ದಿನಗಳನ್ನು ಎಣಿಸುತ್ತಿರುವ ಹಿರಿಯ ಜೀವಗಳಿಗೂ ಆಧಾರ ಕಾಡ್೯ ಮಾಡಿಕೊಡಲಾಗುತ್ತದೆ.
ಈ ಆಧಾರ ಕಾಡ್೯ ನಲ್ಲಿರುವ ವಿವರಗಳು ಸಕಾ೯ರಿ ಸೌಲಭ್ಯಗಳಿಗೆ ಮುಖ್ಯವಾಗಿರುವುದರಿಂದ ನೀವು ಸರಿಯಾದ ವಿವರಗಳನ್ನು ಆಧಾರ ಕಾಡ್೯ ನಲ್ಲಿ ನಮೂದಿಸುವುದು ತುಂಬಾ ಮುಖ್ಯ.
ಅಲ್ಲದೇ ಆಧಾರ ಕಾಡ್೯ ಕಣ್ಣಿನ ರೆಟಿನಾ ಬಿಂಬ ಹಾಗೂ ಹಸ್ತದ ಚಿತ್ರವನ್ನು ಒಳಗೊಂಡಿರುತ್ತದೆ. ಇದು ಮನುಷ್ಯ ಬೆಳವಣಿಗೆ ಹೊಂದಿದಂತೆ ಕೆಲವು ಬದಲಾವಣೆ ಆಗಬಹುದು
ಅಥವಾ ರೇಖೆ ಅಳಿಸಿ ಹೋಗಬಹುದು ಹೀಗಿರುವಾಗ ನೀವು ಎಲ್ಲಾದರೂ ಹೋದಾಗ ಈ ಫಿಂಗರ್ಪ್ರಿಂಟ್ ಕೊಡುವುದು ಅವಶ್ಯವಾಗಿದ್ದಲ್ಲಿ ಅದು ತೆಗೆದುಕೊಳ್ಳದಿದ್ದರೆ ತೊಂದರೆ ಆಗುತ್ತದೆ.
10 ವಷ೯ದಿಂದ ಅಪ್ಡೇಟ್ ಮಾಡಿಸಿಲ್ಲವೆಂದರೆ ಮೊದಲು ಈ ಕೆಲಸ ಮಾಡಿ!
ಹಾಗಾಗಿ ಆಧಾರ್ ಕಾಡ್೯ಗಳನ್ನು ಆಗಿಂದ್ದಾಗೆ ಅಪ್ಡೇಟ್ ಮಾಡಿಸುವುದು ತುಂಬಾ ಮುಖ್ಯವಾಗಿದೆ. ಮೊಬೈಲ್ ನಂಬರ್ ಬದಲಾಯಿಸಿದಾಗ ಅಥವಾ ಕೆಲವು ತಪ್ಪುಗಳಾಗಿದ್ದಾಗ ನೀವು ಆಧಾರಕಾಡ್೯ನಲ್ಲಿ ಬದಲಾವಣೆ ಮಾಡಿದ್ದರೆ
ಸರಿ ಆದರೆ ನೀವು 10 ವಷ೯ ಗಳಿಂದ ಆಧಾರ್ ಕಾಡ್೯ ನಲ್ಲಿ ಯಾವುದೇ ಬದಲಾವಣೆ ಮಾಡಿರದಿದ್ದರೆ ಕೂಡಲೇ ಆಧಾರ್ ಸೇವಾ ಸೆಂಟರ್ ಗೆ ಭೇಟಿ ನೀಡಿ ಅಪ್ಡೇಟ್ ಮಾಡಿಸಿ. ಇಲ್ಲವಾದಲ್ಲಿ ನಿಮ್ಮ ಆಧಾರ ಕಾಡ್೯ ರದ್ದಾಗುವ ಸಾಧ್ಯತೆ ಇರಬಹುದು.
ಉಚಿತ ಅಪ್ಡೇಟ್ ಗೆ ಡಿಸೆಂಬರ್ 14 ಕೊನೆಯ ದಿನಾಂಕ!
ಆಧಾರ ಸೇವಾ ಕೇಂದ್ರಗಳಲ್ಲಿ ಮೊದಲಿಗೆ ಶುಲ್ಕ ಪಾವತಿಸಿ ಆಧಾರ ಅಪ್ಡೇಟ್ ಮಾಡಿಸಬೇಕಾಗಿತ್ತು. ಆದರೆ ಈಗ ಸಕಾ೯ರದ ಕಡೆಯಿಂದ ಡಿಸೆಂಬರ್ 14 ರವರೆಗೆ ಆಧಾರ್ ಕಾಡ್೯ ನ್ನು ಉಚಿತವಾಗಿ ಅಪ್ಡೇಟ್ ಮಾಡಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದು,
10 ವಷ೯ಗಳಿಂದ ಯಾರೆಲ್ಲಾ ಯಾವುದೇ ರೀತಿಯ ಆಧಾರ್ ಅಪ್ಡೇಟ್ ಮಾಡಿಸಿಲ್ಲವೋ ಅವರು ಮೊದಲು ನಿಮ್ಮ ಆಧಾರ್ ಕಾಡ್೯ ಅಪ್ಡೇಟ್ ಮಾಡಿಸಿಕೊಳ್ಳಿ.
ಆಧಾರ್ ಅಪ್ಡೇಟ್ ಮಾಡಿಸುವುದು ಎಲ್ಲಿ?
ಒಂದು ವೇಳೆ ಅಪ್ಡೇಟ್ ಮಾಡಿಸಿಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ನಿಮ್ಮ ಆಧಾರ್ ಕಾಡ್೯ ರದ್ದಾದಲ್ಲಿ ಸಕಾ೯ರದಿಂದ ಬರುವ ಯೋಜನೆಗಳು ಕೈತಪ್ಪಿ ಹೋಗುತ್ತವೆ.
ಆದ್ದರಿಂದ ಮೊದಲು ನಿಮ್ಮ ಹತ್ತಿರವಿರುವ ಆಧಾರ್ ಸೇವಾ ಕೇಂದ್ರ/ ಗ್ರಾಮ ಒನ್ ಕೇಂದ್ರಗಳಿಗೆ ಹೋಗಿ ಆಧಾರ್ ಕಾಡ್೯ ಅಪ್ಡೇಟ್ ಮಾಡಿಸಿಕೊಳ್ಳಿ
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚