"Agriculture is our CULTURE"

National Agriculture Code:: ಕೃಷಿಯಲ್ಲಿ ಮಹಾಕ್ರಾಂತಿಗೆ ಕೇಂದ್ರ ಸಕಾ೯ರ ಮುನ್ನುಡಿ! ಹೊಸ ಎನ್ ಎ ಸಿ ನೀತಿಯಿಂದ ಕೃಷಿ ಮಹತ್ತರ ಬದಲಾವಣೆ! 

ಭಾರತ ದೇಶವು ಕೃಷಿಯ ಮೇಲೆ ಹೆಚ್ಚು ಅವಲಂಬಿತವಾಗಿದ್ದು, ಕೃಷಿಯೇ ಭಾರತೀಯರ ಮೂಲ ಜೀವನಧಾರವಾಗಿದೆ ಹೀಗಿರುವಾಗ

ಕೃಷಿಯಲ್ಲಿ ಅಭಿವೃದ್ಧಿಯನ್ನು ಹೊಂದಬೇಕಾಗಿರುವುದು ಅವಶ್ಯಕ ಮತ್ತು ಅನಿವಾರ್ಯ. ಆದರೆ ಭಾರತದಲ್ಲಿ ಹೆಚ್ಚಿನ ಜನರು ಕೃಷಿಯ ಮೇಲೆ ಅವಲಂಬಿತವಾಗಿದ್ದರೂ ಕೂಡ ಕೃಷಿ ಅತ್ಯಂತ ಹಿಂದುಳಿದ ಉದ್ಯೋಗವಾಗಿದೆ.

ರೈತರಲ್ಲಿ ವೈಜ್ಞಾನಿಕ ಕೃಷಿ ಮಾಡುವ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯುತ್ತಿಲ್ಲ. ಇನ್ನು ಹಳೆ ಕಾಲದ ಸಾಂಪ್ರದಾಯಿಕ ಕೃಷಿಯಲ್ಲಿಯೇ ತೊಡಗಿಕೊಂಡಿದ್ದಾರೆ.

ಇದರಿಂದಾಗಿ ಕಡಿಮೆ ಪ್ರದೇಶದಲ್ಲಿ ಭತ್ತ ಬೆಳೆಯುವ ಆಸ್ಟ್ರೇಲಿಯಾ ದೇಶವು ಭಾರತದಲ್ಲಿ ಬೆಳೆಯುವ ಒಂದು ಹೆಕ್ಟರ್ ಭತ್ತಕ್ಕಿಂತ ಅದೇ ಒಂದು ಹೆಕ್ಟರ್ ನಲ್ಲಿ ಆರು ಪಟ್ಟು ಹೆಚ್ಚು ಭತ್ತವನ್ನು ಉತ್ಪಾದಿಸುತ್ತಿದೆ.

ಇದರಿಂದಾಗಿಯೇ ಕೃಷಿ ಪ್ರಧಾನ ದೇಶವಾಗಿದ್ದರೂ ಕೂಡ ಭಾರತವು ಕೃಷಿ ಉತ್ಪನ್ನಗಳ ಪ್ರಮುಖ ಐದು ರಾಷ್ಟ್ರಗಳಲ್ಲಿ ಒಂದಾಗಿಲ್ಲ.

ಕೃಷಿಯಲ್ಲಿನ ಈ ತೊಂದರೆಗಳನ್ನು ಸರಿಪಡಿಸಿ ಕೃಷಿಯಲ್ಲಿ ಮಹತ್ತರ ಅಭಿವೃದ್ಧಿ ಸಾಧಿಸಲು ಕೇಂದ್ರ ಸರ್ಕಾರವು ಪಣ ತೊಟ್ಟಿದ್ದು,

ಇದಕ್ಕಾಗಿ ಹೊಸ ರಾಷ್ಟ್ರೀಯ ಕೃಷಿ ನೀತಿಯನ್ನು ಜಾರಿಗೆ ತರಲು ಮುಂದಾಗಿದೆ.

ಕೃಷಿಗೂ ಕೂಡ ಬಂತು ನಿಗದಿತ ಸ್ಟ್ಯಾಂಡರ್ಡ್! 

ಆಹಾರ ಉತ್ಪನ್ನಗಳು, ಚಿನ್ನ, ಬೆಳ್ಳಿ ಹೀಗೆ ದಿನಬಳಕೆ ವಸ್ತುಗಳಲ್ಲಿ ಸ್ಟ್ಯಾಂಡರ್ಡ್ ಗಳನ್ನು ರೂಪಿಸಿದ್ದು, ಬಿಐಎಸ್,

ಹಾಲ್ ಮಾಕ್೯ ಹೀಗೆ ನಿವ೯ಹಣಾ ಕ್ರಮಗಳನ್ನು ಜಾರಿಗೆ ತಂದಿರುವ ಕೇಂದ್ರ ಸರ್ಕಾರವು ಅದರಂತೆ ಕೃಷಿಯಲ್ಲಿಯೂ ಕೂಡ ಒಂದು ನಿಗದಿತ ಸ್ಟ್ಯಾಂಡರ್ಡ್ ಅನ್ನು ನಿವ೯ಹಿಸಲು ಪ್ರಸ್ತುತ,

BIS ಕೃಷಿ ಯಂತ್ರೋಪಕರಣಗಳು ಮತ್ತು ಒಳಹರಿವುಗಳಿಗೆ ಮಾನದಂಡಗಳನ್ನು ರೂಪಿಸಿದೆ.

ರಾಷ್ಟ್ರೀಯ ನೀತಿಯಲ್ಲಿದೆ ಕೃಷಿ ಮಾಡುವ ಸ್ಟ್ಯಾಂಡರ್ಡ್ ಕ್ರಮಗಳು! 

ಇದರಿಂದಾಗಿ ರೈತರಿಗೆ ತಮ್ಮ ಜಮೀನಿನಲ್ಲಿ ಬೆಳೆಯ ಬೆಳೆಯಬೇಕಾದರೆ ಯಾವ ಬೆಳೆ ಆಯ್ಕೆ ಮಾಡಬೇಕು, ಬೆಳೆ ಬೆಳೆಯಲು ಭೂಮಿಯನ್ನು ಯಾವ ರೀತಿ ಸಿದ್ಧಗೊಳಿಸಬೇಕು,

ಬಿತ್ತನೆ ಮಾಡುವುದು ಹೇಗೆ,ನೀರಾವರಿ ಬಗ್ಗೆ, ಮಣ್ಣಿನ ಆರೋಗ್ಯ ನಿರ್ವಹಣೆ ಬಗ್ಗೆ, ಕೊಯ್ದು ಬಗ್ಗೆ ಹಾಗೂ ಕೊಯ್ದು ನಂತರದ

ಕೆಲಸಗಳ ಬಗ್ಗೆ ಮತ್ತು ಸಂಗ್ರಹಣೆ ಸೇರಿದಂತೆ ಎಲ್ಲಾ ಕೃಷಿ ಕೆಲಸಗಳ ಬಗ್ಗೆಯು ಈ ರಾಷ್ಟ್ರೀಯ ನೀತಿ ಮಾಹಿತಿ ಒದಗಿಸುತ್ತದೆ.

ಅಷ್ಟೇ ಅಲ್ಲದೇ ವೈಜ್ಞಾನಿಕವಾಗಿ ಹೆಚ್ಚು ಕಾಳಜಿಯಿಂದ ಒದಗಿಸಬೇಕಾದ ರಸಗೊಬ್ಬರಗಳು, ಕೀಟನಾಶಕಗಳು ಮತ್ತು ಕಳೆನಾಶಕಗಳ ಬೆಳೆಗೆ ಒದಗಿಸುವ ಮಾನದಂಡಗಳ ಬಗ್ಗೆಯೂ

ಈ ನೀತಿ ಮಾಹಿತಿ ಒಳಗೊಂಡಿದೆ.ಒಟ್ಟಿನಲ್ಲಿ ದೇಶದಲ್ಲಿ ಕೃಷಿಗೆ ಒಂದು ಸ್ಟ್ಯಾಂಡರ್ಡ್ ಹುಟ್ಟುಹಾಕಿ ರೈತರು ಅದನ್ನು ಪಾಲಿಸುವ ಮೂಲಕ ಉತ್ತಮ ಇಳುವರಿಯೊಂದಿಗೆ

ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳುವ ಮೂಲಕ ಹೆಚ್ಚಿನ ಆದಾಯ ಹೊಂದಲು ಈ ನೀತಿ ಸಹಕಾರಿಯಾಗಲಿದೆ.

ಈ ನೀತಿಯನ್ನು ಸಾಧಿಸುವುದು ಹೇಗೆ?

ಅದಕ್ಕಾಗಿ ಸಕಾ೯ರವು ಈಗಾಗಲೇ ದೇಶದ ಆಯ್ದ ಕೃಷಿ ಸಂಸ್ಥೆಗಳಲ್ಲಿ ‘ಸ್ಟ್ಯಾಂಡರ್ಡೈಸ್ಟ್ ಅಗ್ರಿಕಲ್ಟ‌ರ್ ಡೆಮಾನ್‌ಸ್ಟೇಶನ್‌ ಫಾರ್ಮ್’ (SADF) ಅನ್ನು ಸ್ಥಾಪಿಸಿದೆ.

ಈ ಫಾರ್ಮ್‌ಗಳು ಭಾರತೀಯ ಭೌಗೋಳಿಕ ಮಾನದಂಡಗಳಿಗೆ ಅನುಗುಣವಾಗಿ ವಿವಿಧ ಕೃಷಿ ಪದ್ಧತಿಗಳು ಮತ್ತು ಹೊಸ ತಂತ್ರಜ್ಞಾನಗಳನ್ನು ಪರೀಕ್ಷಿಸಲು ಮತ್ತು ಅನುಷ್ಠಾನಗೊಳಿಸಲು ಪ್ರಾಯೋಗಿಕ ತಾಣಗಳಾಗಿ ಕಾರ್ಯನಿರ್ವಹಿಸುತ್ತವೆ.

ಅಂದರೆ ಈ ತಂಡದವರೇ ರೈತರಿಗೆ ಒಂದು ಪ್ರಾಯೋಗಿಕ ತೋಟ ಮಾಡಿ ಅದರಲ್ಲಿ ಯಾವ ರೀತಿ ಬೆಳೆ ಬೆಳೆಯಬೇಕು,

ಹೆಚ್ಚಿನ ಇಳುವರಿ ಪಡೆಯುವುದು ಹೇಗೆ ಎಂಬೆಲ್ಲಾ ಮಾಹಿತಿಯನ್ನು ಪ್ರಾಯೋಗಿಕವಾಗಿಯೇ ತೋರಿಸುತ್ತಾರೆ.

ಕಣ್ಣ ಮುಂದೆಯೇ ಉತ್ತಮ ರಿಸಲ್ಟ್ ಇದ್ದಾಗ ನಮ್ಮ ರೈತರು ಅದನ್ನು ಅನುಸರಿಸಲು ಮುಂದಾಗುತ್ತಾರೆ ಹಾಗಾಗಿ ಈ ಪ್ರಾಯೋಗಿಕ ತಾಣಗಳನ್ನು ನಿಮಿ೯ಸಲು ಸಕಾ೯ರ ಮುಂದಾಗಿದೆ.

ಅಲ್ಲದೇ ಕೃಷಿ ವಿಶ್ವವಿದ್ಯಾಲಯಗಳ ಮೂಲಕವು ರೈತರಿಗೆ ನಿವ೯ಹಣೆ ಬಗ್ಗೆ ಮಾಹಿತಿ ಹಾಗೂ ವೈಜ್ಞಾನಿಕ ನೀತಿಯ ಬಗ್ಗೆ ಅರಿವು ನೀಡಲು ಸಕಾ೯ರ ನಿಧ೯ರಿಸಿದೆ.

ಧನ್ಯವಾದಗಳು

< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >

1) ಫೇಸ್ಬುಕ್ / Facebook – ಜೈನ್ ಆಗಿ/ join facebook

2)ವಾಟ್ಸಾಪ್ ಗ್ರೂಪ್ /Whatsapp ಗುಂಪು ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ

3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V.K

ಪರಿಸರ ಪರಿಸರದೊಂದಿಗೆ ಆರ್ಥಿಕತೆ


"Agriculture is our CULTURE"