"Agriculture is our CULTURE"

Gruhalaxmi installment:: ಗೃಹಲಕ್ಷ್ಮಿ 15ನೇ ಕಂತಿನ ಹಣ ಯಾವಾಗ ಬರುತ್ತೆ? ಸಕಾ೯ರದ ಮುಂದಿನ ನಡೆ ಏನು?

ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ರದ್ದು ಪ್ರಕ್ರಿಯೆ ಜೋರಾಗಿದ್ದು, ಬಿಪಿಎಲ್ ಕಾರ್ಡ್ದಾರರು ಆತಂಕದಲ್ಲಿದ್ದಾರೆ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಗಳಿಂದಲೇ ಸರ್ಕಾರವು

ಈ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ವಿರೋಧ ಪಕ್ಷಗಳು ಮಾತನಾಡಿಕೊಳ್ಳುತ್ತಿದ್ದು, ಇದರಿಂದಾಗಿ ರಾಜ್ಯದ ಜನರಿಗೆ ಬಿಪಿಎಲ್ ಕಾರ್ಡ್ ರದ್ದಾಗುವ ಚಿಂತೆ

ಒಂದು ಕಡೆಯಾದರೆ ಗೃಹಲಕ್ಷ್ಮಿಯರಿಗೆ ಗೃಹಲಕ್ಷ್ಮಿಯ ಮುಂದಿನ ಕಂತಿನ ಹಣ ಬರುತ್ತೋ ಇಲ್ಲವೋ ಯಾವಾಗ ಬರುತ್ತದೆ ಎಂಬ ಚಿಂತೆ ಕಾಡುತ್ತಿದೆ.

15 ನೇ ಕಂತಿನ ಈ ದಿನಾಂಕದಂದು ಜಮೆ!

ಈಗಾಗಲೇ ಗೃಹಲಕ್ಷ್ಮಿಯರಿಗೆ 14 ಕಂತಿನ ಹಣವನ್ನು ಅವರ ಖಾತೆಗಳಿಗೆ ಜಮೆ ಮಾಡಲಾಗಿದ್ದು, ಇದೀಗ 15ನೇ ಕಂತಿನ ಹಣ ಯಾವಾಗ ಬರುತ್ತದೆ ಎಂದು ಮನೆ ಒಡತಿಯರು ಕೇಳುತ್ತಿದ್ದಾರೆ.

ಯಾಕೆ ಉತ್ತರವನ್ನು ಈ ಲೇಖನದಲ್ಲಿ ನೀಡಲಾಗಿದ್ದು, ಗೃಹಲಕ್ಷ್ಮಿ ಯೋಜನೆ ಅಡಿ 15ನೇ ಕಂತಿನ ಅನುದಾನವನ್ನು ಇದೇ ನವೆಂಬರ್ ತಿಂಗಳ 30 ನೇ ತಾರೀಖಿನೊಳಗಾಗಿ ಹಾಕಲಾಗುವುದು ಎಂದು ಮಾಹಿತಿ ಹೊರಬಿದ್ದಿದೆ.

ರೇಷನ್ ರದ್ದಾದರೆ ಗೃಹ ಲಕ್ಷ್ಮಿ ಹಣ ಬರುತ್ತಾ?

ಆದರೆ ಪ್ರಸ್ತುತ ಸರ್ಕಾರಕ್ಕೆ ರೇಷನ್ ಕಾರ್ಡ್ ದೊಡ್ಡ ತಲೆ ನೋವಾಗಿದ್ದು, ಅನರ್ಹ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡುತ್ತಿರುವ

ರಾಜ್ಯ ಸರ್ಕಾರ ಇ-ಕೆವೈಸಿ ಮಾಡದ ಎಪಿಎಲ್ ಕಾರ್ಡ್ಗಳನ್ನು ಕೂಡ ರದ್ದು ಮಾಡುತ್ತಿದೆ ಹೀಗೆ ರೇಷನ್ ಕಾರ್ಡ್ ಗಳು ರದ್ದಾದಲಿ ಅಂತಹ ಕುಟುಂಬದ ಗೃಹಲಕ್ಷ್ಮಿಯರಿಗೆ 15ನೇ ಕಂತಿನ ಹಣ ಬರುವುದು ಅನುಮಾನ.

ಈ ಬಗ್ಗೆ ಸರ್ಕಾರ ಯಾವುದೇ ಅಧಿಕೃತ ಮಾಹಿತಿಗಳನ್ನು ಹಂಚಿಕೊಂಡಿಲ್ಲ ಆದರೆ ಮುಖ್ಯಮಂತ್ರಿಗಳು ಆದಾಯ ತೆರಿಗೆ ಪಾವತಿ ಮಾಡುತ್ತಿರುವ ಹಾಗೂ ಸರ್ಕಾರಿ ನೌಕರರಲ್ಲಿರುವ

ಅದೆಷ್ಟೋ ಜನರು ಬಿಪಿಎಲ್ ಕಾರ್ಡ್ಗಳನ್ನು ಹೊಂದಿದ್ದು ಅಂತಹವರನ್ನು ಹುಡುಕಿ ಅವರ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಲಾಗುತ್ತಿದೆ ಅವುಗಳನ್ನು ಎಪಿಎಲ್ ಕಾರ್ಡ್ಗಳಾಗಿ ಬದಲಾಯಿಸಲಾಗುತ್ತಿದೆ ಎಂದು ಮಾಹಿತಿಯನ್ನು ನೀಡಿದ್ದಾರೆ.

ಆದರೆ ಈ ರೇಷನ್ ಕಾರ್ಡ್ ಗಳ ಬಗ್ಗೆ ಕ್ರಮ ವಹಿಸಲು ಇನ್ನು ಸಮಯಾವಕಾಶ ಬೇಕಾಗಿರುವುದರಿಂದ 15ನೇ ಕಂತಿನ ಗ್ರಹಲಕ್ಷ್ಮಿ ಯೋಜನೆಯ ಹಣ ನವೆಂಬರ್ 30ರೊಳಗೆ ಮನೆ ಒಡತಿಯರಿಗೆ ಸಿಗುವುದು ಖಂಡಿತ ಎನ್ನಲಾಗುತ್ತಿದೆ.

ಸರ್ಕಾರವು ಆಹಾರ ಇಲಾಖೆಯ ವೆಬ್ಸೈಟ್ನಲ್ಲಿ ಒಂದು ಲಿಸ್ಟ್ ಅನ್ನು ಬಿಡುಗಡೆ ಮಾಡಿದ್ದು ಇದರಲ್ಲಿ ಯಾರ ಹೆಸರು ಇದೆಯೋ ಅವರಿಗೆ ಮಾತ್ರ 15ನೇ ಕಂತಿನ ಹಣ ಜಮೆಯಾಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಹಾಗಾದರೆ ಆ ಲಿಸ್ಟನ್ನು  ಚೆಕ್ ಮಾಡುವುದು ಹೇಗೆ ಎಂಬುದರ ಬಗ್ಗೆ ಈ ಲೇಖನದಲ್ಲಿ ಮಾಹಿತಿಯನ್ನು ನೀಡಿದೆ.ಲೇಖನವನ್ನು ಸಂಪೂರ್ಣವಾಗಿ ಓದಿ.

ಲಿಸ್ಟ್ ನಲ್ಲಿ ಹೆಸರು ಚೆಕ್ ಮಾಡಿಕೊಳ್ಳೋದು ಹೇಗೆ?

*ಲಿಸ್ಟ್ ಪಡೆಯಲು ಮೊದಲು ನೀವು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://ahara.kar.nic.in/Home/EServices

* ನಂತರ ಎಡಭಾಗದಲ್ಲಿರುವ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ

*ಅದರಲ್ಲಿ ಇ-ರೇಷನ್ ಕಾಡ್೯ ಎಂಬ ಆಯ್ಕೆ ಇದು ಅದರ ಮೇಲೆ ಕ್ಲಿಕ್ ಮಾಡಿ

* ನಂತರ ಕೊನೆಯಲ್ಲಿ show village list ಎಂದು ಇದ್ದು, ಅದರ ಮೇಲೆ ಕ್ಲಿಕ್ ಮಾಡಿ

*ನಂತರ ಓಪನ್  ಆಗುವ ಪೇಜ್ ನಲ್ಲಿ ನಿಮ್ಮ ಜಿಲ್ಲೆ,ತಾಲೂಕು, ಗ್ರಾಮ ಪಂಚಾಯತ್ ಹಾಗೂ ಗ್ರಾಮವನ್ನು ಸೆಲೆಕ್ಟ್ ಮಾಡಿ ಗೋ ಬಟನ್ ಮೇಲೆ ಕ್ಲಿಕ್ ಮಾಡಿ

* ಆಗ ನಿಮ್ಮ ಊರಿನಲ್ಲಿ ಯಾರೆಲ್ಲಾ ಗೃಹಲಕ್ಷ್ಮಿಯ ಹಣ  ಪಡೆಯಲು ಅರ್ಹರಾಗಿದ್ದಾರೋ ಅವರಲ್ಲಿ ಓಪನ್ ಆಗುತ್ತದೆ ಅದರಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂದು ಚೆಕ್ ಮಾಡಿಕೊಳ್ಳಿ.

* ಅದರಲ್ಲಿ ನಿಮ್ಮ ಹೆಸರು ಇದ್ದರೆ, ನಿಮಗೆ 15ನೇ ಕಂತಿನ ಹಣವು ಬರುತ್ತದೆ ಎಂದು ಅರ್ಥ.

ಧನ್ಯವಾದಗಳು

< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >

1) ಫೇಸ್ಬುಕ್ / Facebook – ಜೈನ್ ಆಗಿ/ join facebook

2)ವಾಟ್ಸಾಪ್ ಗ್ರೂಪ್ /Whatsapp ಗುಂಪು ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ

3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V.K

ಪರಿಸರ ಪರಿಸರದೊಂದಿಗೆ ಆರ್ಥಿಕತೆ


"Agriculture is our CULTURE"