"Agriculture is our CULTURE"

Rainfall report:: ರಾಜ್ಯದಲ್ಲಿ ಮತ್ತೇ ಮಳೆ ಅಬ್ಬರ! ಬೀದರ್ ಹೊರತುಪಡಿಸಿ ಎಲ್ಲಾ ಜಿಲ್ಲೆಗಳಲ್ಲಿ ಮಳೆ! 

ಮಳೆಗಾಲ ಮುಗಿದು ಚಳಿಗಾಲ ಪ್ರಾರಂಭವಾಗಿದ್ದರೂ ಕೂಡ ರಾಜ್ಯದಲ್ಲಿ ಮಳೆಯ ಅಬ್ಬರ ನಿಂತಿಲ್ಲ. ಹಲವು ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿ ನೆರೆ ಬಂದು ಬೆಳೆಹಾನಿಯಾಗಿದೆ.

ಸಕಾ೯ರದ ಕಡೆಯಿಂದ ಬೆಳೆಹಾನಿ ಪರಿಹಾರವನ್ನು ಕೊಡಲಾಗುತ್ತಿದೆ. ಇನ್ನು ಈ ಚಳಿಗಾಲದಲ್ಲಿ ಹಿಂಗಾರು ಬಿತ್ತನೆ ಮಾಡಿರುವ ರೈತರಿಗೆ ಈ ಮಳೆಯು ಆತಂಕವನ್ನು ತಂದೊಡ್ಡಿದೆ.

ಸ್ವಲ್ಪ ಪ್ರಮಾಣದಲ್ಲಿ ಮಳೆಯಾದರೆ ಪರವಾಗಿಲ್ಲ. ಆದರೆ ತೀವ್ರ ಮಳೆಯಾದಲ್ಲಿ ರೈತರಿಗೆ ಹಿಂಗಾರು ಬೆಳೆಗೆ ಹೊಡೆತ ಬೀಳಬಹುದು.

ಯಾವ ಜಿಲ್ಲೆಗಳಲ್ಲಿ ಮಳೆಯಾಗಬಹುದು? 

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಇಂದಿನಿಂದ ಅಂದರೆ ದಿನಾಂಕ:12–11-2024 ರಿಂದ ಮುಂದಿನ 5 ದಿನಗಳವರೆಗೆ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು,

ಆದರೆ ರಾಜ್ಯದ ಕಿರೀಟದಂತಿರುವ ಬೀದರ್ ಜಿಲ್ಲೆಗೆ ಮಾತ್ರ ಮಳೆಯಾಗಲ್ಲ ಎಂಬುದನ್ನು ತಿಳಿಸಿದೆ. ಒಂದು ಕಡೆ ಈಗಾಗಲೇ ನೆರೆ ಉಂಟಾಗಿ ರೈತರು ಬೆಳೆಹಾನಿಯಿಂದ ತತ್ತರಿಸಿದ್ದಾರೆ.

ಇದೀಗ ಅಕಾಲಿಕ ಮಳೆ ವಾಡಿಕೆಯ ಮಟ್ಟ ಮೀರಿದರೆ ಮತ್ತೇ ರೈತರಿಗೆ ಬೆಳೆಹಾನಿ ಬಿಸಿ ತಟ್ಟಬಹುದು.ಆದರೆ ನಿಗದಿತ ಪ್ರಮಾಣದ ಮಳೆ ಮಾತ್ರ ಆದಲ್ಲಿ ರೈತರು ಸಂತೋಷ ಪಡುತ್ತಾರೆ.

ಏಕೇಂದರೆ ಬೆಳೆಗಳಿಗೆ ಸ್ವಲ್ಪ ಮಟ್ಟಿಗಿನ ನೀರು ಕೊಡಬೇಕು.ಆ ಬೇಡಿಕೆಯನ್ನು ಮಳೆ ಪೂರೈಸಿದರೆ ರೈತರಿಗೆ ಮತ್ತೇ ನೀರು ಕೊಡುವ ಚಿಂತೆಯಿರುವುದಿಲ್ಲ.

ಇದು ಹಿಂಗಾರು ಮಾನ್ಸೂನ್ ಮಳೆಯಾಗಿದ್ದು, ರಾಜ್ಯವು ಈ ಸಮಯದಲ್ಲಿ ಹೆಚ್ಚಿನ ಮಳೆ ಪಡೆಯುವುದಿಲ್ಲ. ಆದರೆ ಹವಾಮಾನ ಇಲಾಖೆ ಪ್ರಕಾರ 5 ದಿನ ಮಳೆಯಾಗಲಿರುವ ಕಾರಣ ರೈತರಲ್ಲಿ ಸ್ವಲ್ಪ ಆತಂಕ ಮನೆ ಮಾಡಿದೆ

ಇನ್ನು ಕೆಲವು ರೈತರು ಹಿಂಗಾರು ಬಿತ್ತನೆ ಕಾಯ೯ಗಳಲ್ಲಿ ತೊಡಗಿದ್ದು, ಮಳೆಯು ಬಿತ್ತನೆಗೆ ಅಡ್ಡಿಪಡಿಸಬಹುದು ಆದರೆ ಮಳೆಯ ನಂತರ ಬೆಳೆಗಳಿಗೆ ನೀರಿನ ಅವಶ್ಯಕತೆ ಪೂರೈಸಲಿದೆ ಎಂದು ರೈತರು ಉತ್ಸಾಹದಿಂದ ಕೃಷಿ ಚಟುವಟಿಕೆಗಳನ್ನು ಪ್ರಾರಂಭಿಸಬಹುದು.

ಹಿಂಗಾರು ಬೆಳೆಗಳಿಗೆ ಅಷ್ಟಾಗಿ ನೀರಿನ ಅವಶ್ಯಕತೆ ಇರುವುದಿಲ್ಲ. ಆದರೆ ಕೆಲವೊಂದು ಬೆಳೆಗಳಿಗೆ ನಿಗದಿತ ಪ್ರಮಾಣದ ನೀರು ಬೇಕು.

ಹಾಗಾಗಿ ಈ ಹಿಂಗಾರು ಮಳೆಯು ರ೧ತರಿಗೆ ಸಹಕಾರಿಯಾಗಲಿ. ವಾಡಿಕೆಗಿಂತ ಹೆಚ್ಚಿನ ಮಳೆಯಾಗಿ ರೈತರಿಗೆ ಸಂಕಷ್ಟ ತರದೆ ನಿಗದಿತ ಪ್ರಮಾಣದ ಮಳೆಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳು ಪಡೆಯಲಿ ಎಂಬುದು ನಮ್ಮ ಆಶಯ.

ಬೀದರ್ ಗೆ ಇಲ್ಲ ಹಿಂಗಾರು ಮಳೆ! 

ಇನ್ನು ಬೀದರ್ ಜಿಲ್ಲೆಯಲ್ಲಿ ಮಾತ್ರ ಮುಂದಿನ 5 ದಿನಗಳಲ್ಲಿ ಯಾವುದೇ ಮಳೆ ಮುನ್ಸೂಚನೆ ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದ್ದು,

ಬೀದರ್ ಜಿಲ್ಲೆಯ ರೈತರಿಗೆ ಸಮಾಧಾನ ಒಂದು ಕಡೆಯಾದರೆ ಮತ್ತೊಂದೆಡೆ ಬೆಳೆಗಳಿಗೆ ತಾವಾಗಿಯೇ ನೀರು ಕೊಡಬೇಕಾವುದು ಮತ್ತೊಂದೆಡೆ.

ಸಾಮಾನ್ಯವಾಗಿ ಈ ಸಮಯದಲ್ಲಿ ತಮಿಳುನಾಡು, ಆಂದ್ರಪ್ರದೇಶ ಹೀಗೆ ಪೂವ೯ ಕರಾವಳಿ ರಾಜ್ಯಗಳು ಹೆಚ್ಚಾಗಿ ಮಳೆ ಪಡೆಯುತ್ತವೆ.

ಆದರೆ ಈ ವಷ೯ ಮಾನ್ಸೂನ್ ಪ್ರಭಾವ ಜೋರಾಗಿದ್ದು, ರಾಜ್ಯವು ಕೂಡ 5 ದಿನಗಳ ದೀಘ೯ ಮಳೆಯನ್ನು ಪಡೆಯಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಧನ್ಯವಾದಗಳು

< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >

1) ಫೇಸ್ಬುಕ್ / Facebook – ಜೈನ್ ಆಗಿ/ join facebook

2)ವಾಟ್ಸಾಪ್ ಗ್ರೂಪ್ /Whatsapp ಗುಂಪು ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ

3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V.K

ಪರಿಸರ ಪರಿಸರದೊಂದಿಗೆ ಆರ್ಥಿಕತೆ


"Agriculture is our CULTURE"