Free Bus for Men ::ಪುರುಷರಿಗೂ ಉಚಿತ ಬಸ್ ಟಿಕೆಟ್ ಗ್ಯಾರಂಟಿ! ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್!!
ನವೆಂಬರ್ 14 ರಂದು ಮಕ್ಕಳ ದಿನಾಚರಣೆ ಅಂಗವಾಗಿ ವಿಧಾನಸೌಧದಲ್ಲಿ ಒಂದು ಕಾಯ೯ಕ್ರಮವನ್ನು ಏಪ೯ಡಿಸಲಾಗಿತ್ತು. ಅದರಲ್ಲಿ ಬಿಬಿಎಂಪಿ ವ್ಯಾಪ್ತಿಯ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಅದರಲ್ಲಿ ಏಳನೇ ತರಗತಿಯ ಚರಣ್ ಎಂಬ ಹುಡುಗ ಡಿಕೆ ಶಿವಕುಮಾರ್ ಅವರಿಗೆ ಎಲ್ಲಾ ಯೋಜನೆಗಳು ಹೆಣ್ಣುಮಕ್ಕಳಿಗಾಗಿಯೇ ಜಾರಿಗೆ ತಂದಿದ್ದೀರಿ.
ಗಂಡಸರಿಗೆ ಅನುಕೂಲವಾಗುವ ಯಾವುದೇ ಯೋಜನೆ ತರುವುದಿಲ್ಲವೇ ಎಂದು ಕೇಳಿದ್ದಾನೆ. ಅದಕ್ಕೆ ಉತ್ತರವಾಗಿ ಉಪಮುಖ್ಯಮಂತ್ರಿಗಳು ನಿಗದಿತ ವಯೋಮಿತಿಯ ಪುರುಷರಿಗೂ ಕೂಡ ಉಚಿತ ಬಸ್ ಪ್ರಯಾಣ ಒದಗಿಸುವ ಬಗ್ಗೆ ಸಕಾ೯ರದ ಮಟ್ಟದಲ್ಲಿ ಚಿಂತನೆ ನಡೆದಿದ್ದು, ಸದ್ಯದಲ್ಲಿಯೇ ಗಂಡಸರಿಗೂ ಉಚಿತ ಬಸ್ ಟಿಕೆಟ್ ಯೋಜನೆ ತರಲಾಗುವುದು ಎಂದು ಹೇಳಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಡಿಕೆ ಶಿವಕುಮಾರ್ ರವರು ಶಕ್ತಿ ಗ್ಯಾರಂಟಿ ಯೋಜನೆ ಬಗ್ಗೆ ಮಾತನಾಡಿದ್ದು ಸಂಚಲನ ಸೃಷ್ಟಿಸಿತ್ತು. ಈಗ ಮತ್ತೆ ಡಿ. ಕೆ ಶಿವಕುಮಾರ್ ಅವರು ಗ್ಯಾರಂಟಿ ಬಗ್ಗೆ ಮಾತನಾಡಿದ್ದಾರೆ.
ಹಿಂದೆ ಅವರು ಕಾಂಗ್ರೆಸ್ ನೀಡಿರುವ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯನ್ನು ಪರಿಶೀಲಿಸುವುದಾಗಿ ಹೇಳಿಕೆ ನೀಡಿದ್ದರು.
ಆದರೆ ಇದೀಗ ಶಕ್ತಿ ಯೋಜನೆಯನ್ನು ಕೆಲ ಮಹಿಳೆಯರಿಗೆ ಮಾತ್ರವಲ್ಲದೆ ಪುರುಷರಿಗೂ ಕೂಡ ವಿಸ್ತರಿಸುವ ಬಗ್ಗೆ ಹೇಳಿಕೆ ನೀಡಿದ್ದಾರೆ
ಈಗಾಗಲೇ ಗ್ಯಾರೆಂಟಿ ಯೋಜನೆಗಳಿಂದ ರಾಜ್ಯದಲ್ಲಿ ಸಾಕಷ್ಟು ಸಕಾರಾತ್ಮಕ ಹಾಗೂ ನಕಾರಾತ್ಮಕ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು,
ಗ್ಯಾರಂಟಿಗಳಿಂದ ಸರ್ಕಾರದ ಬೊಕ್ಕಸ ಖಾಲಿಯಾಗಿದ್ದು, ಉಚಿತ ಬಸ್ ಪ್ರಯಾಣವನ್ನು ಹಿಂತೆಗೆದುಕೊಳ್ಳುವಂತೆ ಮಹಿಳೆಯರೇ ಹೇಳುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ಅವರು ಹೇಳಿದ್ದರು.
ಹೀಗಿರುವಾಗ ಸರ್ಕಾರವು ಪುರುಷರಿಗೂ ಕೂಡ ಉಚಿತ ಬಸ್ ಪ್ರಯಾಣವನ್ನು ಒದಗಿಸಿದಲ್ಲಿ ಸರ್ಕಾರಕ್ಕೆ ಇನ್ನಷ್ಟು ಹೊರೆಯಾಗಲಿದ್ದು, ಲಕ್ಷ ಲಕ್ಷ ಕೋಟಿ ರೂಪಾಯಿಗಳ ಸಾಲ ಮಾಡಬೇಕಾಗುತ್ತದೆ.
ಪ್ರಸ್ತುತ ಪರಿಸ್ಥಿತಿಯನ್ನು ನೋಡಿದರೆ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದ ಬಳಿ ಹಣವಿಲ್ಲ. ಸ್ವತಃ ಕಾಂಗ್ರೆಸ್ ಶಾಸಕರೇ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಕೊಡದಿರುವುದಕ್ಕೆ ಗ್ಯಾರಂಟಿಗಳ ವಿರುದ್ಧ ಮಾತನಾಡುತ್ತಿದ್ದಾರೆ.
ಕಾಂಗ್ರೆಸ್ನ ಗ್ಯಾರಂಟಿಗಳ ಸಾದಕ ಬಾಧಕಗಳು ಈಗ ಕಾಂಗ್ರೆಸ್ನ ಮುಖ್ಯಸ್ಥರಿಗೆ ಅರ್ಥವಾಗುತ್ತಿದೆ. ಆದ್ದರಿಂದಲೇ ಖರ್ಗೆ ರವರು ಇತ್ತೀಚಿಗೆ ರಾಜ್ಯದ ಬಜೆಟ್ ಗಣಗುನವಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಬೇಕು ಸುಖಾ ಸುಮ್ಮನೆ ಪುಂಖಾನು ಪುಂಕವಾಗಿ ಯೋಜನೆಗಳನ್ನು ಘೋಷಿಸಬಾರದು ಎಂದು ಹೇಳಿದ್ದರು.
ನಷ್ಟದಲ್ಲಿರುವ ನಿಗಮಗಳು!
ಅದರಲ್ಲೂ ರಾಜ್ಯ ಎಲ್ಲಾ ನಾಲ್ಕು ನಿಗಮಗಳು ಈಗಾಗಲೇ ನಷ್ಟದಲ್ಲಿ ನಡೆಯುತ್ತಿವೆ. ಉಚಿತ ಪ್ರಯಾಣದ ಟಿಕೆಟ್ ದರವನ್ನು ಸರ್ಕಾರ ಭರಿಸುತ್ತಿದೆಯಾದರೂ ಸರ್ಕಾರವು ನಿರಂತರವಾಗಿ ಟಿಕೆಟ್ ದರವನ್ನು ನಿಗಮಗಳಿಗೆ ನೀಡುವುದಿಲ್ಲ ಅನುದಾನ ಬಂದಾಗ ನೀಡುತ್ತದೆ.
ಸರ್ಕಾರದ ಬೊಕ್ಕಸ ಖಾಲಿಯಾಗಿ ಸರ್ಕಾರದ ಬಳಿ ಹಣವಿಲ್ಲವಾದರೆ ಆಗ ನಿಗಮಕ್ಕೆ ಕೊಡಬೇಕಾದ ಹಣದ ಬಾಕಿ ಉಳಿಸಿಕೊಳ್ಳುತ್ತದೆ. ಹಾಗಾದಾಗ ನಿಗಮಗಳು ನಡೆಯುವುದಾದರೂ ಹೇಗೆ?
ಡಕೋಟಾ ಬಸ್ ಬಿಟ್ಟು ಹೊಸ ಬಸ್ ಖರೀದಿ ಯಾವಾಗ?
ಈಗಾಗಲೇ ದುಸ್ಥಿತಿ ಕಂಡಿರುವ ನಿಗಮಗಳಿಗೆ ಬೇಕಾಗಿರುವುದು ಉತ್ತಮ ಬಸ್ ವ್ಯವಸ್ಥೆ. ನಿಗಮಗಳಲ್ಲಿ ಹೊಸ ಬಸ್ಗಳ ಖರೀದಿ ನಡೆಯುತ್ತಿಲ್ಲ.
ಎಷ್ಟು ವರ್ಷಗಳ ಹಿಂದೆ ಖರೀದಿ ಮಾಡಿದ ಡಕೋಟಾ ಬಸ್ ಗಳನ್ನೇ ಇನ್ನು ಓಡಿಸಲಾಗುತ್ತಿದೆ. ಯಾವ ಮಾರ್ಗ ಮಧ್ಯದಲ್ಲಿ ನಿಂತು ಬಿಡುತ್ತೇವೆ ಅಥವಾ ಸುರಕ್ಷಿತವಾಗಿ ಹೋಗಬೇಕಾದ ಸ್ಥಳವನ್ನು ತಲುಪುತ್ತೇವೆ
ಇಲ್ಲವೋ ಎಂಬ ಚಿಂತೆ ಪ್ರಯಾಣಿಕರಲ್ಲಿ ಇದ್ದೇ ಇರುತ್ತದೆ.ಹಾಗಾಗಿ ಉಚಿತ ಪ್ರಯಾಣದ ಯೋಜನೆಯನ್ನು ಕೈ ಬಿಟ್ಟು ಮೊದಲು ನಿಗಮಗಳಿಗೆ ಹೊಸ ಬಸ್ಗಳ ವ್ಯವಸ್ಥೆ ಮಾಡಬೇಕು
ಅಷ್ಟೇ ಅಲ್ಲದೆ ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಿರುವುದರಿಂದ ಎಷ್ಟೊಂದು ನೂಕೂನುಗ್ಗಲುಗಳಾಗುತ್ತಿದೆ ಎಂದು ಈಗಾಗಲೇ ನೋಡಲಾಗಿದೆ ಇನ್ನು ಪುರುಷರಿಗೂ ಕೂಡ ಉಚಿತ ಬಸ್ ವ್ಯವಸ್ಥೆ ಮಾಡಿದಲ್ಲಿ ಸರ್ಕಾರಿ ಬಸ್ಗಳಲ್ಲಿ ಹತ್ತುವುದೇ ದೊಡ್ಡ ಸಾಹಸಮಯ ಕೆಲಸವಾಗುತ್ತದೆ.
ಅಷ್ಟೇ ಅಲ್ಲದೆ ಮೆಟ್ರೋದಂತಹ ಅಭಿವೃದ್ಧಿ ಕೆಲಸಗಳನ್ನು ಸರ್ಕಾರ ಮಾಡುತ್ತಿದ್ದು, ಉಚಿತ ಬಸ್ ಪ್ರಯಾಣ ಒದಗಿಸಿದಲ್ಲಿ ಎಲ್ಲರೂ ಬಸ್ಗಳಲ್ಲಿ ಓಡಾಡುತ್ತಿದ್ದರೆ ಮೆಟ್ರೋ ನಡೆಯುವುದಾದರೂ ಹೇಗೆ?
ಪುರುಷ ವಿದ್ಯಾರ್ಥಿಗಳಿಗೆ ಹಾಗೂ ಹಿರಿಯ ಪುರುಷ ನಾಗರಿಕರಿಗೆ ಈಗಾಗಲೇ ಒಂದಷ್ಟು ಸಾರಿಗೆ ಸವಲತ್ತುಗಳಿದ್ದು,
ಅವರಿಗೆ ಉಚಿತ ಪ್ರಯಾಣ ಒದಗಿಸುವ ಬಗ್ಗೆ ಡಿಕೆ ಶಿವಕುಮಾರ್ ಅವರು ಹೇಳಿರಬಹುದು ಆದರೆ ಟಿಕೆಟ್ ಕೊಳ್ಳಲು ಶಕ್ತರಾಗಿರುವವರೆಗೂ ಕೂಡ ಉಚಿತ ಟಿಕೆಟ್ ಕೊಡುವುದು ಸರ್ಕಾರಕ್ಕೆ ಬಹುದೊಡ್ಡ ನಷ್ಟವಾಗುತ್ತದೆ.
ಹಾಗಾಗಿ ರಾಜ್ಯದ ಬೊಕ್ಕಸವನ್ನು ಖಾಲಿ ಮಾಡುವ ಮುಂದಿನ ದಿನಗಳಲ್ಲಿ ರಾಜ್ಯದ ರಾಜ್ಯವನ್ನು ಅಧೋಗತಿಗೆ ತೆಗೆದುಕೊಂಡು ಹೋಗುವ ಇಂತಹ ಉಚಿತ ಯೋಜನೆಗಳನ್ನು ಸರ್ಕಾರವು ಕೈ ಬಿಟ್ಟು ಅಭಿವೃದ್ಧಿ ಕಾರ್ಯಕ್ರಮಗಳತ್ತ ಹೆಚ್ಚಿನ ಗಮನ ಹರಿಸಬೇಕು ಎಂಬುದು ನಮ್ಮೆಲ್ಲರ ಆಶಯ
ಧನ್ಯವಾದಗಳು
<<< ಅಡಿಕೆ ಮಾರುಕಟ್ಟೆ : ಇಂದಿನ ಅಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅಡಿಕೆ ಮಾರುಕಟ್ಟೆಯ ದರವನ್ನು, ಅಡಿಕೆ ರೋಗ , ಅಡಿಕೆಗೆ ಗೊಬ್ಬರ ಸಿಂಪರಣೆ, ಅಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅಡಿಕೆ, ಹಳೆಯ ಅಡಿಕೆ ರಾಶಿ ಇಪ್ಪಿ ಬೆಟ್ಟಿ ಕೆಂಪುಗೋಟು ಚಿಪ್ಪು, ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅಡಿಕೆ ದರವನ್ನು ತಿಳಿಸಲಾಗಿದೆ.
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– ವಿಕೆ
ಪರಿಸರ ಪರಿಸರದೊಂದಿಗೆ ಆರ್ಥಿ0ಕತೆ