Rabi crop insurance :: ಹಿಂಗಾರು ಬೆಳೆಗಳಿಗೆ ವಿಮೆ ಮಾಡಿಸುವುದು ಹೇಗೆ ಮತ್ತು ಯಾವ ಯಾವ ಬೆಳೆಗಳಿಗೆ ವಿಮೆ ಸಂಪೂರ್ಣ ಮಾಹಿತಿ! ರಾಜ್ಯದಲ್ಲಿ ಹಿಂಗಾರು ಹಂಗಾಮು ಪ್ರಾರಂಭ!
ಭಾರತದಲ್ಲಿ ಕೃಷಿ ಎಂಬುದು ಮಳೆ ಜೊತೆಗೆ ಆಡುವ ಜೂಜಾಟ ಇದ್ದಂತೆ. ಏಕೆಂದರೆ ಭಾರತದ ಮಾನ್ಸೂನ್ ವಾಯುಗುಣವನ್ನು ಹೊಂದಿದ್ದು
ಮಾನ್ಸೂನ್ ಕಾಲದಲ್ಲಿ ಹೆಚ್ಚು ಮಳೆಯನ್ನು ಪಡೆಯುತ್ತದೆ ಕೆಲವೊಮ್ಮೆ ಮಾನ್ಸೂನ್ ಅತಿರೇಕವಾಗಿ ಅತಿವೃಷ್ಟಿ ಉಂಟಾದರೆ
ಇನ್ನು ಕೆಲವೊಮ್ಮೆ ಮಾನ್ಸೂನ್ ಕೈ ಕೊಟ್ಟು ಅನಾವೃಷ್ಟಿ ಉಂಟಾಗುತ್ತದೆ ಹಾಗಾಗಿ ಭಾರತದ ರೈತರು ಬೆಳೆ ವಿಮೆ ಮಾಡಿಸುವುದು ತುಂಬಾ ಅವಶ್ಯಕ.
ಇದರಿಂದ ಅತಿವೃಷ್ಟಿ-ಅನಾವೃಷ್ಟಿ ಗಳಂತಹ ಪ್ರಕೃತಿಯ ವಿಕೋಪಗಳಿಂದ ಬೆಳೆ ಕೈ ಕೊಟ್ಟು ರೈತರಿಗೆ ಆರ್ಥಿಕವಾಗಿ ನಷ್ಟವಾದಲ್ಲಿ
ಬೆಳೆ ವಿಮೆ ಮಾಡಿಸಿದರೆ ವಿಮೆ ಪರಿಹಾರ ಸಿಗುತ್ತದೆ ಆದ್ದರಿಂದ ಎಲ್ಲ ರೈತರು ಬೆಳೆ ವಿಮೆ ಮಾಡಿಸುವುದು ಅಗತ್ಯವಾಗಿದೆ.
ಈಗಾಗಲೇ ಚಳಿಗಾಲ ಪ್ರಾರಂಭವಾಗುತ್ತಿದ್ದು ಮುಂಗಾರು ಬೆಳೆಗಳ ಕಟಾವು ಮುಗಿದು ಹಿಂಗಾರು ಬೆಳೆ ಬೆಳೆಯಲು ರೈತರು ಪ್ರಾರಂಭಿಸುತ್ತಿದ್ದಾರೆ
ಆದ್ದರಿಂದ ಹಿಂಗಾರು ಬೆಳೆಗಳಿಗೆ ರೈತರು ವಿಮೆ ಮಾಡಿಸುವುದು ಅತಿ ಅವಶ್ಯಕವಾಗಿದ್ದು ಈ ಹಿಂಗಾರು ಬೆಳೆಗಳನ್ನು ರಾಬಿ ಬೆಳೆಗಳು ಎಂತಲೂ ಕರೆಯುತ್ತಾರೆ. ಯಾವ ಬೆಳೆಗಳು ರಾಬಿ ಬೆಳೆಗಳಲ್ಲಿ ಬರುತ್ತವೆ. ಹಾಗೂ ರಾಬಿ ಬೆಳೆ ವಿಮೆ ಮಾಡಿಸುವುದು ಹೇಗೆ ಎಂಬುದನ್ನು ನಾವು ಇಲ್ಲಿ ತಿಳಿಸಿದ್ದೇವೆ.
ಬೆಳೆ ವಿಮೆ ಮಾಡಿಸುವುದಕ್ಕೆ ನೀವು ಮೊದಲು ಸರ್ಕಾರದ ಸಂರಕ್ಷಣೆ ಎಂಬ ವೆಬ್ ಸೈಟ್ ಗೆ ಭೇಟಿ ನೀಡಬೇಕು ಅದಕ್ಕಾಗಿ ಮೊದಲು
ಈ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನಂತರ ನೀವು ಬೆಳೆ ವಿಮೆಗೆ ಅರ್ಜಿ ಸಲ್ಲಿಸಬಹುದು.
ಬೆಳೆ ವಿಮೆ(crop insurance) ಗೆ ಅರ್ಜಿ ಸಲ್ಲಿಸುವುದು ಹೇಗೆ?
ಬೆಳೆ ವಿಮೆ ಮಾಡಿಸಲು ಇಚ್ಛಿಸುವ ರೈತರು ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರಕ್ಕೆ ಭೇಟಿ ನೀಡಿ ವಿಮೆ ಅರ್ಜಿಯನ್ನು ಸಲ್ಲಿಸಬಹುದು.
ಅಜಿ೯ ಸಲ್ಲಿಸಲು ಬೇಕಾಗುವ ದಾಖಲೆಗಳು!
*ಹೊಲದ ಪಹಣಿ ಪ್ರತಿ
*ಅರ್ಜಿದಾರರ ಆಧಾರ್ ಕಾರ್ಡ
* ಬ್ಯಾಂಕ್ ಪಾಸ್ ಬುಕ್
* FID ನಂಬರ್
*ಮೊಬೈಲ್ ನಂಬರ್
ಬೆಳೆ ವಿಮೆ(crop insurance)ಗೆ ಅಜಿ೯ ಸಲ್ಲಿಸುವುದು ಹೇಗೆ?
*ವಿಮೆಗೆ ಅಜಿ೯ ಸಲ್ಲಿಸಲು ಈ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ
https://www.samrakshane.karnataka.gov.in/
* ನಂತರ ವಿಮೆ ವೆಬ್ಸೈಟ್ ಓಪನ್ ಆಗುತ್ತದೆ. ಅಲ್ಲಿ ಮೊದಲಿಗೆ ಋತು ಆಯ್ಕೆ ಮಾಡಲು ಕೇಳುತ್ತದೆ ಆಗ ನೀವು ಅದರ ಮೇಲೆ ಕ್ಲಿಕ್ ಮಾಡಬೇಕು ಹಾಗೂ ರಾಬಿ “RABI” ಎಂಬ ಋತು ಆಯ್ಕೆಯನ್ನು ಸೆಲೆಕ್ಟ್ ಮಾಡಬೇಕು
* ಇದಾದ ನಂತರ ಗೋ “GO” ಬಟನ್ ಮೇಲೆ ಕ್ಲಿಕ್ ಮಾಡಿ.
Pic 1: Year & Season option
* ನಂತರ ಓಪನ್ ಆಗುವ ಪೇಜ್ ನಲ್ಲಿ “crop you can insure” ಎಂಬ ಆಯ್ಕೆ ಇದು ಅದರ ಮೇಲೆ ಕ್ಲಿಕ್ ಮಾಡಿ.
Pic 2: click on crop yo can insure
* ನಂತರ ನಿಮ್ಮ ಜಿಲ್ಲೆ ತಾಲೂಕು ಹೋಬಳಿ ಹಾಗೂ ಗ್ರಾಮವನ್ನು ಸೆಲೆಕ್ಟ್ ಮಾಡಿ
* ಆಗ ನಿಮಗೆ ನೀವು ಯಾವ ರಾಬಿ ಬೆಳೆಗಳಿಗೆ ವಿಮೆಯನ್ನು ಮಾಡಿಸಬಹುದು ಮತ್ತು ವಿಮೆ ಹಣದ ಸಂಪೂರ್ಣ ಮಾಹಿತಿ ಕಾಣಿಸಿಕೊಳ್ಳುತ್ತದೆ
ನೀವು ಬೆಳೆಯುತ್ತಿರುವ ಬೆಳೆ ಆ ಲಿಸ್ಟ್ ನಲ್ಲಿ ಇದ್ದಲ್ಲಿ ನೀವು ಕೂಡ ವಿಮೆಗೆ ಅರ್ಜಿ ಸಲ್ಲಿಸಬಹುದು.
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
V.K
ಪರಿಸರ ಪರಿಸರದೊಂದಿಗೆ ಆರ್ಥಿಕತೆ