"Agriculture is our CULTURE"

Crop Insurance Last Date :: ಹಿಂಗಾರು ಬೆಳೆವಿಮೆ ಮಾಡಿಸಲು ಕೊನೆಯ ದಿನಾಂಕ ಯಾವಾಗ! ಜಿಲ್ಲಾವಾರು ಕೊನೆಯ ದಿನಾಂಕ ಮಾಹಿತಿ!

ರಾಜ್ಯದಲ್ಲಿ ಈಗಾಗಲೇ ಹಿಂಗಾರು ಬೆಳೆ ಹಂಗಾಮು ಪ್ರಾರಂಭವಾಗಿದ್ದು ರೈತರು ಉತ್ಸುಕತೆಯಿಂದ ಬಿತ್ತನೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಈಗಾಗಲೇ ನಿಮಗೆಲ್ಲ ಗೊತ್ತಿರುವಂತೆ ಪ್ರತಿ ವರ್ಷ ಬರಗಾಲ ನೆರೆಹಾವಳಿಯಿಂದಾಗಿ ರಾಜ್ಯದಲ್ಲಿ ಬೆಳೆ ಹಾನಿ ಉಂಟಾಗಿ ರೈತರಿಗೆ ಸಾಕಷ್ಟು ಆರ್ಥಿಕ ನಷ್ಟ ಉಂಟಾಗುತ್ತಿದೆ.

ಆದ್ದರಿಂದ ಬೆಳೆಗಳಿಗೆ ವಿಮೆ “Crop Insurance” ಮಾಡಿಸುವುದು ತುಂಬಾ ಅಗತ್ಯವಾಗಿದೆ ಬೆಳೆ ಹಾನಿ ಆದ ಸಂದರ್ಭದಲ್ಲಿ ಈ ಬೆಳೆ ವಿಮೆಗಳು “Crop Insurance” ರೈತರಿಗೆ ಬೆನ್ನೆಲುಬಾಗಿ ಸಹಾಯಕ್ಕೆ ಬರುತ್ತವೆ. ಹಾಗಾಗಿ ರೈತರು ಬೆಳೆ ವಿಮೆ ಮಾಡಿಸಲೇಬೇಕು.

ಇದೀಗ ಹಿಂಗಾರು ಹಂಗಾಮು ನಡೆಯುತ್ತಿರುವುದರಿಂದ ರೈತರು ಹಿಂಗಾರು ಹಂಗಾಮು ಬೆಳೆಗಳಿಗೆ ಬೆಳಗಿನ ಮಾಡಿಸಬೇಕಾಗಿದೆ.

ಆದರೆ ಬೆಳೆ ವಿಮೆ ಮಾಡಿಸುವುದು ಪ್ರತಿ ಜಿಲ್ಲಾವಾರು ಬೇರೆ ಬೇರೆಯಾಗಿದ್ದು, ಈಗಾಗಲೇ ಇದಕ್ಕೆ ಕೊನೆಯ ದಿನಾಂಕಗಳನ್ನು ಕೃಷಿ ಇಲಾಖೆ ಬಿಡುಗಡೆ ಮಾಡಿದೆ ಆದ್ದರಿಂದ ರಾಬಿ ಬೆಳೆಗಳಿಗೆ

ಬೆಳೆ ವಿಮೆ ಮಾಡಿಸಲು ಜಿಲ್ಲಾ ಅವರು ಕೊನೆಯ ದಿನಾಂಕಗಳನ್ನು ನೋಡಿಕೊಂಡು ಬೆಳೆ ವಿಮೆ ಸಲ್ಲಿಸಲು ನಿಮ್ಮ ಜಿಲ್ಲೆಯಲ್ಲಿ ಕೊನೆ ದಿನಾಂಕ ಯಾವಾಗ ಎಂದು ಪರಿಶೀಲಿಸಿ ಕೂಡಲೇ ರಾಬಿ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಿ.

ಜಿಲ್ಲಾವಾರು ಕೊನೆಯ ದಿನಾಂಕಗಳ (Last Date) ಮಾಹಿತಿ ಪಡೆಯುವುದು ಹೇಗೆ ?

* ಅದಕ್ಕಾಗಿ ನಿಮ್ಮ ಮೊದಲು ಸಂರಕ್ಷಣೆ ವೆಬ್ಸೈಟ್ ಗೆ “Website” ಭೇಟಿ ನೀಡಬೇಕು. ಅದಕ್ಕಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://www.samrakshane.karnataka.gov.in/

* ಅಲ್ಲಿ ವರ್ಷ “Year” ಸೆಲೆಕ್ಟ್ ಮಾಡಬೇಕಾಗಿದ್ದು ಈಗಾಗಲೇ ವರ್ಷ 2024-25 ಹಾಗೂ ಋತು ರಾಬಿ “RABI” ಎಂದು ಸೆಲೆಕ್ಟ್ ಆಗಿರುತ್ತದೆ.

ಅದನ್ನು ನೋಡಿ ಗೋ “GO” ಬಟನ್ ಮೇಲೆ ಕ್ಲಿಕ್ ಮಾಡಿ

* ನಂತರ ಓಪನ್ ಆಗುವ ಪೇಜ್ ನಲ್ಲಿ ಫಾರ್ಮರ್ಸ್ ಎಂಬ ಕಾಲಂ “Farmers Column” ಇದ್ದು, ಅದರಲ್ಲಿ ಸ್ವಲ್ಪ ಕೆಳಗಡೆ ಸ್ಕ್ರಾಲ್ ಮಾಡಿದರೆ ವ್ಹೀವ್ ಕಟ್ ಆಫ್ ಡೇಟ್ (view cut off dates) ಎಂಬ ಹಾಗೆ ಇದೆ ಅದರ ಮೇಲೆ ಕ್ಲಿಕ್ ಮಾಡಿ

* ನಂತರ ಓಪನ್ ಆಗುವ ಪೇಜ್ ನಲ್ಲಿ ಜಿಲ್ಲೆಯನ್ನು “District” ಸೆಲೆಕ್ಟ್ ಮಾಡುವ ಆಯ್ಕೆಯಿದ್ದು ಅದರಲ್ಲಿ ನಿಮ್ಮ ಜಿಲ್ಲೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ

* ನಿಮ್ಮ ಜಿಲ್ಲೆಯನ್ನು ಸೆಲೆಕ್ಟ್ ಮಾಡಿದ ನಂತರ ನಿಮ್ಮ ಜಿಲ್ಲೆಯಲ್ಲಿ ಯಾವ ಬೆಳೆಗೆ ಯಾವಾಗ ಬೆಳೆ ವಿಮೆ ಪ್ರಾರಂಭವಾಗಿದೆ ಯಾವಾಗ ಕೊನೆಯಾಗುತ್ತದೆ ಹಾಗೂ ಇನ್ನು ಎಷ್ಟು ದಿನಗಳು ಬಾಕಿ ಇದೆ ಎಂಬ ಬಗ್ಗೆ ಮಾಹಿತಿಯನ್ನು ಸಂಪೂರ್ಣವಾಗಿ ನೀಡುತ್ತದೆ.

ಅಲ್ಲಿ ನಿಮ್ಮ ಜಿಲ್ಲೆಯಲ್ಲಿ ಬೆಳೆಯುವ ಎಲ್ಲಾ ಬೆಳೆಗಳ ಬಗ್ಗೆ ಮಾಹಿತಿ ಇದ್ದು ನೀವು ಯಾವ ಬೆಳೆಯನ್ನು ಬೆಳೆಯುತ್ತಿದ್ದೀರಿ ಎಂದು ನೋಡಿಕೊಂಡು

ಆ ಬೆಳಗ್ಗೆ ಯಾವಾಗ ಬೆಳೆವಿಮೆ ಪಾವತಿಸುವ ಕೊನೆಯ ದಿನಾಂಕ ಇದೆ ಇನ್ನು ಎಷ್ಟು ದಿನ ಬಾಕಿ ಇದೆ ಎಂಬುದನ್ನು ನೋಡಿಕೊಂಡು ಬೆಳೆ ವಿಮೆ ಮಾಡಿಸಬಹುದು.

ಬೆಳೆವಿಮೆ “Crop Insurance” ಮಾಡಿಸುವುದು ಹೇಗೆ?

ಹತ್ತಿರದ ಗ್ರಾಮ ಒನ್ ಕೇಂದ್ರಗಳಲ್ಲಿ ನೀವು ಬೆಳೆ ವಿಮೆ “Crop Insurance” ಮಾಡಿಸಬಹುದು.

ಧನ್ಯವಾದಗಳು

< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >

1) ಫೇಸ್ಬುಕ್ / Facebook – ಜೈನ್ ಆಗಿ/ join facebook

2)ವಾಟ್ಸಾಪ್ ಗ್ರೂಪ್ /Whatsapp ಗುಂಪು ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ

3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V.K

ಪರಿಸರ ಪರಿಸರದೊಂದಿಗೆ ಆರ್ಥಿಕತೆ


"Agriculture is our CULTURE"