"Agriculture is our CULTURE"

BPL Ration card cancellation: ಈ 7 ನಿಯಮಗಳನ್ನು ಉಲಂಗಿಸಿದರೆ ರೇಷನ್ ಕಾರ್ಡ್ ರದ್ದು!!! 22.65 ಲಕ್ಷ ಕಾಡ್೯ ರದ್ದು!

ರಾಜ್ಯದಲ್ಲಿ ಬಿಪಿಎಲ್ ಹಂಗಾಮ ಮುಗಿಯುವಂತೆ ಕಾಣುತ್ತಿಲ್ಲ. ರಾಜ್ಯ ಸಕಾ೯ರವು ಬಿಪಿಎಲ್ ಗೆ ಅನಹ೯ರಾಗಿರುವವರ ಕಾಡ್೯ಗಳನ್ನು ರದ್ದುಪಡಿಸಲೇಬೇಕು ಎಂದು ಶಪಥ ಮಾಡಿದಂತಿದೆ.

ಈಗಾಗಲೇ 1 ಲಕ್ಷಕ್ಕೂ ಹೆಚ್ಚು ಕಾಡು೯ಗಳನ್ನು ರದ್ದು ಮಾಡಲಾಗಿದೆ ಎನ್ನಲಾಗಿದ್ದು, ರಾಜ್ಯದಲ್ಲಿ ಇನ್ನೂ 22.65 ಲಕ್ಷ ಬಿಪಿಎಲ್ ಕಾಡು೯ಗಳು ರದ್ದಾಗಲಿವೆ ಎಂಬ ಮಾಹಿತಿ ಹೊರಬಿದ್ದಿದೆ.

22.65 ಲಕ್ಷ ರೇಷನ್ ಕಾಡ್೯ ರದ್ದು!

ರಾಜ್ಯದಲ್ಲ್ ಒಟ್ಟು 1.25 ಕೋಟಿ ಬಿಪಿಎಲ್ ಕಾಡ್೯ಗಳಿವೆ. ಅದರಲ್ಲಿ 22.65 ಕಾಡು೯ಗಳು ಅನಹ೯ವಾಗಿದ್ದು, ಅಂತಹ ಕಾಡ್೯ಗಳನ್ನು ರದ್ದು ಮಾಡಲು ಸಕಾ೯ರ ಮುಂದಾಗಿದೆ.

ಆದರೆ ಈ ಹಿಂದೆ ಬಿಪಿಎಲ್ ಕಾಡ್೯ದಾರರು ಹೊಂದಿರಬೇಕಾದ ಅಹ೯ತೆಗಳ ಬಗ್ಗೆ ಆರಿ ವಿ ದೇಶಪಾಂಡೆ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಿತ್ತು.

ಆದರೆ ಪ್ರಸ್ತುತ ಆ ಸಮಿತಿ ಇನ್ನು ವರದಿಯನ್ನು ಕೊಟ್ಟಿಲ್ಲ. ವರದಿ ಬರುವ ಮುನ್ನವೇ ಸಕಾ೯ರ ಬಿಪಿಎಲ್ ಕಾಡ್೯ ರದ್ದು ಮಾಡಲು ಮುಂದಾಗಿದೆ. ಅದಕ್ಕಾಗಿ ಆಹಾರ ಇಲಾಖೆ 2017 ರಲ್ಲಿ ಹೊರಡಿಸಲಾದ ಆದೇಶದ ಷರತ್ತುಗಳನ್ನು ಪಾಲಿಸಲಾಗುತ್ತಿದೆ.

ಈ ಸೌಲಭ್ಯಗಳಿದ್ದರೆ ಬಿಪಿಎಲ್ ಕಾಡ್೯ ರದ್ದು!

1)1.20 ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿದ್ದರೆ

2) ಸಕಾ೯ರಿ/ಅರೆಸಕಾ೯ರಿ ನೌಕರಿಯಲ್ಲಿದ್ದರೆ

3) ನಗರ ಪ್ರದೇಶಗಳಲ್ಲಿ 1000 ಅಡಿಗಿಂತ ಹೆಚ್ಚಿನ ಜಾಗ ಹೊಂದಿದ್ದರೆ

4)ಗ್ರಾಮೀಣ ಪ್ರದೇಶಗಳಲ್ಲಿ 3 ಹೆಕ್ಟೇರ್ ಗಿಂತ ಹೆಚ್ಚಿನ ಭೂಮಿ ಹೊಂದಿದ್ದರೆ

5)ವೈಟ್ ಬೋಡ್೯ ನ 4 ಚಕ್ರದ ವಾಹನ ಹೊಂದಿದ್ದರೆ

6)ವೃತ್ತಿತೆರಿಗೆ, ಆದಾಯ ತೆರಿಗೆ, ಜಿಎಸ್ ಟಿ ಪಾವತಿಸುತ್ತಿದ್ದರೆ

7)150 ಯೂನಿಟ್ ಗಿಂತ ಹೆಚ್ಚಿನ ವಿದ್ಯುತ್ ಬಿಲ್ ಬರುತ್ತಿದ್ದರೆ

ಹೀಗೆ ಹೆಚ್ಚಿನ ಸೌಲಭ್ಯಗಳನ್ನು ಹೊಂದಿರುವ ಕುಟುಂಬಗಳು ಈಗಲೂ ಬಿಪಿಎಲ್ ಕಾಡ್೯ ಹೊಂದಿದ್ದು, ಇದರಿಂದ ಸಕಾ೯ರದ ಮೇಲೆ ಆಥಿ೯ಕವಾಗಿ ಬಹಳಷ್ಟು ಹೊರೆಯಾಗುತ್ತಿದೆ.

ಆದ್ದರಿಂದ ರಾಜ್ಯ ಸಕಾ೯ರವು ಈ ಮೇಲಿನ ಅಹ೯ತೆಗಳನ್ನು ಹೊಂದಿರುವ ಕುಟುಂಬಗಳನ್ನು ಬಿಪಿಎಲ್ ಕಾಡ್೯ ಹೊಂದಲು ಅನಹ೯ ಎಂದು ಕಾಡ್೯ ರದ್ದು ಪಡಿಸುತ್ತಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಕಾಡ್೯ ರದ್ದು!

ಈ ಷರತ್ತುಗಳನ್ವಯ ಕಲ್ಬುರ್ಗಿ ಜಿಲ್ಲೆಯಲ್ಲಿ ಅತಿ ಹೆಚ್ಚು ಕಾಡ್೯ಗಳು ರದ್ದಾಗಲಿವೆ ಎನ್ನಲಾಗಿದೆ.

*ಕಲಬುರಗಿಯಲ್ಲಿ 78,058 ಮಂದಿ ಅನರ್ಹರಿಗೆ ಬಿಪಿಎಲ್ ಕಾರ್ಡ್ ನೀಡಲಾಗಿದೆ.

*ಬೆಂಗಳೂರಿನಲ್ಲಿ ಒಟ್ಟು 65,563 ಅನರ್ಹರು ಬಿಪಿಎಲ್ ಕಾರ್ಡ್ ಹೊಂದಿದ್ದಾರೆ.

*ಬೆಂಗಳೂರು ಪೂರ್ವದಲ್ಲಿ 9,129 ಅನರ್ಹರಿಗೆ ಬಿಪಿಎಲ್ ಕಾರ್ಡ್ ನೀಡಲಾಗಿದೆ.

* ಬೆಂಗಳೂರು ಉತ್ತರದಲ್ಲಿ 17,382 ಅನರ್ಹರಿಗೆ ಬಿಪಿಎಲ್ ಕಾರ್ಡ್ ನೀಡಲಾಗಿದೆ.

* ಬೆಂಗಳೂರು ದಕ್ಷಿಣದಲ್ಲಿ 11,447 ಅನರ್ಹರಿಗೆ ಬಿಪಿಎಲ್ ಕಾರ್ಡ್ ನೀಡಲಾಗಿದೆ.

ಹೀಗೆ ರಾಜ್ಯದಲ್ಲಿ ಒಟ್ಟು 22.65 ಲಕ್ಷ ಕಾಡ್೯ಗಳು ಅನಹ೯ರಿಗೆ ಕೊಡಲಾಗಿದ್ದು, ಅವುಗಳನ್ನು ಪರಿಶೀಲಿಸಿ ರದ್ದುಪಡಿಸಲಾಗುತ್ತಿದೆ.ಆದರೆ ಅದರಲ್ಲಿ ಅಹ೯ತೆ ಹೊಂದಿರುವವರ ಕಾಡ್೯ಗಳು ರದ್ದಾಗುವ ಭಯ ಜನರಲ್ಲಿ ಕಾಡುತ್ತಿದ್ದು, ಸಕಾ೯ರದ ವಿರುಧ್ದ ಧ್ವನಿ ಎತ್ತುತ್ತಿದ್ದಾರೆ.

ಇನ್ನು ವಿರೋಧ ಪಕ್ಷಗಳು ಗ್ಯಾರಂಟಿ ಯೋಜನೆಗಶಿಗೆ ಅದರಲ್ಲೂ ಅನ್ನಭಾಗ್ಯ ಯೋಜನೆಗೆ 77000 ಕೋಟಿಗೂ ಹೆಚ್ಚಿನ ಹಣ ಬೇಕಾಗಿದ್ದು, ಸಕಾ೯ರದ ಬೊಕ್ಕಸ ಖಾಲಿಯಾಗಿರುವದರಿಂದ ಸಕಾ೯ರ ಈ ಕ್ರಮ ಕೈಗೊಳ್ಳುತ್ತಿದೆ ಎಂದು ಸಕಾ೯ರದ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ.

ಒಟ್ಟಿನಲ್ಲಿ ಸಕಾ೯ರ ಕೈಗೊಳ್ಳುವ ಈ ಕ್ರಮದಿಂದ ಅನಹ೯ರ ಕಾಡ್೯ಗಶು ರದ್ದಾದರೂ ಕೂಡ ಅಹ೯ರಿಗೆ ತೊಂದರೆಯಾಗದಿರಲಿ ಎಂಬುದು ನಮ್ಮ ಆಶಯ.

ಸರ್ಕಾರವು ಆಹಾರ ಇಲಾಖೆಯ ವೆಬ್ಸೈಟ್ನಲ್ಲಿ ಒಂದು ಲಿಸ್ಟ್ ಅನ್ನು ಬಿಡುಗಡೆ ಮಾಡಿದ್ದು ಇದರಲ್ಲಿ ಯಾರು ಬಿಪಿಎಲ್ ಕಾಡ್೯ ಹೊಂದಿದ್ದಾರೆ ಎಂದು ಲಿಸ್ಟ್ ಕೊಟ್ಟಿದ್ದಾರೆ.

ಈ ಲಿಸ್ಟನ್ನು  ಚೆಕ್ ಮಾಡುವುದು ಹೇಗೆ ಎಂಬುದರ ಬಗ್ಗೆ ಈ ಲೇಖನದಲ್ಲಿ ಮಾಹಿತಿಯನ್ನು ನೀಡಿದೆ.ಲೇಖನವನ್ನು ಸಂಪೂರ್ಣವಾಗಿ ಓದಿ.

ಲಿಸ್ಟ್ ನಲ್ಲಿ ಹೆಸರು ಚೆಕ್ ಮಾಡಿಕೊಳ್ಳೋದು ಹೇಗೆ?

*ಲಿಸ್ಟ್ ಪಡೆಯಲು ಮೊದಲು ನೀವು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://ahara.kar.nic.in/Home/EServices

* ನಂತರ ಎಡಭಾಗದಲ್ಲಿರುವ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ

*ಅದರಲ್ಲಿ ಇ-ರೇಷನ್ ಕಾಡ್೯ ಎಂಬ ಆಯ್ಕೆ ಇದು ಅದರ ಮೇಲೆ ಕ್ಲಿಕ್ ಮಾಡಿ

* ನಂತರ ಕೊನೆಯಲ್ಲಿ show village list ಎಂದು ಇದ್ದು, ಅದರ ಮೇಲೆ ಕ್ಲಿಕ್ ಮಾಡಿ

*ನಂತರ ಓಪನ್  ಆಗುವ ಪೇಜ್ ನಲ್ಲಿ ನಿಮ್ಮ ಜಿಲ್ಲೆ,ತಾಲೂಕು, ಗ್ರಾಮ ಪಂಚಾಯತ್ ಹಾಗೂ ಗ್ರಾಮವನ್ನು ಸೆಲೆಕ್ಟ್ ಮಾಡಿ ಗೋ ಬಟನ್ ಮೇಲೆ ಕ್ಲಿಕ್ ಮಾಡಿ

* ಆಗ ನಿಮ್ಮ ಊರಿನಲ್ಲಿ ಯಾರೆಲ್ಲಾ ರೇಷನ್ ಕಾಡ್೯ ಹೊಂದಿದ್ದಾರೋ ಅವರ ಹೆಸರು ತೋರಿಸುತ್ತದೆ. ಅದರಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂದು ಚೆಕ್ ಮಾಡಿಕೊಳ್ಳಿ. ಅದರ ಮುಂದೆಯೇ ಬಿಪಿಎಲ್ ಕಾಡ್೯ ಮಾಹಿತಿ ಸಿಗುತ್ತದೆ.

ಧನ್ಯವಾದಗಳು

< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >

1) ಫೇಸ್ಬುಕ್ / Facebook – ಜೈನ್ ಆಗಿ/ join facebook

2)ವಾಟ್ಸಾಪ್ ಗ್ರೂಪ್ /Whatsapp ಗುಂಪು ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ

3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚


"Agriculture is our CULTURE"