Flood relief/compensation:: 1.47 ಕೋಟಿ ಬೆಳೆ ಹಾನಿ ಪರಿಹಾರ! ಎಸ್ ಎಸ್ ಮಲ್ಲಿಕಾರ್ಜುನ ಹೇಳಿಕೆ!
ಕಳೆದ ವಷ೯ ರಾಜ್ಯದಲ್ಲಿ ಬರಗಾಲ ಉಂಟಾಗಿ ರೈತರಿಗೆ ಸಾಕಷ್ಟು ನಷ್ಟ ಉಂಟಾಗಿದ್ದರಿಂದ ರಾಜ್ಯ ಸಕಾ೯ರ ಹಾಗೂ ಕೇಂದ್ರ ಸಕಾ೯ರಗಳು ರೈತರಿಗೆ ಬೆಳೆ ಹಾನಿ ಪರಿಹಾರ ನೀಡಿದ್ದವು.
ಇದಕ್ಕೆ ಕಾರಣ ಮಾನ್ಸೂನ್ ಕೈಕೊಟ್ಟಿದ್ದು. ಆದರೆ ಈಗ ಅದೇ ಮಾನ್ಸೂನ್ ಮತ್ತೊಮ್ಮೆ ರೈತರಿಗೆ ನಷ್ಟ ಉಂಟು ಮಾಡಿದೆ.
ಹೌದು, ಕಳೆದ ವಷ೯ ಬರಗಾಲ ಉಂಟು ಮಾಡಿದ್ದ ಮಾನ್ಸೂನ್ ಈ ಬಾರಿ ನೆರೆ ಉಂಟು ಮಾಡಿದೆ. ಇದರಿಂದ ಮತ್ತೆ ರಾಜ್ಯದ ರೈತರು ಬೆಳೆಹಾನಿಯಿಂದ ತತ್ತರಿಸಿದ್ದಾರೆ.
ರಾಜ್ಯ ಸಕಾ೯ರದಿಂದ ಸಮೀಕ್ಷೆ ಹಾಗೂ ಪರಿಹಾರ!
ಬರಗಾಲದಿಂದ ಬೇಸತ್ತ ರೈತರು ಮಳೆಗಾಗಿ ಕಾಯುತ್ತಿದ್ದರು. ಆದರೆ ಮಳೆರಾಯ ವಾಡಿಕೆಗಿಂತ ಹೆಚ್ಚಿನ ಮಳೆತಂದು ನೆರೆಹಾವಳಿ ಉಂಟುಗುವಂತೆ ಮಾಡಿದ್ದಾನೆ.
ಇದರಿಂದ ರೈತರ ಬೆಳೆ ನಾಶವಾಗಿದೆ. ಹಾಗಾಗಿ ರಾಜ್ಯ ಸಕಾ೯ರವು ಬೆಳೆ ಹಾನಿ ಸಮೀಕ್ಷೆ ನಡೆಸಿ ಬೆಳೆ ಹಾನಿ ಪರಿಹಾರ ಕೊಡಲು ಕಳೆದ ವಾರ ಮುಂದಾಗಿತ್ತು.
ಅದರಂತೆ ಪ್ರಸ್ತುತ ಬೆಳೆ ಹಾನಿ ಪರಿಹಾರವನ್ನು ವಿತರಿಸಲಾಗುತ್ತಿದ್ದು, ಈಗಾಗಲೇ ಜಿಲ್ಲಾವಾರು ಅನುದಾನ ಬಿಡುಗಡೆಯಾಗಿದೆ ಎನ್ನಲಾಗಿದೆ.
ದಾವಣಗೆರೆ ಜಿಲ್ಲೆಗೆ 1.47 ಕೋಟಿ ಪರಿಹಾರ(Compensation) !
ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್ ರವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು,
ದಾವಣಗೆರೆ ಜಿಲ್ಲೆಯಲ್ಲಿ ಬೆಳೆಹಾನಿಗೊಳಗಾದ ರೈತರಿಗೆ ರಾಜ್ಯ ಸಕಾ೯ರದಿಂದ ಒಟ್ಟು 1.47 ಕೋಟಿ ಪರಿಹಾರ ಮೊತ್ತ ಬಿಡುಗಡೆಯಾಗಿದೆ ಎಂದಿದ್ದಾರೆ.
ಸಧ್ಯದಲ್ಲಿಯೇ ಈ ಪರಿಹಾರ ಮೊತ್ತವು ದಾವಣಗೆರೆ ಜಿಲ್ಲೆಯ ರೈತರ ಖಾತೆಗೆ ಜಮೆಯಾಗಲಿದೆ.
ರಾಜ್ಯದ ಉಳಿದ ಜಿಲ್ಲೆಗಳಿಗೂ ಸಹ ಪರಿಹಾರ ವಿತರಣೆ ಮಾಡಲಾಗುತ್ತಿದ್ದು, ಸಮೀಕ್ಷೆ ಮಾಡಿರುವ ರಾಜ್ಯ ಸಕಾ೯ರ ಅದಕ್ಕೆ ತಕ್ಕಂತಹ ಪರಿಹಾರವನ್ನು ಬಿಡುಗಡೆ ಮಾಡುತ್ತಿದೆ.
ಸಧ್ಯದಲ್ಲಿಯೇ ಈ ಪರಿಹಾರ ಮೊತ್ತವು ರೈತರ ಖಾತೆಗೆ ಜಮೆಯಾಗಲಿದೆ. ಕೇಂದ್ರ ಸಕಾ೯ರಕ್ಕೂ ಕೂಡ ಪರಿಹಾರಕ್ಕಾಗಿ
ರಾಜ್ಯ ಸಕಾ೯ರ ವಿನಂತಿಸಿದಲ್ಲಿ ಅಲ್ಲಿಂದಲೂ ಕೂಡ ರೈತರಿಗೆ ಪರಿಹಾರ ಸಿಗುವ ಸಾಧ್ಯತೆ ಇದೆ. ಆದರೆ ಕೇಂದ್ರ ಸಕಾ೯ರಕ್ಕೆ ಪ್ರಸ್ತಾಪ ಸಲ್ಲಿಸಬೇಕಾಗಿದೆ.
ಪರಿಹಾರ ಚೆಕ್ ಮಾಡಿಕೊಳ್ಳುವುದು ಹೇಗೆ?
1) ಈ ಕೆಳಗಿನ ಲಿಂಕ್ ಮೇಲೆ ಪ್ರೆಸ್ ಮಾಡಿ
https://parihara.karnataka.gov.in/service92/
2) ವರ್ಷ :- “2023-24″ ಎಂದು ಆಯ್ಕೆ ಮಾಡಿ
Season/ಋತು :- ” Kharif / ಮುಂಗಾರು” ಎಂದು ಆಯ್ಕೆ ಮಾಡಿ
Calamity Type/ವಿಪತ್ತಿನ ವಿಧ :- Flood / ಬರ ಎಂದು ಆಯ್ಕೆ ಮಾಡಿ
3) Get data ಮೇಲೆ ಕ್ಲಿಕ್ ಮಾಡಿ.
4) Aadhaar Number/ಆಧಾರ್ ಸಂಖ್ಯೆ
Farmer ID/ ಫುಲ್ ಐ ಡಿ
Mobile Number/ ಫೋನ್ ನಂಬರ್
Survey Number/ಸರ್ವೆ ನಂಬರ್
ಇನ್ನಾಕರಲ್ಲಿ ಒಂದನ್ನು ಆಯ್ಕೆ ಮಾಡಿ ನಿಮ್ಮ ಖಾತೆಗೆ ಹಣ ಜಮವಾಗಿದ್ಯಲ್ಲ ತಿಳಿದುಕೊಳ್ಳಿ.
ಮಾನ್ಸೂನ್ ಕಣ್ಣಾಮುಚ್ಚಾಲೆ, ರೈತ ಕಂಗಾಲು!
ಒಟ್ಟಿನಲ್ಲಿ ಪ್ರತಿ ವಷ೯ವೂ ಕೂಡ ಬರಗಾಲ, ನೆರೆ ಹಾವಳಿ ಹೀಗೆ ಒಂದಲ್ಲಾ ಒಂದು ಕಾರಣಕ್ಕೆ ರಾಜ್ಯದಲ್ಲಿ ಬೆಳೆಹಾನಿಯುಂಟಾಗಿ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.
ಇದರಿಂದ ರಾಜ್ಯ ಸಕಾ೯ರ ನೀಡುವ ಬೆಳೆಹಾನಿ ಪರಿಹಾರ ಮೊತ್ತವೇ ಇಂತಹ ಕಷ್ಟದ ಸಮಯದಲ್ಲಿ ರೈತರಿಗೆ ಹುಲ್ಲುಕಡ್ಡಿಯಾಗಿ ರೈತರ ಕೈಹಿಡಿಯುತ್ತಿದೆ.
ಇನ್ನು ಕೇಂದ್ರ ಸಕಾ೯ರದ ವತಿಯಿಂದಲೂ ಹೀಗೆ ಅನಿರೀಕ್ಷಿತ ಕಾರಣಗಳಿಂದ ರೈತರಿಗೆ ಉಂಟಾಗುವ ಬೆಳೆಹೈನಿ ಪರಿಹಾರಕ್ಕಾಗಿಯೇ ಫಸಲ್ ಬಿಮಾ ಯೋಜನೆಯನ್ನು ಕೇಂದ್ರ ಸಕಾ೯ರ ಜಾರಿಗೆ ತಂದಿದ್ದು,
ಈ ಯೋಜನೆಯಡಿ ರೈತರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿದ್ದಲ್ಲಿ ಅಲ್ಲಿಂದಲೂ ಕೂಡ ರೈತರಿಗೆ ಬೆಳೆಹಾನಿ ಪರಿಹಾರ ಮೊತ್ತ ಸಿಗಲಿದೆ
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
V.K
ಪರಿಸರ ಪರಿಸರದೊಂದಿಗೆ ಆರ್ಥಿಕತೆ