Gruhalaxmi scheme : ಗೃಹ ಲಕ್ಷ್ಮೀಯರಿಗೆ ಗುಡ್ ನ್ಯೂಸ್! 14 ನೇ ಕಂತಿನ ಗೃಹ ಲಕ್ಷ್ಮಿ ಹಣ ಜಮೆ!
ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯದ ಗೃಹಲಕ್ಷ್ಮಿ ಯೋಜನೆ (Gruhalaxmi scheme) ಅಡಿಯಲ್ಲಿ ಈಗಾಗಲೇ 13 ಕಂತುಗಳ ಹಣ ಮನೆಯ ಯಜಮಾನಿಯ ಖಾತೆಗೆ ಜಮೆಯಾಗಿದ್ದು,
ಗೃಹಲಕ್ಷ್ಮಿಯರು 14ನೇ ಕಂತಿನ ಹಣ ಯಾವಾಗ ಜಮೆಯಾಗುತ್ತದೆ ಎಂಬ ಬಗ್ಗೆ ಕೇಳುತ್ತಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.
ಇನ್ನು ಗೃಹಲಕ್ಷ್ಮಿಯರಿಗೆ ನೀಡುತ್ತಿರುವ ಕರ್ನಾಟಕ ಸರ್ಕಾರದ ಈ ಯೋಜನೆಯ ಹಣ ಮನೆಯೊಡತಿಯರಿಗೆ ಎಷ್ಟರಮಟ್ಟಿಗೆ ಸಹಾಯಕವಾಗುತ್ತಿದೆ ಎನ್ನುವುದಕ್ಕೆ ಅತ್ಯುತ್ತಮ ಸಾಕ್ಷಿಯಾಗಿ
ನಿನ್ನೆ ಅಂದರೆ ನವೆಂಬರ್ 4 ರಂದು ಮಹಿಳೆಯೊಬ್ಬರು ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಬಂದ ಹಣದಿಂದ ಕಾರಕೊಟ್ಟುವ ಮಿಷನ್ ಅನ್ನು ಖರೀದಿಸಿದ್ದಾರೆ.
ಇದರೊಂದಿಗೆ ಅವರು ತಮ್ಮ ಸ್ವಂತ ಉದ್ಯೋಗಕ್ಕೆ ಮುನ್ನಡಿ ಬರೆದಿದ್ದು,ಸರ್ಕಾರದ ಈ ಯೋಜನೆಯಿಂದ ಈ ಮಹಿಳೆಯು ಸ್ವಂತ ಉದ್ಯೋಗ ಹೊಂದಲು ಸಹಾಯಕವಾಗಿದೆ.
ಇದರೊಂದಿಗೆ ಮುಂದಿನ ದಿನಗಳಲ್ಲಿ ಆಕೆ ಹೆಚ್ಚಿನ ಆದಾಯ ಹೊಂದಲು ಕಾರಣವಾಗಿದೆ ಆದ್ದರಿಂದ ಈ ಮಿಷನ್ ಉದ್ಘಾಟನೆಯನ್ನು
ಸನ್ಮಾನ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಉದ್ಘಾಟಿಸಿದ್ದು, ಸರ್ಕಾರದ ಈ ಯೋಜನೆ ಮಹಿಳೆಯರಿಗೆ ಎಷ್ಟರಮಟ್ಟಿಗೆ ಸಹಾಯಕವಾಗಿದೆ ಎಂಬುದರ ಬಗ್ಗೆ ಮಾತನಾಡಿದ್ದಾರೆ.
ಅಷ್ಟೇ ಅಲ್ಲದೆ 14ನೇ ಕಂತಿನ ಗೃಹಲಕ್ಷ್ಮಿ (Gruhalaxmi scheme) ಹಣ ಯಾವಾಗ ಬರುತ್ತದೆ ಎಂಬುದರ ಬಗ್ಗೆಯೂ ಸಹ ಮಾಹಿತಿ ನೀಡಿದ್ದು,
ನವೆಂಬರ್ ಮೊದಲ ವಾರದಲ್ಲಿ ಎಲ್ಲಾ ಮಹಿಳೆಯರ ಖಾತೆಗಳಿಗೆ ಗೃಹಲಕ್ಷ್ಮಿ ಹಣವು ಜಮೆಯಾಗಲಿದೆ ಎಂದು ಹೇಳಲಾಗಿತ್ತುಆದರೆ ಮೂಲಗಳ ಪ್ರಕಾರ ನವೆಂಬರ್ 10ನೇ ತಾರೀಖಿನೊಳಗಾಗಿ
ಈ ಯೋಜನೆಯ ಹಣವು ಮನೆಯೊಡತಿಯರ ಖಾತೆಗಳಿಗೆ ಜಮೆಯಾಗಲಿದೆ ಅಷ್ಟೇ ಅಲ್ಲದೆ 15ನೇ ಕಂತಿನ ಹಣವೂ ಕೂಡ ನವೆಂಬರ್ ಕೊನೆಯ ವಾರದಲ್ಲಿ ಕ್ಷಮೆಯಾಗಬಹುದು ಎನ್ನಲಾಗುತ್ತಿದೆ.
ಅಕ್ಟೋಬರ್ ತಿಂಗಳಲ್ಲಿ ಒಟ್ಟಿಗೆ ಎರಡು ಕಂತಿನ ಹಣ ಪಡೆದಿದ್ದ ಮನೆಯೊಡತಿಯರು ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದರು.
ನವೆಂಬರ್ ನಲ್ಲಿಯೂ ಕೂಡ 2 ಕಂತಿನ ಹಣ ಜಮೆಯಾಗಬಹುದು ಎನ್ನಲಾಗುತ್ತಿದ್ದು,
ಮನೆಯೊಡತಿಯರಿಗೆ ಕುಟುಂಬ ನಿವ೯ಹಣೆಗೆ ಸಹಾಯಕವಾಗಲಿದೆ.ಖಾರದ ಮಷೀನ್ ಖರೀದಿಸಿರುವ ಮಹಿಳೆಯು ಇನ್ನಷ್ಟು ಮಹಿಳೆಯರಿಗೆ ಮಾದರಿಯಾಗಿದ್ದಾರೆ.
ಹೀಗೆ ಇತರೆ ಮಹಿಳೆಯರು ಈ ಹಣದಿಂದ ಸ್ವಂತ ಉದ್ಯೋಗ ಮಾಡುವ ಮನಸ್ಸು ಮಾಡಿದರೆ ಕುಟುಂಬದ ಆದಾಯ ಹೆಚ್ಚಾಗಿ ನಿವ೯ಹಣೆಗೆ ಹೆಚ್ಚಿನ ಸಹಾಯವಾಗುತ್ತದೆ. ಸಕಾ೯ರದ ಈ ಯೋಜನೆಗೂ ಅಥ೯ ಸಿಗುತ್ತದೆ.
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
V.K
ಪರಿಸರ ಪರಿಸರದೊಂದಿಗೆ ಆರ್ಥಿಕತೆ