Gruhalaxmi scheme:: 14 ನೇ ಕಂತಿನ ಹಣ ಬಿಡುಗಡೆಗೆ ಸರ್ಕಾರದ ಹೊಸ ರೂಲ್ಸ್! ಈ ಲಿಸ್ಟ್ ನಲ್ಲಿ ಹೆಸರಿಲ್ಲ ಅಂದ್ರೆ ಬರಲ್ಲ ಹಣ! ನಿಮ್ಮ ಹೆಸರು ಚೆಕ್ ಮಾಡ್ಕೊಳ್ಳೊದು ಹೇಗೆ?
ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಾದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ
13 ಕಂತುಗಳ ಹಣ ಈಗಾಗಲೇ ಮನೆ ಒಡತಿಯರ ಖಾತೆಗಳಿಗೆ ಜಮೆಯಾಗಿದೆ. ಸಧ್ಯ 14 ಕಂತಿನ ಹಣ ಯಾವಾಗ ಜಮೆಯಾಗುತ್ತದೆ ಎಂದು ಗೃಹಲಕ್ಷ್ಮಿಯರು ಕಾಯುತ್ತಿದ್ದಾರೆ.
ನಕಲಿ ಕಾಡ್೯ದಾರರನ್ನು ತೆಗೆಯಲು ಸಕಾ೯ರದ ಹೊಸ ರೂಲ್ಸ್!
ಆದರೆ ಸರ್ಕಾರದ ಈ ಯೋಜನೆಯಲ್ಲಿ ಅರ್ಹರಲ್ಲದವರು ನಕಲಿ ರೇಷನ್ ಕಾಡ್೯ ಹಾಗೂ ನಕಲಿ ದಾಖಲೆಗಳ ಮೂಲಕ ಅರ್ಜಿಯನ್ನು ಸಲ್ಲಿಸಿ ಯೋಜನೆಯ ಹಣವನ್ನು ಪಡೆಯುತ್ತಿದ್ದು,
ಇದನ್ನು ತಪ್ಪಿಸಿ ಅರ್ಹ ಫಲಾನುಭವಿಗಳಿಗೆ ಯೋಜನೆಯ ಸದುಪಯೋಗ ತಲುಪಬೇಕೆಂದು ಸರ್ಕಾರವು ದಿನಕ್ಕೊಂದು ಕ್ರಮವನ್ನು ಕೈಗೊಳ್ಳುತ್ತಿದೆ.
ಪ್ರಸ್ತುತ 14ನೇ ಕಂತಿನ ಹಣವು ಕೂಡ ಬೇಗ ಜಮೆಯಾಗದಿರುವುದಕ್ಕೆ ಅದೇ ಕಾರಣವಾಗಿದೆ.
ಲಿಸ್ಟ್ ನಲ್ಲಿ ನಿಮ್ಮ ಹೆಸರಿದೆಯಾ ಚೆಕ್ ಮಾಡಿಕೊಳ್ಳಿ!
ಸರ್ಕಾರವು ಆಹಾರ ಇಲಾಖೆಯ ವೆಬ್ಸೈಟ್ನಲ್ಲಿ ಒಂದು ಲಿಸ್ಟ್ ಅನ್ನು ಬಿಡುಗಡೆ ಮಾಡಿದ್ದು ಇದರಲ್ಲಿ ಯಾರ ಹೆಸರು ಇದೆಯೋ ಅವರಿಗೆ ಮಾತ್ರ 14ನೇ ಕಂತಿನ ಹಣ ಜಮೆಯಾಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಹಾಗಾದರೆ ಆ ಲಿಸ್ಟನ್ನು ಚೆಕ್ ಮಾಡುವುದು ಹೇಗೆ ಎಂಬುದರ ಬಗ್ಗೆ ಈ ಲೇಖನದಲ್ಲಿ ಮಾಹಿತಿಯನ್ನು ನೀಡಿದೆ.ಲೇಖನವನ್ನು ಸಂಪೂರ್ಣವಾಗಿ ಓದಿ.
ಲಿಸ್ಟ್ ನಲ್ಲಿ ಹೆಸರು ಚೆಕ್ ಮಾಡಿಕೊಳ್ಳೋದು ಹೇಗೆ?
*ಲಿಸ್ಟ್ ಪಡೆಯಲು ಮೊದಲು ನೀವು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://ahara.kar.nic.in/Home/EServices
* ನಂತರ ಎಡಭಾಗದಲ್ಲಿರುವ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ
*ಅದರಲ್ಲಿ ಇ-ರೇಷನ್ ಕಾಡ್೯ ಎಂಬ ಆಯ್ಕೆ ಇದು ಅದರ ಮೇಲೆ ಕ್ಲಿಕ್ ಮಾಡಿ
* ನಂತರ ಕೊನೆಯಲ್ಲಿ show village list ಎಂದು ಇದ್ದು, ಅದರ ಮೇಲೆ ಕ್ಲಿಕ್ ಮಾಡಿ
*ನಂತರ ಓಪನ್ ಆಗುವ ಪೇಜ್ ನಲ್ಲಿ ನಿಮ್ಮ ಜಿಲ್ಲೆ,ತಾಲೂಕು, ಗ್ರಾಮ ಪಂಚಾಯತ್ ಹಾಗೂ ಗ್ರಾಮವನ್ನು ಸೆಲೆಕ್ಟ್ ಮಾಡಿ ಗೋ ಬಟನ್ ಮೇಲೆ ಕ್ಲಿಕ್ ಮಾಡಿ
* ಆಗ ನಿಮ್ಮ ಊರಿನಲ್ಲಿ ಯಾರೆಲ್ಲಾ ಗೃಹಲಕ್ಷ್ಮಿಯ ಹಣ ಪಡೆಯಲು ಅರ್ಹರಾಗಿದ್ದಾರೋ ಅವರಲ್ಲಿ ಓಪನ್ ಆಗುತ್ತದೆ ಅದರಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂದು ಚೆಕ್ ಮಾಡಿಕೊಳ್ಳಿ.
* ಅದರಲ್ಲಿ ನಿಮ್ಮ ಹೆಸರು ಇದ್ದರೆ, ನಿಮಗೆ 14ನೇ ಕಂತಿನ ಹಣವು ಬರುತ್ತದೆ ಎಂದು ಅರ್ಥ.
ಅರ್ಹ ಬಡ ಕುಟುಂಬದ ಪಲಾನುಭವಿಗಳಿಗಾಗಿ ಸರ್ಕಾರ ಯೋಜನೆಗಳನ್ನು ಜಾರಿಗೆ ತಂದರೆ ನಕಲಿ ದಾಖಲೆಗಳ ಮೂಲಕ ಹಲವರು ಯೋಜನೆಯ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ
ಇದನ್ನು ತಪ್ಪಿಸಲು ಸರ್ಕಾರವು ಹಲವು ಗ್ರಾಮಗಳನ್ನು ಕೈಗೊಳ್ಳುತ್ತಿದ್ದು ಸಾರ್ವಜನಿಕರು ಇದಕ್ಕೆ ಸ್ಪಂದಿಸಿ ಸರ್ಕಾರದೊಂದಿಗೆ ಕೈಜೋಡಿಸಿ ಅರ್ಹರಿಗೆ ಮಾತ್ರ ಯೋಜನೆಯ ಸವಲತ್ತುಗಳು ಸಿಗುವಂತೆ ನೋಡಿಕೊಳ್ಳಲು ಸಹಾಯ ಮಾಡಬೇಕಾಗಿದೆ.
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
V.K
ಪರಿಸರ ಪರಿಸರದೊಂದಿಗೆ ಆರ್ಥಿಕತೆ